ರೂ.3 ಲಕ್ಷ ಬೆಲೆಯ ಆರ್‌ಸಿ 900 ಸೈಕಲ್ ಬಿಡುಗಡೆಗೊಳಿಸಿದ ಸ್ಕಾಟ್ ಸ್ಪಾರ್ಕ್

ಕರೋನಾ ವೈರಸ್ ನಂತರ ಭಾರತದಲ್ಲಿ ಸೈಕಲ್ ಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಹಲವು ಕಂಪನಿಗಳು ತಮ್ಮ ಸೈಕಲ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ.

ರೂ.3 ಲಕ್ಷ ಬೆಲೆಯ ಆರ್‌ಸಿ 900 ಸೈಕಲ್ ಬಿಡುಗಡೆಗೊಳಿಸಿದ ಸ್ಕಾಟ್ ಸ್ಪಾರ್ಕ್

ಈಗ ಸ್ಕಾಟ್ ಸ್ಪಾರ್ಕ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಸೈಕಲ್ ಅನ್ನು ಬಿಡುಗಡೆಗೊಳಿಸಿದೆ. ಸ್ಕಾಟ್ ಸ್ಪಾರ್ಕ್ ಕಂಪನಿಯು ಆರ್‌ಸಿ 900 ಎಂಬ ಹೆಸರಿನ ಸೈಕಲ್ ಅನ್ನು ಬಿಡುಗಡೆಗೊಳಿಸಿದೆ. ಈ ಆಧುನಿಕ ಕ್ರಾಸ್ ಕಂಟ್ರಿ ಸೈಕಲಿನ ಬೆಲೆ ರೂ.3.70 ಲಕ್ಷಗಳಾಗಿದೆ. ಈ ಬೆಲೆಯು ಭಾರತದಲ್ಲಿ ಮಾರಾಟವಾಗುವ ಪ್ರೀಮಿಯಂ ಬೈಕ್‌ಗಳ ಬೆಲೆಗೆ ಸಮನಾಗಿದೆ.

ರೂ.3 ಲಕ್ಷ ಬೆಲೆಯ ಆರ್‌ಸಿ 900 ಸೈಕಲ್ ಬಿಡುಗಡೆಗೊಳಿಸಿದ ಸ್ಕಾಟ್ ಸ್ಪಾರ್ಕ್

ಈ ಸೈಕಲ್ ಬೈಕುಗಳಲ್ಲಿರುವಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ. ಈ ಸೈಕಲ್ ನಲ್ಲಿ ಬೈಕ್ ಗಳಲ್ಲಿರುವಂತಹ ಸಸ್ಪೆಂಷನ್ ಅಳವಡಿಸಲಾಗಿದೆ. ಇದರ ಜೊತೆಗೆ ವಿವಿಧ ಫೀಚರ್ ಗಳನ್ನು ಹೊಂದಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ರೂ.3 ಲಕ್ಷ ಬೆಲೆಯ ಆರ್‌ಸಿ 900 ಸೈಕಲ್ ಬಿಡುಗಡೆಗೊಳಿಸಿದ ಸ್ಕಾಟ್ ಸ್ಪಾರ್ಕ್

ಸ್ಪಾರ್ಕ್ ಆರ್‌ಸಿ 900 ಸೈಕಲ್ ನಲ್ಲಿ ಟ್ವಿನ್ ಲಾಕ್ ಸಸ್ಪೆಂಷನ್ ಸಿಸ್ಟಂ ಬಳಸಲಾಗಿದೆ. ಇದರ ಜೊತೆಗೆ 12-ಸ್ಪೀಡ್ ಸ್ಟ್ರೀಮ್ ಈಗಲ್ ಡ್ರೈವ್‌ಟ್ರೇನ್, ಶಿಮಾನೋ ಬ್ರೇಕ್, ಸಿಂಕ್ರೊಸ್ ಯುನಿಟ್ ಗಳನ್ನು ಈ ಸೈಕಲ್ ನಲ್ಲಿ ಅಳವಡಿಸಲಾಗಿದೆ. ಈ ಎಲ್ಲಾ ಫೀಚರ್ ಗಳು ಈ ಸೈಕಲ್ ಅನ್ನು ಟಾಪ್ ಎಂಡ್ ರೇಸ್ ಬೈಕಿನಂತೆ ಮಾಡಿವೆ.

ರೂ.3 ಲಕ್ಷ ಬೆಲೆಯ ಆರ್‌ಸಿ 900 ಸೈಕಲ್ ಬಿಡುಗಡೆಗೊಳಿಸಿದ ಸ್ಕಾಟ್ ಸ್ಪಾರ್ಕ್

ಸ್ಕಾಟ್ ಕಂಪನಿಯ ಪ್ರಕಾರ, ಸ್ಪಾರ್ಕ್ ಆರ್‌ಸಿ 900 ಸೈಕಲ್ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದಿದೆ. ಈ ಸೈಕಲ್ ವಿಶ್ವಕಪ್ ಚಾಂಪಿಯನ್ ಹಾಗೂ ಒಲಿಂಪಿಕ್ ಚಾಂಪಿಯನ್ ಪ್ರಶಸ್ತಿಗಳನ್ನು ಜಯಿಸಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ರೂ.3 ಲಕ್ಷ ಬೆಲೆಯ ಆರ್‌ಸಿ 900 ಸೈಕಲ್ ಬಿಡುಗಡೆಗೊಳಿಸಿದ ಸ್ಕಾಟ್ ಸ್ಪಾರ್ಕ್

