ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್

ರಾಯಲ್ ಎನ್‌ಫೀಲ್ಡ್ ಬೈಕುಗಳ ಸರಣಿಯಲ್ಲಿ ಜನಪ್ರಿಯ ಮಾದರಿಗಳಲ್ಲಿ ಕ್ಲಾಸಿಕ್ 350 ಕೂಡ ಒಂದಾಗಿದೆ. ಈ ಜನಪ್ರಿಯ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಹೊಸ ಮತ್ತು ಹೆಚ್ಚುವರಿಯಾಗಿ ಎರಡು ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್

ಜನಪ್ರಿಯ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಹೊಸ ಮೆಟಲ್ಲೊ ಸಿಲ್ವರ್ ಮತ್ತು ಆರೆಂಜ್ ಎಂಬರ್ ಎಂಬ ಎರಡು ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.83 ಲಕ್ಷಗಳಾಗಿದೆ. ರಾಯಲ್ ಎನ್‌ಫೀಲ್ಡ್ ಹೇಳುವಂತೆ ಎರಡು ಹೊಸ ಬಣ್ಣ ಆಯ್ಕೆಗಳು ಮತ್ತಷ್ಟು ವರ್ಣರಂಜಿತವಾಗುವಂತೆ ಕಾಣುತ್ತದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್

ರಾಯಲ್ ಎನ್‌ಫೀಲ್ಡ್ ಮೇಕ್ ಇಟ್ ಯುವರ್ಸ್ (ಎಐವೈ) ಕಾರ್ಯಕ್ರಮದ ಪ್ರಯುಕ್ತ ಕ್ಲಾಸಿಕ್ 350 ಬೈಕಿಗೆ ಸ್ಪೋರ್ಟ್ಸ್ ಅಲಾಯ್ ವೀಲ್ಸ್ ಮತ್ತು ಟ್ಯೂಬ್‌ಲೆಸ್ ಟೈರ್‌ಗಳಲ್ಲಿ ಲಭ್ಯವಿದೆ. ಹೊಸ ಬಣ್ಣಗಳ ಆಯ್ಕೆಯಲ್ಲಿ ಪರಿಚಯಿಸುವುದರಿಂದ ಮತ್ತಷ್ಟು ಗ್ರಾಹಕರನ್ನು ಸೆಳೆಯಬಹುದು.

MOST READ: ಅಕ್ಟೋಬರ್ ತಿಂಗಳಿನಲ್ಲಿ 8 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್

ಖರೀದಿದಾರರಿಗೆ ತಮ್ಮ ವೈಯಕ್ತಿಕ ಆದ್ಯತೆಗಳಿಗೆ ಅನುಗುಣವಾಗಿ ತಮ್ಮ ಬೈಕುಗಳನ್ನು ಕಸ್ಟಮೈಸ್ ಮಾಡಿಸುವ ಮತ್ತು ಅಕ್ಸೆಸರೀಸ್ ಸೇರಿಸುವ ಆಯ್ಕೆಯನ್ನು ಸಹ ಒದಗಿಸುತ್ತದೆ. ಇದನ್ನು ರಾಯಲ್ ಎನ್‌ಫೀಲ್ಡ್ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಮಾಡಬಹುದು ಮತ್ತು 3D ಕಾನ್ಫಿಗರೇಟರ್ ಅನ್ನು ಸಹ ಹೊಂದಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯ ಸಿಇಒ ವಿನೋದ್ ಕೆ ದಸಾರಿ ಅವರು ಮಾತನಾಡಿ, ಕ್ಲಾಸಿಕ್ 350 ಒಂದು ದಶಕದಿಂದ ನಮ್ಮ ಅತ್ಯಂತ ಯಶಸ್ವಿ ಬೈಕುಗಳಲ್ಲಿ ಒಂದಾಗಿದೆ. ಕ್ಲಾಸಿಕ್ ಆಕರ್ಷಕ ವಿನ್ಯಾಸ ಮತ್ತು ಇದರ ರೈಡಿಂಗ್ ಕಂಫರ್ಟ್ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತವಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್

ಇನ್ನು ಈ ಹೊಸ ಕ್ಲಾಸಿಕ್ 350 ಬೈಕಿನಲ್ಲಿ ಕಾನ್ಫಿಗರ್ ಮಾಡುವ ಆಯ್ಕೆಯನ್ನು ಸೇರಿಸಿದ್ದೇವೆ ಎಂದು ಹೇಳಿದರು. ಕ್ಲಾಸಿಕ್ 350 ತನ್ನ ಹೊಸ ಬಣ್ಣ ಆಯ್ಕೆಗಳಲ್ಲಿ ನಾಳೆಯಿಂದ ದೇಶದ ಎಲ್ಲಾ ರಾಯಲ್ ಎನ್‌ಫೀಲ್ಡ್ ಡೀಲರುಗಳ ಬಳಿ ಖರೀದಿಗೆ ಲಭ್ಯವಿರುತ್ತದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಮುಂದಿನ ತಲೆಮಾರಿನ ಕ್ಲಾಸಿಕ್ 350 ಬೈಕನ್ನು ಅಭಿವೃದ್ದಿ ಪಡಿಸುವುದರಲ್ಲಿ ನಿರತರಾಗಿದ್ದಾರೆ. ಈ ಕ್ಲಾಸಿಕ್ 350 ಅನ್ನು ಹೊಸ ಮಾಡ್ಯುಲರ್ ಜೆ ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಿ ಮತ್ತು ಅಭಿವೃದ್ಧಿಪಡಿಸಲಾಗುತ್ತದೆ. ಈ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್

ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಹೆಚ್ಚು ಆಧುನಿಕ ವಿನ್ಯಾಸ ಅಂಶಗಳೊಂದಿಗೆ ಹಳೆಯ ಕ್ಲಾಸಿಕ್ ಪ್ರೊಫೈಲ್ ಅನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಈ ಬೈಕ್ ಎಲ್ಇಡಿ ಹೆಡ್ ಲ್ಯಾಂಪ್,ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಹೊಸ ಬಣ್ಣಗಳ ಆಯ್ಕೆಗಳನ್ನು ಪಡೆಯಬಹುದು.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್

ಈ ಬೈಕಿನಲ್ಲಿ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಹೊಂದಿರಲಿದೆ. ಇನ್ನು ಈ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಅಬ್ಸಾರ್ಬರ್ ಅನ್ನು ಹೊಂದಿರಲಿದೆ.

Most Read Articles

Kannada
English summary
Royal Enfield Classic 350 Gets 2 New Colours. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X