ಟ್ವಿನ್ 650 ಬೈಕ್‌ಗಳ ಬೆಲೆಯಲ್ಲಿ ಮೊದಲ ಬಾರಿಗೆ ಹೆಚ್ಚಳ ಮಾಡಿದ ರಾಯಲ್ ಎನ್‌ಫೀಲ್ಡ್

ಜನಪ್ರಿಯ ಕ್ಲಾಸಿಕ್ ಬೈಕ್ ನಿರ್ಮಾಣ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ತನ್ನ ಬೈಕ್ ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡಿದ್ದು, ಟ್ವಿನ್ಸ್ 650 ಬೈಕ್ ಮಾದರಿಗಳಾದ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳ ಬೆಲೆಯಲ್ಲೂ ಹೆಚ್ಚಳ ಮಾಡಿದೆ.

ಟ್ವಿನ್ಸ್ 650 ಬೈಕ್‌ ಬೆಲೆಯಲ್ಲಿ ಮೊದಲ ಬಾರಿಗೆ ಹೆಚ್ಚಳ ಮಾಡಿದ ಆರ್‌ಇ

ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಣಗೊಂಡ ನಂತರ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳಲ್ಲಿ ಮೊದಲ ಬೆಲೆ ಏರಿಕೆ ಇದಾಗಿದ್ದು, ಎರಡು ಬೈಕ್‌‌ಗಳ ಮೂಲ ಬೆಲೆಯಲ್ಲಿ ರೂ. 1,837 ಬೆಲೆ ಹೆಚ್ಚಿಸಲಾಗಿದೆ. ಬೆಲೆ ಹೆಚ್ಚಳದ ನಂತರ ಇಂಟರ್‌ಸೆಪ್ಟರ್ 650 ಬೈಕ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.2.66 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆಯನ್ನು 2.87 ಲಕ್ಷ ನಿಗದಿಪಡಿಸಲಾಗಿದೆ.

ಟ್ವಿನ್ಸ್ 650 ಬೈಕ್‌ ಬೆಲೆಯಲ್ಲಿ ಮೊದಲ ಬಾರಿಗೆ ಹೆಚ್ಚಳ ಮಾಡಿದ ಆರ್‌ಇ

ಕಾಂಟಿನೆಂಟಲ್ ಜಿಟಿ 650 ಬೈಕ್‌ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.82 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ.3.03 ಲಕ್ಷ ನಿಗದಿಪಡಿಸಲಾಗಿದ್ದು, ಹೊಸ ದರ ಇಂದಿನಿಂದಲೇ ಅನ್ವಯವಾಗಲಿವೆ.

ಟ್ವಿನ್ಸ್ 650 ಬೈಕ್‌ ಬೆಲೆಯಲ್ಲಿ ಮೊದಲ ಬಾರಿಗೆ ಹೆಚ್ಚಳ ಮಾಡಿದ ಆರ್‌ಇ

ಬಿಎಸ್-4 ಮಾದರಿಯಿಂದ ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಣಗೊಂಡಿದ್ದ ಸಂದರ್ಭದಲ್ಲೂ ರೂ.10 ಸಾವಿರದಷ್ಟು ಬೆಲೆ ಹೆಚ್ಚಳ ಕಂಡಿದ್ದ ಟ್ವಿನ್ ಬೈಕ್‌ಗಳು ಇದೀಗ ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಬೆಲೆ ಏರಿಕೆ ಪಡೆದುಕೊಂಡಿವೆ.

ಟ್ವಿನ್ಸ್ 650 ಬೈಕ್‌ ಬೆಲೆಯಲ್ಲಿ ಮೊದಲ ಬಾರಿಗೆ ಹೆಚ್ಚಳ ಮಾಡಿದ ಆರ್‌ಇ

ರಾಯಲ್ ಎನ್‌ಫೀಲ್ಡ್ ಕಂಪನಿಯು ಟ್ವಿನ್ 650 ಬೈಕ್‌ಗಳ ಬೆಲೆಯಲ್ಲಿ ಮಾತ್ರವಲ್ಲದೆ ಹಿಮಾಲಯನ್ ಅಡ್ವೆಂಚರ್, ಕ್ಲಾಸಿಕ್ 350 ಮತ್ತು ಬುಲೆಟ್ ಬೈಕ್ ಮಾದರಿಗಳ ಬೆಲೆಯಲ್ಲೂ ಹೆಚ್ಚಳ ಮಾಡಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ.1,800 ರಿಂದ ರೂ.2,800 ತನಕ ಬೆಲೆ ಏರಿಕೆ ಮಾಡಲಾಗಿದೆ.

