ಬಿಡುಗಡೆಯಾಯ್ತು ಬಿಎಸ್-4 ಕವಾಸಕಿ ಝಡ್900 ಬೈಕ್

ಕವಾಸಕಿ ಇಂಡಿಯಾ ತನ್ನ ಬಿಎಸ್-4 ಝಡ್‍900 ವಿಶೇಷ ಆವೃತ್ತಿಯ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಬಿಎಸ್-4 ಕವಾಸಕಿ ಝಡ್900 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.7.99 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-4 ಕವಾಸಕಿ ಝಡ್900 ಬೈಕ್

ಏಪ್ರಿಲ್ ತಿಂಗಳಲ್ಲಿ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವುದರಿಂದ ಬಿಎಸ್-4 ಕವಾಸಕಿ ಝಡ್‍900 ಬೈಕ್ ಕೇವಲ ಮಾರ್ಚ್ 20ರವರೆಗೆ ಮಾತ್ರ ಮಾರಾಟವಾಗುತ್ತದೆ. ಹೊಸ ಕವಾಸಕಿ ಝಡ್‍900 ಬೈಕ್ 948 ಸಿಸಿ ಇನ್‍-ಲೈನ್ ನಾಲ್ಕು ಲಿಕ್ವಿಡ್ ಕೂಲ್ಡ್ ಬಿಎಸ್-4 ಎಂಜಿನ್ ಹೊಂದಿದೆ. ಈ ಎಂಜಿನ್ 9,500 ಆರ್‍‍‍ಪಿಎಂನಲ್ಲಿ 123 ಬಿ‍‍ಹೆಚ್‍‍ಪಿ ಪವರ್ ಮತ್ತು 7,700 ಆರ್‍‍ಪಿಎಂನಲ್ಲಿ 98.4 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-4 ಕವಾಸಕಿ ಝಡ್900 ಬೈಕ್

ಹೊಸ ಬಿಎಸ್-4 ಕವಾಸಕಿ ಝಡ್900 ಬೈಕ್ ಹಲವಾರು ಹೊಸ ಫೀಚರ್ಸ್‍‍ಗಳನ್ನು ಹೊಂದಿದೆ. ಇದರಲ್ಲಿ ಹೆಡ್‍‍ಲ್ಯಾಂಪ್ ಮತ್ತು ಝಡ್ ಆಕಾರಾದ ಟೇಲ್‍‍ಲೈ‍‍ಟ್‍, ಎಲ್‍ಇಡಿ ಲೈಟ್‍ಗಳು ಮತ್ತು ಎರಡು ತುದಿಯಲ್ಲಿ ನವೀಕರಿಸಿದ ಸಸ್ಪೆಂಕ್ಷನ್ ಸೆಟ್ಟಿಂಗ್‍‍ಗಳು ಮತ್ತು ರೈಡಿಯಾಲಜಿ ಎಂಬ ಆ್ಯಪ್ ಮೂಲಕ ಸ್ಮಾರ್ಟ್‍‍ಫೋನ್ ಕನೆಕ್ಟಿವಿಟಿ ಹೊಂದಿರುವ ಹೊಸ 4.3 ಇಂಚಿನ ಟಿಎ‍ಫ್‍ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಬಿಎಸ್-4 ಕವಾಸಕಿ ಝಡ್900 ಬೈಕ್

ಹೊಸ ಕವಾಸಕಿ ಝಡ್900 ಬೈಕ್‍‍ನಲ್ಲಿ ಹೊಸ ಸ್ಪೋರ್ಟ್, ರೈನ್, ರೋಡ್ ಮತ್ತು ಮ್ಯಾನುಯಲ್ ಎಂಬ ಮೂರು ಮೋಡ್‍‍ಗಳನ್ನು ಹೊಂದಿದೆ. ಇದರೊಂದಿಗೆ ಟ್ರಾಕ್ಷನ್ ಕಂಟ್ರೂಲ್, ಸ್ಟ್ರಾಂಗ್ ಫ್ರೇಮ್ ಮತ್ತು ಡನ್‍‍ಲಾಪ್ ಸ್ಪೋರ್ಟ್ಸ್‌ಮ್ಯಾಕ್ಸ್ ರೋಡ್ಸ್‌ಪೋರ್ಟ್ 2 ಟಯರ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-4 ಕವಾಸಕಿ ಝಡ್900 ಬೈಕ್

