Just In
- 53 min ago
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- 1 hr ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 2 hrs ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 3 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
Don't Miss!
- News
ಕೊವ್ಯಾಕ್ಸಿನ್ ಬಗ್ಗೆ ಎಚ್ಚರ: ಲಸಿಕೆಯು ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ?
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಎಪ್ರಿಲಿಯಾ
ಇಟಾಲಿಯನ್ ಆಟೋ ಉತ್ಪಾದನಾ ಕಂಪನಿಯಾಗಿರುವ ಪಿಯಾಜಿಯೊ ಗ್ರೂಪ್ ತನ್ನ ಪ್ರಮುಖ ಬ್ರಾಂಡ್ ಎಪ್ರಿಲಿಯಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಮೊದಲ ಸ್ಕೂಟರ್ ಮಾದರಿಗಾಗಿ ಟ್ರೆಡ್ಮಾರ್ಕ್ ಸಲ್ಲಿಸಿದೆ.

ವಿಶ್ವಾದ್ಯಂತ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಸಾಂಪ್ರದಾಯಿಕ ವಾಹನಗಳ ಮಾರಾಟದಿಂದ ಎಲೆಕ್ಟ್ರಿಕ್ ಮಾದರಿಗಳತ್ತ ಗಮನಹರಿಸುತ್ತಿದ್ದು, ಈಗಾಗಲೇ ಹಲವಾರು ವಾಹನ ಮಾದರಿಗಳಲ್ಲಿ ಎಲೆಕ್ಟ್ರಿಕ್ ಮಾದರಿಗಳನ್ನು ಮಾರಾಟ ಮಾಡುಲಾಗುತ್ತಿದೆ. ಭವಿಷ್ಯದ ದೃಷ್ಠಿಯಿಂದ ಎಲೆಕ್ಟಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಪಿಯಾಜಿಯೊ ಕೂಡಾ ತನ್ನ ಪ್ರಮುಖ ಬ್ರಾಂಡ್ಗಳಾದ ಎಪ್ರಿಲಿಯಾ ಮತ್ತು ವೆಸ್ಪಾ ಮಾದರಿಗಳಲ್ಲಿ ಎಲೆಕ್ಟ್ರಿಕ್ ಆವೃತ್ತಿಗಳನ್ನು ಅಭಿವೃದ್ದಿಪಡಿಸುತ್ತಿದೆ.

ಯುರೋಪಿನ್ ಒಕ್ಕೂಟದಲ್ಲಿ ಹೊಸ ವಾಹನಗಳಿಗಾಗಿ ಸಲ್ಲಿಕೆ ಮಾಡಲಾಗುವ ಟ್ರೆಡ್ಮಾರ್ಕ್ನಲ್ಲಿ ಎಪ್ರಿಲಿಯಾದಿಂದ ಇಎಸ್ಆರ್1 ಹೆಸರನ್ನು ನೋಂದಾಯಿಸಲಾಗಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಸ್ಆರ್ 125 ಸ್ಕೂಟರ್ ಮಾದರಿಯ ಡಿಸೈನ್ ಆಧರಿಸಿದೆ.

ಎಪ್ರಿಲಿಯಾ ಕಂಪನಿಯ ಇಎಸ್ಆರ್1 ಮಾದರಿಯ ಹೆಸರಿನ ಹೊರತು ತಾಂತ್ರಿಕ ಅಂಶಗಳ ಕುರಿತಾ ಯಾವುದೇ ಮಾಹಿತಿ ಲಭ್ಯವಾಗಿಲ್ಲವಾದರೂ ಹೊಸ ಸ್ಕೂಟರ್ ಮಾದರಿಯು ವೆಸ್ಪಾದ ಎಲೆಕ್ಟ್ರಿಕಾ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲಿ ಬ್ಯಾಟರಿ ಸೌಲಭ್ಯವನ್ನು ಎರವಲು ಪಡೆಯಲಿದೆ.

