ದೆಹಲಿ ಪೊಲೀಸರಿಗೆ ಗಸ್ತು ತಿರುಗಲು ಜೊತೆಯಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು

ಇಂದಿಗೂ ಕೂಡ ಭಾರತೀಯ ರಸ್ತೆಗಳಲ್ಲಿ ರಾಜನಂತೆ ಮೆರೆಯುತ್ತಿವೆ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳು. ರಾಯಲ್ ಎನ್‍ಫೀಲ್ಡ್ ಯುವಕರ ಕನಸಿನ ಬೈಕ್. ರಾಯಲ್ ಎನ್‍ಫೀಲ್ಡ್ ತನ್ನ ವಿಶಿಷ್ಟವಾದ ಲುಕ್ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್.

ದೆಹಲಿ ಪೊಲೀಸರಿಗೆ ಗಸ್ತು ತಿರುಗಲು ಜೊತೆಯಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು

ಕಳೆದ ವರ್ಷದಿಂದ ದೆಹಲಿ ಪೊಲೀಸರು ಕೂಡ ಗಸ್ತು ತಿರುಗಲು ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಆದರೆ ದೆಹಲಿ ಪೊಲೀಸರು ಬಳಸುತ್ತಿದ್ದ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಚಿತ್ರಗಳು ಬಹಿರಂಗವಾಗಿರಲಿಲ್ಲ. ಆದರೆ ಇದೀಗ ಮೊದಲ ಬಾರಿಗೆ ದೆಹಲಿ ಪೊಲೀಸರ ರಾಯಲ್ ಇನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ ಪೋಟೋ ಬಹಿರಂಗವಾಗಿದೆ.

ದೆಹಲಿ ಪೊಲೀಸರಿಗೆ ಗಸ್ತು ತಿರುಗಲು ಜೊತೆಯಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು

ದೆಹಲಿ ಪೊಲೀಸರ ರಾಯಲ್ ಇನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಪೋಟೋವನ್ನು ರಾಯಲ್ ಮೇವರಿಕ್ಸ್ ಬಹಿರಂಗಪಡಿಸಿದೆ. ಪೊಲೀಸರು ಬಳಸುವ ರಾಯಲ್ ಇನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ ಬೈಕನ್ನು ಸಾಕಷ್ಟು ನವೀಕರಣಗಳನ್ನು ಮಾಡಲಾಗಿದೆ.

ದೆಹಲಿ ಪೊಲೀಸರಿಗೆ ಗಸ್ತು ತಿರುಗಲು ಜೊತೆಯಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು

ಕಪ್ಪು ಬಣ್ಣದ ಈ ರಾಯಲ್ ಇನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಫ್ಯೂಯಲ್ ಟ್ಯಾಂಕ್ ಮತ್ತು ಬ್ಯಾಟರಿ ಬಾಕ್ಸ್ ಕವರ್‍‍ನಲ್ಲಿ ದೆಹಲಿ ಪೊಲೀಸ್ ಡೆಕಾಲ್‍‍ಗಳನ್ನು ಹೊಂದಿದೆ. ಬೈಕಿನ ಹಿಂಭಾಗದ ಮಡ್‍‍ಗಾರ್ಡ್‍‍ನಲ್ಲೂ ಸಣ್ಣದಾದ ದೆಹಲಿ ಪೊಲೀಸ್ ಸ್ಟಿಕ್ಕರ್ ಅನ್ನು ಅಂಟಿಸಿದ್ದಾರೆ.

ದೆಹಲಿ ಪೊಲೀಸರಿಗೆ ಗಸ್ತು ತಿರುಗಲು ಜೊತೆಯಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು

