ಬೈಕ್ ರ್‍ಯಾಲಿಯಲ್ಲಿ ದಾರುಣ ಸಾವು ಕಂಡ ಹೀರೊ ಮೋಟೊಸ್ಪೋರ್ಟ್ ಸವಾರ

ಬೈಕ್ ರ್‍ಯಾಲಿಗಳು ನೋಡುಗರನ್ನು ರೋಮಾಂಚನಗೊಳಿಸುತ್ತವೆ. ಪ್ರಾಣ ಹೋಗಬಹುದೆಂದು ತಿಳಿದಿದ್ದರೂ ಸಹ ಬೈಕ್ ಸವಾರರು ಈ ರ್‍ಯಾಲಿಗಳಲ್ಲಿ ಸ್ಪರ್ಧಿಸಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿದ್ದ ಭಾರತ ತಂಡದ ಸದಸ್ಯರೊಬ್ಬರು ಮೃತ ಪಟ್ಟ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.

ಬೈಕ್ ರ್‍ಯಾಲಿಯಲ್ಲಿ ದಾರುಣ ಸಾವು ಕಂಡ ಹೀರೊ ಮೋಟೊಸ್ಪೋರ್ಟ್ ಸವಾರ

ವಿಶ್ವದ ಅಪಾಯಕಾರಿ ಕ್ರೀಡೆಗಳಲ್ಲಿ ಎಂದು ಪರಿಗಣಿಸಲಾಗುವ ಡಕಾರ್ ರ್‍ಯಾಲಿಯಲ್ಲಿ ಭಾರತದ ಹೀರೊ ಮೋಟೊಸ್ಪೋರ್ಟ್ ತಂಡದ ಸವಾರ ಪೌಲೊ ಗೊನ್ಸಾಲ್ವೆಸ್ ಮೃತಪಟ್ಟಿದ್ದಾರೆ. ಗೊನ್ಸಾಲ್ವೆಸ್‍‍ರವರು ಈ ಹಿಂದೆ ಇದೇ ರ್‍ಯಾಲಿಯಲ್ಲಿ ರನ್ನರ್‍ಅಪ್ ಸ್ಥಾನ ಪಡೆದಿದ್ದರು.

ಬೈಕ್ ರ್‍ಯಾಲಿಯಲ್ಲಿ ದಾರುಣ ಸಾವು ಕಂಡ ಹೀರೊ ಮೋಟೊಸ್ಪೋರ್ಟ್ ಸವಾರ

ಈ ಬಾರಿ ಅವರು ಭಾರತದ ಹೀರೊ ಮೋಟೊಸ್ಪೋರ್ಟ್ ತಂಡದ ಸದಸ್ಯರಾಗಿದ್ದರು. ಗೊನ್ಸಾಲ್ವೆಸ್‍‍ರವರು 2006ರಲ್ಲಿ ಮೊದಲ ಬಾರಿಗೆ ಡಕಾರ್ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಭಾನುವಾರ ಡಕಾರ್ ರ್‍ಯಾಲಿಯ 7ನೇ ಹಂತದ ಸುತ್ತಿನ ಸ್ಪರ್ಧೆಯಲ್ಲಿ ರಿಯಾದ್ ಹಾಗೂ ಅಲ್ ದವಾಸಿರ್ ನಡುವೆ ಸಂಚರಿಸುತ್ತಿದ್ದಾಗ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.

ಬೈಕ್ ರ್‍ಯಾಲಿಯಲ್ಲಿ ದಾರುಣ ಸಾವು ಕಂಡ ಹೀರೊ ಮೋಟೊಸ್ಪೋರ್ಟ್ ಸವಾರ

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದ ಮಾಹಿತಿ ದೊರೆತ ತಕ್ಷಣ ರ್‍ಯಾಲಿ ಸಂಯೋಜಕರು ಸ್ಥಳಕ್ಕೆ ಹೆಲಿಕಾಪ್ಟರ್ ಕಳುಹಿಸಿದ್ದರು. ಹೆಲಿಕಾಪ್ಟರ್ ಸ್ಥಳಕ್ಕೆ ತಲುಪುವಷ್ಟರಲ್ಲಿ ಗೊನ್ಸಾಲ್ವೆಸ್ ಮೃತಪಟ್ಟಿದ್ದರು.

ಬೈಕ್ ರ್‍ಯಾಲಿಯಲ್ಲಿ ದಾರುಣ ಸಾವು ಕಂಡ ಹೀರೊ ಮೋಟೊಸ್ಪೋರ್ಟ್ ಸವಾರ

ಗೊನ್ಸಾಲ್ವೆಸ್‍‍ರವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಯ ಡಾಕ್ಟರ್‍‍ಗಳು ಆಸ್ಪತ್ರೆಗೆ ಸೇರಿಸುವ ಮುನ್ನವೇ ಗೊನ್ಸಾಲ್ವೆಸ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಅಪಾಯಕಾರಿ ಡಕಾರ್ ರ್‍ಯಾಲಿಯಲ್ಲಿ ಗೊನ್ಸಾಲ್ವೆಸ್‍‍ರವರು 13 ಬಾರಿ ಭಾಗವಹಿಸಿದ್ದರು.

