ಇವಿ ಸ್ಕೂಟರ್ ಕಳ್ಳತನ ತಡೆಯಲು ಹೊಸ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಗೊಳಿಸಿದ ಒಕಿನಾವ

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಅಭಿವೃದ್ದಿ ಮತ್ತು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಒಕಿನಾವ ಕಂಪನಿಯು ಇವಿ ವಾಹನಗಳಿಗೆ ಗರಿಷ್ಠ ಭದ್ರತೆ ಒದಗಿಸಲು ಹೊಸ ಫೀಚರ್ಸ್‌ವುಳ್ಳ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಗೊಳಿಸಿದೆ.

ಕಳ್ಳತನ ತಡೆಯಲು ಹೊಸ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಗೊಳಿಸಿದ ಒಕಿನಾವ

ಒಕಿನಾವ ಕಂಪನಿಯು ಹೊಸದಾಗಿ ಅಭಿವೃದ್ದಿಪಡಿಸಿರುವ 'ಇಕೋ' ಮೊಬೈಲ್ ಅಪ್ಲಿಕೇಶನ್ ಅನ್ನು ಹೈ ಎಂಡ್ ಮಾದರಿಯ ಇವಿ ಸ್ಕೂಟರ್ ಮಾದರಿಗಳಾದ ಐಪ್ರೈಸ್ ಮತ್ತು ರಿಡ್ಜ್‌ನಲ್ಲಿ ಅಳವಡಿಸಲು ನಿರ್ಧರಿಸಲಾಗಿದ್ದು, ಹೊಸ ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ಕೂಟರ್ ಕಳ್ಳತನ ಪ್ರಕರಣಗಳನ್ನು ತಡೆಯಲು ಸಾಕಷ್ಟು ಸಹಕಾರಿಯಾಗಿದೆ. ಹೊಸ ಇಕೊ ಮೊಬೈಲ್ ಅಪ್ಲಿಕೇಶನ್ ಅಂಡ್ರಾಯಿಡ್ ಮತ್ತು ಐಎಸ್ಒ ಎರಡು ವರ್ಷನ್‌ಗಳಲ್ಲೂ ಲಭ್ಯವಿದ್ದು, ಹೊಸ ಅಪ್ಲಿಕೇಶನ್‌ನಲ್ಲಿ ಹಲವಾರು ಸೇಫ್ಟಿ ಫೀಚರ್ಸ್ ಹೊಂದಿರಲಿದೆ.

ಕಳ್ಳತನ ತಡೆಯಲು ಹೊಸ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಗೊಳಿಸಿದ ಒಕಿನಾವ

ಗ್ಲೂಗಲ್ ಮ್ಯಾಪ್ ಮೂಲಕ ಇವಿ ಸ್ಕೂಟರ್ ನಿಲುಗಡೆಯನ್ನು ಖಾತ್ರಿಪಡಿಸಿಕೊಳ್ಳುವಲ್ಲದೆ ಫೈಂಡ್ ಮೈ ಸ್ಕೂಟರ್ ಫಂಕ್ಷನ್ ಬಳಸಿಕೊಳ್ಳಬಹುದಾಗಿದ್ದು, ಸುರಕ್ಷಿತ ಪಾರ್ಕಿಂಗ್ ಸೌಲಭ್ಯಕ್ಕಾಗಿ ಇದು ಸಾಕಷ್ಟು ಸಹಕಾರಿಯಾಗಿದೆ

ಕಳ್ಳತನ ತಡೆಯಲು ಹೊಸ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಗೊಳಿಸಿದ ಒಕಿನಾವ

ಹಾಗೆಯೇ ಸ್ಕೂಟರ್ ಕಳ್ಳತನದ ಸಂದರ್ಭದಲ್ಲಿ ಇಕೋ ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ಕೂಟರ್ ಎಂಜಿನ್ ಅನ್ನು ಇಮ್‌ಮೊಬಿಲೈಸರ್ ಮಾಡಬಹುದಾಗಿದ್ದು, ಈ ಸೌಲಭ್ಯದಿಂದ ಸ್ಕೂಟರ್ ಕಾರ್ಯನಿರ್ವಹಣೆ ಸಾಧ್ಯವಾಗದೆ ಕಳ್ಳತನ ಯತ್ನಕ್ಕೆ ಬ್ರೇಕ್ ಹಾಕುವುದಲ್ಲದೆ ಕೆಲವೇ ನಿಮಿಷಗಳಲ್ಲಿ ಸ್ಕೂಟರ್ ಇರುವ ಸ್ಥಳವನ್ನು ಟ್ರ್ಯಾಕ್ ಮಾಡಬಹುದಾಗಿದೆ.

