ಬಿಎಸ್-6 ಆಕ್ಸೆಸ್ 125 ಸ್ಕೂಟರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಸುಜುಕಿ

ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ಈ ವರ್ಷದ ಆರಂಭದಲ್ಲಿ ತನ್ನ ಆಕ್ಸೆಸ್ 125 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು. ಈ ಸುಜುಕಿ ಆಕ್ಸೆಸ್ 125 ಸ್ಕೂಟರಿನ ಎಂಟ್ರಿ ಲೆವೆಲ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.64,800 ಗಳಾಗಿದೆ.

ಬಿಎಸ್-6 ಆಕ್ಸೆಸ್ 125 ಸ್ಕೂಟರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಸುಜುಕಿ

ಇನ್ನು ಸುಜುಕಿ ಆಕ್ಸೆಸ್ 125 ಸ್ಕೂಟರ್ ಅಲಾಯ್ ವ್ಹೀಲ್‌ಗಳೊಂದಿಗಿನ ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.69,500 ಗಳಾಗಿದೆ. ಸುಜುಕಿ ಆಕ್ಸೆಸ್ 125 ದೇಶದ ಅತಿ ಹೆಚ್ಚು ಮಾರಾಟವಾದ 125 ಸಿಸಿ ಸ್ಕೂಟರ್ ಆಗಿದೆ. ಸುಜುಕಿ ಕಂಪನಿಯು ಆಕ್ಸೆಸ್ 125 ಸ್ಕೂಟರ್ ಅನ್ನು ಬಿಎಸ್-6 ಮಾಲಿನ್ಯ ನಿಯಮದ ಗಡುವಿನ ದಿನಾಂಕಕ್ಕಿಂತ ಮೂರು ತಿಂಗಳ ಮುಂಚಿತವಾಗಿ ನವೀಕರಣಗೊಳಿಸಿ ಬಿಡುಗಡೆಗೊಳಿಸಿದ್ದರು.

ಬಿಎಸ್-6 ಆಕ್ಸೆಸ್ 125 ಸ್ಕೂಟರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಸುಜುಕಿ

ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ಟಾರ್ಕ್ ಅಂಕಿ ಅಂಶದಲ್ಲಿ 0.2 ಎನ್ಎಂ ಟಾರ್ಕ್ ಕಡಿಕೆಯಾಗಿದೆ. ಆದರೆ ಪವರ್ ಉತ್ಪಾದನೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

MOST READ: ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಗ್ರಾಜಿಯಾ 125 ಸ್ಕೂಟರ್

ಬಿಎಸ್-6 ಆಕ್ಸೆಸ್ 125 ಸ್ಕೂಟರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಸುಜುಕಿ

ಆಕ್ಸೆಸ್ 125 ಸ್ಕೂಟರ್ ನಲ್ಲಿ 124 ಸಿಸಿ ಸಿಂಗಲ್-ಸಿಲಿಂಡರ್ ಆಲ್-ಅಲ್ಯೂಮಿನಿಯಂ ಫೋರ್-ಸ್ಟ್ರೋಕ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಇದರಲ್ಲಿ ಫ್ಯೂಯಲ್ ಇಂಜೆಕ್ಟ್ ಸಿಸ್ಟಂ ಮತ್ತು ಪರ್ಫಾರ್ಮೆನ್ಸ್ ಟೆಕ್ನಾಲಜಿ ಅನ್ನು ಹೊಂದಿದೆ.

ಬಿಎಸ್-6 ಆಕ್ಸೆಸ್ 125 ಸ್ಕೂಟರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಸುಜುಕಿ

ಈ ಎಂಜಿನ್ 6,750 ಆರ್‌ಪಿಎಂನಲ್ಲಿ 8.6 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 10 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ಸಿವಿಟಿ ಟ್ರಾನ್ಸ್ ಮಿಷನ್ ಅನ್ನು ಜೋಡಿಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಿಎಸ್-6 ಆಕ್ಸೆಸ್ 125 ಸ್ಕೂಟರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಸುಜುಕಿ

ಈ ಹೊಸ ಆಕ್ಸೆಸ್ 125 ಸ್ಕೂಟರ್ ನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ನವೀಕರಿಸಿದ ಅನಲಾಗ್/ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವಾರು ಫೀಚರುಗಳನ್ನು ಅಳವಡಿಸಲಾಗಿದೆ.

ಬಿಎಸ್-6 ಆಕ್ಸೆಸ್ 125 ಸ್ಕೂಟರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಸುಜುಕಿ

ಹೊಸ ಆಕ್ಸೆಸ್ 125 ಸ್ಕೂಟರ್ ಆಕರ್ಷಕ ಟಿವಿಸಿಯನ್ನು ಬಿಡುಗಡೆಗೊಳಿಸಿದೆ. ಏಲಿಯೆನ್ಸ್ ಗಳ ಮಾದರಿಯ ರೂಪಧಾರಿಗಳನ್ನು ಬಳಿಸಿ ಆಕರ್ಷಕವಾದ ಟಿವಿಎಸಿಯನ್ನು ಬಿಡುಗಡೆಗೊಳಿಸಿದ್ದಾರೆ. ಈ ಟಿವಿಸಿಯಲ್ಲಿ ಸ್ಕೂಟರಿನ ಮೈಲೇಜ್ ಬಗ್ಗೆ ವಿವರಿಸಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಈ ಹೊಸ ಆಕ್ಸೆಸ್ 125 ಸ್ಕೂಟರ್ ಸ್ಟೀಲ್ ಡ್ರಮ್ ಬ್ರೇಕ್, ಅಲಾಯ್ ಡ್ರಮ್ ಬ್ರೇಕ್ ಮತ್ತು ಅಲಾಯ್ ಡಿಸ್ಕ್ ಬ್ರೇಕ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಸ್ಕೂಟರ್ ಪರ್ಲ್ ಸುಜುಕಿ ಡೀಪ್ ಬ್ಲೂ, ಮೆಟಾಲಿಕ್ ಮ್ಯಾಟ್ ಪ್ಲಾಟಿನಂ ಸಿಲ್ವರ್, ಪರ್ಲ್ ಮಿರಾಜ್ ವೈಟ್, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಮ್ಯಾಟ್ ಫೈಬ್ರೊಯಿನ್ ಗ್ರೇ ಎಂಬ ಐದು ಬಣ್ಣಗಳಲ್ಲಿ ಮಾರಾಟವಾಗುತ್ತಿವೆ.

ಬಿಎಸ್-6 ಆಕ್ಸೆಸ್ 125 ಸ್ಕೂಟರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಸುಜುಕಿ

ಈ ಹೊಸ ಆಕ್ಸೆಸ್ 125 ಸ್ಕೂಟರ್ 1,870 ಎಂಎಂ ಉದ್ದ, 690 ಎಂಎಂ ಅಗಲ ಮತ್ತು 1,160 ಎಂಎಂ ಎತ್ತರವನ್ನು ಹೊಂದಿದೆ. ಈ ಸ್ಕೂಟರ್ 1,265 ಎಂಎಂ ವ್ಹೀಲ್ ಬೇಸ್ ಮತ್ತು 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

Most Read Articles

Kannada
English summary
Suzuki Access 125 BSVI New TVC With Aliens Released. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X