ಬಿಎಸ್-6 ಎಫೆಕ್ಟ್- ಬುಲೆಟ್ 500 ಮತ್ತು ಥಂಡರ್‌ಬರ್ಡ್ 500 ಬೈಕ್ ಮಾರಾಟಕ್ಕೆ ಆರ್‌ಇ ಗುಡ್‌ಬೈ

ಏಪ್ರಿಲ್ 1ರಿಂದ ಬಿಎಸ್-6 ಎಮಿಷನ್ ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಕ್ಲಾಸಿಕ್ ಬೈಕ್ ನಿರ್ಮಾಣ ಸಂಸ್ಥೆಯಾದ ರಾಯಲ್ ಎನ್‌ಫೀಲ್ಡ್ ತನ್ನ ಜನಪ್ರಿಯ ಬೈಕ್ ಮಾದರಿಗಳಾದ ಬುಲೆಟ್ 500, ಥಂಡರ್‌ಬರ್ಡ್ 500 ಮತ್ತು ಕ್ಲಾಸಿಕ್ 500 ಬೈಕ್ ಮಾರಾಟವನ್ನು ಸ್ಥಗಿತಗೊಳಿಸುತ್ತಿದೆ.

ಬಿಎಸ್-6 ಎಫೆಕ್ಟ್- ಬುಲೆಟ್ 500 ಮತ್ತು ಥಂಡರ್‌ಬರ್ಡ್ 500 ಬೈಕ್ ಮಾರಾಟಕ್ಕೆ ಆರ್‌ಇ ಗುಡ್‌ಬೈ

ಹೊಸ ಎಮಿಷನ್ ನಿಯಮ ಅನುಸಾರ ಈಗಾಗಲೇ ಕ್ಲಾಸಿಕ್ 350 ಬೈಕ್ ಮಾದರಿಯನ್ನು ಕಳೆದ ವಾರ ಬಿಡುಗಡೆ ಮಾಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇನ್ನುಳಿದ ಬೈಕ್ ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಅಭಿವೃದ್ದಿಗೊಳಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಬುಲೆಟ್ 500, ಥಂಡರ್‌ಬರ್ಡ್ 500 ಮತ್ತು ಕ್ಲಾಸಿಕ್ 500 ಬಿಎಸ್-6 ಮಾದರಿಗಳ ಬಿಡುಗಡೆಗಾಗಿ ಕಾಯುತ್ತಿದ್ದ ಗ್ರಾಹಕರಿಗೆ ನಿರಾಶೆ ಮೂಡಿಸಿದೆ.

ಬಿಎಸ್-6 ಎಫೆಕ್ಟ್- ಬುಲೆಟ್ 500 ಮತ್ತು ಥಂಡರ್‌ಬರ್ಡ್ 500 ಬೈಕ್ ಮಾರಾಟಕ್ಕೆ ಆರ್‌ಇ ಗುಡ್‌ಬೈ

ಮಾಹಿತಿಗಳ ಪ್ರಕಾರ, ಬುಲೆಟ್ 500, ಥಂಡರ್‌ಬರ್ಡ್ 500 ಮತ್ತು ಕ್ಲಾಸಿಕ್ 500 ಬೈಕ್‌ಗಳ ಸ್ಟಾಕ್ ಮುಗಿಯುವ ತನಕ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಬಿಎಸ್-6 ಮಾದರಿಗಳನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿದೆ.

ಬಿಎಸ್-6 ಎಫೆಕ್ಟ್- ಬುಲೆಟ್ 500 ಮತ್ತು ಥಂಡರ್‌ಬರ್ಡ್ 500 ಬೈಕ್ ಮಾರಾಟಕ್ಕೆ ಆರ್‌ಇ ಗುಡ್‌ಬೈ

ಒಂದು ವೇಳೆ ಬುಲೆಟ್ 500, ಥಂಡರ್‌ಬರ್ಡ್ 500 ಮತ್ತು ಕ್ಲಾಸಿಕ್ 500 ಬೈಕ್‌ಗಳ ಬಿಎಸ್-6 ಆವೃತ್ತಿಗಳನ್ನು ಬಿಡುಗಡೆ ಮಾಡಿದರೂ ಸಹ ದುಬಾರಿ ಬೆಲೆ ಪಡೆದುಕೊಳ್ಳಲಿದ್ದು, ಈ ಹಿನ್ನಲೆಯಲ್ಲಿ 350 ಮಾದರಿಗಳ ಮೇಲೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಬಿಎಸ್-6 ಎಫೆಕ್ಟ್- ಬುಲೆಟ್ 500 ಮತ್ತು ಥಂಡರ್‌ಬರ್ಡ್ 500 ಬೈಕ್ ಮಾರಾಟಕ್ಕೆ ಆರ್‌ಇ ಗುಡ್‌ಬೈ

ಇನ್ನು ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮುಂದಿನ ಮಾರ್ಚ್ ಅಂತ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಬಿಎಸ್-6 ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದ್ದು, ಬಿಎಸ್-6 ಬೈಕ್‌ಗಳ ಜೊತೆಗೆ ಎಲೆಕ್ಟ್ರಿಕ್ ಬೈಕ್ ಮಾದರಿಗಳು ಸಹ ಮುಂದಿನ ಆರು ತಿಂಗಳ ಅವಧಿಯಲ್ಲಿ ರಸ್ತೆಗಿಳಿಯಲಿವೆಯೆಂತೆ. ಈಗಾಗಲೇ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುವುದೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