ಬೈಕಿನಲ್ಲಿ ಸ್ಟಿಕ್ಕರ್‍‍‍ಗಳನ್ನು ಹೊರತುಪಡಿಸಿ, ಸೈರನ್ ಜೊತೆಗೆ ಸೈಡ್‍ಗಾರ್ಡ್‍ನಲ್ಲಿ ಫ್ಲಾಶರ್‍‍ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಪೊಲೀಸರಿಗೆ ದೈನಂದಿನ ಕರ್ತ್ಯವ್ಯಕ್ಕಾಗಿ ಸಾಗಿಸಬೇಕಾದ ವಸ್ತುಗಳು ಅಥವಾ ಪೊಲೀಸರು ಬಳಸುವ ಇತರ ವಸ್ತುಗಳನ್ನು ಇರಿಸಿಕೊಳ್ಳಲು ಸೈಡ್ ಬಾಕ್ಸ್ ಕೂಡ ಇದೆ. ಬೈಕ್‌ನಲ್ಲಿ ಆಫ್ಟರ್ ಮಾರ್ಕೆಟ್ ಬ್ಯಾಕ್‌ರೆಸ್ಟ್ ಅನ್ನು ಕೂಡ ನೀಡಲಾಗಿದೆ.

ದೆಹಲಿ ಪೊಲೀಸರಿಗೆ ಗಸ್ತು ತಿರುಗಲು ಜೊತೆಯಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು

ದೆಹಲಿ ಪೊಲೀಸರು ಹನ್ನೆರಡು ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಮತ್ತು ಏಳು ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ 500 ಬೈಕ್ ಹೊಸದಾಗಿ ಖರೀದಿಸಿದ್ದಾರೆ. ದೆಹಲಿ ಪೊಲೀಸರು ಕಳೆದ ವರ್ಷ ಹದಿನಾರು ಮಹೀಂದ್ರಾ ಸ್ಕಾರ್ಪಿಯೋವನ್ನು ಕೂಡ ಖರೀದಿಸಿದ್ದಾರೆ.

ದೆಹಲಿ ಪೊಲೀಸರಿಗೆ ಗಸ್ತು ತಿರುಗಲು ಜೊತೆಯಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು

ಇಂಟರ್‍‍ಸೆಪ್ಟೆರ್ 650 ಬೈಕ್ 649 ಸಿಸಿ ಏರ್/ಆಯಿಲ್ -ಕೂಲ್ಡ್ ಪ್ಯಾರೆಲೆಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 47 ಬಿ‍ಹೆಚ್‍ಪಿ ಪವರ್ ಮತ್ತು 52 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ದೆಹಲಿ ಪೊಲೀಸರಿಗೆ ಗಸ್ತು ತಿರುಗಲು ಜೊತೆಯಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು

ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ ಅಸಿಸ್ಟ್ ಕ್ಲಚ್‍‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟೆರ್ 650 ಬೈಕಿನ ಮುಂಭಾಗದಲ್ಲಿ 320ಎಂಎಂ ಮತ್ತು ಹಿಂಭಾಗದಲ್ಲಿ 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿವೆ.

ದೆಹಲಿ ಪೊಲೀಸರಿಗೆ ಗಸ್ತು ತಿರುಗಲು ಜೊತೆಯಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು

ಸಾಮಾನ್ಯ ಇಂಟರ್‍‍ಸೆಪ್ಟರ್ 650 ಬೈಕಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ಕ್ರಮವಾಗಿ ರೂ.2.51 ಲಕ್ಷಗಳಾಗಿದೆ. ಈ ಬೈಕ್ ಆಧುನಿಕ ಕ್ಲಾಸಿಕ್ ಲುಕ್ ಅನ್ನು ಹೊಂದಿವೆ.

ದೆಹಲಿ ಪೊಲೀಸರಿಗೆ ಗಸ್ತು ತಿರುಗಲು ಜೊತೆಯಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳು

ದೆಹಲಿ ಪೊಲೀಸರು ಬಳಸುವ ಅತ್ಯಂತ ಪವರ್‍‍ಫುಲ್ ಬೈಕ್‍‍ಗಳಲ್ಲಿ ರಾಯಲ್ ಇನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಕೂಡ ಒಂದಾಗಿದೆ. ಪೊಲೀಸರ ಕಾರ್ಯಚರಣೆಯಲ್ಲಿ ಬಳಸಲು ಈ ಬೈಕ್ ಉತ್ತಮ ಆಯ್ಕೆಯಾಗಿದೆ.

Most Read Articles

Kannada
English summary
Story first published: Tuesday, March 10, 2020, 18:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X