ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಖರೀದಿಗೆ ಕನಿಷ್ಠ ಇಷ್ಟು ದಿನ ಕಾಯಲೇಬೇಕು!

ಲಾಕ್‌ಡೌನ್ ಸಂದರ್ಭದಲ್ಲಿ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದ ಆಟೋ ಕಂಪನಿಗಳು ಇದೀಗ ನೀರಿಕ್ಷೆಗೂ ಮೀರಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿದ್ದು, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ಗಳ ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಆರ್‌ಇ ಕ್ಲಾಸಿಕ್ ಬೈಕ್ ಖರೀದಿಗೆ ಕನಿಷ್ಠ ಇಷ್ಟು ದಿನ ಕಾಯಲೇಬೇಕು..!

ಕಳೆದ ಜೂನ್, ಜುಲೈ ಮತ್ತು ಅಗಸ್ಟ್ ಅವಧಿಯಲ್ಲಿ ಸತತ ಕುಸಿತ ಕಂಡಿದ್ದ ಹೊಸ ವಾಹನಗಳ ಮಾರಾಟ ಪ್ರಮಾಣವು ಇದೀಗ ಕಳೆದ ವರ್ಷದ ಅವಧಿಗಿಂತಲೂ ಹೆಚ್ಚಿನ ಮಟ್ಟದ ಬೇಡಿಕೆ ಹರಿದುಬಂದಿದ್ದು, ಸೆಪ್ಟೆಂಬರ್ ಅವಧಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಕಳೆದ ವರ್ಷದ ಸೆಪ್ಟೆಂಬರ್ ಅವಧಿಗಿಂತಲೂ ಶೇ. 32 ರಷ್ಟು ಹೆಚ್ಚು ಹೊಸ ಕ್ಲಾಸಿಕ್ 350 ಬೈಕ್‌ಗಳನ್ನು ಮಾರಾಟಗೊಳಿಸಿದೆ.

ಆರ್‌ಇ ಕ್ಲಾಸಿಕ್ ಬೈಕ್ ಖರೀದಿಗೆ ಕನಿಷ್ಠ ಇಷ್ಟು ದಿನ ಕಾಯಲೇಬೇಕು..!

ಸೆಪ್ಟೆಂಬರ್ ಅವಧಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಒಟ್ಟು 38,827 ಯನಿಟ್ ಕ್ಲಾಸಿಕ್ 350 ಬೈಕ್‌ಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷದ ಸೆಪ್ಟೆಂಬರ್ ಅವಧಿಯಲ್ಲಿ 29,376 ಯುನಿಟ್ ಕ್ಲಾಸಿಕ್ 350 ಬೈಕ್ ಮಾರಾಟ ಮಾಡಿದ್ದ ಆರ್‌ಇ ಕಂಪನಿಯು ಶೇ.32 ರಷ್ಟು ಬೆಳವಣಿಗೆ ಸಾಧಿಸಿದೆ.

ಆರ್‌ಇ ಕ್ಲಾಸಿಕ್ ಬೈಕ್ ಖರೀದಿಗೆ ಕನಿಷ್ಠ ಇಷ್ಟು ದಿನ ಕಾಯಲೇಬೇಕು..!

ಕರೋನಾ ವೈರಸ್ ಪರಿಣಾಮ ಸ್ವಂತ ವಾಹನಗಳ ಬಳಕೆಯಲ್ಲಿ ಹೆಚ್ಚಳ ಕಂಡುಬಂದಿರುವುದೇ ಹೊಸ ವಾಹನಗಳ ಮಾರಾಟದಲ್ಲಿ ಆರ್ಥಿಕ ಸಂಕಷ್ಟದ ನಡುವೆಯೂ ಹೆಚ್ಚಳವಾಗಿದ್ದು, ದಸರಾ ಮತ್ತು ದೀಪಾವಳಿ ಸಂಭ್ರಮದಲ್ಲಿ ಇನ್ನಷ್ಟು ಹೊಸ ವಾಹನಗಳು ಮಾರಾಟಗೊಳ್ಳುವ ನೀರಿಕ್ಷೆಗಳಿವೆ.

ಆರ್‌ಇ ಕ್ಲಾಸಿಕ್ ಬೈಕ್ ಖರೀದಿಗೆ ಕನಿಷ್ಠ ಇಷ್ಟು ದಿನ ಕಾಯಲೇಬೇಕು..!

