ಫೆಬ್ರವರಿ ತಿಂಗಳಲ್ಲಿ ಮಾರಾಟವಾದ ಟಿವಿಎಸ್ ಅಪಾಚೆ ಬೈಕುಗಳೆಷ್ಟು ಗೊತ್ತಾ?

ಟಿವಿಎಸ್ ಇಂಡಿಯಾ ಕಂಪನಿಯ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಬೈಕುಗಳಲ್ಲಿ ಅಪಾಚೆ ಮಾದರಿಗಳು ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಅಪಾಚೆ ಮಾದರಿಗಳಾದ ಆರ್‌ಟಿಆರ್ 160, 180, 200 ಮತ್ತು ಆರ್‌ಆರ್ 310 ಬೈಕುಗಳು ಉತ್ತಮವಾಗಿ ಮಾರಾಟವಾಗುತ್ತಿದೆ.

ಫೆಬ್ರವರಿ ತಿಂಗಳಲ್ಲಿ ಮಾರಾಟವಾದ ಟಿವಿಎಸ್ ಅಪಾಚೆ ಬೈಕುಗಳೆಷ್ಟು ಗೊತ್ತಾ?

ಕಳೆದ ಫೆಬ್ರವರಿ ತಿಂಗಳಲ್ಲಿ ಟಿವಿಎಸ್ ಅಪಾಚೆ ಆರ್‌ಟಿಆರ್ 160, 180, 200 ಮತ್ತು ಆರ್‌ಆರ್ 310 ಮಾದರಿಗಳು ಒಟ್ಟು 32,345 ಯುನಿಟ್ ಗಳು ಮಾರಾಟವಾಗಿವೆ. ಆರ್ಆರ್ 310 ಮಾದರಿಯ ವರ್ಷದಿಂದ ವರ್ಷಕ್ಕೆ ಶೇ.27 ರಷ್ಟು ಬೆಳವಣಿಗೆಯನ್ನು ಕಂಡಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಬಿಎಸ್-6 ಅಪಾಚೆ ಆರ್‌ಆರ್ 310 ಬೈಕ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.2.40 ಲಕ್ಷ ಬೆಲೆಯನ್ನು ಹೊಂದಿದೆ.

ಫೆಬ್ರವರಿ ತಿಂಗಳಲ್ಲಿ ಮಾರಾಟವಾದ ಟಿವಿಎಸ್ ಅಪಾಚೆ ಬೈಕುಗಳೆಷ್ಟು ಗೊತ್ತಾ?

ಇದು ಬಿಎಸ್-4 ಆವೃತ್ತಿಗಿಂತಲೂ ರೂ.12 ಸಾವಿರ ದುಬಾರಿಯಾಗಿದ್ದರೂ ಹೊಸ ಬೈಕಿನಲ್ಲಿ ಬೆಲೆಗೆ ತಕ್ಕಂತೆ ಹಲವು ಹೊಸ ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದೆ. ಹೊಸ ಬೈಕಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ನೀಡುವುದಕ್ಕಾಗಿ ನಾಲ್ಕು ಹೊಸ ಬಣ್ಣಗಳ ಆಯ್ಕೆಯ ಜೊತೆಗೆ ಗ್ರಾಫಿಕ್ ಡಿಸೈನ್ ಬದಲಾವಣೆಗೊಳಿಸಿದ್ದು,

ಫೆಬ್ರವರಿ ತಿಂಗಳಲ್ಲಿ ಮಾರಾಟವಾದ ಟಿವಿಎಸ್ ಅಪಾಚೆ ಬೈಕುಗಳೆಷ್ಟು ಗೊತ್ತಾ?

ಕೆಲವು ತಾಂತ್ರಿಕ ಬದಲಾವಣೆಗಳಿಂದಾಗಿ ಬೈಕಿನ ತೂಕವು ಈ ಹಿಂದಿನ ಆವೃತ್ತಿಗಿಂತ 5 ಕೆ.ಜಿ ಹೆಚ್ಚುವರಿ ತೂಕ ಪಡೆದಿದೆ. ಸದ್ಯ 174 ಕೆ.ಜಿ ತೂಕ ಹೊಂದಿರುವ ಅಪಾಚೆ ಆರ್‌ಆರ್ 310 ಬೈಕ್ ಮಾದರಿಯು 312.2 ಸಿಸಿ ರಿವರ್ಸ್ ಇನ್‌ಕೈನ್ಡ್, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ಪಡೆದಿದೆ.

ಫೆಬ್ರವರಿ ತಿಂಗಳಲ್ಲಿ ಮಾರಾಟವಾದ ಟಿವಿಎಸ್ ಅಪಾಚೆ ಬೈಕುಗಳೆಷ್ಟು ಗೊತ್ತಾ?

ಹೊಸ ಬೈಕಿನಲ್ಲಿ ಈ ಬಾರಿ ಸ್ಪೋರ್ಟ್, ಟ್ರ್ಯಾಕ್, ಅರ್ಬನ್ ಮತ್ತು ರೈನ್ ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, 34-ಬಿಎಚ್‌ಪಿ ಮತ್ತು 27.3-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ 160 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ಫೆಬ್ರವರಿ ತಿಂಗಳಲ್ಲಿ ಮಾರಾಟವಾದ ಟಿವಿಎಸ್ ಅಪಾಚೆ ಬೈಕುಗಳೆಷ್ಟು ಗೊತ್ತಾ?

ಅಪಾಚೆ ಆರ್‌ಟಿಆರ್ ಸರಣಿಯ ಬೈಕುಗಳ ಮಾರಾಟದಲ್ಲಿ ಶೆ.9ರಷ್ಟು ಕುಸಿತವನ್ನು ಕಂಡಿದೆ. ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಮಾದರಿಯು ಬಿಎಸ್-6 ಪ್ರೇರಿತ 159.7ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಸಹಾಯದೊಂದಿಗೆ 16-ಬಿಎಚ್‌ಪಿ ಮತ್ತು 14.1-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಫೆಬ್ರವರಿ ತಿಂಗಳಲ್ಲಿ ಮಾರಾಟವಾದ ಟಿವಿಎಸ್ ಅಪಾಚೆ ಬೈಕುಗಳೆಷ್ಟು ಗೊತ್ತಾ?

ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ ಮಾದರಿಯು ಸಹ ಬಿಎಸ್-6 ಮಾದರಿಯ 197.75ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 20-ಬಿಎಚ್‌ಪಿ ಮತ್ತು 16.8-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಫೆಬ್ರವರಿ ತಿಂಗಳಲ್ಲಿ ಮಾರಾಟವಾದ ಟಿವಿಎಸ್ ಅಪಾಚೆ ಬೈಕುಗಳೆಷ್ಟು ಗೊತ್ತಾ?

ಒಟ್ಟಿನಲ್ಲಿ ಗ್ರಾಹಕರ ನೀರಿಕ್ಷೆಯೆಂತೆ ಹೊಸ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ, ಆರ್‌ಟಿಆರ್ 160 4ವಿ ಮತ್ತು ಅಪಾಚೆ ಆರ್‌ಟಿಆರ್ 180 4ವಿ ಬೈಕ್ ಮಾದರಿಗಳು ಮಹತ್ವದ ಬದಲಾವಣೆಗೆಳೊಂದಿಗೆ ಇನ್ನಷ್ಟು ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
Over 32,000 TVS Apache Sold In Feb 2020 – RTR 160, 180, 200, RR 310. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X