ಮತ್ತೆ ರಸ್ತೆಗಿಳಿಯಲಿವೆ ಜನಪ್ರಿಯ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ರಾಯಲ್ ಎನ್‍‍ಫೀಲ್ಡ್ ಕಂಪನಿಯ 500 ಸಿಸಿ ಬೈಕ್‍ಗಳು ಒಂದು ದಶಕಗಳ ಕಾಲ ಭಾರತದಲ್ಲಿ ಪಾರುಪತ್ಯ ಮೆರೆದಿವೆ. ಆದರೆ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವುದರಿಂದ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಸೆಗ್‍‍ಮೆಂಟ್‍ನ ಬೈಕ್‍ಗಳನ್ನು ಇತ್ತೀಚೆಗೆ ಸ್ಥಗಿತಗೂಳಿಸಲಾಗಿತ್ತು.

ಮತ್ತೆ ರಸ್ತೆಗಿಳಿಯಲಿವೆ ಜನಪ್ರಿಯ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ರಾಯಲ್ ಎನ್‍ಫೀಲ್ಡ್ ಕಂಪನಿಯು 350 ಸಿಸಿ ಮತ್ತು 650 ಸಿಸಿಗಳ ಸರಣಿಯ ಬೈಕುಗಳ ಉತ್ಪಾದನೆಯಲ್ಲಿ ನಿರತರಾಗಿದ್ದಾರೆ. ಇದರ ನಡುವೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಬೈಕನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಹೊಸ ಪ್ಲಾಟ್‌ಫಾರ್ಮ್‌ನ ಉದ್ದೇಶವು ಕಂಪನಿಯ ಹೆಚ್ಚು ಮಾರಾಟವಾಗುವ 350 ಸಿಸಿ ಮತ್ತು 650 ಸಿಸಿ ಮಾದರಿಗಳ ನಡುವಿನ ಅಂತರವನ್ನು ತುಂಬುವುದು. ಕಂಪನಿಯು ಇದಕ್ಕಾಗಿ ಈಗಿರುವ ಜಪ್ರಿಯ ಬೈಕಗಳನ್ನು ಉತ್ತಮವಾಗಿ ಅಭಿವೃದ್ದಿಪಡಿಸಬಹುದು.

ಮತ್ತೆ ರಸ್ತೆಗಿಳಿಯಲಿವೆ ಜನಪ್ರಿಯ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ರಾಯಲ್ ಎನ್‌ಫೀಲ್ಡ್ ಪ್ರಸ್ತುತ 350 ಸಿಸಿ ವಿಭಾಗದಲ್ಲಿ ಮಾರುಕಟ್ಟೆ ನಾಯಕರಾಗಿದ್ದು, 95 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಇನ್ನು ಜಾವಾ, ಬೆನೆಲ್ಲಿ, ಕವಾಸಕಿ, ಹೋಂಡಾ, ಟ್ರಯಂಫ್ ಮತ್ತು ಹಸ್ಕವರ್ನಾ ನಂತಹ ಸ್ಪರ್ಧಿಗಳು ಕೂಡ ಉತ್ತಮ ಪೈಪೋಟಿಯನ್ನು ನೀಡಲು ಪ್ರಯತ್ನಿಸುತ್ತಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಮತ್ತೆ ರಸ್ತೆಗಿಳಿಯಲಿವೆ ಜನಪ್ರಿಯ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ಭಾರತೀಯ ಮಾರುಕಟ್ಟೆಯಲ್ಲಿ ಇನ್ನಷ್ಟು ಗ್ರಾಹಕರನ್ನು ಸೆಳೆಯಲು ರಾಯಲ್ ಎನ್‍ಫೀಲ್ಡ್ ಕಂಪನಿಯು ಕ್ಲಾಸಿಕ್ 500 ಬೈಕನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಕಂಪನಿಯು 500ಸಿಸಿ ಸೆಗ್‍‍ಮೆಂಟ್‍ ಬೈಕು‍ಗಳ ನೆನಪಿಗಾಗಿ ತಯಾರಕ ಕಂಪನಿಯು ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಲಿಮೆಟೆಡ್ ಆವೃತ್ತಿಯನ್ನು ಕೊನೆಯದಾಗಿ ಬಿಡುಗಡೆಗೊಳಿಸಿದ್ದರು.