ಹೊಸ ಕವಾಸಕಿ ಝಡ್900 ಬಿಎಸ್-4 ಬೈಕ್ ಅನ್ನು ಎರಡು ಡ್ಯುಯಲ್ ಟೋನ್ ಬಣ್ಣಗಳನ್ನು ಹೊಂದಿದೆ. ಇದರಲ್ಲಿ ಮೆಟಾಲಿಕ್ ಗ್ರ್ಯಾಫೈಟ್ ಗ್ರೇ ಅಥವಾ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಅಥವಾ ಮೆಟಾಲಿಕ್ ಫ್ಲಾಟ್ ಸ್ಪಾರ್ಕ್ ಬ್ಲ್ಯಾಕ್ ಬಣ್ಣಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-4 ಕವಾಸಕಿ ಝಡ್900 ಬೈಕ್

ಬ್ರೇಕಿಂಗ್ ಸಿಸ್ಟಂನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಮುಂಭಾಗದಲ್ಲಿ ಡ್ಯುಯಲ್ 300 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 250 ಎಂಎಂ ಪೆಟಲ್ ಡಿಸ್ಕ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿ‍ಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-4 ಕವಾಸಕಿ ಝಡ್900 ಬೈಕ್

ಕವಾಸಕಿ ಝಡ್900 ದೇಶದ ಮೊದಲ ಪ್ರೀಮಿಯಂ ಬಿಎಸ್-6 ಸೂಪರ್‍‍ನೇಕಡ್ ಬೈಕ್ ಆಗಿದೆ. ಬಿಎಸ್-6 ಆವೃತ್ತಿಯ ಬೈಕ್ ಅನ್ನು ಕಳೆದ ತಿಂಗಳು ಬಿಡುಗಡೆಗೊಳಿಸಲಾಗಿತ್ತು ಮುಂದಿನ ವರ್ಷ 2020ರ ಏಪ್ರಿಲ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಬಿಎಸ್-6 ಮಾಲಿನ್ಯ ನಿಯಮವನ್ನು ಜಾರಿಗೊಳಿಸುತ್ತಿದೆ.

ಬಿಡುಗಡೆಯಾಯ್ತು ಬಿಎಸ್-4 ಕವಾಸಕಿ ಝಡ್900 ಬೈಕ್

ಈ ಬಿಎಸ್-6 ಮಾಲಿನ್ಯ ನಿ‍ಯಮಕ್ಕೆ ಅನುಗುಣವಾಗಿ ಕವಾಸಕಿ ಕಂಪನಿಯ ಸರಣಿಯಲ್ಲಿರುವ ಇತರ ಬೈಕ್‍‍ಗಳನ್ನು ನವೀಕರಿಸಲು ಪ್ರಾರಂಭಿಸಿದೆ ಎಂದು ನಿರೀಕ್ಷಿಸಬಹುದು.

ಬಿಡುಗಡೆಯಾಯ್ತು ಬಿಎಸ್-4 ಕವಾಸಕಿ ಝಡ್900 ಬೈಕ್

ಕವಾಸಕಿ ಝಡ್900 ಲೀಟರ್-ಕ್ಲಾಸ್ ಸೆಗ್‍‍ಮೆಂಟ್‍‍ನಲ್ಲಿ ಅತ್ಯಂತ ಜನಪ್ರಿಯವಾದ ಸೂಪರ್‍‍ನೇಕ್ಡ್ ಬೈಕ್‍‍ಗಳಲ್ಲಿ ಒಂದಾಗಿದೆ. ಭಾರತದಲ್ಲಿ ಕವಾಸಕಿ ಝಡ್900 ಬೈಕ್ ಇತರ 1000 ಸಿಸಿ ನೇಕೆಡ್ ಸೆಗ್‍‍ಮೆಂಟ್‍ ಬೈಕ್‍‍ಗಳಾದ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್, ಕೆಟಿಎಂ 790 ಡ್ಯೂಕ್ ಮತ್ತು ಸುಜುಕಿ ಜಿಎಸ್ಎಕ್ಸ್-ಆರ್ 750 ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡಲಿದೆ.

Most Read Articles

Kannada
English summary
2020 Kawasaki Z900 BS4 Special Edition Launched In India; Priced At ₹ 7.99 Lakh. Read in Kannada.
Story first published: Monday, February 10, 2020, 11:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X