ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಬೈಕ್ ಟ್ಯಾಕ್ಸಿ ಸೇವೆಯನ್ನಾರಂಭಿಸಿದ ರ್‍ಯಾಪಿಡೋ

ಬೈಕ್ ಟ್ಯಾಕ್ಸಿ ಸೇವಾ ಕಂಪನಿಯಾದ ರ್‍ಯಾಪಿಡೋ ತನ್ನ ಸೇವೆಗಳನ್ನು ಮುಂಬೈನಲ್ಲಿ ಆರಂಭಿಸುತ್ತಿರುವುದಾಗಿ ತಿಳಿಸಿದೆ. ಇದರೊಂದಿಗೆ ಕಂಪನಿಯು ಮಹಾರಾಷ್ಟ್ರದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಆರಂಭಿಸಿದ ಮೊದಲ ಕಂಪನಿಯಾಗಿದೆ.

ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಬೈಕ್ ಟ್ಯಾಕ್ಸಿ ಸೇವೆಯನ್ನಾರಂಭಿಸಿದ ರ್‍ಯಾಪಿಡೋ

ರ್‍ಯಾಪಿಡೋ ಕಂಪನಿಯು ಬೆಂಗಳೂರು, ದೆಹಲಿ, ಹೈದರಾಬಾದ್, ನೋಯ್ಡಾ, ಚೆನ್ನೈ, ಕೋಲ್ಕತ್ತಾದಂತಹ ಹಲವು ನಗರಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ನೀಡುತ್ತಿದೆ. ರ್‍ಯಾಪಿಡೋ ಕಂಪನಿಯು ತನ್ನ ಈ ಬೈಕ್ ಟ್ಯಾಕ್ಸಿ ಸೇವೆಗೆ ಪ್ರತಿ ಕಿ.ಮೀ.ಗೆ ರೂ.6 ನಿಗದಿಪಡಿಸಿದೆ. ರ್‍ಯಾಪಿಡೋದಲ್ಲಿ ಮೊದಲ ಬಾರಿಗೆ ಸವಾರಿ ಮಾಡುವ ಗ್ರಾಹಕರಿಗೆ 50%ನಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ.

ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಬೈಕ್ ಟ್ಯಾಕ್ಸಿ ಸೇವೆಯನ್ನಾರಂಭಿಸಿದ ರ್‍ಯಾಪಿಡೋ

ಜೊತೆಗೆ ಹಲವು ಸವಾರಿಗಳಲ್ಲಿ ರಿಯಾಯಿತಿ ಅಥವಾ ವೋಚರ್ ಗಳನ್ನು ಸಹ ನೀಡಲಾಗುತ್ತದೆ. ಮುಂಬೈನಲ್ಲಿ ಸೇವೆಗಳನ್ನು ಆರಂಭಿಸುವ ವೇಳೆ ಪ್ರತಿಕ್ರಿಯೆ ನೀಡಿರುವ ಕಂಪನಿಯು ಮುಂಬೈನಲ್ಲಿ ಪ್ರತಿದಿನ 80 ಲಕ್ಷಕ್ಕೂ ಹೆಚ್ಚು ಜನರು ಸ್ಥಳೀಯ ರೈಲು, ಬಸ್ಸು ಅಥವಾ ಟ್ಯಾಕ್ಸಿಗಳನ್ನು ಸಂಚಾರಕ್ಕಾಗಿ ಬಳಸುತ್ತಾರೆ ಎಂದು ಹೇಳಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಬೈಕ್ ಟ್ಯಾಕ್ಸಿ ಸೇವೆಯನ್ನಾರಂಭಿಸಿದ ರ್‍ಯಾಪಿಡೋ

ಕರೋನಾ ವೈರಸ್ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಸೇವೆಗಳು ಸ್ಥಗಿತಗೊಂಡಿರುವ ಸಂದರ್ಭದಲ್ಲಿ ಕಂಪನಿಯು ತನ್ನ ಸೇವೆಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಹೊಂದಿದೆ. ರ್‍ಯಾಪಿಡೋ ಮುಂಬೈನಲ್ಲಿ 2000 ರೈಡ್ ಪಾಲುದಾರರೊಂದಿಗೆ ತನ್ನ ಸೇವೆಯನ್ನು ಆರಂಭಿಸಿದೆ.

ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಬೈಕ್ ಟ್ಯಾಕ್ಸಿ ಸೇವೆಯನ್ನಾರಂಭಿಸಿದ ರ್‍ಯಾಪಿಡೋ

ರ್‍ಯಾಪಿಡೋ ಕಂಪನಿಯು ಮುಂದಿನ 2 ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ರೈಡ್ ಪಾಲುದಾರರನ್ನು ಹೊಂದಲು ಬಯಸಿದೆ. ಲಾಕ್‌ಡೌನ್ ಅವಧಿಯಲ್ಲಿ ಕಂಪನಿಯು ಅಗತ್ಯ ವಸ್ತುಗಳನ್ನು ಜನರಿಗೆ ತಲುಪಿಸಲು ಹಲವಾರು ರಿಟೇಲ್ ಮಾರಾಟ ಮಳಿಗೆಗಳೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿತ್ತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಬೈಕ್ ಟ್ಯಾಕ್ಸಿ ಸೇವೆಯನ್ನಾರಂಭಿಸಿದ ರ್‍ಯಾಪಿಡೋ

ಲಾಕ್‌ಡೌನ್ ಅವಧಿಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಒದಗಿಸಲು ರ್‍ಯಾಪಿಡೋ ಕಂಪನಿಯು ಬಿಗ್ ಬಾಸ್ಕೆಟ್, ಬಿಗ್ ಬಜಾರ್ ಹಾಗೂ ಸ್ಪೆನ್ಸರ್ ನಂತಹ ಮಾರಾಟ ಮಳಿಗೆಗಳೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿತ್ತು.

ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಬೈಕ್ ಟ್ಯಾಕ್ಸಿ ಸೇವೆಯನ್ನಾರಂಭಿಸಿದ ರ್‍ಯಾಪಿಡೋ

ಇದರ ಜೊತೆಗೆ ರ್‍ಯಾಪಿಡೋ ಕಂಪನಿಯು 16,000 ಸ್ಥಳೀಯ ಕಿರಾಣಿ ಅಂಗಡಿ ಹಾಗೂ ವೈದ್ಯಕೀಯ ಮಳಿಗೆಗಳ ಸಹಭಾಗಿತ್ವದಲ್ಲಿ ಜನರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತದೆ. ರ್‍ಯಾಪಿಡೋ ಕಂಪನಿಯ ಡೋರ್ ಡೆಲಿವರಿ ಸೇವೆಗಳನ್ನು ದೇಶದ 90 ನಗರಗಳಲ್ಲಿ ನೀಡಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಬೈಕ್ ಟ್ಯಾಕ್ಸಿ ಸೇವೆಯನ್ನಾರಂಭಿಸಿದ ರ್‍ಯಾಪಿಡೋ

ಈ ಸೇವೆಯನ್ನು ರ್‍ಯಾಪಿಡೋ ಕಂಪನಿಯ 70%ನಷ್ಟು ರೈಡರ್ ಗಳು ನೀಡುತ್ತಿದ್ದಾರೆ. ರ್‍ಯಾಪಿಡೋ ಕಂಪನಿಯು ತನ್ನ ವಿತರಣಾ ಸೇವೆಗಳನ್ನು ವಿಸ್ತರಿಸಲು ಗ್ರೋಫರ್ಸ್, ಡಂಜೊ, ಫ್ರೆಶ್‌ಹೋಮ್‌ಗಳೊಂದಿಗೂ ಸಹಭಾಗಿತ್ವವನ್ನು ಮಾಡಿಕೊಂಡಿದೆ.

ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಬೈಕ್ ಟ್ಯಾಕ್ಸಿ ಸೇವೆಯನ್ನಾರಂಭಿಸಿದ ರ್‍ಯಾಪಿಡೋ

ಅಗತ್ಯ ಸರಕುಗಳ ವಿತರಣೆಗೆ ತನ್ನ ಚಾಲಕ-ಪಾಲುದಾರರು ಹಾಗೂ ಗ್ರಾಹಕರಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲವೆಂದು ರ್‍ಯಾಪಿಡೋ ಕಂಪನಿ ಹೇಳಿಕೊಂಡಿದೆ. ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸಲು ಆನ್‌ಲೈನ್ ರಿಟೇಲ್ ಕಂಪನಿಯಾದ ಫ್ಲಿಪ್‌ಕಾರ್ಟ್ ಸಹ ಉಬರ್ ಕ್ಯಾಬ್ ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿತ್ತು.

Most Read Articles

Kannada
English summary
Rapido starts first ever bike taxi service in Mumbai. Read in Kannada.
Story first published: Friday, October 30, 2020, 19:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X