ಟ್ವಿನ್ಸ್ 650 ಬೈಕ್‌ ಬೆಲೆಯಲ್ಲಿ ಮೊದಲ ಬಾರಿಗೆ ಹೆಚ್ಚಳ ಮಾಡಿದ ಆರ್‌ಇ

ಇಂಟರ್‌ಸೆಪ್ಟರ್ 650 ಬೈಕ್ ಸದ್ಯ ಬಿಎಸ್-6 ಎಂಜಿನ್‌ ಉನ್ನತೀಕರಣದೊಂದಿಗೆ 649-ಸಿಸಿ ಏರ್ ಕೂಲ್ಡ್ ಪ್ಯಾರಲೆಲ್ ಟ್ವಿನ್ ಎಂಜಿನ್ ಪಡೆದುಕೊಂಡಿದ್ದು, 47-ಬಿಎಚ್‌ಪಿ, 52-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಟ್ವಿನ್ಸ್ 650 ಬೈಕ್‌ ಬೆಲೆಯಲ್ಲಿ ಮೊದಲ ಬಾರಿಗೆ ಹೆಚ್ಚಳ ಮಾಡಿದ ಆರ್‌ಇ

ಇನ್ನು ಕರೋನಾ ವೈರಸ್‌ನಿಂದ ತಗ್ಗಿದ್ದ ವಾಹನ ಮಾರಾಟವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ವೈರಸ್ ಭೀತಿ ಹಿನ್ನಲೆಯಲ್ಲಿ ಬಹುತೇಕರು ಸ್ವಂತ ಬಳಕೆಯ ವಾಹನಗಳಿಗೆ ಆದ್ಯತೆ ನೀಡುತ್ತಿರುವುದು ಹೊಸ ವಾಹನಗಳಿಗೆ ಭರ್ಜರಿ ಬೇಡಿಕೆ ಉಂಟಾಗಬಹುದು ಎಂದು ನೀರಿಕ್ಷಿಸಲಾಗಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಟ್ವಿನ್ಸ್ 650 ಬೈಕ್‌ ಬೆಲೆಯಲ್ಲಿ ಮೊದಲ ಬಾರಿಗೆ ಹೆಚ್ಚಳ ಮಾಡಿದ ಆರ್‌ಇ

ಸದ್ಯದ ಪರಿಸ್ಥಿತಿಯಲ್ಲಿ ವಾಹನ ಮಾರಾಟವು ಇಳಿಕೆಯಲ್ಲಿದ್ದರೂ ಮುಂಬರುವ ದಿನಗಳಲ್ಲಿ ಬೆಳವಣಿಗೆ ಕಾಣುವ ವಿಶ್ವಾಸದಲ್ಲಿರುವ ಆಟೋ ಕಂಪನಿಗಳು ವಿವಿಧ ಮಾದರಿಯ ಮತ್ತಷ್ಟು ಹೊಸ ವಾಹನಗಳ ಬಿಡುಗಡೆಗೆ ಸಿದ್ದತೆ ನಡೆಸುತ್ತಿದ್ದು, ರಾಯಲ್ ಎನ್‌ಫೀಲ್ಡ್ ಕಂಪನಿಯು ಕೂಡಾ ವಾಹನ ಮಾರಾಟ ಮಳಿಗೆಗಳನ್ನು ಮೆಟ್ರೋ ನಗರಗಳಲ್ಲಿ ಮಾತ್ರವಲ್ಲ 2ನೇ ಮತ್ತು 3ನೇ ಹಂತಗಳಲ್ಲೂ ಹೆಚ್ಚಿಸುತ್ತಿದೆ.

ಟ್ವಿನ್ಸ್ 650 ಬೈಕ್‌ ಬೆಲೆಯಲ್ಲಿ ಮೊದಲ ಬಾರಿಗೆ ಹೆಚ್ಚಳ ಮಾಡಿದ ಆರ್‌ಇ

ಲಾಕ್‌ಡೌನ್ ಸಡಿಲಿಕೆಯ ನಂತರ ಬಹುತೇಕ ವಾಹನ ಮಾದರಿಗಳ ಬೇಡಿಕೆ ಪ್ರಮಾಣವು ನಿಧಾನವಾಗಿ ಏರಿಕೆ ಕಾಣುತ್ತಿದ್ದು, ಮುಂಬರುವ ದಿನಗಳಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಪ್ರಮಾಣವು ಗಣನೀಯವಾಗಿ ಹೆಚ್ಚಳವಾಗುವ ನೀರಿಕ್ಷೆಯಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಟ್ವಿನ್ಸ್ 650 ಬೈಕ್‌ ಬೆಲೆಯಲ್ಲಿ ಮೊದಲ ಬಾರಿಗೆ ಹೆಚ್ಚಳ ಮಾಡಿದ ಆರ್‌ಇ

ಈ ನಿಟ್ಟಿನಲ್ಲಿ ಮಾರುಕಟ್ಟೆ ಅಧ್ಯಯನ ನಡೆಸಿರುವ ರಾಯಲ್ ಎನ್‌ಫೀಲ್ಡ್ ಮಾತೃಸಂಸ್ಥೆಯಾದ ಐರಿಷ್ ಮೋಟಾರ್ಸ್ ಕಂಪನಿಯು ದ್ವಿಚಕ್ರ ವಾಹನ ಮಾರಾಟ ವ್ಯಾಪ್ತಿ ಹೆಚ್ಚಿಸಲು ಮುಂದಾಗಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಉತ್ಸುಕವಾಗಿದೆ.

Most Read Articles

Kannada
English summary
Royal Enfield Increased Prices Of BS6 650 Twins For The First Time. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X