ಥಂಡರ್‌ಬರ್ಡ್ ಎಕ್ಸ್ ಬದಲಾಗಿ ಬಿಡುಗಡೆಯಾಗಲು ಸಜ್ಜಾದ ಆರ್‌ಇ ಮೊಟೊರ್ 350

ಕರೋನಾ ವೈರಸ್ ಪರಿಣಾಮ ಹೊಸ ವಾಹನಗಳ ಬಿಡುಗಡೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದ್ದು, ರಾಯಲ್ ಎನ್‌ಫೀಲ್ಡ್ ಕಂಪನಿಯು ಬಿಡುಗಡೆ ಮಾಡಬೇಕಿದ್ದ ಹೊಸ ಮೊಟೊರ್ 350 ಬೈಕ್ ಮಾದರಿಯು ಕೂಡಾ ತಡವಾಗಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.

ಥಂಡರ್‌ಬರ್ಡ್ ಎಕ್ಸ್ ಬದಲಾಗಿ ಬಿಡುಗಡೆಯಾಗಲು ಸಜ್ಜಾದ ಆರ್‌ಇ ಮೊಟೊರ್

ಇದೇ ವರ್ಷದ ಜೂನ್ ಅಥವಾ ಜುಲೈನಲ್ಲಿ ಬಿಡುಗಡೆಯಾಗಬೇಕಿದ್ದ ಹೊಸ ಮೊಟೊರ್ 350 ಕ್ಲಾಸಿಕ್ ಬೈಕ್ ಮಾದರಿಯು ಇನ್ನಷ್ಟು ತಡವಾಗುವ ಸಾಧ್ಯತೆಗಳಿದ್ದು, ಹೊಸ ಬೈಕಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆ ಇದುವರೆಗೂ ಪೂರ್ಣಗೊಂಡಿಲ್ಲ. ಹೀಗಾಗಿ ಹೊಸ ಬೈಕಿನ ಉತ್ಪಾದನಾ ಆವೃತ್ತಿಯು ಇನ್ನಷ್ಟೇ ಸಿದ್ದಗೊಳ್ಳಬೇಕಿದ್ದು, ಇದೀಗ ಲಾಕ್‌ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದೆ.

ಥಂಡರ್‌ಬರ್ಡ್ ಎಕ್ಸ್ ಬದಲಾಗಿ ಬಿಡುಗಡೆಯಾಗಲು ಸಜ್ಜಾದ ಆರ್‌ಇ ಮೊಟೊರ್

ಮೊಟೊರ್ 350 ಕ್ಲಾಸಿಕ್ ಬೈಕ್ ಮಾದರಿಯು ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ಸ್ಥಗಿತಗೊಂಡಿರುವ ಥಂಡರ್‌ಬರ್ಡ್ ಎಕ್ಸ್ ಮಾದರಿಗಿಂತಲೂ ಹಲವು ಹೊಸ ಫೀಚರ್ಸ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಥಂಡರ್‌ಬರ್ಡ್ ಎಕ್ಸ್ ಬದಲಾಗಿ ಬಿಡುಗಡೆಯಾಗಲು ಸಜ್ಜಾದ ಆರ್‌ಇ ಮೊಟೊರ್

ಮೇಲ್ನೋಟಕ್ಕೆ ಮೊಟೊರ್ 350 ಬೈಕ್ ಮಾದರಿಯು ಥಂಡರ್‌ಬರ್ಡ್ ಎಕ್ಸ್ ಬೈಕ್ ಮಾದರಿಯ ಹೋಲಿಕೆಯಿದ್ದರೂ ಸಹ ತಾಂತ್ರಿಕವಾಗಿ ಸಾಕಷ್ಟು ಭಿನ್ನತೆಗಳನ್ನು ಹೊಂದಿದ್ದು, ಮಾಹಿತಿಗಳ ಪ್ರಕಾರ ಹೊಸ ಬೈಕ್ ಮುಂಬರುವ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ.

ಥಂಡರ್‌ಬರ್ಡ್ ಎಕ್ಸ್ ಬದಲಾಗಿ ಬಿಡುಗಡೆಯಾಗಲು ಸಜ್ಜಾದ ಆರ್‌ಇ ಮೊಟೊರ್

ಹೊಸ ಬೈಕಿನಲ್ಲಿ ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ವಿಚ್‌ಗೇರ್ ಫೀಚರ್ಸ್ ಹೊಂದಿರುವುದು ರೋಡ್ ಟೆಸ್ಟಿಂಗ್ ವೇಳೆ ಬಹಿರಂಗವಾಗಿದ್ದು, ವೃತ್ತಕಾರದ ಹೆಡ್‌ಲ್ಯಾಂಪ್, ಅಲಾಯ್ ವ್ಹೀಲ್ ಮತ್ತು ಬ್ಲ್ಯಾಕ್ ಔಟ್ ಎಕ್ಸಾಟ್ ಅನ್ನು ಹೊಂದಿದೆ.

