Just In
Don't Miss!
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Movies
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೂಲ ಮಾದರಿಯಂತೆಯೇ ರಿಸ್ಟೋರ್ ಆದ ಜನಪ್ರಿಯ ರಾಜದೂತ್ ಬೈಕ್
ರಾಜದೂತ್ ಬೈಕ್ ಒಂದು ಕಾಲದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಲು ಜನಪ್ರಿಯವಾಗಿತ್ತು. 1970 ಹಾಗೂ 1980ರ ದಶಕಗಳಲ್ಲಿ ಈ ಬೈಕ್ ನಗರ ಮತ್ತು ಹಳ್ಳಿಗಳಲ್ಲಿ ತನ್ನದೇ ಆದ ಕ್ರೇಜ್ ಸೃಷ್ಟಿಸಿತ್ತು. ಈ ಬೈಕಿನ ಉತ್ಪಾದನೆಯನ್ನು 1983ರಲ್ಲಿ ಸ್ಥಗಿತಗೊಳಿಸಲಾಯಿತು.

ರಾಜದೂತ್ ಬೈಕ್ ಅನ್ನು 1962ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಯಿತು. ಆರಂಭಿಕ ವರ್ಷಗಳಲ್ಲಿ ಈ ಬೈಕ್ ನಿರೀಕ್ಷಿಸಿದಷ್ಟು ಜನಪ್ರಿಯತೆಯನ್ನು ಪಡೆದಿರಲಿಲ್ಲ. ಆದರೆ 1973ರಲ್ಲಿ ಬಿಡುಗಡೆಯಾದ ಬಾಬಿ ಚಿತ್ರದಲ್ಲಿ ರಿಷಿ ಕಪೂರ್ ಈ ಬೈಕ್ ಓಡಿಸುವುದನ್ನು ಕಂಡ ಜನರು ಈ ಬೈಕ್ ಖರೀದಿಗೆ ಮುಗಿಬಿದ್ದರು. ನಂತರ ಈ ಬೈಕಿನ ಜನಪ್ರಿಯತೆಯು ಮುಗಿಲೆತ್ತರಕ್ಕೆ ಏರಿತ್ತು.

175 ಸಿಸಿಯ ರಾಜದೂತ್ ಬೈಕ್ ಆಗಿನ ಕಾಲಕ್ಕೆ ತಕ್ಕಂತೆ ವೇಗವಾಗಿ ಹಾಗೂ ಬಲಿಷ್ಟವಾಗಿತ್ತು. ಬೈಕ್ ಪ್ರಿಯರೊಬ್ಬರು ರಾಜದೂತ್ ಬೈಕನ್ನು ಮೂಲ ಸ್ವರೂಪದಲ್ಲಿ ರಿಸ್ಟೋರ್ ಮಾಡಿದ್ದಾರೆ. ರಿಸ್ಟೋರ್ ಮಾಡಲಾದ ಈ ಬೈಕ್ ಕೆಂಪು ಬಣ್ಣದಲ್ಲಿದೆ. ಮುಂಭಾಗ, ಹಿಂಭಾಗ ಹಾಗೂ ಸೈಡ್ ಪ್ರೊಫೈಲ್ ಗಳನ್ನು ಮೊದಲಿನಂತೆ ರಿಸ್ಟೋರ್ ಮಾಡಲಾಗಿದೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಮುಂಭಾಗದಲ್ಲಿರುವ ಹಳೆಯ ಶೈಲಿಯ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಸದರಂತೆಯೇ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಸ್ಪೀಡೋಮೀಟರ್ ಹಾಗೂ ಕಿಲೋಮೀಟರ್ ಗಳನ್ನು ಕಾಣಬಹುದು. ಬಲಭಾಗದಲ್ಲಿರುವ ಹಾರ್ನ್, ಲೋ ಬೀಮ್, ಹೈ ಬೀಮ್ ಹಾಗೂ ಇಂಡಿಕೇಟರ್ ಬಟನ್ ಗಳನ್ನು ಹ್ಯಾಂಡಲ್‌ನಲ್ಲಿ ಕಾಣಬಹುದು.

