Just In
- 29 min ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 34 min ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
- 59 min ago ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- 1 hr ago Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
Don't Miss!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- News ಉಚಿತ ಉಪಹಾರದಿಂದ ಉಚಿತ ದಂತ ತಪಾಸಣೆವರೆಗೆ; ಮತದಾನ ಮಾಡಿದವರಿಗೆ ಭರ್ಜರಿ ಆಫರ್ ಕೊಟ್ಟ ಮೈಸೂರು ವ್ಯಾಪಾರಸ್ಥರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಫೀಚರ್ಗಳೊಂದಿಗೆ ಬಿಡುಗಡೆಯಾಗಲಿದೆ ಆರ್ಇ ಮೆಟಿಯೋರ್ 350 ಫೈರ್ಬಾಲ್ ಬೈಕ್
ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್ಫೀಲ್ಡ್ ಕಂಪನಿಯು ತನ್ನ ಮೆಟಿಯೋರ್ 350 ಫೈರ್ಬಾಲ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬಹುನಿರೀಕ್ಷಿತ ಬೈಕುಗಳಲ್ಲಿ ಒಂದಾಗಿದೆ.
ರಾಯಲ್ ಎನ್ಫೀಲ್ಡ್ ಕಂಪನಿಯು ತನ್ನ ಮೆಟಿಯೋರ್ 350 ಫೈರ್ಬಾಲ್ ಬೈಕನ್ನು ಮುಂದಿನ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳಾಗಿದೆ. ಅಲ್ಲದೇ ಮುಂದಿನ ತಿಂಗಳು ಶೋರೂಂಗಳಿಗೆ ಈ ಹೊಸ ಬೈಕ್ ತಲುಪಲಿದೆ. ಹೊಸ ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.65 ಲಕ್ಷಗಳಾಗಿರಲಿದೆ.
ಈ ಹೊಸ ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬೈಕ್ ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಸ್ಪಾಟ್ ಟೆಸ್ಟ್ ನಲ್ಲಿ ಈ ಬೈಕಿನಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಸ್ವಿಚ್ಗಿಯರ್ ಫೀಚರ್ ಅನ್ನು ಹೊಂದಿರುವುದು ಬಹಿರಂಗವಾಗಿದೆ. ಈ ಮಾಹಿತಿಯನ್ನು ಗಾಡಿವಾಡಿ ಬಹಿರಂಗಪಡಿಸಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್
ಹೊಸ ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬೈಕಿನ ಚಿತ್ರಗಳು ಇತ್ತೀಚೆಗೆ ಆನ್ಲೈನ್ನಲ್ಲಿ ಬಹಿರಂಗವಾಗಿವೆ. ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬೈಕಿನಲ್ಲಿ ವೃತ್ತಕಾರದ ಹೆಡ್ ಲ್ಯಾಂಪ್, ಅಲಾಯ್ ವ್ಹೀಲ್ ಮತ್ತು ಬ್ಲ್ಯಾಕ್ ಔಟ್ ಎಕ್ಸಾಟ್ ಅನ್ನು ಹೊಂದಿದೆ. ರಾಯಲ್ ಎನ್ಫೀಲ್ಡ್ ಕಂಪನಿಯು ಥಂಡರ್ಬರ್ಡ್ ಎಕ್ಸ್ 350 ಬೈಕಿನ ಬದಲಾಗಿ ಹೊಸ ಮೆಟಿಯೋರ್ 350 ಬೈಕನ್ನು ಬಿಡುಗಡೆಗೊಳಿಸುತ್ತಿದೆ.
ಹೊಸ ಫೀಚರ್ಸ್ಗಳನ್ನು ಹೊರತುಪಡಿಸಿ ಈ ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬೈಕನ್ನು ಕೂಡ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಈ ಬೈಕಿನಲ್ಲಿ 346 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಫ್ರಿ ಕ್ಯಾಟಲಿಕ್ ಕರ್ನವಾಟರ್ ಅನ್ನು ಎಕ್ಸಾಸ್ಟ್ ಸಿಸ್ಟಂನೊಂದಿಗೆ ಜೋಡಿಸಲಾಗಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್ಪಲ್ಸ್ 200 ಬೈಕಿನ ಮಾಹಿತಿ
ಈ ಎಂಜಿನ್ ಉತ್ತಮ ಇಂಧನ ಧಕ್ಷತೆಯನು ಹೊಂದಿದೆ. ಪ್ರಸ್ತುತ ಟ್ಯಾಪೆಟ್-ವಾಲ್ವ್ ಯುಸಿಇ 346 ಸಿಸಿ ಎಂಜಿನ್ಗಳಿಗಿಂತ ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುತ್ತದೆ. ಪ್ರಸ್ತುತ ಬಿಎಸ್-4 ಪ್ರೇರಿತ 346 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಎಂಜಿನ್ 19.1 ಬಿಹೆಚ್ಪಿ ಪವರ್ ಮತ್ತು 28 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬೈಕಿನ ಮುಂಭಾಗಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಗಳನ್ನು ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಸೆಟಪ್ ಅನ್ನು ಒಳಗೊಂಡಿದೆ.ಈ ಬೈಕಿನಲ್ಲಿ ಸವಾರರ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಸುರಕ್ಷತೆಗಾಗಿ ಬೈಕಿನ ಮುಂಭಾಗದಲ್ಲಿ ಮತ್ತು ಹಿಂಭಾಗ ಟಯರ್ಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ.
MOST READ: ಜನಪ್ರಿಯ ಬಿಎಸ್-6 ಸ್ಪೋರ್ಟ್ ಬೈಕಿನ ಬೆಲೆ ಹೆಚ್ಚಿಸಿದ ಟಿವಿಎಸ್
ಇದರೊಂದಿಗೆ ಈ ಬೈಕಿನಲ್ಲಿ ಕಂಪನಿಯು ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಬಹುದು. ಮಾರುಕಟ್ಟೆಯಲ್ಲಿರುವ ಥಂಡರ್ಬರ್ಡ್ನಲ್ಲಿರುವ ಎಂಜಿನ್ ಹೆಚ್ಚಿನ ಪ್ರಮಾಣದ ವೈಬ್ರೆಷನ್ ಅನ್ನು ಹೊಂದಿದೆ.
ಹೊಸ ಬೈಕಿನಲ್ಲಿ ಅಳವಡಿಸಲಾಗುವ ಎಂಜಿನ್ ಹೊಸ ಟೆಕ್ನಾಲಜಿಯನ್ನು ಹೊಂದಿರಲಿದ್ದು, ವೈಬ್ರೆಷನ್ ಸಮಸ್ಯೆಯನ್ನು ಹೋಗಲಾಡಿಸಲಿದೆ. ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬೈಕ್ ಥಂಡರ್ಬರ್ಡ್ ಎಕ್ಸ್ 350 ಮಾದರಿಯ ರೆಟ್ರೂ-ಅರ್ಬನ್ ಕ್ರೂಸರ್ ವಿನ್ಯಾಸವನ್ನು ಹೊಂದಿದೆ.