ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಎಪ್ರಿಲಿಯಾ

ಇಟಾಲಿಯನ್ ಆಟೋ ಉತ್ಪಾದನಾ ಕಂಪನಿಯಾಗಿರುವ ಪಿಯಾಜಿಯೊ ಗ್ರೂಪ್ ತನ್ನ ಪ್ರಮುಖ ಬ್ರಾಂಡ್ ಎಪ್ರಿಲಿಯಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಮೊದಲ ಸ್ಕೂಟರ್ ಮಾದರಿಗಾಗಿ ಟ್ರೆಡ್‌ಮಾರ್ಕ್ ಸಲ್ಲಿಸಿದೆ.

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಎಪ್ರಿಲಿಯಾ

ವಿಶ್ವಾದ್ಯಂತ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಸಾಂಪ್ರದಾಯಿಕ ವಾಹನಗಳ ಮಾರಾಟದಿಂದ ಎಲೆಕ್ಟ್ರಿಕ್ ಮಾದರಿಗಳತ್ತ ಗಮನಹರಿಸುತ್ತಿದ್ದು, ಈಗಾಗಲೇ ಹಲವಾರು ವಾಹನ ಮಾದರಿಗಳಲ್ಲಿ ಎಲೆಕ್ಟ್ರಿಕ್ ಮಾದರಿಗಳನ್ನು ಮಾರಾಟ ಮಾಡುಲಾಗುತ್ತಿದೆ. ಭವಿಷ್ಯದ ದೃಷ್ಠಿಯಿಂದ ಎಲೆಕ್ಟಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಪಿಯಾಜಿಯೊ ಕೂಡಾ ತನ್ನ ಪ್ರಮುಖ ಬ್ರಾಂಡ್‌ಗಳಾದ ಎಪ್ರಿಲಿಯಾ ಮತ್ತು ವೆಸ್ಪಾ ಮಾದರಿಗಳಲ್ಲಿ ಎಲೆಕ್ಟ್ರಿಕ್ ಆವೃತ್ತಿಗಳನ್ನು ಅಭಿವೃದ್ದಿಪಡಿಸುತ್ತಿದೆ.

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಎಪ್ರಿಲಿಯಾ

ಯುರೋಪಿನ್ ಒಕ್ಕೂಟದಲ್ಲಿ ಹೊಸ ವಾಹನಗಳಿಗಾಗಿ ಸಲ್ಲಿಕೆ ಮಾಡಲಾಗುವ ಟ್ರೆಡ್‌ಮಾರ್ಕ್‌ನಲ್ಲಿ ಎಪ್ರಿಲಿಯಾದಿಂದ ಇಎಸ್ಆರ್1 ಹೆಸರನ್ನು ನೋಂದಾಯಿಸಲಾಗಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಸ್ಆರ್ 125 ಸ್ಕೂಟರ್ ಮಾದರಿಯ ಡಿಸೈನ್ ಆಧರಿಸಿದೆ.

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಎಪ್ರಿಲಿಯಾ

ಎಪ್ರಿಲಿಯಾ ಕಂಪನಿಯ ಇಎಸ್ಆರ್1 ಮಾದರಿಯ ಹೆಸರಿನ ಹೊರತು ತಾಂತ್ರಿಕ ಅಂಶಗಳ ಕುರಿತಾ ಯಾವುದೇ ಮಾಹಿತಿ ಲಭ್ಯವಾಗಿಲ್ಲವಾದರೂ ಹೊಸ ಸ್ಕೂಟರ್ ಮಾದರಿಯು ವೆಸ್ಪಾದ ಎಲೆಕ್ಟ್ರಿಕಾ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲಿ ಬ್ಯಾಟರಿ ಸೌಲಭ್ಯವನ್ನು ಎರವಲು ಪಡೆಯಲಿದೆ.

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಎಪ್ರಿಲಿಯಾ

ಸ್ಕೂಟರ್ ವಿನ್ಯಾಸದಲ್ಲಿ ತಮ್ಮದೆ ಆದ ಗುರುತರ ವಿನ್ಯಾಸ ಹೊಂದಿರುವ ಎಪ್ರಿಲಿಯಾ ಮತ್ತು ವೆಸ್ಪಾ ಮಾದರಿಗಳು ಎಲೆಕ್ಟ್ಕಿಕ್ ಮಾದರಿಯಲ್ಲೂ ಗಮನಸೆಳೆಯಲಿದ್ದು, ವಿವಿಧ ಫೀಚರ್ಸ್‌ಗಳನ್ನು ಹೊರತುಪಡಿಸಿ ಒಂದೇ ಮಾದರಿಯ ಬ್ಯಾಟರಿ ಸೌಲಭ್ಯವನ್ನು ಎರಡು ಕಂಪನಿಗಳು ಕೂಡಾ ಬಳಕೆ ಮಾಡಿಕೊಳ್ಳಲಿವೆ. ಜೊತೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳಲ್ಲಿನ ಕನೆಕ್ಟೆಡ್ ಫೀಚರ್ಸ್‌ಗಳನ್ನು ಸಹ ಎರಡು ಬ್ರಾಂಡ್‌ಗಳಲ್ಲಿ ಒಂದೇ ಮಾದರಿಯಾಗಿರಲಿದ್ದು, ಪ್ರೀಮಿಯಂ ಸೌಲಭ್ಯಗಳೊಂದಿಗೆ ಹೊಸ ಇವಿ ಸ್ಕೂಟರ್‌ಗಳು ತುಸು ದುಬಾರಿ ಎನ್ನಿಸಲಿವೆ.