ಬಿಎಸ್-6 ಎಫೆಕ್ಟ್- ಬುಲೆಟ್ 500 ಮತ್ತು ಥಂಡರ್‌ಬರ್ಡ್ 500 ಬೈಕ್ ಮಾರಾಟಕ್ಕೆ ಆರ್‌ಇ ಗುಡ್‌ಬೈ

ಈ ಹಿನ್ನಲೆಯಲ್ಲಿ ರಾಯಲ್ ಎನ್‌ಫೀಲ್ಡ್ ಸಹ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಎಮಿಷನ್ ನಿಯಮಗಳನ್ನು ಪಾಲಿಸಲು ಸಾಧ್ಯವಾಗದ 500 ಸಿಸಿ ಎಂಜಿನ್ ಮಾದರಿಯ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿದೆ.

ಬಿಎಸ್-6 ಎಫೆಕ್ಟ್- ಬುಲೆಟ್ 500 ಮತ್ತು ಥಂಡರ್‌ಬರ್ಡ್ 500 ಬೈಕ್ ಮಾರಾಟಕ್ಕೆ ಆರ್‌ಇ ಗುಡ್‌ಬೈ

2030ರ ವೇಳೆಗೆ ಶೇ.100 ರಷ್ಟು ಎಲೆಕ್ಟ್ರಿಕ್ ವಾಹನಗಳ ಮಾರಾಟ ಗುರಿಯೊಂದಿಗೆ ಬೃಹತ್ ಯೋಜನೆ ರೂಪಿಸಿರುವ ನೀತಿ ಆಯೋಗವು ಫೇಮ್ 2 ಯೋಜನೆ ಅಡಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳಿಗೆ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಭರ್ಜರಿ ತೆರಿಗೆ ವಿನಾಯ್ತಿ ಮತ್ತು ಸಬ್ಸಡಿ ಯೋಜನೆಗಳನ್ನು ಜಾರಿಗೆ ತಂದಿದೆ.

ಬಿಎಸ್-6 ಎಫೆಕ್ಟ್- ಬುಲೆಟ್ 500 ಮತ್ತು ಥಂಡರ್‌ಬರ್ಡ್ 500 ಬೈಕ್ ಮಾರಾಟಕ್ಕೆ ಆರ್‌ಇ ಗುಡ್‌ಬೈ

ಇದರಿಂದ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲಾಗುತ್ತಿದ್ದು, 2020ರ ಕೊನೆಯಲ್ಲಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಇವಿ ವಾಹನ ಮಾರಾಟವನ್ನು ಆರಂಭಗೊಳಿಸಲಿವೆ.

ಬಿಎಸ್-6 ಎಫೆಕ್ಟ್- ಬುಲೆಟ್ 500 ಮತ್ತು ಥಂಡರ್‌ಬರ್ಡ್ 500 ಬೈಕ್ ಮಾರಾಟಕ್ಕೆ ಆರ್‌ಇ ಗುಡ್‌ಬೈ

ರಾಯಲ್ ಎನ್‌ಫೀಲ್ಡ್ ಸಹ ಈ ನಿಟ್ಟಿನಲ್ಲಿ ಹೊಸ ಯೋಜನೆಗಾಗಿ ಭರ್ಜರಿ ಸಿದ್ದತೆ ನಡೆಸಿದ್ದು, ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಇಂಡಿಯಾ ವಿಭಾಗಕ್ಕೆ ಹೊಸದಾಗಿ ನೇಮಕಗೊಂಡಿರುವ ಸಿಇಒ ವಿನೋದ್ ದಾಸರಿ ಅವರು ಸಹ ಸಂಸ್ಥೆಯ ಬೆಳವಣಿಗೆ ಹಲವು ಹೊಸ ಯೋಜನೆಗಳನ್ನು ಸಿದ್ದಪಡಿಸಿದ್ದಾರೆ.

ಬಿಎಸ್-6 ಎಫೆಕ್ಟ್- ಬುಲೆಟ್ 500 ಮತ್ತು ಥಂಡರ್‌ಬರ್ಡ್ 500 ಬೈಕ್ ಮಾರಾಟಕ್ಕೆ ಆರ್‌ಇ ಗುಡ್‌ಬೈ

ಹೊಸ ಯೋಜನೆಗಳಲ್ಲಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಉತ್ಪನ್ನಗಳ ಅಭಿವೃದ್ದಿಯು ಪ್ರಮುಖ ಆಕರ್ಷಣೆಯಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೈಕ್ ಮಾದರಿಗಳ ಎಲೆಕ್ಟ್ರಿಕ್ ವರ್ಷನ್ ಜೊತೆ ಜೊತೆಗೆ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎನ್ನಬಹುದು.

Most Read Articles

Kannada
English summary
Royal Enfield Bullet 500, Thunderbird 500 bookings closed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X