ಕೆಟಿಎಂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಸ್ಟಾಸೈಕ್

ಎಲೆಕ್ಟ್ರಿಕ್ ಸೈಕಲ್ ತಯಾರಕ ಕಂಪನಿಯಾದ ಸ್ಟಾಸೈಕ್, ಕೆಟಿಎಂ ಕಂಪನಿಯ ಎರಡು ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದೆ. ಕೆಟಿಎಂ ಕಂಪನಿಯು ಎಲೆಕ್ಟ್ರಿಕ್ ಬೈಕ್ ಹಾಗೂ ಸೈಕಲ್ ಮಾರುಕಟ್ಟೆಗೆ ಕಾಲಿಟ್ಟಿದೆ.

ಕೆಟಿಎಂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಸ್ಟಾಸೈಕ್

ಕಂಪನಿಯು ಶೀಘ್ರದಲ್ಲೇ ಎಲೆಕ್ಟ್ರಿಕ್ ಬೈಕ್ ಗಳನ್ನು ಬಿಡುಗಡೆಗೊಳಿಸಲಿದೆ. ಸ್ಟಾಸೈಕ್ ಕಂಪನಿಯನ್ನು ಇತ್ತೀಚೆಗಷ್ಟೇ ಹಾರ್ಲೆ ಡೇವಿಡ್ಸನ್ ಕಂಪನಿಯು ಖರೀದಿಸಿದೆ. ಸ್ಟಾಸೈಕ್ ಕೆಟಿಎಂನ ಎರಡು ರೆಪ್ಲಿಕಾ ಮಾದರಿಗಳನ್ನು ಬಿಡುಗಡೆಗೊಳಿಸಿದೆ. ಇವುಗಳಲ್ಲಿ 12 ಇ ಡ್ರೈವ್ ಹಾಗೂ 16 ಇ ಡ್ರೈವ್ ಬ್ಯಾಲೆನ್ಸ್ ಎಲೆಕ್ಟ್ರಿಕ್ ಸೈಕಲ್‌ಗಳು ಸೇರಿವೆ. 12 ಇ ಡ್ರೈವ್‌ ಸೈಕಲ್ ಗಳು, 12 ಇಂಚಿನ ವ್ಹೀಲ್ ಗಳನ್ನು ಹೊಂದಿದ್ದರೆ, 16 ಇ ಡ್ರೈವ್‌ ಸೈಕಲ್ ಗಳು 16 ಇಂಚಿನ ವ್ಹೀಲ್ ಗಳನ್ನು ಹೊಂದಿವೆ.

ಕೆಟಿಎಂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಸ್ಟಾಸೈಕ್

ಈ ಎರಡೂ ಬ್ಯಾಲೆನ್ಸ್ ಸೈಕಲ್ ಗಳು ಕಂಫರ್ಟಬಲ್ ರೈಡಿಂಗ್ ಹಾಗೂ ಸೆಲ್ಫ್ ಬ್ಯಾಲೆನ್ಸಿಂಗ್‌ನಂತಹ ಫೀಚರ್ ಗಳನ್ನು ಹೊಂದಿವೆ. ಈ ಸೈಕಲ್‌ಗಳಲ್ಲಿ ಎರಡು ರೈಡಿಂಗ್ ಮೋಡ್‌ಗಳಿದ್ದು, ವೇಗಕ್ಕೆ ತಕ್ಕಂತೆ ಬದಲಿಸಬಹುದು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕೆಟಿಎಂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಸ್ಟಾಸೈಕ್

ಈ ಸೈಕಲ್‌ಗಳಲ್ಲಿ, 13 ಇಂಚುಗಳಿಂದ 17 ಇಂಚುಗಳವರೆಗಿನ ಅಡ್ಜಸ್ಟಬಲ್ ಸೀಟುಗಳನ್ನು ನೀಡಲಾಗಿದೆ. ಇದರಿಂದ ಎಲ್ಲಾ ವಯಸ್ಸಿನವರು ಈ ಸೈಕಲ್ ಗಳನ್ನು ಬಳಸಬಹುದು. ಈ ಎರಡೂ ಸೈಕಲ್‌ಗಳು 40-60 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತವೆ.

ಕೆಟಿಎಂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಸ್ಟಾಸೈಕ್

ಈ ಸೈಕಲ್‌ಗಳಲ್ಲಿ ತೆಗೆಯಬಹುದಾದ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಅವುಗಳನ್ನು ಸುಲಭವಾಗಿ ಹೊರತೆಗೆದು, ಚಾರ್ಜ್ ಮಾಡಬಹುದು. ಪೂರ್ತಿಯಾಗಿ ಚಾರ್ಜ್ ಆದ ನಂತರ, ಈ ಸೈಕಲ್ ಗಳನ್ನು 30-60 ನಿಮಿಷಗಳವರೆಗೆ ಚಲಾಯಿಸಬಹುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕೆಟಿಎಂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಸ್ಟಾಸೈಕ್

ಈ ಎರಡೂ ಸೈಕಲ್‌ಗಳ ಬಿಡಿಭಾಗಗಳ ಬೆಲೆ 160 ಡಾಲರ್ ಅಂದರೆ ರೂ.12,400ಗಳಿಂದ ಆರಂಭವಾಗುತ್ತದೆ. ಸ್ಟಾಸೈಕ್ ಕೆಟಿಎಂ 12 ಇ ಡ್ರೈವ್ ಸೈಕಲಿನ ಬೆಲೆ ರೂ.49,000ಗಳಾದರೆ,16 ಇ ಡ್ರೈವ್ ಸೈಕಲಿನ ಬೆಲೆ ರೂ.64,100ಗಳಾಗಿದೆ.

ಕೆಟಿಎಂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಸ್ಟಾಸೈಕ್

ಸ್ಟಾಸೈಕ್ ಕಂಪನಿಯು ಈ ಎರಡೂ ಸೈಕಲ್‌ಗಳನ್ನು ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿದೆ. ಆದರೂ ಎಲ್ಲಾ ವಯಸ್ಸಿನವರು ಇವುಗಳನ್ನು ಬಳಸಬಹುದು. ಭಾರತದಲ್ಲಿ ಮಕ್ಕಳಿಗೆ ದುಬಾರಿ ಬೆಲೆ ಎನಿಸಲಿದೆ.

Most Read Articles

Kannada
English summary
Stacyc launches KTM company's electric self balancing bicycles. Read in Kannada.
Story first published: Tuesday, June 30, 2020, 15:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X