Just In
Don't Miss!
- Movies
KSRTC ಬಸ್ಸಿನಲ್ಲಿ ನಿರ್ಮಾಣವಾದ ವಿಶೇಷ ಸ್ತ್ರೀ ಶೌಚಾಲಯ ಪರಿಶೀಲಿಸಿದ ನಟಿ ಶ್ರುತಿ
- News
ಕಬ್ಬನ್ ಉದ್ಯಾನ ವ್ಯಾಪ್ತಿಯಲ್ಲಿ ನಿಯಮಬಾಹಿರ ಕಟ್ಟಡ ನಿರ್ಮಾಣ: ನೋಟಿಸ್
- Lifestyle
ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಈ ಆಹಾರಗಳನ್ನು ಸೇವಿಸುವುದನ್ನು ಮರೆಯಬೇಡಿ..
- Sports
ಹೊಸ ಪರೀಕ್ಷೆಗೆ ಒಳಗಾಗಬೇಕು ಕ್ರಿಕೆಟ್ ತಾರೆಯರು: 8.30 ನಿಮಿಷದಲ್ಲಿ 2 ಕಿ.ಮೀ ಗುರಿ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇಂಡಿಯನ್ ಸ್ಕೌಟ್ ಬೈಕಿನಂತೆ ಮಾಡಿಫೈಗೊಂಡ ಥಂಡರ್ ಬರ್ಡ್
ಚೆನ್ನೈ ಮೂಲದ ರಾಯಲ್ ಎನ್ಫೀಲ್ಡ್ ಕಂಪನಿಯ ಜನಪ್ರಿಯ ಬೈಕುಗಳಲ್ಲಿ ಥಂಡರ್ ಬರ್ಡ್ ಕೂಡ ಒಂದು. ಯುವಕನೊಬ್ಬ ಈ ಬೈಕನ್ನು ಹೆಚ್ಚು ವೆಚ್ಚ ಮಾಡಿ ಇಂಡಿಯನ್ ಕಂಪನಿಯ ಸ್ಕೌಟ್ ಬೈಕಿನಂತೆ ಬದಲಿಸಿದ್ದಾನೆ.

ಇತ್ತೀಚಿನ ದಿನಗಳಲ್ಲಿ ರಾಯಲ್ ಎನ್ಫೀಲ್ಡ್ ಕಂಪನಿಯ ಬೈಕುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿಫೈಗೊಳಿಸಲಾಗುತ್ತಿದೆ. ಇದೇ ರೀತಿ ಹೊಸ ಥಂಡರ್ ಬರ್ಡ್ ಬೈಕ್ ಅನ್ನು ಮಾಡಿಫೈಗೊಳಿಸಿ ಸ್ಕೌಟ್ ಬೈಕಿನ ಲುಕ್ ನೀಡಲಾಗಿದೆ. ಈ ಹೊಸ ಲುಕ್ ನೀಡಲು ಬೈಕಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಅಲಾಯ್ ವ್ಹೀಲ್, ಎಕ್ಸಾಸ್ಟ್ ಸೇರಿದಂತೆ ಹಲವಾರು ಬಿಡಿ ಭಾಗಗಳನ್ನು ತೆಗೆದುಹಾಕಿ ಹೊಸ ಬಿಡಿ ಭಾಗಗಳನ್ನು ಅಳವಡಿಸಲಾಗಿದೆ. ರಾಯಲ್ ಎನ್ಫೀಲ್ಡ್ ಥಂಡರ್ ಬರ್ಡ್ ಬೈಕಿನ ಆಕಾರದಲ್ಲಿ ಆಗಿರುವ ಬದಲಾವಣೆಗೆ ಇವು ಮುಖ್ಯ ಕಾರಣಗಳಾಗಿವೆ.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಬೈಕ್ನ ಮುಂಭಾಗದಲ್ಲಿ ಕಪ್ಪು ಅಲಾಯ್ ವ್ಹೀಲ್, ವ್ಹೀಲ್ ನಲ್ಲಿ 150 ಸೆಕ್ಷನ್ ಟಯರ್ ಗಳು, ಟ್ವಿನ್ ಡಿಸ್ಕ್ ಬ್ರೇಕ್ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಕಸ್ಟಮೈಸ್ ಮಾಡಿದ ಮಾಡ್ಯೂಲ್ಗಳನ್ನು ಅಳವಡಿಸಲಾಗಿದೆ. ಬೈಕಿನ ಎತ್ತರವನ್ನು ಬದಲಿಸಲು ಫ್ರಂಟ್ ಫೋರ್ಕ್ ಅನ್ನು ಬದಲಿಸಲಾಗಿದೆ.

ಮುಂಭಾಗದಲ್ಲಿರುವ ಎಲ್ಇಡಿ ಹೆಡ್ಲ್ಯಾಂಪ್, ಇಂಡಿಕೇಟರ್ ಲೈಟ್ಗಳ ಸಹಾಯದಿಂದ ಬೈಕ್ ಅನ್ನು ಮತ್ತೊಂದು ಹಂತಕ್ಕೆ ಅಪ್ಗ್ರೇಡ್ ಮಾಡಲಾಗಿದೆ. ಇದಲ್ಲದೆ, ಈ ಶೈಲಿಯನ್ನು ಮತ್ತಷ್ಟು ಹೆಚ್ಚಿಸಲು ಫಾರ್ವರ್ಡ್ ಫೂಟ್ ಪೆಗ್ಸ್ ಸೇರಿದಂತೆ ಸಿಂಗಲ್ ಪೀಸ್ ಹ್ಯಾಂಡಲ್ಗಳನ್ನು ಬಳಸಲಾಗಿದೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಇವುಗಳ ಜೊತೆಗೆ ರಿಫ್ಯೂಯಲಿಂಗ್ ಟ್ಯಾಂಕ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ನೀಡಲಾಗಿದೆ. ಈ ಬೈಕಿನಲ್ಲಿರುವ ಅಗಲವಾದ ಫ್ಯೂಯಲ್ ಟ್ಯಾಂಕ್ ಈ ಬೈಕಿಗೆ ಬಾಬರ್ ಸ್ಕೌಟ್ ಲುಕ್ ನೀಡುತ್ತದೆ.

