ಕರೋನಾ ವೈರಸ್ ಎಫೆಕ್ಟ್: ಕಚೇರಿಗಳಿಗೆ ಬೀಗ ಜಡಿದ ರಾಯಲ್ ಎನ್‌ಫೀಲ್ಡ್

ಚೀನಾದಿಂದ ಹರಡಲಾರಂಭಿಸಿದ ಕರೋನಾ ವೈರಸ್‌ ಜಗತ್ತಿನಾದ್ಯಂತ ಆತಂಕ ಹುಟ್ಟಿಸಿದೆ. ಜಗತ್ತನ್ನೇ ತಲ್ಲಣಗೊಳಿಸಿರುವ ಕರೋನಾ ವೈರಸ್‌ ಆಟೋಮೊಬೈಲ್ ಕ್ಷೇತ್ರಕ್ಕೂ ಕೂಡ ತನ್ನ ಕರಿಛಾಯೆಯನ್ನು ಬೀರಿದೆ.

ಕರೋನಾ ವೈರಸ್ ಎಫೆಕ್ಟ್: ಕಚೇರಿಗಳಿಗೆ ಬೀಗ ಜಡಿದ ರಾಯಲ್ ಎನ್‌ಫೀಲ್ಡ್

ಕರೋನಾ ವೈರಸ್ ನಿಂದ ಜನಪ್ರಿಯ ಬೈಕು ಉತ್ಪಾದನಾ ಸಂಸ್ಥೆಯಾಗಿರುವ ರಾಯಲ್ ಎನ್‍ಫೀಲ್ಡ್ ಕಂಪನಿಯ ಮೇಲೆಯು ದೊಡ್ಡ ಪರಿಣಾಮವನ್ನು ಬೀರಿದೆ. ರಾಯಲ್ ಎನ್‌ಫೀಲ್ಡ್ ಗುರುಗ್ರಾಮ್‌ನಲ್ಲಿರುವ ತನ್ನ ಕಾರ್ಪೊರೇಟ್ ಕಚೇರಿ ಸೇರಿದಂತೆ 12 ಪ್ರಾದೇಶಿಕ ಕಚೇರಿಗಳನ್ನು ಮುಚ್ಚಲು ನಿರ್ಧರಿಸಿದೆ. ಈ ಸುದ್ದಿಯನ್ನು ರಾಯಲ್ ಎನ್‍ಫೀಲ್ಡ್ ಕಂಪನಿಯು ಖಚಿತಪಡಿಸಿದೆ. ದೇಶಾದ್ಯಂತ ರಾಯಲ್ ಎನ್‌ಫೀಲ್ಡ್ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸಲಿದೆ ಎಂದು ಹೇಳಿದೆ.

ಕರೋನಾ ವೈರಸ್ ಎಫೆಕ್ಟ್: ಕಚೇರಿಗಳಿಗೆ ಬೀಗ ಜಡಿದ ರಾಯಲ್ ಎನ್‌ಫೀಲ್ಡ್

ಗುರುಗ್ರಾಮ್, ಚೆನ್ನೈ, ಬೆಂಗಳೂರು, ಮುಂಬೈ, ಜಾರ್ಖಂಡ್, ಹೈದರಾಬಾದ್, ಭುವನೇಶ್ವರ ಮತ್ತು ಇತರ ಭಾಗದಲ್ಲಿರುವ ರಾಯಲ್ ಎನ್‌ಫೀಲ್ಡ್ ಕಚೇರಿಗಳನ್ನು ತಕ್ಷಣವೇ ಮುಚ್ಚಲಾಗುತ್ತದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಕರೋನಾ ವೈರಸ್ ಎಫೆಕ್ಟ್: ಕಚೇರಿಗಳಿಗೆ ಬೀಗ ಜಡಿದ ರಾಯಲ್ ಎನ್‌ಫೀಲ್ಡ್

