Just In
- 33 min ago
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- 1 hr ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 2 hrs ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 2 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
Don't Miss!
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- News
ಚುನಾವಣೆಗೂ ಮುನ್ನ ಅಮಿತ್ ಶಾ ಜೊತೆ ಇಪಿಎಸ್ ಮಹತ್ವದ ಚರ್ಚೆ
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದ ನಂತರ ಥೈಲ್ಯಾಂಡ್ನಲ್ಲೂ ಮಿಟಿಯೊರ್ 350 ಬಿಡುಗಡೆ ಮಾಡಿದ ರಾಯಲ್ ಎನ್ಫೀಲ್ಡ್
ರಾಯಲ್ ಎನ್ಫೀಲ್ಡ್ ಕಂಪನಿಯು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಪ್ರಮುಖ 50ಕ್ಕಿಂತಲೂ ಹೆಚ್ಚು ರಾಷ್ಟ್ರ ಮಾರಾಟ ಜಾಲವನ್ನು ಹೊಂದಿದ್ದು, ಹೊಸದಾಗಿ ಬಿಡುಗಡೆಯಾದ ಮಿಟಿಯೊರ್ 350 ಕ್ರೂಸರ್ ಬೈಕ್ ಮಾದರಿಯನ್ನು ವಿದೇಶಿ ಮಾರುಕಟ್ಟೆಗಳಲ್ಲೂ ಪರಿಚಯಿಸುವ ಮೂಲಕ ಹೊಸ ಬೈಕ್ ರಫ್ತು ಪ್ರಕ್ರಿಯೆಗೆ ಚಾಲನೆ ನೀಡಿದೆ.

ಭಾರತದಿಂದ ರಫ್ತುಗೊಳ್ಳುವ ಹೊಸ ವಾಹನಗಳಲ್ಲಿ ರಾಯಲ್ ಎನ್ಫೀಲ್ಡ್ ನಿರ್ಮಾಣದ ವಿವಿಧ ಬೈಕ್ ಮಾದರಿಗಳು ಮುಂಚೂಣಿಯಲ್ಲಿದ್ದು, ಕಂಪನಿಯು ದೇಶಿಯ ಮಾರುಕಟ್ಟೆಯಿಂದಲೇ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ರಫ್ತು ಕೈಗೊಳ್ಳುತ್ತದೆ. ಹೊಸದಾಗಿ ಬಿಡುಗಡೆಯಾಗಿರುವ ಮಿಟಿಯೊರ್ 350 ಬೈಕ್ ಮಾದರಿಯು ಸದ್ಯ ರಾಯಲ್ ಎನ್ಫೀಲ್ಡ್ ನಿರ್ಮಾಣದ ಇತರೆ ಬೈಕ್ ಮಾದರಿಗಳಿಂತಲೂ ಹೆಚ್ಚು ಆಕರ್ಷಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಕ್ರೂಸರ್ ಬೈಕ್ ಮಾದರಿಯು ನಿನ್ನೆಯಷ್ಟೇ ಥೈಲ್ಯಾಂಡ್ನಲ್ಲೂ ಬಿಡುಗಡೆಯಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿನ ಮಿಟಿಯೊರ್ 350 ಮಾದರಿಗಿಂತಲೂ ತುಸು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಥಾಯ್ ಮಾರುಕಟ್ಟೆಯಲ್ಲಿನ ಮಿಟಿಯೊರ್ 350 ಮಾದರಿಯು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ 1,50,000 ರಿಂದ 1,59,000 ಥಾಯ್ ಬಹ್ತ್ ಬೆಲೆ ಹೊಂದಿವೆ.

ಪ್ರೀಮಿಯಂ ಸೌಲಭ್ಯಗಳ ಜೊತೆಗೆ ರಫ್ತು ವಾಹನ ಮಾದರಿಯಾಗಿರುವುದರಿಂದ ಭಾರತೀಯ ಬೆಲೆಯಲ್ಲಿ ಮಿಟಿಯೊರ್ 350 ಬೈಕ್ ಮಾದರಿಯು ಥೈಲ್ಯಾಂಡ್ನಲ್ಲಿ ಆರಂಭಿಕವಾಗಿ ರೂ. 3.67 ಲಕ್ಷ ಮತ್ತು 3.90 ಲಕ್ಷ ಬೆಲೆ ಹೊಂದಿದ್ದು, ಭಾರತದಲ್ಲಿ ಹೊಸ ಬೈಕ್ ಬೆಲೆಯು ಆರಂಭಿಕವಾಗಿ ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ. 1.75 ಲಕ್ಷದಿಂದ ರೂ. 1.81 ಲಕ್ಷ ಬೆಲೆ ಪಡೆದುಕೊಂಡಿದೆ.

ಹೊಸ ಬೈಕ್ ಮಾದರಿಯು ಫೈರ್ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್ನೊವಾ ಎಂಬ ಮೂರು ವೆರಿಯೆಂಟ್ಗಳಲ್ಲಿ ಖರೀದಿಗೆ ಲಭ್ಯವಿದ್ದು, ಡಬಲ್ ಡೌನ್ಟ್ಯೂಬ್ ಕ್ರೆಡಲ್ ಫ್ರೇಮ್ ಮೇಲೆ ಅಭಿವೃದ್ದಿಗೊಂಡಿರುವ ಹೊಸ ಬೈಕ್ ಮಾದರಿಯು ಥಂಡರ್ಬರ್ಡ್ ಮಾದರಿಗಿಂತಲೂ ಹೆಚ್ಚು ಅರಾಮದಾಯಕ ರೈಡಿಂಗ್ ಒದಗಿಸಲಿದೆ. ಹೊಸ ಬೈಕಿನ ಮುಂಭಾಗದಲ್ಲಿ 41-ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟ್ವಿನ್ ಶಾಕ್ ಅಬ್ಸಾರ್ಬರ್ ನೀಡಲಾಗಿದೆ.