ಈ ಫ್ಯೂಯಲ್ ಟ್ಯಾಂಕ್ ಭಾರತದ ಇತರ ಬೈಕ್ ಗಳಲ್ಲಿರುವಂತಹ ಫ್ಯೂಯಲ್ ಟ್ಯಾಂಕ್ ರೀತಿಯಲ್ಲಿದೆ. ಬೈಕಿನ ಎಂಜಿನ್ ರಕ್ಷಣೆಗಾಗಿ ವಿ ಶೇಪಿನ ಶೀಲ್ಡ್ ಬಳಸಲಾಗಿದೆ. ಸಿಂಗಲ್-ಸಿಲಿಂಡರ್ ಎಂಜಿನ್ ಗೆ ಎರಡು-ಪೈಪ್ ಫ್ಲೂಗಳನ್ನು ಅಳವಡಿಸಲಾಗಿದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಈ ಟ್ಯೂಬ್ ಗಳ ಕೊನೆಯಲ್ಲಿ ಸಿಲ್ವರ್ ಕೋಟೆಡ್ ರಿಂಗ್ ಗಳನ್ನು ಅಳವಡಿಸಲಾಗಿದೆ. ಈ ರಿಂಗ್ ಗಳು ಎಕ್ಸಾಸ್ಟ್ ಗೆ ಒರಟು ಲುಕ್ ನೀಡುತ್ತವೆ. ಜೊತೆಗೆ ಈ ಬೈಕ್ ಹೊರಸೂಸುವ ಶಬ್ದವನ್ನು ಆನಂದಿಸುವಂತೆ ಮಾಡುತ್ತವೆ. ಆದರೆ ಈ ಎಕ್ಸಾಸ್ಟ್, ರಾಯಲ್ ಎನ್ಫೀಲ್ಡ್ ಬೈಕ್ಗಳು ಉಂಟು ಮಾಡುವ ವಿಶಿಷ್ಟವಾದ ಶಬ್ದವನ್ನುಂಟು ಮಾಡುವುದಿಲ್ಲ.

ಈ ಬೈಕಿನಲ್ಲಿ ಅಳವಡಿಸಲಾಗಿರುವ ಉದ್ದವಾಗಿರುವ ಸಿಂಗಲ್ ಸೀಟ್ ನಲ್ಲಿ ಇಬ್ಬರೂ ಕುಳಿತುಕೊಳ್ಳಬಹುದು. ಇಬ್ಬರು ಕುಳಿತುಕೊಂಡರೆ ಹತ್ತಿರ ಕುಳಿತುಕೊಳ್ಳಬೇಕಾಗುತ್ತದೆ. ಇದು ಬೈಕ್ ಸವಾರಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಹಿಂಭಾಗದಲ್ಲಿ ಸ್ವಲ್ಪ ಅಗಲವಾಗಿರುವ 250 ಎಂಎಂ ಟಯರ್ ಅಳವಡಿಸಲಾಗಿದೆ. ಹಿಂಭಾಗದ ವ್ಹೀಲ್ ನಲ್ಲಿ ಡಿಸ್ಕ್ ಬ್ರೇಕ್ ಸಹ ಅಳವಡಿಸಲಾಗಿದೆ. ಮಾಡಿಫೈಗೊಂಡ ಈ ಬೈಕ್ ಪೂರ್ತಿಯಾಗಿ ಕಪ್ಪು ಬಣ್ಣವನ್ನು ಹೊಂದಿದೆ.
ಬೈಕಿನ ಮೂಲ ಸ್ವರೂಪವನ್ನು ಮರೆಮಾಡಲು ಇಂಡಿಯನ್ ಹಾಗೂ ಸ್ಕೌಟ್ ಬ್ಯಾಡ್ಜ್ಗಳನ್ನು ಅಳವಡಿಸಲಾಗಿದೆ. ಈ ಬೈಕಿನಲ್ಲಿ ಬಹುತೇಕ ಹ್ಯಾಂಡ್ ಕ್ರಾಫ್ಟೆಡ್ ಮೆಟಿರಿಯಲ್ ಗಳನ್ನು ಅಳವಡಿಸಲಾಗಿದೆ. ಈ ಬೈಕಿನ ಮಾಡಿಫಿಕೇಶನ್ ಗಾಗಿ ರೂ.12 ಲಕ್ಷ ಖರ್ಚು ಮಾಡಲಾಗಿದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ದೆಹಲಿ ಮೂಲದ ಪಿಟ್ಟೋ ಬೈಕ್ ಮಾಡಿಫಿಕೇಶನ್ / ವ್ಯಾಂಪ್ ವೀಡಿಯೊ ಈ ಬೈಕ್ ಅನ್ನು ಮಾಡಿಫೈಗೊಳಿಸಿದೆ. ಮಾಡಿಫೈಗೊಂಡ ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ್ ಬೈಕ್ ಈಗ ಇಂಡಿಯನ್ ಬೈಕಿನಂತಯೇ ಇದೆ.