ಈ ಸೈಕಲ್ ಬಿಡುಗಡೆಯ ನಂತರ ಮಾತನಾಡಿದ ಸ್ಕಾಟ್ ಸ್ಪೋರ್ಟ್ಸ್ ಇಂಡಿಯಾದ ಮ್ಯಾನೇಜರ್ ಜೈಮ್ ಶಾರವರು ವಿಶ್ವದಾದ್ಯಂತ ಪ್ರೀಮಿಯಂ ಸೈಕಲ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಟೆಕ್ನಾಲಜಿ ಹಾಗೂ ಪರ್ಫಾಮೆನ್ಸ್ ನಲ್ಲಿ ಈ ಸೈಕಲ್ ಹಲವು ಪಟ್ಟು ಉತ್ತಮವಾಗಿದೆ ಎಂದು ಹೇಳಿದರು.

ರೂ.3 ಲಕ್ಷ ಬೆಲೆಯ ಆರ್‌ಸಿ 900 ಸೈಕಲ್ ಬಿಡುಗಡೆಗೊಳಿಸಿದ ಸ್ಕಾಟ್ ಸ್ಪಾರ್ಕ್

ಕಂಪನಿಯು ಹೊಸದಾಗಿ ಬಿಡುಗಡೆಗೊಳಿಸಿದ ಸೈಕಲ್‌ ಮಾರಾಟಕ್ಕಾಗಿ ಡೀಲರ್ ಗಳನ್ನು ನೇಮಿಸಿದೆ. ಇದರ ಜೊತೆಗೆ ಕಂಪನಿಯು ಕ್ರೀಡಾ ವ್ಯವಹಾರದಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳ ಜೊತೆಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ರೂ.3 ಲಕ್ಷ ಬೆಲೆಯ ಆರ್‌ಸಿ 900 ಸೈಕಲ್ ಬಿಡುಗಡೆಗೊಳಿಸಿದ ಸ್ಕಾಟ್ ಸ್ಪಾರ್ಕ್

ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಗ್ರಾಹಕರನ್ನು ಸ್ವಾಗತಿಸುತ್ತಿದೆ. ಈ ಸೈಕಲ್ ಲಾಂಗ್ ರೈಡ್ ಗಳಿಗೆ ಹಾಗೂ ಟ್ರೆಕ್ಕಿಂಗ್ ಗಳಿಗೆ ಸೂಕ್ತವಾಗಿದೆ ಎಂದು ಹೇಳಲಾಗಿದೆ.

ರೂ.3 ಲಕ್ಷ ಬೆಲೆಯ ಆರ್‌ಸಿ 900 ಸೈಕಲ್ ಬಿಡುಗಡೆಗೊಳಿಸಿದ ಸ್ಕಾಟ್ ಸ್ಪಾರ್ಕ್

ಈ ಸೈಕಲ್ ಚಾಲನೆ ಮಾಡುವ ಸವಾರನು ಅನೇಕ ಕಿ.ಮೀ ಚಲಿಸಿದರೂ ವಿಶ್ರಾಂತಿ ಪಡೆಯುವುದಿಲ್ಲ ಎಂದು ಹೇಳಲಾಗಿದೆ. ಇದಕ್ಕಾಗಿ ಸೈಕಲ್ ನಲ್ಲಿ ವಿಶೇಷ ಫೀಚರ್ ಗಳನ್ನು ಅಳವಡಿಸಲಾಗಿದೆ. ಈ ಕಾರಣಕ್ಕೆ ಈ ಸೈಕಲಿಗೆ ರೂ. 3.70 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ರೂ.3 ಲಕ್ಷ ಬೆಲೆಯ ಆರ್‌ಸಿ 900 ಸೈಕಲ್ ಬಿಡುಗಡೆಗೊಳಿಸಿದ ಸ್ಕಾಟ್ ಸ್ಪಾರ್ಕ್

ಹೊಸ ಸ್ಕಾಟ್ ಸ್ಪಾರ್ಕ್ ಆರ್‌ಸಿ 900 ಕ್ರಾಸ್ ಕಂಟ್ರಿ ಸೈಕಲಿನ ನಂತರ ಸ್ಕಾಟ್ ಕಂಪನಿಯು ಸ್ಪಾರ್ಕ್ ಸ್ಕಾಟ್ ಅಟ್ಟಿಕ್ ಆರ್‌ಸಿ ಸರಣಿಯಲ್ಲಿ ಹೊಸ ಸೈಕಲ್ ಗಳನ್ನು ಬಿಡುಗಡೆಗೊಳಿಸಲು ಬಯಸಿದೆ. ಈ ಸೈಕಲ್ ಗಳ ಬೆಲೆ ರೂ.5 ಲಕ್ಷದಿಂದ ರೂ.6 ಲಕ್ಷಗಳವರೆಗೆ ಇರುವ ಸಾಧ್ಯತೆಗಳಿವೆ. ಇದನ್ನು ಕಂಪನಿಯ ವ್ಯವಸ್ಥಾಪಕ ಜಮಿನ್ ಶಾ ಖಚಿತಪಡಿಸಿದ್ದಾರೆ.

Most Read Articles

Kannada
English summary
Scott Spark company launches RC 900 bicycle in India. Read in Kannada.
Story first published: Sunday, September 20, 2020, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X