ಬಿಎಸ್-6 ಎಂಜಿನ್ ನಂತರ 2ನೇ ಬಾರಿಗೆ ದರ ಹೆಚ್ಚಳ ಪಡೆದುಕೊಂಡ ಸುಜುಕಿ ಸ್ಕೂಟರ್‌ಗಳು

ಬಿಎಸ್-6 ನಿಯಮದಂತೆ ಬಹುತೇಕ ವಾಹನ ಮಾದರಿಗಳು ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದು, ಲಾಕ್‌ಡೌನ್ ವಿನಾಯ್ತಿ ನಂತರ ಹೊಸ ವಾಹನಗಳ ಖರೀದಿ ಯೋಜನೆಯಲ್ಲಿದ್ದ ಗ್ರಾಹಕರಿಗೆ ಆಟೋ ಕಂಪನಿಗಳು ಬೆಲೆ ಏರಿಕೆಯ ಹೊರೆ ಹಾಕಿವೆ.

ಬಿಎಸ್-6 ಎಂಜಿನ್ ನಂತರ 2ನೇ ಬಾರಿಗೆ ದರ ಹೆಚ್ಚಳ ಪಡೆದುಕೊಂಡ ಸುಜುಕಿ ಸ್ಕೂಟರ್‌ಗಳು

ಹೌದು, ಬಿಎಸ್-6 ವಾಹನ ಮಾದರಿಗಳು ಮಾರುಕಟ್ಟೆಗೆ ಪ್ರವೇಶಿಸಿ 2 ತಿಂಗಳು ಕಳೆದಿಲ್ಲ ಆಗಲೇ ಎರಡನೇ ಬಾರಿಗೆ ಬೆಲೆ ಏರಿಕೆ ಪಡೆದುಕೊಳ್ಳುತ್ತಿದ್ದು, ಬಿಎಸ್-4 ಮಾದರಿಯ ವಾಹನಗಳಿಂತ ಪ್ರಸ್ತುತ ವಾಹನಗಳು ಶೇ.15ರಿಂದ ಶೇ.20ರಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿವೆ. ಸುಜುಕಿ ಬಿಎಸ್-6 ಸ್ಕೂಟರ್‌ಗಳು ಸಹ ಇದೀಗ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಂಡಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ.1,700ರಿಂದ ರೂ.1,800 ಹೆಚ್ಚುವರಿ ಪಡೆದುಕೊಂಡಿವೆ.

ಬಿಎಸ್-6 ಎಂಜಿನ್ ನಂತರ 2ನೇ ಬಾರಿಗೆ ದರ ಹೆಚ್ಚಳ ಪಡೆದುಕೊಂಡ ಸುಜುಕಿ ಸ್ಕೂಟರ್‌ಗಳು

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಸದ್ಯ ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಆಕ್ಸೆಸ್ 125 ಸ್ಕೂಟರ್ ಬೆಲೆಯಲ್ಲಿ ರೂ.1,700 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್ ಬೆಲೆಯಲ್ಲಿ ರೂ.1,800 ಬೆಲೆ ಹೆಚ್ಚಳ ಮಾಡಲಾಗಿದೆ.

ಬಿಎಸ್-6 ಎಂಜಿನ್ ನಂತರ 2ನೇ ಬಾರಿಗೆ ದರ ಹೆಚ್ಚಳ ಪಡೆದುಕೊಂಡ ಸುಜುಕಿ ಸ್ಕೂಟರ್‌ಗಳು

ಆಕ್ಸೆಸ್ 125 ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.68,800 ಬೆಲೆ ಹೊಂದಿದ್ದರೆ ಹೈ ಎಂಡ್ ಮಾದರಿಯು ರೂ.73,400 ಬೆಲೆ ಪಡೆದುಕೊಂಡಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಐದು ವೆರಿಯೆಂಟ್‌ಗಳನ್ನು ಹೊಂದಿದೆ.