ಮತ್ತೆ ರಸ್ತೆಗಿಳಿಯಲಿವೆ ಜನಪ್ರಿಯ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ಈ ಲಿಮಿಟೆಡ್ ಎಡಿಷನ್ ಬೈಕ್ 500 ಸಿಸಿ ಲಾಂಗ್ ಸ್ಪೋಕ್ ಸಿಂಗಲ್ ಸಿಲಿಂಡರ್ ಯುಸಿ‍ಇ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5,250 ಆರ್‍‍ಪಿ‍ಎಂನಲ್ಲಿ 27.2 ಬಿಹೆಚ್‍ಪಿ ಪವರ್ ಮತ್ತು 4,000 ಆರ್‍‍ಪಿಎಂನಲ್ಲಿ 41.3 ಎನ್‍ಎಂ ಟಾಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಮತ್ತೆ ರಸ್ತೆಗಿಳಿಯಲಿವೆ ಜನಪ್ರಿಯ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ಇದರೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ರಾಯಲ್ ಎನ್‍‍ಫೀಲ್ಡ್ 500 ಸೆಗ್‍‍ಮೆಂಟ್‍‍ನ ನೆನೆಪಿಗಾಗಿ ಬಿಡುಗಡೆಗೊಳಿಸಿದ ಕಾರಣ ಕೊನೆಯ ಬೈಕ್ ಅನ್ನು ಲಿಮಿಡೆಡ್ ಎಡಿಷನ್ ಆಗಿ ಬಿಡುಗಡೆಗೊಳಿಸಿದ್ದರು.

ಮತ್ತೆ ರಸ್ತೆಗಿಳಿಯಲಿವೆ ಜನಪ್ರಿಯ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ಈ ಬೈಕ್ ಡ್ಯುಯಲ್ ಟೋನ್ ಮ್ಯಾಟ್ ಅಂಡ್ ಗ್ಲೋಸ್ ಬ್ಲ್ಯಾಕ್ ಬಣ್ಣವನ್ನು ಹೊಂದಿತ್ತು. ಈ ಬೈಕಿನಲ್ಲಿ ಮುಂಭಾಗ ಮತ್ತು ಹಿಂಭಾಗದ ಫೆಂಡರ್‍‍ಗಳಲ್ಲಿ, ರಿಮ್ಸ್ ಸುತ್ತಲೂ ಮತ್ತು ಫ್ಯೂಯಲ್ ಟ್ಯಾಂಕಿನಲ್ಲಿ ಆರೇಂಜ್ ಬಣ್ಣ‍ಗಳನ್ನು ಹೊಂದಿತ್ತು.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಮತ್ತೆ ರಸ್ತೆಗಿಳಿಯಲಿವೆ ಜನಪ್ರಿಯ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕ್ಲಾಸಿಕ್ 500 ಬೈಕ್ ಅನ್ನು 2008ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಬೈಕ್ ರಾಯಲ್ ಎನ್‍‍ಫೀಲ್ಡ್ ಸರಣಿಯಲ್ಲಿರುವ ಯಶಸ್ವಿ ಬೈಕ್‍‍ಗಳಲ್ಲಿ ಒಂದಾಗಿದೆ.

ಮತ್ತೆ ರಸ್ತೆಗಿಳಿಯಲಿವೆ ಜನಪ್ರಿಯ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ರಾಯಲ್ ಎನ್‍ಫೀಲ್ಡ್ ಯುವಕರ ಕನಸಿನ ಬೈಕ್. ರಾಯಲ್ ಎನ್‍ಫೀಲ್ಡ್ ತನ್ನ ವಿಶಿಷ್ಟವಾದ ಲುಕ್ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್. ಆರೇಳು ದಶಕಗಳಿಂದಲೂ ಅದೇ ಕ್ರೇಜ್‌, ಅದೇ ಟ್ರೆಂಡ್‌ ಉಳಿಸಿಕೊಂಡು ಬಂದಿರುವುದು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಹೆಗ್ಗಳಿಕೆ.

Most Read Articles

Kannada
English summary
New Gen Royal Enfield Classic 500 likely to be launched in 2021. Read In Kannada.
Story first published: Monday, June 1, 2020, 19:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X