ಥಂಡರ್‌ಬರ್ಡ್ ಎಕ್ಸ್ ಬದಲಾಗಿ ಬಿಡುಗಡೆಯಾಗಲು ಸಜ್ಜಾದ ಆರ್‌ಇ ಮೊಟೊರ್

ಹೊಸ ಫೀಚರ್ಸ್‍ಗಳನ್ನು ಹೊರತುಪಡಿಸಿ ಈ ರಾಯಲ್ ಎನ್‌ಫೀಲ್ಡ್ ಕಂಪನಿಯು ಮೊಟೊರ್ ಬೈಕ್ ಅನ್ನು ಕೂಡಾ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದ್ದು, ಹೊಸದಾಗಿ ಅಭಿವೃದ್ದಿಗೊಳಿಸಲಾದ 346-ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಥಂಡರ್‌ಬರ್ಡ್ ಎಕ್ಸ್ ಬದಲಾಗಿ ಬಿಡುಗಡೆಯಾಗಲು ಸಜ್ಜಾದ ಆರ್‌ಇ ಮೊಟೊರ್

346-ಸಿಸಿ ಏರ್ ಕೂಲ್ಡ್ ಎಂಜಿನ್ ಮಾದರಿಯು ಓವರ್ ಹೆಡ್ ಕ್ಯಾಮ್‌(OHC) ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಫೈವ್ ಸ್ಪೀಡ್ ಗೇರ್‌ಬಾಕ್ಸ್‌ ಮೂಲಕ 19.1-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಉತ್ತಮ ಮೈಲೇಜ್ ಪಡೆದುಕೊಂಡಿದೆ.

ಥಂಡರ್‌ಬರ್ಡ್ ಎಕ್ಸ್ ಬದಲಾಗಿ ಬಿಡುಗಡೆಯಾಗಲು ಸಜ್ಜಾದ ಆರ್‌ಇ ಮೊಟೊರ್

ಹೊಸ ಬೈಕಿನ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಬಾಬ್ಬರ್ ಸ್ಟೈಲ್‌ನಲ್ಲಿರುವ ಫ್ಯೂಲ್ ಟ್ಯಾಂಕ್, ಟೂರಿಂಗ್‌ಗೆ ಸಹಕಾರಿಯಾದ ಫ್ಲ್ಯಾಟ್ ಶೇಫ್ ಫುಟ್‌ಪೆಗ್ಸ್, ಅಗಲವಾದ ಕ್ರ್ಯಾಶ್‌ಗಾರ್ಡ್, ವೀಲ್ಡ್ ಸ್ಕ್ರೀನ್, ಫ್ರೇಮ್ ಗಾರ್ಡ್ ಹೊಂದಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಥಂಡರ್‌ಬರ್ಡ್ ಎಕ್ಸ್ ಬದಲಾಗಿ ಬಿಡುಗಡೆಯಾಗಲು ಸಜ್ಜಾದ ಆರ್‌ಇ ಮೊಟೊರ್

ಈ ಮೂಲಕ ಕ್ಲಾಸಿಕ್ ಬೈಕ್ ಮಾದರಿಯಲ್ಲೇ ಹೊಸ ರೈಡಿಂಗ್ ಅನುಭವ ನೀಡಲಿರುವ ಮೊಟೊರ್ 350 ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.65 ಲಕ್ಷ ಬೆಲೆ ಪಡೆದುಕೊಳ್ಳಬಹುದಾದ ಸಾಧ್ಯತೆಗಳಿದ್ದು, ದೂರದ ಪ್ರಯಾಣಕ್ಕೆ ಪೂರಕವಾದ ಹಲವಾರು ಹೊಸ ಅಂಶಗಳನ್ನು ಈ ಬೈಕಿನಲ್ಲಿವೆ.

Most Read Articles

Kannada
English summary
Royal Enfield Meteor Production Ready Model Spotted With Accessories. Read in Kannada.
Story first published: Wednesday, July 22, 2020, 19:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X