ಕಳ್ಳತನ ತಡೆಯಲು ಹೊಸ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಗೊಳಿಸಿದ ಒಕಿನಾವ

ಹಾಗೆಯೇ ಹೊಸ ಅಪ್ಲಿಕೇಶನ್‌ನಲ್ಲಿ ‘ಎಸ್‌ಒಎಸ್ ಮೆಸೇಜಿಂಗ್' ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಜಿಯೋಫೆನ್ಸ್ ವೈಶಿಷ್ಟ್ಯಯು ಕೂಡಾ ಈ ಅಪ್ಲಿಕೇಶನ್‌ನಲ್ಲಿರುವ ಪ್ರಮುಖ ಫೀಚರ್ಸ್ ಎನ್ನಬಹುದು. ಜಿಯೋಫೆನ್ಸ್ ಫೀಚರ್ಸ್ ಮೂಲಕ ಬಳಕೆದಾರರು ಒಂದು ನೀರ್ದಿಷ್ಟ ಪ್ರದೇಶವನ್ನು ಗುರುತಿಸಬಹುದಾಗಿದ್ದು, ಗುರುತು ಮಾಡಿರುವ ಪ್ರದೇಶದಿಂದ ವಾಹನ ಹೊರಹೊದರೆ ತಕ್ಷಣವೇ ಮಾಲೀಕನ್ನು ಎಚ್ಚರಿಸುತ್ತದೆ.

ಕಳ್ಳತನ ತಡೆಯಲು ಹೊಸ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಗೊಳಿಸಿದ ಒಕಿನಾವ

ಹೀಗಾಗಿ ಒಕಿನಾವ ಕಂಪನಿಯು ಅಭಿವೃದ್ದಿಪಡಿಸಿರುವ ಹೊಸ ಇಕೊ ಮೊಬೈಲ್ ಅಪ್ಲಿಕೇಶನ್ ಸಾಕಷ್ಟು ಹೊಸ ವೈಶಿಷ್ಟ್ಯತೆಯೊಂದಿಗೆ ಬಳಕೆದಾರರಿಗೆ ಗರಿಷ್ಠ ಸುರಕ್ಷತೆ ಒದಗಿಸಲಿದ್ದು, ಮಾಲೀಕತ್ವವನ್ನು ಮತ್ತಷ್ಟು ಸರಳಗೊಳಿಸುತ್ತದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಕಳ್ಳತನ ತಡೆಯಲು ಹೊಸ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಗೊಳಿಸಿದ ಒಕಿನಾವ

ಇನ್ನು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಪಡಿಸಿ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಹಲವು ಆಟೋ ಕಂಪನಿಗಳು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದ್ದು, ಒಕಿನಾವ ಕಂಪನಿಯು ಕೂಡಾ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡುವ ಮೂಲಕ ಹಲವಾರು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ.

ಕಳ್ಳತನ ತಡೆಯಲು ಹೊಸ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಗೊಳಿಸಿದ ಒಕಿನಾವ

ಸದ್ಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವಲ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾದ ಲಿಡ್ ಆ್ಯಸಿಡ್ ಬ್ಯಾಟರಿ ಪ್ರೇರಣೆಯ ರಿಡ್ಜ್ 30 ಜೊತೆಗೆ ಹೈ ಎಂಡ್ ಮಾದರಿಯಾಗಿ ಲೀಥಿಯಂ-ಅಯಾನ್ ಬ್ಯಾಟರಿ ಪ್ರೇರಿತ ಐ-ಪ್ರೈಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟ ಮಾಡುತ್ತಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಕಳ್ಳತನ ತಡೆಯಲು ಹೊಸ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಗೊಳಿಸಿದ ಒಕಿನಾವ

ಸದ್ಯ ದೇಶಾದ್ಯಂತ 350ಕ್ಕೂ ಹೆಚ್ಚು ಅಧಿಕೃತ ಮಾರಾಟ ಮಳಿಗೆಗಳನ್ನು ಹೊಂದಿರುವ ಒಕಿನಾವ ಕಂಪನಿಯು 2020-21ರ ಆರ್ಥಿಕ ವರ್ಷದ ಅಂತ್ಯಕ್ಕೆ 500 ಶೋರೂಂ ತೆರೆಯುವ ಗುರಿಹೊಂದಿದ್ದು, ಒಕಿನಾವ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸದ್ಯ ರಿಡ್ಜ್ 30, ರಿಡ್ಜ್, ಪ್ರೈಸ್, ಆರ್30, ಲೈಟ್, ರಿಡ್ಜ್ ಪ್ಲಸ್, ಪ್ರೈಸ್ ಪ್ರೊ ಮತ್ತು ಐ-ಪ್ರೈಸ್ ಪ್ರೊ ಪ್ಲಸ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

Most Read Articles

Kannada
English summary
Okinawa Mobile App Launched In India For Connected Scooters. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X