ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಪಿಯಾಜಿಯೊ ಇಂಡಿಯಾ ಕಂಪನಿಯು ವೆಸ್ಪಾ ವಿಎಕ್ಸ್ಎಲ್ ಹಾಗೂ ಎಸ್ಎಕ್ಸ್ಎಲ್ ಸ್ಕೂಟರ್ ಗಳ ಫೇಸ್‌ಲಿಫ್ಟ್ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಸ್ಕೂಟರ್ ಗಳನ್ನು ಬಿಡುಗಡೆಗೊಳಿಸುವ ಮೊದಲು ಕಂಪನಿಯು ಈ ಎರಡೂ ಮಾದರಿಗಳ ಪ್ರೀ-ಬುಕ್ಕಿಂಗ್ ಗಳನ್ನು ಆರಂಭಿಸಿರುವುದಾಗಿ ತಿಳಿಸಿದೆ.

ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ರೂ.1,000 ಪಾವತಿಸುವ ಮೂಲಕ ಈ ಸ್ಕೂಟರ್ ಗಳನ್ನು ಆನ್‌ಲೈನ್ ನಲ್ಲಿ ಪ್ರೀ-ಬುಕ್ಕಿಂಗ್ ಮಾಡಬಹುದು. ಕಂಪನಿಯು ಈ ಸ್ಕೂಟರ್‌ಗಳ ಬೆಲೆಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಈ ಸ್ಕೂಟರ್‌ಗಳು ಈ ತಿಂಗಳ ಕೊನೆಗೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಈ ಫೇಸ್‌ಲಿಫ್ಟ್ ಸ್ಕೂಟರ್ ಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಸ್ಕೂಟರ್‌ನ ಮುಂಭಾಗದಲ್ಲಿರುವ ಫಾಸ್ಕಿಯಾದ ವಿನ್ಯಾಸದಲ್ಲಿ ಸಣ್ಣ ಪ್ರಮಾಣದ ಬದಲಾವಣೆಗಳಾಗಿವೆ. ಸ್ಕೂಟರ್‌ನಲ್ಲಿರುವ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿರುವ ಎಲ್‌ಇಡಿ ಹೆಡ್‌ಲೈಟ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಸಿಲೂಯೆಟ್, ಕರ್ವ್ ಬಾಡಿ ಪ್ಯಾನೆಲ್‌ ಹಾಗೂ ಸ್ಕೂಟರ್‌ನ ರೆಟ್ರೊ-ವಿನ್ಯಾಸಗಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ವೆಸ್ಪಾ ವಿಎಕ್ಸ್ಎಲ್ ಹಾಗೂ ಎಸ್ಎಕ್ಸ್ಎಲ್ ಸ್ಕೂಟರ್ ಗಳನ್ನು 125 ಸಿಸಿ ಹಾಗೂ 149 ಸಿಸಿ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುವುದು.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ವೆಸ್ಪಾ ಎಸ್‌ಎಕ್ಸ್‌ಎಲ್ ಹಾಗೂ ವಿಎಕ್ಸ್‌ಎಲ್ 149 ಸ್ಕೂಟರ್ ಗಳಲ್ಲಿ ಏರ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್, 149 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 7,600 ಆರ್‌ಪಿಎಂನಲ್ಲಿ 10.3 ಬಿಹೆಚ್‌ಪಿ ಪವರ್ ಹಾಗೂ 5,500 ಆರ್‌ಪಿಎಂನಲ್ಲಿ 10.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಇನ್ನೂ ಈ ಎರಡೂ ಮಾದರಿಗಳ 125 ಸಿಸಿ ಸ್ಕೂಟರ್ ಗಳು 125 ಸಿಸಿ ಎಂಜಿನ್ ಹೊಂದಿವೆ. ಫ್ಯೂಯಲ್ ಇಂಜೆಕ್ಟೆಡ್ ಸಿಂಗಲ್-ಸಿಲಿಂಡರ್ ನ ಈ ಎಂಜಿನ್ 7,500 ಆರ್‌ಪಿಎಂನಲ್ಲಿ 9.7 ಬಿಹೆಚ್‌ಪಿ ಪವರ್ ಹಾಗೂ 5,500 ಆರ್‌ಪಿಎಂನಲ್ಲಿ 9.