ಬೈಕ್ ರ್‍ಯಾಲಿಯಲ್ಲಿ ದಾರುಣ ಸಾವು ಕಂಡ ಹೀರೊ ಮೋಟೊಸ್ಪೋರ್ಟ್ ಸವಾರ

ಇದರಲ್ಲಿ ನಾಲ್ಕು ಬಾರಿ ಟಾಪ್ 10ನೊಳಗೆ ಸ್ಥಾನಗಿಟ್ಟಿಸಿದ್ದರು. ಅಂದ ಹಾಗೆ ಗೊನ್ಸಾಲ್ವೆಸ್‍‍ರವರ ಸರ್ವ ಶ್ರೇಷ್ಟ ಸಾಧನೆ ದಾಖಲಾಗಿದ್ದು, 2015ರಲ್ಲಿ. ಆ ವರ್ಷ ಅವರು ರನ್ನರ್ ಅಪ್ ಆಗಿದ್ದರು. ಭಾರತದ ಹೀರೊ ಮೋಟೊಸ್ಪೋರ್ಟ್ ತಂಡದಲ್ಲಿ ಬೆಂಗಳೂರಿನವರಾದ ಕನ್ನಡಿಗ ಸಿ‍ಎಸ್ ಸಂತೋಷ್ ಸಹ ಇದ್ದಾರೆ.

ಬೈಕ್ ರ್‍ಯಾಲಿಯಲ್ಲಿ ದಾರುಣ ಸಾವು ಕಂಡ ಹೀರೊ ಮೋಟೊಸ್ಪೋರ್ಟ್ ಸವಾರ

ಪೌಲೊ ಗೊನ್ಸಾಲ್ವೆಸ್‍‍ರವರು 2013ರ ಕ್ರಾಸ್ ಕಂಟ್ರಿ ರ್‍ಯಾಲಿಯಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಈಗ ನಡೆಯುತ್ತಿರುವ ಡಕಾರ್ ರ್‍ಯಾಲಿಯಲ್ಲಿ 6ನೇ ಸುತ್ತಿನ ಕೊನೆಯಲ್ಲಿ ಒಟ್ಟಾರೆ 46 ನೇ ಸ್ಥಾನದಲ್ಲಿದ್ದರು.

ಬೈಕ್ ರ್‍ಯಾಲಿಯಲ್ಲಿ ದಾರುಣ ಸಾವು ಕಂಡ ಹೀರೊ ಮೋಟೊಸ್ಪೋರ್ಟ್ ಸವಾರ

ಗೊನ್ಸಾಲ್ವೆಸ್‍‍ರವರು ಡಿಸೆಂಬರ್‌ನಲ್ಲಿ ತಮ್ಮ ದೇಶವಾದ ಪೋರ್ಚುಗಲ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದರು. ಚೇತರಿಸಿಕೊಂಡ ನಂತರ ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಡಕಾರ್‌ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

ಬೈಕ್ ರ್‍ಯಾಲಿಯಲ್ಲಿ ದಾರುಣ ಸಾವು ಕಂಡ ಹೀರೊ ಮೋಟೊಸ್ಪೋರ್ಟ್ ಸವಾರ

ಸಮಯಕ್ಕೆ ಸರಿಯಾಗಿ ಸರ್ಜರಿಯಿಂದ ಚೇತರಿಸಿಕೊಂಡ ಅವರು, ರ್‍ಯಾಲಿ ನಡೆಯುವ ಮೊದಲು ಪ್ರಾರಂಭದಲ್ಲಿಯೇ ಇಲ್ಲಿಗೆ ಬಂದಿರುವುದು ನನಗೆ ಸಿಕ್ಕ ಜಯ ಎಂದು ಹೇಳಿದ್ದರು. ಸ್ಪೀಡಿ ಗೊನ್ಸಾಲ್ವೆಸ್ ಎಂದು ಕರೆಯಲ್ಪಡುತ್ತಿದ್ದ ಅವರು ಹಲವು ಕಂಪನಿಯ ಬೈಕ್‍‍ಗಳನ್ನು ಚಲಾಯಿಸಿದ್ದರು.

ಬೈಕ್ ರ್‍ಯಾಲಿಯಲ್ಲಿ ದಾರುಣ ಸಾವು ಕಂಡ ಹೀರೊ ಮೋಟೊಸ್ಪೋರ್ಟ್ ಸವಾರ

ಇವುಗಳಲ್ಲಿ ಹೋಂಡಾ, ಬಿಎಂ‍‍ಡಬ್ಲ್ಯು, ಹಸ್ಕ್ ವರ್ನಾ ಕಂಪನಿಯ ಬೈಕ್‍‍ಗಳು ಸೇರಿವೆ. ಪೌಲೊ ಗೊನ್ಸಾಲ್ವೆಸ್, 2015ರ ಡಕಾರ್ ರ್‍ಯಾಲಿಯಲ್ಲಿ ಮಿಚೆಲ್ ಹರ್ನಿಕ್‍‍ರವರು ಮೃತಪಟ್ಟ ನಂತರ ಈ ಸ್ಪರ್ಧೆಯಲ್ಲಿ ಮೃತಪಟ್ಟ ಮೊದಲ ಸ್ಪರ್ಧಿಯಾಗಿದ್ದಾರೆ.

Most Read Articles

Kannada
English summary
Dakar 2020 Stage 7: Paulo Goncalves Declared Dead During The Rally. Read in Kannada.
Story first published: Monday, January 13, 2020, 11:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X