ಆಟೋ ಕಂಪನಿಗಳ ಬಿಎಸ್-4 ವಿಸ್ತರಣೆಯ ಮನವಿಯನ್ನು ವಿರೋಧಿಸಿದ ರಾಜೀವ್ ಬಜಾಜ್

ದೇಶಾದ್ಯಂತ ಏಪ್ರಿಲ್ 1ರಿಂದ ಬಿಎಸ್-6 ಎಮಿಷನ್ ನಿಯಮವು ಜಾರಿಗೆ ಬರುತ್ತಿದ್ದು, ಬಿಎಸ್-4 ಎಂಜಿನ್ ಪ್ರೇರಿತ ವಾಹನಗಳ ಉತ್ಪಾದನೆ ಮತ್ತು ಮಾರಾಟವು ಸಂಪೂರ್ಣ ನಿಷೇಧಗೊಳ್ಳಲಿದೆ. ಆದರೆ ಕರೋನಾ ವೈರಸ್ ಪರಿಣಾಮದಿಂದ ಬಿಎಸ್-4 ಸ್ಟಾಕ್ ಪ್ರಮಾಣವು ಭಾರೀ ಪ್ರಮಾಣದಲ್ಲಿದ್ದು, ಬಿಎಸ್-4 ವಾಹನಗಳ ಮಾರಾಟದ ಗುಡುವು ವಿಸ್ತರಣೆ ಮಾಡುವಂತೆ ಆಟೋ ಕಂಪನಿಗಳು ಸುಪ್ರೀಂಕೋರ್ಟ್ ಮೊರೆ ಹೋಗಲು ಸಜ್ಜಾಗಿವೆ.

ಆಟೋ ಕಂಪನಿಗಳ ಬಿಎಸ್-4 ವಿಸ್ತರಣೆಯ ಮನವಿಯನ್ನು ವಿರೋಧಿಸಿದ ರಾಜೀವ್ ಬಜಾಜ್

ಕರೋನಾ ವೈರಸ್ ಪರಿಣಾಮ ಆಟೋ ಕಂಪನಿಗಳು ವಾಹನ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವುದಲ್ಲದೆ ವಾಹನ ಮಾರಾಟವನ್ನು ಸಹ ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಿವೆ. ಇದೇ ಕಾರಣವಿಟ್ಟುಕೊಂಡು ಬಿಎಸ್-4 ವಾಹನ ಮಾರಾಟದ ಅವಧಿಯನ್ನು ಜೂನ್ 30ರ ತನಕ ವಿಸ್ತರಣೆ ಮಾಡುವಂತೆ ಆಟೋ ಕಂಪನಿಗಳು ಸುಪ್ರೀಂಕೋರ್ಟ್ ಮೊರೆ ಹೋಗಲಾಗುತ್ತಿದೆ. ಆದರೆ ಬಿಎಸ್-6 ಎಮಿಷನ್ ಜಾರಿಗೂ ಮುನ್ನವೇ ಕಟ್ಟುನಿಟ್ಟಿನ ಆದೇಶ ಪಾಲಿಸಿರುವ ಬಜಾಜ್ ಸಂಸ್ಥೆಯು ಕಳೆದ ತಿಂಗಳಿನಲ್ಲಿಯೇ ಬಿಎಸ್-4 ವಾಹನಗಳ ಮಾರಾಟವನ್ನು ಪೂರ್ಣಗೊಳಿಸಿ ಹೊಸ ವಾಹನಗಳ ಮಾರಾಟಕ್ಕೆ ಚಾಲನೆ ನೀಡಿದೆ.

ಆಟೋ ಕಂಪನಿಗಳ ಬಿಎಸ್-4 ವಿಸ್ತರಣೆಯ ಮನವಿಯನ್ನು ವಿರೋಧಿಸಿದ ರಾಜೀವ್ ಬಜಾಜ್

ಬಜಾಜ್ ಜೊತೆಗೆ ಇತರೆ ಕಂಪನಿಗಳು ಕೂಡಾ ಈಗಾಗಲೇ ಬಿಎಸ್-6 ವಾಹನಗಳ ಮಾರಾಟಕ್ಕೆ ಚಾಲನೆ ನೀಡಿದ್ದರೂ ಕೂಡಾ ಭಾರೀ ಪ್ರಮಾಣದ ಬಿಎಸ್-4 ವಾಹನಗಳ ಸ್ಟಾಕ್ ಇಟ್ಟುಕೊಂಡಿದ್ದು, ಇದೀಗ ಕರೋಸಾ ವೈರಸ್ ನೆಪವೊಡ್ಡಿ ಮಾರಾಟ ಅವಧಿ ವಿಸ್ತಿರಿಸುವಂತೆ ಮನವಿ ಮಾಡಲು ಮುಂದಾಗಿವೆ.