ಇದರಿಂದ ಹೊಸ ವಾಹನ ಖರೀದಿಗಾಗಿ ಕಾಯುವಿಕೆ ಅವಧಿ ಕೂಡಾ ಹೆಚ್ಚಾಗುತ್ತಿದ್ದು, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಖರೀದಿಗೆ ಬುಕ್ಕಿಂಗ್ ನಂತರ ವಿವಿಧ ನಗರಗಳಿಗೆ ಅನುಗುಣವಾಗಿ ಕನಿಷ್ಠ ಒಂದು ವಾರದಿಂದ 3 ತಿಂಗಳು ಕಾಯಬೇಕಾದ ಪರಿಸ್ಥಿತಿಯಿದೆ. ದಸರಾ ಅಥವಾ ದೀಪಾವಳಿ ಸಂದರ್ಭದಲ್ಲೇ ಹೊಸ ವಾಹನ ಮಾಲೀಕತ್ವ ಪಡೆದುಕೊಳ್ಳಬೇಕೆಂಬ ಗ್ರಾಹಕರ ಬೇಡಿಕೆ ಪೂರೈಸಲು ಯತ್ನಿಸುತ್ತಿರುವ ಆಟೋ ಕಂಪನಿಗಳು ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿವೆ.

ಆರ್‌ಇ ಕ್ಲಾಸಿಕ್ ಬೈಕ್ ಖರೀದಿಗೆ ಕನಿಷ್ಠ ಇಷ್ಟು ದಿನ ಕಾಯಲೇಬೇಕು..!

ಆದರೆ ಉತ್ಪಾದನಾ ಘಟಕಗಳಲ್ಲಿ ಉತ್ಪಾದನಾ ಸಾಮಾರ್ಥ್ಯ ಮೀರಿ ಗ್ರಾಹಕರ ಬೇಡಿಕೆ ಪೂರೈಸಲು ಸಾಧ್ಯವಿಲ್ಲದ ಪರಿಣಾಮ ಹಲವು ಆಟೋ ಕಂಪನಿಗಳು ವಿವಿಧ ವಾಹನಗಳ ಖರೀದಿಗೆ ಉತ್ಪಾದನಾ ಸಾಮಾರ್ಥ್ಯದ ಆಧಾರದ ಮೇಲೆ ಕನಿಷ್ಠ ಒಂದು ವಾರದಿಂದ 4 ತಿಂಗಳ ಕಾಲ ಕಾಯುವಿಕೆ ಅವಧಿಯನ್ನು ಪ್ರಕಟಿಸಿವೆ.

ಆರ್‌ಇ ಕ್ಲಾಸಿಕ್ ಬೈಕ್ ಖರೀದಿಗೆ ಕನಿಷ್ಠ ಇಷ್ಟು ದಿನ ಕಾಯಲೇಬೇಕು..!

ರಾಯಲ್ ಎನ್‌ಫೀಲ್ಡ್ ಕೂಡಾ ವಿವಿಧ ನಗರಗಳಿಗೆ ವಾಹನ ಪೂರೈಕೆಯ ಆಧಾರದ ಮೇಲೆ ಕನಿಷ್ಠ ಒಂದು ವಾರದಿಂದ 3 ತಿಂಗಳ ಕಾಲ ಕಾಯುವಿಕೆ ಅವಧಿ ಪ್ರಕಟಿಸಿದ್ದು, ನಮ್ಮ ಬೆಂಗಳೂರಿನಲ್ಲಿ ಮಾತ್ರವೇ ಕ್ಲಾಸಿಕ್ 350 ಬೈಕ್ ಖರೀದಿಗೆ ಯಾವುದೇ ರೀತಿಯಲ್ಲಿ ಕಾಯುವಿಕೆಯ ಅವಶ್ಯಕತೆಯಿಲ್ಲ ಎಂದಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಆರ್‌ಇ ಕ್ಲಾಸಿಕ್ ಬೈಕ್ ಖರೀದಿಗೆ ಕನಿಷ್ಠ ಇಷ್ಟು ದಿನ ಕಾಯಲೇಬೇಕು..!

ಹಾಗಾದ್ರೆ ವಿವಿಧ ನಗರಗಳಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಗಾಗಿ ಗ್ರಾಹಕರು ಬುಕ್ಕಿಂಗ್ ಸಲ್ಲಿಕೆ ನಂತರ ಎಷ್ಟು ದಿನಗಳ ಕಾಲ ಕಾಯಬೇಕೆಂಬ ಪಟ್ಟಿ ಬಿಡುಗಡೆ ಮಾಡಲಾಗಿದೆ.