ಇದು ರಾಯಲ್ ಎನ್‌ಫೀಲ್ಡ್ ಕಂಪನಿಯ ವೆಚ್ಚ ಕಡಿತ ತಂತ್ರದ ಒಂದು ಭಾಗವಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಒಂದು ತಂಡವು ಉಳಿದ ಆರ್‌ಒ (ಪ್ರಾದೇಶಿಕ ಕಚೇರಿ) ಸ್ಥಳಗಳಿಲ್ಲಿ ರೂಪಿಸಿದ ನಿಯಮಗಳ ಬಗ್ಗೆ ಮರು ಮಾತುಕತೆ ನಡೆಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಕರೋನಾ ವೈರಸ್ ಎಫೆಕ್ಟ್: ಕಚೇರಿಗಳಿಗೆ ಬೀಗ ಜಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್‌ನ ಚೀಫ್ ಕಮರ್ಷಿಯಲ್ ಆಫೀಸರ್ ಲಲಿತ್ ಮಲಿಕ್ ಅವರು ಮಾತನಾಡಿ, ಯಂತ್ರಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡಬೇಕಾದ ಜನರನ್ನು ಹೊರತುಪಡಿಸಿ ಉಳಿದವರು ಮನೆಯಿಂದಲೇ ಕೆಲಸ ಮಾಡಬಹುದಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಕರೋನಾ ವೈರಸ್ ಎಫೆಕ್ಟ್: ಕಚೇರಿಗಳಿಗೆ ಬೀಗ ಜಡಿದ ರಾಯಲ್ ಎನ್‌ಫೀಲ್ಡ್

ಕಚೇರಿಯಲಿ ಕೆಲಸ ಮಾಡುವವರು ಮನೆಯಲ್ಲಿ ಕೆಲಸ ಮಾಡಬಹುದಾಗಿದೆ. ಇಲ್ಲದಿದ್ದರೆ ನೌಕರರು ಸಾಕಷ್ಟು ಪ್ರಯಾಣವನ್ನು ಬೆಳೆಸಬೇಕಾಗುತ್ತದೆ. ಅದರ ಬದಲು ಮನೆಯಿಂದಲೇ ಕೆಲಸ ಮಾಡಬಹುದಾಗಿದೆ ಎಂದು ಅವರು ಹೇಳಿದರು.

ಕರೋನಾ ವೈರಸ್ ಎಫೆಕ್ಟ್: ಕಚೇರಿಗಳಿಗೆ ಬೀಗ ಜಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಮೆಟಿಯೋರ್ 350 ಫೈರ್‌ಬಾಲ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಫೈರ್‌ಬಾಲ್ ಬಹುನಿರೀಕ್ಷಿತ ಬೈಕುಗಳಲ್ಲಿ ಒಂದಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಕರೋನಾ ವೈರಸ್ ಎಫೆಕ್ಟ್: ಕಚೇರಿಗಳಿಗೆ ಬೀಗ ಜಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಮೆಟಿಯೋರ್ 350 ಫೈರ್‌ಬಾಲ್ ಬೈಕನ್ನು ಮುಂದಿನ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳಾಗಿದೆ. ಅಲ್ಲದೇ ಮುಂದಿನ ತಿಂಗಳು ಶೋರೂಂಗಳಿಗೆ ಈ ಹೊಸ ಬೈಕ್ ತಲುಪಲಿದೆ. ಹೊಸ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಫೈರ್‌ಬಾಲ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.65 ಲಕ್ಷಗಳಾಗಿರಲಿದೆ.

ಕರೋನಾ ವೈರಸ್ ಎಫೆಕ್ಟ್: ಕಚೇರಿಗಳಿಗೆ ಬೀಗ ಜಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ 12 ಕಚೇರಿಗಳನ್ನು ಮುಚ್ಚಳು ನಿರ್ಧರಿಸಿದೆ. ಇದು ವೆಚ್ಚ ಕಡಿತಗೊಳಿಸುವುದಕ್ಕಾಗಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Royal Enfield To Shut Down Several Regional Offices Amidst COVID-19. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X