ಆಟೋ ಕಂಪನಿಗಳ ಬಿಎಸ್-4 ವಿಸ್ತರಣೆಯ ಮನವಿಯನ್ನು ವಿರೋಧಿಸಿದ ರಾಜೀವ್ ಬಜಾಜ್

ಈಗಾಗಲೇ ಎರಡು ಬಾರಿ ಆಟೋ ಕಂಪನಿಗಳ ಮನವಿ ತಳ್ಳಿಹಾಕಿರುವ ಸುಪ್ರೀಂಕೋರ್ಟ್ ಕಡ್ಡಾಯವಾಗಿ ಎಪ್ರಿಲ್ 1ರಿಂದ ಬಿಎಸ್-6 ಆದೇಶವನ್ನು ಪಾಲಿಸುವಂತೆ ಖಡಕ್ ಆದೇಶ ನೀಡಿತ್ತು. ಆದರೆ ಇದೀಗ ಕರೋನಾ ವೈರಸ್‌ನಿಂದ ಮಾರಾಟ ಬಂದ್ ಆಗಿರುವುದರಿಂದ ಆಟೋ ಕಂಪನಿಗಳಿಗೆ ಮತ್ತೊಂದು ಪರಿಶೀಲನಾ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.

ಆಟೋ ಕಂಪನಿಗಳ ಬಿಎಸ್-4 ವಿಸ್ತರಣೆಯ ಮನವಿಯನ್ನು ವಿರೋಧಿಸಿದ ರಾಜೀವ್ ಬಜಾಜ್

ಜೊತೆಗೆ ಕೇಂದ್ರ ಸರ್ಕಾರ ಆರ್ಥಿಕ ಸುಧಾರಣೆಗಾಗಿ ಕೆಲವು ಮಹತ್ವದ ಕ್ರಮಗಳನ್ನು ಪ್ರಕಟಿಸಿದ್ದು, ಇದರಲ್ಲಿ ಹಣಕಾಸು ವರ್ಷದ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿ ವಿನಾಯ್ತಿ ನೀಡಿದೆ. ಹೀಗಿರುವಾಗ ಬಿಎಸ್-4 ವಾಹನ ಮಾರಾಟಕ್ಕೆ ಮತ್ತಷ್ಟು ಅವಕಾಶ ಸಿಗುವ ಸಾಧ್ಯತೆಗಳಿದ್ದು, ಕರೋನಾ ವೈರಸ್ ನೆಪವಾಗಿಸಿಕೊಂಡು ಅವಧಿ ವಿಸ್ತರಣೆಗೆ ಮನವಿ ಮಾಡುತ್ತಿರುವ ಕಂಪನಿಗಳ ವಿರುದ್ದ ಬಜಾಜ್ ಎಂಡಿ ರಾಜೀವ್ ಬಜಾಜ್ ಅಸಮಾಧಾನ ಹೊರಹಾಕಿದ್ದಾರೆ.

ಆಟೋ ಕಂಪನಿಗಳ ಬಿಎಸ್-4 ವಿಸ್ತರಣೆಯ ಮನವಿಯನ್ನು ವಿರೋಧಿಸಿದ ರಾಜೀವ್ ಬಜಾಜ್

ಕರೋನಾ ವೈರಸ್ ಸಮಸ್ಯೆಯು ಬಿಎಸ್-4 ವಾಹನ ಮಾರಾಟ ವಿಸ್ತರಣೆಗೆ ಕಾರಣವಾಗಬಾರದು ಎಂದಿರುವ ರಾಜೀವ್ ಬಜಾಜ್ ಅವರು, ಕಳೆದ ವರ್ಷದಿಂದಲೇ ಬಿಎಸ್-6 ನಿಯಮವು ಜಾರಿಗೆ ಬರುತ್ತಿರುವುದು ಗೊತ್ತಿದ್ದರೂ ಸಹ ಹಳೆಯ ಮಾದರಿಯ ಎಂಜಿನ್ ವಾಹನಗಳನ್ನೇ ಉತ್ಪಾದನೆ ಮಾಡಿ ಆಫರ್‌ಗಳ ಮೇಲೆ ಮಾರಾಟ ಮಾಡುತ್ತಿರುವುದು ಅನ್ಯಾಯವೆಂದು ರಾಜೀವ್ ಬಜಾಜ್ ಕಿಡಿಕಾರಿದ್ದಾರೆ.

ಆಟೋ ಕಂಪನಿಗಳ ಬಿಎಸ್-4 ವಿಸ್ತರಣೆಯ ಮನವಿಯನ್ನು ವಿರೋಧಿಸಿದ ರಾಜೀವ್ ಬಜಾಜ್

ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿರುವ ಬಿಎಸ್-6 ನಿಯಮವನ್ನು ಕ್ರಮಬದ್ಧವಾಗಿ ಅಳವಡಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದಿರುವ ರಾಜೀವ್ ಬಜಾಜ್ ಅವರು ಬಿಎಸ್-4 ವಾಹನ ಮಾರಾಟ ಅವಧಿಯ ವಿಸ್ತರಣೆಯ ಮನವಿ ಒಪ್ಪಬಾರದು ಎಂದಿದ್ದಾರೆ.

ಆಟೋ ಕಂಪನಿಗಳ ಬಿಎಸ್-4 ವಿಸ್ತರಣೆಯ ಮನವಿಯನ್ನು ವಿರೋಧಿಸಿದ ರಾಜೀವ್ ಬಜಾಜ್

ಆದರೆ ಪರಿಸ್ಥಿತಿಗೆ ಅನುಗುಣವಾಗಿ ಹಲವಾರು ವಿನಾಯ್ತಿಗಳನ್ನು ನೀಡಿರುವ ಕೇಂದ್ರ ಸರ್ಕಾರವು ಬಿಎಸ್-4 ವಾಹನ ಮಾರಾಟಕ್ಕೆ ಮತ್ತಷ್ಟು ಅವಕಾಶ ನೀಡುವ ಸಾಧ್ಯತೆಗಳಿದ್ದು, ಮುಂಬರುವ ದಿನಗಳಲ್ಲಿ ಕೈಗೊಳ್ಳಲಿರುವ ಆರ್ಥಿಕ ನಿರ್ಧಾರಗಳ ಮೇಲೆ ಬಿಎಸ್-4 ವಾಹನಗಳ ಭವಿಷ್ಯ ನಿರ್ಧಾರವಾಗಲಿದೆ.

ಆಟೋ ಕಂಪನಿಗಳ ಬಿಎಸ್-4 ವಿಸ್ತರಣೆಯ ಮನವಿಯನ್ನು ವಿರೋಧಿಸಿದ ರಾಜೀವ್ ಬಜಾಜ್

ಮಾಹಿತಿಗಳ ಪ್ರಕಾರ ವಿವಿಧ ಆಟೋ ಕಂಪನಿಗಳ ಬಳಿ ಸುಮಾರು 7 ಲಕ್ಷ ಬಿಎಸ್-4 ವಾಹನ ಸ್ಟಾಕ್ ಇದ್ದು, ಇದು ರೂ.6,400 ಕೋಟಿ ಮೌಲ್ಯವನ್ನು ಹೊಂದಿದೆ. ಹೀಗಾಗಿ ಬಿಎಸ್-4 ವಾಹನ ಮಾರಾಟವನ್ನು ಮಾಡಲೇಬೇಕಾದ ಅನಿವಾರ್ಯತೆಯಲ್ಲಿರುವ ಆಟೋ ಕಂಪನಿಗಳು ಕರೋನಾ ವೈರಸ್ ನೆಪವೊಡ್ಡಿ ಮತ್ತೆ ಸುಪ್ರೀಂಕೋರ್ಟ್‌ ಕದತಟ್ಟುವ ಸಾಧ್ಯತೆಗಳಿವೆ.

Most Read Articles

Kannada
English summary
Rajiv Bajaj Disagrees With Extension For BS4 Vehicle Registration Deadline Due To Coronavirus. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X