ಹೊಸ ಬೈಕಿನಂತೆ ಮಾಡಿಫೈಗೊಂಡ ಅಪರೂಪದ ಸೂರಜ್ 325 ಡೀಸೆಲ್ ಬೈಕ್

ಭಾರತದಲ್ಲಿ ಹಳೆಯ ವಿಂಟೇಜ್ ಬೈಕುಗಳನ್ನು ಮಾಡಿಫೈಗೊಳಿಸುವುದು ಸಹಜ. ಹೀಗೆ ಮಾಡಿಫೈಗೊಳ್ಳುವ ಬೈಕುಗಳಲ್ಲಿ ಹೆಚ್ಚಿನವು ಯಮಹಾ ಆರ್ ಎಕ್ಸ್ ಅಥವಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಾಗಿರುತ್ತವೆ.

ಹೊಸ ಬೈಕಿನಂತೆ ಮಾಡಿಫೈಗೊಂಡ ಅಪರೂಪದ ಸೂರಜ್ 325 ಡೀಸೆಲ್ ಬೈಕ್

ಈಗ ಬೈಕ್ ಪ್ರಿಯರೊಬ್ಬರು ತಮ್ಮ ಸೂರಜ್ 325 ಬೈಕ್ ಅನ್ನು ಮಾಡಿಫೈಗೊಳಿಸಿದ್ದಾರೆ. ಈ ಬೈಕ್ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವುದಿಲ್ಲ. ಈ ಬೈಕ್ ಡೀಸೆಲ್ ಎಂಜಿನ್ ಹೊಂದಿದೆ ಎಂಬುದು ವಿಶೇಷ. ಭಾರತದಲ್ಲಿ ಮಾರಾಟವಾಗುವ ಕೆಲವೇ ಕೆಲವು ಡೀಸೆಲ್ ಎಂಜಿನ್ ಹೊಂದಿರುವ ಬೈಕ್‌ಗಳಲ್ಲಿ ಸೂರಜ್ 325 ಕೂಡ ಒಂದು.

ಹೊಸ ಬೈಕಿನಂತೆ ಮಾಡಿಫೈಗೊಂಡ ಅಪರೂಪದ ಸೂರಜ್ 325 ಡೀಸೆಲ್ ಬೈಕ್

ರಾಯಲ್ ರೋಡ್ಸ್ 500 ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಈ ಬೈಕಿನ ಬಗ್ಗೆ ವೀಡಿಯೊ ಅಪ್ ಲೋಡ್ ಮಾಡಲಾಗಿದೆ. ಈ ಸೂರಜ್ ಬೈಕ್ ಕೊಯಮತ್ತೂರು ಮೂಲದ ವ್ಯಕ್ತಿಗೆ ಸೇರಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೊಸ ಬೈಕಿನಂತೆ ಮಾಡಿಫೈಗೊಂಡ ಅಪರೂಪದ ಸೂರಜ್ 325 ಡೀಸೆಲ್ ಬೈಕ್

ಆ ವ್ಯಕ್ತಿ ಈ ಬೈಕ್ ಅನ್ನು ಹಲವು ವರ್ಷಗಳ ಹಿಂದೆ ಮತ್ತೊಬ್ಬರಿಂದ ಖರೀದಿಸಿದ್ದರು. ಹಳೆಯ ಮಾಲೀಕರು ಕಪ್ಪು ಬಣ್ಣದಲ್ಲಿದ್ದ, ರಾಯಲ್ ಎನ್‌ಫೀಲ್ಡ್ ಸ್ಟಿಕ್ಕರ್‌ಗಳಿದ್ದ ಬೈಕ್ ಅನ್ನು ಇವರಿಗೆ ಮಾರಾಟ ಮಾಡಿದರು. ಬೈಕ್ ಖರೀದಿಸಿದ ನಂತರ ರಿಪೇರಿ ಮಾಡಿಸಲು ಹತ್ತಿರದ ಮೆಕ್ಯಾನಿಕ್ ಅನ್ನು ಸಂಪರ್ಕಿಸಿದರು.

ಹೊಸ ಬೈಕಿನಂತೆ ಮಾಡಿಫೈಗೊಂಡ ಅಪರೂಪದ ಸೂರಜ್ 325 ಡೀಸೆಲ್ ಬೈಕ್

ಬೈಕ್ ಅನ್ನು ಪೂರ್ತಿಯಾಗಿ ರಿಪೇರಿ ಮಾಡಿಸಲು ಒಂದು ವರ್ಷ ಬೇಕಾಯಿತು ಎಂದು ಈ ಬೈಕಿನ ಮಾಲೀಕರು ಹೇಳಿದ್ದಾರೆ. ಬೇರೆ ಬೈಕ್‌ಗಳಿಂದ ಬಿಡಿ ಭಾಗಗಳನ್ನು ತೆಗೆದುಕೊಂಡು ಜೋಡಿಸುವುದು ಕಷ್ಟವಾದರೂ ರಿಪೇರಿ ಕೆಲಸವನ್ನು ತ್ವರಿತವಾಗಿ ಮಾಡಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೊಸ ಬೈಕಿನಂತೆ ಮಾಡಿಫೈಗೊಂಡ ಅಪರೂಪದ ಸೂರಜ್ 325 ಡೀಸೆಲ್ ಬೈಕ್

ಈ ಸೂರಜ್ 325 ಬೈಕಿನ ಮಾಲೀಕರು ಅಸಲಿ ಭಾಗಗಳಿಗೆ ಆದ್ಯತೆ ನೀಡಿದ್ದಾರೆ. ಈ ಕಾರಣಕ್ಕೆ ರಿಪೇರಿ ಒಂದು ವರ್ಷಗಳಷ್ಟು ತಡವಾಗಿದೆ. ಈ ಬೈಕಿನಲ್ಲಿ ಗ್ರೇವ್ಸ್ ಲೊಂಬಾರ್ಡಿನಿ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.

ಹೊಸ ಬೈಕಿನಂತೆ ಮಾಡಿಫೈಗೊಂಡ ಅಪರೂಪದ ಸೂರಜ್ 325 ಡೀಸೆಲ್ ಬೈಕ್

ಈ ಡೀಸೆಲ್ ಎಂಜಿನ್‌ನೊಂದಿಗೆ ಬೈಕ್ ಪ್ರತಿ ಲೀಟರ್ ಡೀಸೆಲ್‌ಗೆ 70-80 ಕಿ.ಮೀಗಳ ಮೈಲೇಜ್ ನೀಡುತ್ತದೆ. ಈ ಬೈಕಿನಲ್ಲಿರುವ ಪ್ಯೂಯಲ್ ಟ್ಯಾಂಕ್ 8 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ಈ ಟ್ಯಾಂಕ್ ಅನ್ನು ಪೂರ್ತಿಯಾಗಿ ತುಂಬಿಸಿದರೆ ಸುಮಾರು 600 ಕಿ.ಮೀಗಳವರೆಗೆ ಸಂಚರಿಸಬಹುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೊಸ ಬೈಕಿನಂತೆ ಮಾಡಿಫೈಗೊಂಡ ಅಪರೂಪದ ಸೂರಜ್ 325 ಡೀಸೆಲ್ ಬೈಕ್

ಈ ಬೈಕಿನಲ್ಲಿರುವ ಎಂಜಿನ್ ಅನ್ನು ಮಾಡಿಫೈಗೊಳಿಸಲಾಗಿದೆ. ಈ ಎಂಜಿನ್ ನಲ್ಲಿ ಫ್ಯಾಕ್ಟರಿಯಲ್ಲಿ ಅಳವಡಿಸಿದ್ದ ಹಳೆಯ ಪ್ಲೇಟ್ ಅನ್ನು ಕಾಣಬಹುದು. ಈ ಬೈಕಿನಲ್ಲಿರುವ ಎಕ್ಸಾಸ್ಟ್ ಪೈಪ್ ಟ್ರಾಕ್ಟರುಗಳನ್ನು ನೆನಪಿಸುತ್ತದೆ.

ಹೊಸ ಬೈಕಿನಂತೆ ಮಾಡಿಫೈಗೊಂಡ ಅಪರೂಪದ ಸೂರಜ್ 325 ಡೀಸೆಲ್ ಬೈಕ್

1990ರ ದಶಕದಲ್ಲಿ ಸೂರಜ್ ಕಂಪನಿಯ ಟ್ರಾಕ್ಟರುಗಳು ಹೆಚ್ಚು ಜನಪ್ರಿಯವಾಗಿದ್ದವು. ನಂತರ ಬೈಕುಗಳ ಉತ್ಪಾದನೆಯನ್ನು ಆರಂಭಿಸಿದ ಕಂಪನಿಯು ಬೈಕುಗಳ ಮಾರಾಟವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸೂರಜ್ ಬೈಕ್‌ಗಳಲಿದ್ದ ಡೀಸೆಲ್ ಎಂಜಿನ್ ರಾಯಲ್ ಎನ್‌ಫೀಲ್ಡ್ ಡೀಸೆಲ್ ಎಂಜಿನ್‌ಗಳ ವಿನ್ಯಾಸದಲ್ಲಿತ್ತು. ಬಹುತೇಕ ಜನರು ಸೂರಜ್ ಬೈಕ್‌ಗಳನ್ನು ರಾಯಲ್ ಎನ್‌ಫೀಲ್ಡ್ ಬೈಕ್‌ಗಳೆಂದು ಭಾವಿಸಿದರು. ಸೂರಜ್ ಎಂಬುದು ಪ್ರತ್ಯೇಕ ಕಂಪನಿಯೆಂದು ಹಲವರಿಗೆ ತಿಳಿದಿರಲಿಲ್ಲ.

ಹೊಸ ಬೈಕಿನಂತೆ ಮಾಡಿಫೈಗೊಂಡ ಅಪರೂಪದ ಸೂರಜ್ 325 ಡೀಸೆಲ್ ಬೈಕ್

ಸೂರಜ್ ಕಂಪನಿಯ ಬೈಕುಗಳು ರಾಯಲ್ ಎನ್‌ಫೀಲ್ಡ್ ಬೈಕುಗಳಿಗಿಂತ ಹೆಚ್ಚು ತೂಕವನ್ನು ಹೊಂದಿದ್ದವು. ಈ ಕಾರಣಗಳಿಂದಾಗಿ ಸೂರಜ್ 325 ಬೈಕುಗಳು ಹೆಚ್ಚು ಮಾರಾಟವಾಗಲು ವಿಫಲವಾದವು.

Most Read Articles

Kannada
English summary
Rare Sooraj 325cc diesel bike took one year for restoration. Read in Kannada.
Story first published: Monday, October 19, 2020, 18:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X