ಬಹಿರಂಗವಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕಿನ ದರ

ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ ಹೊಸ ಬುಲೆಟ್ 350 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಇದೀಗ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಬಿಎಸ್-6 ಬುಲೆಟ್ 350 ಬೈಕಿನ ಬೆಲೆಯು ಬಹಿರಂಗವಾಗಿದೆ.

ಬಹಿರಂಗವಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕಿನ ದರ

ರಾಯಲ್ ಎನ್‍‍ಫೀಲ್ಡ್ ಕಂಪನಿಯು ಬಿಎಸ್-6 ಬುಲೆಟ್ 350 ಬೈಕಿನ ಬುಕ್ಕಿಂಗ್ ಅನ್ನು ಇತ್ತೀಚೆಗೆ ಆರಂಭಿಸಿದ್ದರು. ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕ್‍‍ಗಾಗಿ ರೂ.10,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದುದಾಗಿದೆ. ಹೊಸ ಬುಲೆಟ್ 350 ಬೈಕನ್ನು ಬಿಎಸ್-6 ಮಾಲಿನ್ಯ ನಿಯಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಅದನ್ನು ಹೊರತುಪಡಿಸಿ ಇತರೆ ಯಾವುದೇ ಪ್ರಮುಖ ಬದಲಾವಣೆಗನ್ನು ಮಾಡಲಾಗಿಲ್ಲ.

ಬಹಿರಂಗವಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕಿನ ದರ

ಈ ಹೊಸ ಬೈಕಿನಲ್ಲಿ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕಿನಲ್ಲಿರುವ ಮಾದರಿಯ ಎಂಜಿನ್ ಅನ್ನು ಅಳವಡಿಸಲಿದೆ. ಕ್ಲಾಸಿಕ್ 350 ಬೈಕಿನಲ್ಲಿರುವ 346 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‍ನಂತೆಯೇ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಈ ಹೊಸ ಬೈಕಿನಲ್ಲಿ ಅಳವಡಿಸಲಿದೆ.

ಬಹಿರಂಗವಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕಿನ ದರ

ಅದರೆ ಬುಲೆಟ್ ಬೈಕಿನಲ್ಲಿರುವ ಎಂಜಿನ್ 19.3 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಕ್ಲಾಸಿಕ್ 350 ಬೈಕಿನ ಎಂಜಿನ್‍‍ಗೆ ಹೋಲಿಸಿದರೆ 0.71 ಬಿ‍‍ಹೆಚ್‍‍ಪಿ ಪವರ್ ಕಡೆಮೆ ಉತ್ಪಾದಿಸುತ್ತದೆ.

ಬಹಿರಂಗವಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕಿನ ದರ

ಟಾರ್ಕ್ ಅಂಕಿ ಅಂಶದಲ್ಲಿ ಯಾವುದೇ ಬದಲಾವಣೆಗಳು ಇಲ್ಲ, ಅದೇ 28 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕ್ ಅನ್ನು ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಲಿದೆ.

ಬಹಿರಂಗವಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕಿನ ದರ

ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕಿನ ಎಕ್ಸ್ ಸ್ಟ್ಯಾಂಡರ್ಡ್ ಆವೃತ್ತಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.28 ಲಕ್ಷಗಳಾಗಿದೆ.

ಬಹಿರಂಗವಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕಿನ ದರ

ಇನ್ನು ಬುಲೆಟ್ ಎಕ್ಸ್ ಕಿಕ್‍ಸ್ಟಾರ್ಟ್ ಮತ್ತು ಸೆಲ್ಫ್-ಸ್ಟಾರ್ಟ್ ರೂಪಾಂತರಗಳ ಬೆಲೆಯು ಕ್ರಮವಾಗಿ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.22 ಲಕ್ಷ ಮತ್ತು ರೂ.1.37 ಲಕ್ಷಗಳಾಗಿದೆ. ಬಿಎಸ್-4 ಬುಲೆಟ್ 350 ಮಾದರಿಗಳಿಗೆ ಹೋಲಿಸಿದರೆ ಸುಮಾರು ರೂ.6,000 ದಿಂದ ರೂ.7,000 ಗಳವರೆಗೆ ಬೆಲೆಯನ್ನು ಹೆಚ್ಚಿಸಲಾಗಿದೆ.

ಬಹಿರಂಗವಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕಿನ ದರ

ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಬೈಕ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಟ್ವಿನ್ ರೇರ್ ಶಾಕ್ ಅಬ್ಸಾರ್ಬರ್ ಅನ್ನು ಹೊಂದಿರಲಿದೆ. ಈ ಬೈಕಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬಹುದು. ಸುರಕ್ಷತೆಗಾಗಿ 280 ಎಂಎಂ ಫ್ರಂಟ್ ಡಿಸ್ಕ್ ಮತ್ತು 153 ಎಂಎಂ ಡ್ರಮ್ ಬೈಕ್ ಅನ್ನು ಹೊಂದಿರಲಿದೆ. ಸಿಂಗಲ್ ಚಾನೆಲ್ ಎಬಿಎಸ್ ಸ್ಟ್ಯಾಡಂರ್ಡ್ ಆಗಿ ಅಳವಡಿಸುತ್ತದೆ.

ಬಹಿರಂಗವಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕಿನ ದರ

ಕಳೆದ ತಿಂಗಳಲ್ಲಿ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳ ಮಾರಾಟದಲ್ಲಿ ಶೇ.2ರಷ್ಟು ಹೆಚ್ಚಾಗಿತ್ತು . ಹೆಚ್ಚಿನ ಗ್ರಾಹಕರನ್ನು ಗಮನಸೆಳೆಯಲು ತಮ್ಮ ಜನಪ್ರಿಯ ಮಾದರಿಗಳನ್ನು ಬಿಎಸ್-6 ಆವೃತ್ತಿಯಲ್ಲಿ ಬಿಡುಗಡೆಗೊಳಿಸುತ್ತಿದೆ.

Most Read Articles

Kannada
English summary
Royal Enfield Bullet 350 BS6 prices leaked. Read in Kananda.
Story first published: Thursday, March 12, 2020, 19:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X