Just In
- 3 min ago Maruti Suzuki: 1 ವರ್ಷದಲ್ಲಿಯೇ ಹೊಸ ದಾಖಲೆ.. 134,735 ಫ್ರಾಂಕ್ಸ್ ಕಾರುಗಳು ಮಾರಾಟ, ಬೆಲೆ ರೂ.7.51 ಲಕ್ಷ
- 56 min ago ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- 2 hrs ago ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- 2 hrs ago ಬರಲಿದೆ ಮತ್ತೊಂದು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್: ಕಡಿಮೆ ಖರ್ಚಿನಲ್ಲಿ ಓಡಾಡಬಹುದು!
Don't Miss!
- News Water Crisis: ಜಲಕ್ಷಾಮ ತಡೆಗೆ ಜಲಸಂರಕ್ಷಣೆಯೇ ಪರಿಹಾರ: ಎಚ್ಚೆತ್ತುಕೊಳ್ಳುತ್ತಾ ಸರ್ಕಾರ?
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Movies "ಸದಾ ನನ್ನ ಹಿಂಭಾಗವನ್ನೇ ಜೂಮ್ ಮಾಡ್ತಾರೆ"; ನೋರಾ ಫತೇಹಿ ಆಕ್ರೋಶ
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಎಸ್-6 ಎಂಜಿನ್ನಲ್ಲಿ ಬಿಡುಗಡೆಯಾಯ್ತು ರಾಯಲ್ ಎನ್ಫೀಲ್ಡ್ ಬುಲೆಟ್ 350 ಬೈಕ್
ರಾಯಲ್ ಎನ್ಫೀಲ್ಡ್ ಕಂಪನಿಯು ತನ್ನ ಹೊಸ ಬುಲೆಟ್ 350 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಬಿಎಸ್ ರಾಯಲ್ ಎನ್ಫೀಲ್ಡ್ ಬುಲೆಟ್ 350 ಬೈಕಿನ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.21 ಲಕ್ಷಗಳಾಗಿದೆ.
ರಾಯಲ್ ಎನ್ಫೀಲ್ಡ್ ಕಂಪನಿಯು ಬಿಎಸ್-6 ಬುಲೆಟ್ 350 ಬೈಕಿನ ಬುಕ್ಕಿಂಗ್ ಅನ್ನು ಇತ್ತೀಚೆಗೆ ಆರಂಭಿಸಿದ್ದರು. ಬಿಎಸ್-6 ರಾಯಲ್ ಎನ್ಫೀಲ್ಡ್ ಬುಲೆಟ್ 350 ಬೈಕ್ಗಾಗಿ ರೂ.10,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದುದಾಗಿದೆ. ಹೊಸ ಬುಲೆಟ್ 350 ಬೈಕನ್ನು ಬಿಎಸ್-6 ಮಾಲಿನ್ಯ ನಿಯಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಅದನ್ನು ಹೊರತುಪಡಿಸಿ ಇತರೆ ಯಾವುದೇ ಪ್ರಮುಖ ಬದಲಾವಣೆಗನ್ನು ಮಾಡಲಾಗಿಲ್ಲ.
ಈ ಹೊಸ ಬೈಕಿನಲ್ಲಿ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ ಬೈಕಿನಲ್ಲಿರುವ ಮಾದರಿಯ ಎಂಜಿನ್ ಅನ್ನು ಅಳವಡಿಸಲಿದೆ. ಕ್ಲಾಸಿಕ್ 350 ಬೈಕಿನಲ್ಲಿರುವ 346 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ನಂತೆಯೇ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಈ ಹೊಸ ಬೈಕಿನಲ್ಲಿ ಅಳವಡಿಸಿದೆ.
ಅದರೆ ಬುಲೆಟ್ ಬೈಕಿನಲ್ಲಿರುವ ಎಂಜಿನ್ 19.3 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಕ್ಲಾಸಿಕ್ 350 ಬೈಕಿನ ಎಂಜಿನ್ಗೆ ಹೋಲಿಸಿದರೆ 0.71 ಬಿಹೆಚ್ಪಿ ಪವರ್ ಕಡೆಮೆ ಉತ್ಪಾದಿಸುತ್ತದೆ.
ಟಾರ್ಕ್ ಅಂಕಿ ಅಂಶದಲ್ಲಿ ಯಾವುದೇ ಬದಲಾವಣೆಗಳು ಇಲ್ಲ, ಅದೇ 28 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್ನೊಂದಿಗೆ 5 ಸ್ಪೀಡ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ.
ಬಿಎಸ್-6 ರಾಯಲ್ ಎನ್ಫೀಲ್ಡ್ ಬುಲೆಟ್ 350 ಬೈಕಿನ ಎಕ್ಸ್ ಸ್ಟ್ಯಾಂಡರ್ಡ್ ಆವೃತ್ತಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.28 ಲಕ್ಷಗಳಾಗಿದೆ.
MOST READ: ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್ ಬಿಡುಗಡೆ
ಇನ್ನು ಬುಲೆಟ್ ಎಕ್ಸ್ ಕಿಕ್ಸ್ಟಾರ್ಟ್ ಮತ್ತು ಸೆಲ್ಫ್-ಸ್ಟಾರ್ಟ್ ರೂಪಾಂತರಗಳ ಬೆಲೆಯು ಕ್ರಮವಾಗಿ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.21 ಲಕ್ಷ ಮತ್ತು ರೂ.1.37 ಲಕ್ಷಗಳಾಗಿದೆ. ಬಿಎಸ್-4 ಬುಲೆಟ್ 350 ಮಾದರಿಗಳಿಗೆ ಹೋಲಿಸಿದರೆ ಸುಮಾರು ರೂ.6,000 ದಿಂದ ರೂ.7,000 ಗಳವರೆಗೆ ಬೆಲೆಯನ್ನು ಹೆಚ್ಚಿಸಲಾಗಿದೆ.
MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಬಿಎಸ್-6 ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕ್
ಬಿಎಸ್-6 ರಾಯಲ್ ಎನ್ಫೀಲ್ಡ್ ಬೈಕ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಟ್ವಿನ್ ರೇರ್ ಶಾಕ್ ಅಬ್ಸಾರ್ಬರ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಸುರಕ್ಷತೆಗಾಗಿ 280 ಎಂಎಂ ಫ್ರಂಟ್ ಡಿಸ್ಕ್ ಮತ್ತು 153 ಎಂಎಂ ಡ್ರಮ್ ಬೈಕ್ ಅನ್ನು ಹೊಂದಿದೆ. ಸಿಂಗಲ್ ಚಾನೆಲ್ ಎಬಿಎಸ್ ಸ್ಟ್ಯಾಡಂರ್ಡ್ ಆಗಿ ಅಳವಡಿಸಿದೆ.
MOST READ: ಅನಾವರಣಗೊಂಡ ಹೊಸ ಹೋಂಡಾ ಸಿಬಿಆರ್ 250 ಆರ್ಆರ್ ಬೈಕ್
ಕಳೆದ ತಿಂಗಳಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ಗಳ ಮಾರಾಟದಲ್ಲಿ ಶೇ.2ರಷ್ಟು ಹೆಚ್ಚಾಗಿತ್ತು . ಹೆಚ್ಚಿನ ಗ್ರಾಹಕರನ್ನು ಗಮನಸೆಳೆಯಲು ತಮ್ಮ ಜನಪ್ರಿಯ ಮಾದರಿಗಳನ್ನು ಬಿಎಸ್-6 ಆವೃತ್ತಿಯಲ್ಲಿ ಬಿಡುಗಡೆಗೊಳಿಸುತ್ತಿದೆ.