ಹೊಸ ಬೈಕಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಥಂಡರ್ಬರ್ಡ್ ಎಕ್ಸ್ ಮಾದರಿಗಿಂತಲೂ 6 ಕೆ.ಜಿ ಕಡಿಮೆ ತೂಕ ಹೊಂದಿರುವ ಹೊಸ ಮಿಟಿಯೊರ್ 350 ಬೈಕ್ ಮಾದರಿಯು 1,400-ಎಂಎಂ ವೀಲ್ಹ್ಬೆಸ್, 170-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದುಕೊಂಡಿದೆ. ಹೊಸ ಮಿಟಿಯೊರ್ 350 ಬೈಕ್ ಮಾದರಿಯು ಹೊಸದಾಗಿ ಅಭಿವೃದ್ದಿಗೊಳಿಸಲಾದ ಜೆ-ಸೀರಿಸ್ ಮಾದರಿಯ ಎಂಜಿನ್ ಬಳಕೆ ಮಾಡಲಾಗಿದ್ದು, ಹೊಸ ಎಂಜಿನ್ನಿಂದಾಗಿ ಬೈಕಿನ ವೈಬ್ರೆಷನ್ ಪ್ರಮಾಣವು ಸಾಕಷ್ಟು ಸುಧಾರಣೆಯಾಗಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಎಂಜಿನ್ ಮತ್ತು ಪರ್ಫಾಮೆನ್ಸ್
ಮಿಟಿಯೊರ್ 350 ಬೈಕ್ ಮಾದರಿಯು 349-ಸಿಸಿ ಫ್ಯೂಲ್ ಇಂಜೆಕ್ಷೆಡ್ ಸಿಂಗಲ್ ಸಿಲಿಂಡರ್ ಹೊಂದಿದ್ದು, 5-ಸ್ಪೀಡ್ ಗೇರ್ಬಾಕ್ಸ್ನೊಂದಿಗೆ 20.2-ಬಿಎಚ್ಪಿ ಮತ್ತು 27-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಮಿಟಿಯೊರ್ 350 ಆರಂಭಿಕ ಮಾದರಿಯಾದ ಫೈರ್ಬಾಲ್ನಲ್ಲಿ ಬ್ಲ್ಯಾಕ್ ಔಟ್ ಕಾಂಪೊನೆಟ್ಸ್, ಸಿಂಗಲ್ ಟೋನ್ ಗ್ರಾಫಿಕ್ಸ್ ನೊಂದಿಗೆ ಫ್ಯೂಯಲ್ ಟ್ಯಾಂಕ್, ಬ್ಲ್ಯಾಕ್ ಔಟ್ ಎಂಜಿನ್ ಮತ್ತು ಕಲರ್ ರಿಮ್ ಟೇಪ್ ಅಳವಡಿಸಲಾಗಿದ್ದು, ಎರಡನೇ ಮಾದರಿಯಾದ ಸ್ಟೆಲ್ಲಾರ್ ರೂಪಾಂತರದಲ್ಲಿ ಬ್ಯಾಡ್ಜ್ಗಳು, ಕ್ರೋಮ್ ಎಕ್ಸಾಸ್ಟ್, ಕ್ರೋಮ್ ಹ್ಯಾಂಡಲ್ಬಾರ್ ಮತ್ತು ಕ್ರೋಮ್ ಇಎಫ್ಐ ಕವರ್ ಪಡೆದುಕೊಂಡಿದ್ದು, ಇದರಲ್ಲಿ ಬ್ಯಾಕ್ ರೆಸ್ಟ್ ಸಹ ಒಳಗೂಂಡಿದೆ.
MOST READ: ಪ್ರತಿ ಚಾರ್ಜ್ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹೈ ಎಂಡ್ ಮಾದರಿಯಾದ ಸೂಪರ್ನೊವಾದಲ್ಲಿ ಡ್ಯುಯಲ್-ಟೋನ್ ಬಣ್ಣದ ಆಯ್ಕೆಯನ್ನು ಹೊಂದಿದ್ದು, ಇದು ಪ್ರೀಮಿಯಂ ಸೀಟ್ ಫಿನಿಶಿಂಗ್, ವಿಂಡ್ಸ್ಕ್ರೀನ್ ಮತ್ತು ಕ್ರೋಮ್ ಇಂಡಿಕೇಟರ್ ಸಹ ಹೊಂದಿದೆ. ಜೊತೆಗೆ ಹೊಸ ಬೈಕಿನಲ್ಲಿ ಟಿಪ್ಲರ್ ಸ್ಕ್ರೀನ್ ಒಳಗೊಂಡಿರುವ ಟರ್ನ್-ಬೈ-ಟರ್ನ್ ಗೂಗಲ್ ನ್ಯಾವಿಗೇಷನ್, ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ.