ಶೀಘ್ರದಲ್ಲೇ ಹೊಸ ಶ್ರೇಣಿಯ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯ ಸುಳಿವು ನೀಡಿದ ಸಿಂಪಲ್ ಎನರ್ಜಿ

ಹೆಚ್ಚುತ್ತಿರುವ ಇಂಧನ ಬೆಲೆಗಳ ಪರಿಣಾಮ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಆಟೋ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಪರಿಚಯಿಸುತ್ತಿವೆ.

ಹೊಸ ಶ್ರೇಣಿಯ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದೆ ಸಿಂಪಲ್ ಎನರ್ಜಿ

ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಈಗಾಗಲೇ ಸಾಂಪ್ರಾದಾಯಿಕ ವಾಹನಗಳನ್ನು ಮಾರಾಟ ಮಾಡುತ್ತಿರುವ ಕಂಪನಿಗಳಿಂತಲೂ ಸ್ಟಾರ್ಟ್-ಅಪ್ ಕಂಪನಿಗಳು ಹೆಚ್ಚು ಗ್ರಾಹಕರ ಗಮನಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಈಗಾಗಲೇ ಹಲವಾರು ಸ್ಟಾರ್ಟ್-ಅಪ್ ಕಂಪನಿಗಳು ವಿವಿಧ ಮಾದರಿಯ ಇವಿ ವಾಹನಗಳನ್ನು ಮಾರಾಟ ಮಾಡುವಲ್ಲಿ ಮುನ್ನಡೆ ಸಾಧಿಸುತ್ತಿವೆ.

ಹೊಸ ಶ್ರೇಣಿಯ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದೆ ಸಿಂಪಲ್ ಎನರ್ಜಿ

ಈ ನಿಟ್ಟಿನಲ್ಲಿ ಹೊಸ ಪಯತ್ನಕ್ಕೆ ಕೈ ಹಾಕಿರುವ ಬೆಂಗಳೂರು ಮೂಲದ 'ಸಿಂಪಲ್ ಎನರ್ಜಿ' ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡಬಲ್ಲ ಆಕರ್ಷಕ ಎಲೆಕ್ಟ್ರಿಕ್ ಸ್ಕೂಟರ್ ಜೊತೆಗೆ ಎಲೆಕ್ಟ್ರಿಕ್ ಬೈಕ್ ಮಾದರಿಗಳನ್ನು ಸಿದ್ದಪಡಿಸಿದೆ.

ಹೊಸ ಶ್ರೇಣಿಯ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದೆ ಸಿಂಪಲ್ ಎನರ್ಜಿ

ಹೊಸ ಎಲೆಕ್ಟ್ರಿಕ್ ಮಾದರಿಗೆ ಮಾರ್ಕ್ 2 ಎಂದು ಕರೆದಿರುವ ಸಿಂಪಲ್ ಎನರ್ಜಿ ಕಂಪನಿಯು ಶೀಘ್ರದಲ್ಲೇ ಮಾರಾಟ ಪ್ರಕ್ರಿಯೆಯನ್ನು ಆರಂಭಿಸಲು ಸಿದ್ದವಾಗಿದ್ದು, ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಕೂಟರ್ ಮಾರಾಟ ಮಾಡುವುದಾಗಿ ಹೇಳಿಕೊಂಡಿದೆ.

ಹೊಸ ಶ್ರೇಣಿಯ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದೆ ಸಿಂಪಲ್ ಎನರ್ಜಿ

ಕಡಿಮೆ ಬೆಲೆ ಹೆಚ್ಚು ಮೈಲೇಜ್

ಸಿಂಪಲ್ ಎನರ್ಜಿ ಕಂಪನಿಯ ಮಾಹಿತಿ ಪ್ರಕಾರ ಹೊಸ ಮಾರ್ಕ್ 2 ಸ್ಕೂಟರ್ ಮಾದರಿಯು ತೆಗೆದುಹಾಕಬಹುದಾದ ಲೀ-ಅಯಾನ್ ಬ್ಯಾಟರಿ ಪ್ರೇರಣೆಯೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 280 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ ಎಂದು ಹೇಳಿಕೊಂಡಿದ್ದು, ಎಲೆಕ್ಟ್ರಿಕ್ ಬೈಕ್ ಮಾದರಿಯ ತಾಂತ್ರಿಕ ಅಂಶಗಳನ್ನು ಬಿಟ್ಟುಕೊಟ್ಟಿಲ್ಲ.

ಹೊಸ ಶ್ರೇಣಿಯ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದೆ ಸಿಂಪಲ್ ಎನರ್ಜಿ

ಮಾರ್ಕ್ 2 ಸ್ಕೂಟರ್‌ನಲ್ಲಿ ಅಳವಡಿಸಲಾಗಿರುವ ಲೀ-ಅಯಾನ್ ಬ್ಯಾಟರಿಯು ಗೃಹ ಬಳಕೆಯ ಚಾರ್ಜರ್ ಮೂಲಕ 40 ನಿಮೀಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಬಹುದಾದರೇ ಫಾಸ್ಟ್ ಚಾರ್ಜಿಂಗ್ ಸೆಂಟರ್‌ಗಳಲ್ಲಿ ಕೇವಲ 17 ನೀಮಿಷಗಳಲ್ಲೇ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

ಹೊಸ ಶ್ರೇಣಿಯ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದೆ ಸಿಂಪಲ್ ಎನರ್ಜಿ

ಹೊಸ ಮಾರ್ಕ್ 2 ಇವಿ ಸ್ಕೂಟರ್ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಈ ಸ್ಕೂಟರ್ ಎಕಾನಮಿ ಮತ್ತು ಸ್ಪೋರ್ಟ್ ಮೋಡ್‌ಗಳನ್ನು ಹೊಂದಿದ್ದು, ಸ್ಪೋರ್ಟ್ ಮೋಡ್‌ನಲ್ಲಿ ಗಂಟೆಗೆ ಗರಿಷ್ಠ 103ಕಿ.ಮೀ ವೇಗದಲ್ಲಿ ಚಲಿಸಬಹುದು.

ಹೊಸ ಶ್ರೇಣಿಯ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದೆ ಸಿಂಪಲ್ ಎನರ್ಜಿ

ಬಿಡುಗಡೆ ಯಾವಾಗ?

ಇದೇ ವರ್ಷ ಜೂನ್ ಅಥವಾ ಜುಲೈನಲ್ಲಿ ಹೊಸ ಇವಿ ಸ್ಕೂಟರ್ ಬಿಡುಗಡೆ ಯೋಜನೆ ಹೊಂದಿದ್ದ ಸಿಂಪಲ್ ಎನರ್ಜಿ ಕಂಪನಿಯು ಕರೋನಾ ವೈರಸ್ ಪರಿಣಾಮ ಬಿಡುಗಡೆ ಯೋಜನೆಯನ್ನು ಮುಂಬರುವ ಅಕ್ಟೋಬರ್ ವೇಳೆಗೆ ಅಮೆಜಾನ್ ಮತ್ತು ಫ್ಲಿಫ್‌ಕಾರ್ಟ್ ಇ-ಕಾರ್ಮಸ್ ಮಳಿಗೆಗಳ ಮೂಲಕ ಮಾರಾಟ ಪ್ರಕ್ರಿಯೆ ಆರಂಭಿಸುವ ಯೋಜನೆಯಲ್ಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಶ್ರೇಣಿಯ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದೆ ಸಿಂಪಲ್ ಎನರ್ಜಿ

ಹೊಸ ಇವಿ ಸ್ಕೂಟರ್ ಬೆಲೆ?

ಅಚ್ಚರಿ ಆದರೂ ಮಾರ್ಕ್ 2 ಇವಿ ಸ್ಕೂಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.1.10 ಲಕ್ಷದಿಂದ ರೂ.1.25 ಲಕ್ಷ ಬೆಲೆಯೊಂದಿಗೆ ಮಾರಾಟ ಮಾಡುವುದಾಗಿ ಸುಳಿವು ನೀಡಿರುವ ಸಿಂಪಲ್ ಎನರ್ಜಿ ಕಂಪನಿಯು ಮಾರುಕಟ್ಟೆಯಲ್ಲಿರುವ ಹಲವು ಸ್ಕೂಟರ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಹೊಸ ಶ್ರೇಣಿಯ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದೆ ಸಿಂಪಲ್ ಎನರ್ಜಿ

ಸದ್ಯ ಮಾರುಕಟ್ಟೆಯಲ್ಲಿ ಬಹುತೇಕ ಪ್ರೀಮಿಯಂ ಇವಿ ಸ್ಕೂಟರ್‌ಗಳು ರೂ.1 ಲಕ್ಷದಿಂದ 1.40 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಬ್ಯಾಟರಿಗೆ ಅನುಗುಣವಾಗಿ ಪ್ರತಿ ಚಾರ್ಜ್‌ಗೆ 60ಕಿ.ಮೀ ನಿಂದ 90 ಕಿ.ಮೀ ಮೈಲೇಜ್ ಹೊಂದಿವೆ.

MOST READ: 300 ಕಿ.ಮೀ ಸ್ಪೀಡ್‌ನಲ್ಲಿ ಬೈಕ್ ರೈಡ್ ಮಾಡಿದವನನ್ನು ಕೊನೆಗೂ ಲಾಕ್ ಮಾಡಿದ ಬೆಂಗಳೂರು ಪೊಲೀಸರು

ಹೊಸ ಶ್ರೇಣಿಯ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದೆ ಸಿಂಪಲ್ ಎನರ್ಜಿ

ಆದರೆ ಸಿಂಪಲ್ ಎನರ್ಜಿ ಕಂಪನಿಯು ಸಾಮಾನ್ಯ ಬೆಲೆಯಲ್ಲೇ ಪ್ರತಿ ಚಾರ್ಜ್‌ಗೆ 280ಕಿ.ಮೀ ಹಿಂದಿರುಗಿಸುವ ಭರವಸೆ ನೀಡಿದ್ದು, ಹೊಸ ಸ್ಕೂಟರ್‌ನಲ್ಲಿ ಪ್ರೀಮಿಯಂ ಫೀಚರ್ಸ್‌ಗಳಾದ ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ಅಲಾಯ್ ವೀಲ್ಹ್, ಡಿಸ್ಕ್ ಬ್ರೇಕ್‌ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳನ್ನು ನೀಡಿದೆ.

Most Read Articles

Kannada
English summary
Simple Energy Planning To Launch Electric Bike. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X