ರಾಜದೂತ್ 175 ಬೈಕಿನ ಮುಂಭಾಗದಲ್ಲಿರುವ ಸ್ಕ್ವೇರ್ ಹೆಡ್‌ಲ್ಯಾಂಪ್ ಬಾಕ್ಸ್ ಅನ್ನು ಇಂಡಿಕೇಟರ್ ನ ಎರಡೂ ಬದಿಯಲ್ಲಿ ಕಾಣಬಹುದು. ಕ್ರೋಮ್ ಬಣ್ಣದಲ್ಲಿರುವ ಹೆಡ್‌ಲ್ಯಾಂಪ್, ಫ್ಯೂಯಲ್ ಟ್ಯಾಂಕ್ ಹಾಗೂ ಇಂಡಿಕೇಟರ್ ಗಳು ಬೈಕಿನ ಆಕರ್ಷಣೆಯನ್ನು ಹೆಚ್ಚಿಸುತ್ತವೆ.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಫ್ಯೂಯಲ್ ಟ್ಯಾಂಕ್ ಬೈಕ್‌ನ ಬದಿಯಲ್ಲಿದೆ. ಅದರ ಕೆಳಗೆ ಫ್ಯೂಯಲ್ ಗೇಜ್ ನೀಡಲಾಗಿದೆ. ರಾಜದೂತ್ ಬ್ಯಾಡ್ಜ್ ಅನ್ನು ಬೈಕಿನ ಸೈಡಿನಲ್ಲಿ ನೀಡಲಾಗಿದೆ.ಈ ಬೈಕ್ ಹಳೆಯ ಶೈಲಿಯ ಬೈಕುಗಳಿಗಿಂತ ವಿಭಿನ್ನವಾದ ಗೇರ್ ಹಾಗೂ ಕಿಕ್ ಅನ್ನು ಹೊಂದಿದೆ. ಇವುಗಳನ್ನು ಚಿತ್ರಗಳಲ್ಲಿ ಕಾಣಬಹುದು.
ಬೈಕಿನ ಹಿಂಭಾಗದಲ್ಲಿ ಟೇಲ್ ಲೈಟ್ ಹಾಗೂ ಎರಡೂ ಸರ್ಕ್ಯೂಲರ್ ಇಂಡಿಕೇಟರ್ ಗಳನ್ನು ನೀಡಲಾಗಿದೆ. ಸೀಟಿನ ಎತ್ತರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮೊದಲಿನಂತೆ 175 ಸಿಸಿ ಎಂಜಿನ್ ಅನ್ನು ಉಳಿಸಿಕೊಳ್ಳಲಾಗಿದೆ. ಮೂರು ಸ್ಪೀಡಿನ ಗೇರ್‌ಬಾಕ್ಸ್ ಹೊಂದಿರುವ ಈ ಎಂಜಿನ್ 9 ಬಿಹೆಚ್ ಪಿ ಪವರ್ ಉತ್ಪಾದಿಸುತ್ತದೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಹಾಲು ಮಾರಾಟ ಮಾಡುವವರು ಈ ಬೈಕ್ ಅನ್ನು ಹೆಚ್ಚು ಬಳಸುತ್ತಿದ್ದ ಕಾರಣಕ್ಕೆ ಈ ಬೈಕನ್ನು ಬಾಬಿ ಬೈಕ್ ಅಥವಾ ಮಿಲ್ಕ್ ವೀಡ್ ಬೈಕ್ ಎಂದು ಕರೆಯಲಾಗುತ್ತಿತ್ತು. ಕಡಿಮೆ ತೂಕ, ಹೆಚ್ಚಿನ ಟಾರ್ಕ್ ಕಾರಣಕ್ಕೆ ಹಾಲು ಮಾರಾಟ ಮಾಡಲು ಈ ಬೈಕ್ ಅನ್ನು ಬಳಸಲಾಗುತ್ತಿತ್ತು. ಈ ಬೈಕ್ ಹಳೆಯ ಅವತಾರದಲ್ಲಿ ಅದ್ಭುತವಾಗಿ ಕಾಣುತ್ತದೆ.