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಕೆಲವು ಸಣ್ಣ ಬದಲಾವಣೆಗಳ ಹೊರತಾಗಿ, ಈ ಫೇಸ್‌ಲಿಫ್ಟ್ ಮಾದರಿಗಳು ಮಾರುಕಟ್ಟೆಯಲ್ಲಿರುವ ಸ್ಕೂಟರ್ ಗಳು ಹೊಂದಿರುವ ಫೀಚರ್ ಗಳನ್ನೇ ಹೊಂದಿರಲಿವೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ವೆಸ್ಪಾ ಎಸ್‌ಎಕ್ಸ್‌ಎಲ್ ಸರಣಿಯ ಸ್ಕೂಟರ್‌ಗಳು ರೆಕ್ಟಾಂಗ್ಯುಲರ್ ಶೇಪಿನ ಹೆಡ್‌ಲೈಟ್, ಎಲ್ಇಡಿ ಹೆಡ್‌ಲ್ಯಾಂಪ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಫೈವ್-ಸ್ಪೋಕ್ ಬ್ಲ್ಯಾಕ್ ಅಲಾಯ್ ವ್ಹೀಲ್ ಹಾಗೂ ಇನ್ನಿತರ ಫೀಚರ್ ಗಳನ್ನು ಹೊಂದಿವೆ. ಇನ್ನೂ ವಿಎಕ್ಸ್‌ಎಲ್ ಮಾದರಿಗಳು ರೌಂಡ್ ಶೇಪಿನ ಎಲ್‌ಇಡಿ ಹೆಡ್‌ಲ್ಯಾಂಪ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ವೈಸರ್ ಗಳನ್ನು ಹೊಂದಿವೆ.

ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಎರಡೂ ಮಾದರಿಗಳಲ್ಲಿ ಒಂದೇ ರೀತಿಯ ಸಸ್ಪೆಂಷನ್ ಸಿಸ್ಟಂಗಳನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ ಸಿಂಗಲ್ ಸೈಡ್-ಆರ್ಮ್ ಸೆಟಪ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಹೈಡ್ರಾಲಿಕ್ ಶಾಕ್ ಅಬ್ಸರ್ವರ್ ಗಳನ್ನು ಅಳವಡಿಸಲಾಗಿದೆ. ಎರಡೂ ಸ್ಕೂಟರ್‌ಗಳಲ್ಲಿ ಬ್ರೇಕಿಂಗ್ ಗಳಿಗಾಗಿ ಮುಂಭಾಗದಲ್ಲಿ 200 ಎಂಎಂ ವೆಂಟೀಲೇಟೆಡ್ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 140 ಎಂಎಂ ಡ್ರಮ್ ಬ್ರೇಕ್ ಗಳನ್ನು ನೀಡಲಾಗಿದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಕಂಪನಿಯು 125 ಸಿಸಿ ಸ್ಕೂಟರ್‌ಗಳಲ್ಲಿ ಕಂಬೈನ್ದ್ ಬ್ರೇಕಿಂಗ್ ಸಿಸ್ಟಂಗಳನ್ನು ನೀಡಿದರೆ, 149 ಸಿಸಿ ಸ್ಕೂಟರ್‌ಗಳಲ್ಲಿ ಹೆಚ್ಚುವರಿ ಸುರಕ್ಷತೆಗಾಗಿ ಸಿಂಗಲ್-ಚಾನೆಲ್ ಎಬಿಎಸ್ ನೀಡಲಿದೆ. ಸ್ಕೂಟರ್‌ಗಳಲ್ಲಿ ಮಾಡಲಾಗಿರುವ ಅಪ್ ಡೇಟ್ ಹಿನ್ನೆಲೆಯಲ್ಲಿ ಫೇಸ್‌ಲಿಫ್ಟ್ ಮಾದರಿಗಳ ಬೆಲೆಗಳು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
Piaggio opens pre-bookings for Vespa VXL SXL facelift models ahead of launch. Read in Kannada.
Story first published: Friday, July 10, 2020, 10:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X