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಎಪ್ರಿಲಿಯಾ

ಎಪ್ರಿಲಿಯಾ ಕಂಪನಿಯು ಸದ್ಯ ಎಸ್‌ಆರ್ ಶ್ರೇಣಿಯ ಸ್ಕೂಟರ್‌ಗಳೊಂದಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಬೇಡಿಕೆಯೆಂತೆ 50ಸಿಸಿ, 125ಸಿಸಿ, 150ಸಿಸಿ ಮತ್ತು 160ಸಿಸಿ ವರೆಗಿನ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಎಪ್ರಿಲಿಯಾ

ಎಪ್ರಿಲಿಯಾ ಇಎಸ್ಆರ್1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಕ್ಲಾಸಿಕ್ ವಿನ್ಯಾಸದ ವೆಸ್ಪಾ ಎಲೆಕ್ಟ್ರಿಕಾ ಮಾದರಿಯೊಂದಿಗೆ ಕೆಲವು ವಿದ್ಯುತ್ ತಂತ್ರಜ್ಞಾನವನ್ನು ಹಂಚಿಕೊಳ್ಳುವ ನಿರೀಕ್ಷೆಯಿದ್ದು, ಹೊಸ ಸ್ಕೂಟರ್ ಮಾದರಿಯು 2021ರ ಮಧ್ಯಂತರದಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಎಪ್ರಿಲಿಯಾ

ಇನ್ನು 2017ರಲ್ಲಿ ಅನಾವರಣಗೊಂಡಿದ್ದ ವೆಸ್ಪಾ ಎಲೆಕ್ಟ್ರಿಕಾ ಇವಿ ಸ್ಕೂಟರ್ ಮಾದರಿಯು ಕೂಡಾ ಬಿಡುಗಡೆಯ ಹಂತದಲ್ಲಿದ್ದು, ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ ಎಲೆಕ್ಟ್ರಿಕಾ ಮಾದರಿಯನ್ನು ಕಾರಣಾಂತರಗಳಿಂತ ಮುಂದೂಡಿಕೆ ಮಾಡುತ್ತಾ ಬಂದಿತ್ತು.

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಎಪ್ರಿಲಿಯಾ

ಇದೀಗ ಮಾರುಕಟ್ಟೆಯಲ್ಲಿನ ಬೇಡಿಕೆ ಬದಲಾಗುತ್ತಿದ್ದಂತೆ ಎಲೆಕ್ಟ್ರಿಕಾ ಇವಿ ಸ್ಕೂಟರ್ ಬಿಡುಗಡೆ ಮಾಡುತ್ತಿರುವ ವೆಸ್ಪಾ ಕಂಪನಿಯು ಹೊಸ ಸ್ಕೂಟರ್‌ನಲ್ಲಿ 4 ಕಿ.ವ್ಯಾ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‍‌ಗೆ 100ರಿಂದ 120ಕಿ.ಮೀ ಸಾಮರ್ಥ್ಯದೊಂದಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಎಪ್ರಿಲಿಯಾ

ವೆಸ್ಪಾ ಎಲೆಕ್ಟ್ರಿಕಾ ಇವಿ ಸ್ಕೂಟರ್ ಮಾದರಿಯಲ್ಲಿ ಎಪ್ರಿಲಿಯಾ ಇಎಸ್ಆರ್1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಕೂಡಾ ಉತ್ತಮ ಮೈಲೇಜ್‌ನೊಂದಿಗೆ ಪರ್ಫಾಮೆನ್ಸ್ ಮತ್ತು ಪ್ರೀಮಿಯಂ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಶೀಘ್ರದಲ್ಲೇ ಹೊಸ ಸ್ಕೂಟರ್‌ಗಳ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

Most Read Articles

Kannada
English summary
Piaggio Files Trademark For An Electric Aprilia Scooter. Read in Kannada.
Story first published: Friday, December 4, 2020, 15:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X