ಸ್ಕೂಟರ್ ವಿನ್ಯಾಸದಲ್ಲಿ ತಮ್ಮದೆ ಆದ ಗುರುತರ ವಿನ್ಯಾಸ ಹೊಂದಿರುವ ಎಪ್ರಿಲಿಯಾ ಮತ್ತು ವೆಸ್ಪಾ ಮಾದರಿಗಳು ಎಲೆಕ್ಟ್ಕಿಕ್ ಮಾದರಿಯಲ್ಲೂ ಗಮನಸೆಳೆಯಲಿದ್ದು, ವಿವಿಧ ಫೀಚರ್ಸ್ಗಳನ್ನು ಹೊರತುಪಡಿಸಿ ಒಂದೇ ಮಾದರಿಯ ಬ್ಯಾಟರಿ ಸೌಲಭ್ಯವನ್ನು ಎರಡು ಕಂಪನಿಗಳು ಕೂಡಾ ಬಳಕೆ ಮಾಡಿಕೊಳ್ಳಲಿವೆ. ಜೊತೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳಲ್ಲಿನ ಕನೆಕ್ಟೆಡ್ ಫೀಚರ್ಸ್ಗಳನ್ನು ಸಹ ಎರಡು ಬ್ರಾಂಡ್ಗಳಲ್ಲಿ ಒಂದೇ ಮಾದರಿಯಾಗಿರಲಿದ್ದು, ಪ್ರೀಮಿಯಂ ಸೌಲಭ್ಯಗಳೊಂದಿಗೆ ಹೊಸ ಇವಿ ಸ್ಕೂಟರ್ಗಳು ತುಸು ದುಬಾರಿ ಎನ್ನಿಸಲಿವೆ.

ಎಪ್ರಿಲಿಯಾ ಕಂಪನಿಯು ಸದ್ಯ ಎಸ್ಆರ್ ಶ್ರೇಣಿಯ ಸ್ಕೂಟರ್ಗಳೊಂದಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಬೇಡಿಕೆಯೆಂತೆ 50ಸಿಸಿ, 125ಸಿಸಿ, 150ಸಿಸಿ ಮತ್ತು 160ಸಿಸಿ ವರೆಗಿನ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಎಪ್ರಿಲಿಯಾ ಇಎಸ್ಆರ್1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಕ್ಲಾಸಿಕ್ ವಿನ್ಯಾಸದ ವೆಸ್ಪಾ ಎಲೆಕ್ಟ್ರಿಕಾ ಮಾದರಿಯೊಂದಿಗೆ ಕೆಲವು ವಿದ್ಯುತ್ ತಂತ್ರಜ್ಞಾನವನ್ನು ಹಂಚಿಕೊಳ್ಳುವ ನಿರೀಕ್ಷೆಯಿದ್ದು, ಹೊಸ ಸ್ಕೂಟರ್ ಮಾದರಿಯು 2021ರ ಮಧ್ಯಂತರದಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.
MOST READ: ಪ್ರತಿ ಚಾರ್ಜ್ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಇನ್ನು 2017ರಲ್ಲಿ ಅನಾವರಣಗೊಂಡಿದ್ದ ವೆಸ್ಪಾ ಎಲೆಕ್ಟ್ರಿಕಾ ಇವಿ ಸ್ಕೂಟರ್ ಮಾದರಿಯು ಕೂಡಾ ಬಿಡುಗಡೆಯ ಹಂತದಲ್ಲಿದ್ದು, ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ ಎಲೆಕ್ಟ್ರಿಕಾ ಮಾದರಿಯನ್ನು ಕಾರಣಾಂತರಗಳಿಂತ ಮುಂದೂಡಿಕೆ ಮಾಡುತ್ತಾ ಬಂದಿತ್ತು.

ಇದೀಗ ಮಾರುಕಟ್ಟೆಯಲ್ಲಿನ ಬೇಡಿಕೆ ಬದಲಾಗುತ್ತಿದ್ದಂತೆ ಎಲೆಕ್ಟ್ರಿಕಾ ಇವಿ ಸ್ಕೂಟರ್ ಬಿಡುಗಡೆ ಮಾಡುತ್ತಿರುವ ವೆಸ್ಪಾ ಕಂಪನಿಯು ಹೊಸ ಸ್ಕೂಟರ್ನಲ್ಲಿ 4 ಕಿ.ವ್ಯಾ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್ಗೆ 100ರಿಂದ 120ಕಿ.ಮೀ ಸಾಮರ್ಥ್ಯದೊಂದಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ವೆಸ್ಪಾ ಎಲೆಕ್ಟ್ರಿಕಾ ಇವಿ ಸ್ಕೂಟರ್ ಮಾದರಿಯಲ್ಲಿ ಎಪ್ರಿಲಿಯಾ ಇಎಸ್ಆರ್1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಕೂಡಾ ಉತ್ತಮ ಮೈಲೇಜ್ನೊಂದಿಗೆ ಪರ್ಫಾಮೆನ್ಸ್ ಮತ್ತು ಪ್ರೀಮಿಯಂ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಶೀಘ್ರದಲ್ಲೇ ಹೊಸ ಸ್ಕೂಟರ್ಗಳ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.