ನಗರಗಳು ಕಾಯುವಿಕೆಯ ಅವಧಿ

ದೆಹಲಿ

45 ದಿನಗಳು
ಮುಂಬೈ 1 ತಿಂಗಳು
ಚೆನ್ನೈ 15-20 ದಿನಗಳು
ಕೋಲ್ಕತ್ತಾ 2-3 ತಿಂಗಳು
ಪುಣೆ 1 ತಿಂಗಳು
ಹೈದ್ರಾಬಾದ್ 30-45 ದಿನಗಳು
ಬೆಂಗಳೂರು ಕಾಯುವಿಕೆ ಅವಧಿ ಇರುವುದಿಲ್ಲ
ಆರ್‌ಇ ಕ್ಲಾಸಿಕ್ ಬೈಕ್ ಖರೀದಿಗೆ ಕನಿಷ್ಠ ಇಷ್ಟು ದಿನ ಕಾಯಲೇಬೇಕು..!

ಕಾಯುವಿಕೆ ಅವಧಿಯ ಪಟ್ಟಿಯಲ್ಲಿ ಕೊಲ್ಕತ್ತಾ ಮತ್ತು ದೆಹಲಿಯಲ್ಲಿನ ಗ್ರಾಹಕರಿಗೆ ಹೊಸ ಬೈಕ್‌ಗಳು ಕನಿಷ್ಠ 45 ದಿನಗಳಿಂದ ಮೂರು ತಿಂಗಳ ಅವಧಿಯಲ್ಲಿ ಬೈಕ್ ವಿತರಣೆಯಾಗಲಿದ್ದರೆ, ಮುಂಬೈ, ಪುಣೆ ಮತ್ತು ಹೈದ್ರಾಬಾದ್ ಗ್ರಾಹಕರು ಕನಿಷ್ಠ 1 ತಿಂಗಳು ಕಾಯಬೇಕು.

ಆರ್‌ಇ ಕ್ಲಾಸಿಕ್ ಬೈಕ್ ಖರೀದಿಗೆ ಕನಿಷ್ಠ ಇಷ್ಟು ದಿನ ಕಾಯಲೇಬೇಕು..!

ಚೆನ್ನೈ‌ನಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಖರೀದಿಗೆ 15 ರಿಂದ 20 ದಿನಗಳ ಕಾಲ ಕಾಯುವಿಕೆ ಅವಧಿ ನೀಡಲಾಗಿದ್ದು, ಬೆಂಗಳೂರಿನಲ್ಲಿ ಬೈಕ್ ಖರೀದಿಸುವ ಗ್ರಾಹಕರಿಗೆ ಬುಕ್ಕಿಂಗ್ ಮಾಡಿದ ದಿನವೇ ಹೊಸ ಬೈಕ್ ವಿತರಣೆ ಪಡೆದುಕೊಳ್ಳಬಹುದಾಗಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಆರ್‌ಇ ಕ್ಲಾಸಿಕ್ ಬೈಕ್ ಖರೀದಿಗೆ ಕನಿಷ್ಠ ಇಷ್ಟು ದಿನ ಕಾಯಲೇಬೇಕು..!

ಚೆನ್ನೈ ಹೊರವಲಯದಲ್ಲಿ ಬೈಕ್ ಉತ್ಪಾದನಾ ಘಟಕವನ್ನು ಹೊಂದಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಕ್ಲಾಸಿಕ್ 350 ಮಾದರಿಗೆ ಅತಿ ಹೆಚ್ಚು ಬೇಡಿಕೆಯಿರುವ ನಮ್ಮ ಬೆಂಗಳೂರಿಗೆ ಮೊದಲ ಆದ್ಯತೆ ನೀಡಿದ್ದು, ದಸರಾ ಮತ್ತು ದೀಪಾವಳಿ ಹೊತ್ತಿಗೆ ಭಾರೀ ಪ್ರಮಾಣದ ಹೊಸ ಬೈಕ್ ಮಾರಾಟ ಮಾಡುವ ಯೋಜನೆಯಲ್ಲಿದೆ.

Most Read Articles

Kannada
English summary
Royal Enfield Classic 350 BS6 Waiting Period For October 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X