ಬಿಎಸ್-6 ಎಂಜಿನ್ ನಂತರ 2ನೇ ಬಾರಿಗೆ ದರ ಹೆಚ್ಚಳ ಪಡೆದುಕೊಂಡ ಸುಜುಕಿ ಸ್ಕೂಟರ್‌ಗಳು

ಆಕ್ಸೆಸ್ 125 ಸ್ಕೂಟರ್‌ನಲ್ಲಿ ಡ್ರಮ್ ಸಿಬಿಎಸ್, ಡ್ರಮ್ ಅಲಾಯ್ ಸಿಬಿಎಸ್, ಡಿಸ್ಕ್ ಸಿಬಿಎಸ್, ಡ್ರಮ್ ಸ್ಪೆಷಲ್ ಎಡಿಷನ್ ಮತ್ತು ಡಿಸ್ಕ್ ಸ್ಪೆಷಲ್ ಎಡಿಷನ್ ಹೊಂದಿದ್ದು, ಆರಂಭಿಕವಾಗಿ ಡ್ರಮ್ ಸಿಬಿಎಸ್ ಮತ್ತು ಹೈ ಎಂಡ್ ಮಾದರಿಯಾಗಿ ಡಿಸ್ಕ್ ಸ್ಪೆಷಲ್ ಎಡಿಷನ್ ಮಾರಾಟವಾಗುತ್ತಿದೆ.

ಬಿಎಸ್-6 ಎಂಜಿನ್ ನಂತರ 2ನೇ ಬಾರಿಗೆ ದರ ಹೆಚ್ಚಳ ಪಡೆದುಕೊಂಡ ಸುಜುಕಿ ಸ್ಕೂಟರ್‌ಗಳು

ಬಿಎಸ್-4 ಮಾದರಿಯಿಂದ ಬಿಎಸ್-6 ಎಂಜಿನ್ ಪಡೆದುಕೊಂಡಿದ್ದ ಸಂದರ್ಭದಲ್ಲೂ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ.5 ಸಾವಿರ ರೂ.8 ಸಾವಿರ ಹೆಚ್ಚುವರಿ ಬೆಲೆ ಹೊಂದಿದ್ದ ಆಕ್ಸೆಸ್ 125 ಸ್ಕೂಟರ್‌ ಮಾದರಿಯು ಕಳೆದ ಮಾರ್ಚ್‌ನಲ್ಲೂ ರೂ.2,300 ಹೆಚ್ಚಿಸಲಾಗಿತ್ತು.

ಬಿಎಸ್-6 ಎಂಜಿನ್ ನಂತರ 2ನೇ ಬಾರಿಗೆ ದರ ಹೆಚ್ಚಳ ಪಡೆದುಕೊಂಡ ಸುಜುಕಿ ಸ್ಕೂಟರ್‌ಗಳು

ಇದೀಗ ಬಿಎಸ್-6 ಮಾದರಿಯ ಬಿಡುಗಡೆಯ ನಂತವೇ ಎರಡನೇ ಬಾರಿಗೆ ಬೆಲೆ ಹೆಚ್ಚಿಸಲಾಗಿದ್ದು, ಬಿಡಿಭಾಗಗಳ ನಿರ್ವಹಣಾ ವೆಚ್ಚದಲ್ಲಿ ಸತತ ಹೆಚ್ಚಳವಾಗುತ್ತಿರುವುದೆ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಬಿಎಸ್-6 ಎಂಜಿನ್ ನಂತರ 2ನೇ ಬಾರಿಗೆ ದರ ಹೆಚ್ಚಳ ಪಡೆದುಕೊಂಡ ಸುಜುಕಿ ಸ್ಕೂಟರ್‌ಗಳು

ಆಕ್ಸೆಸ್ ಮಾತ್ರವಲ್ಲದೆ ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್ ಸಹ ರೂ.1,800 ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ಬೆಲೆ ಹೆಚ್ಚಳದ ನಂತರ ಹೊಸ ಸ್ಕೂಟರ್ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 79,700ಕ್ಕೆ ನಿಗದಿಪಡಿಸಲಾಗಿದೆ.

ಬಿಎಸ್-6 ಎಂಜಿನ್ ನಂತರ 2ನೇ ಬಾರಿಗೆ ದರ ಹೆಚ್ಚಳ ಪಡೆದುಕೊಂಡ ಸುಜುಕಿ ಸ್ಕೂಟರ್‌ಗಳು

ಬರ್ಗಮನ್ ಸ್ಟ್ರೀಟ್ 125 ಮಾದರಿಯು ಬಿಎಸ್-6 ಎಂಜಿನ್ ಜೋಡಣೆ ನಂತರ ಮೊದಲ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಂಡಿದ್ದು, ಬಿಎಸ್-4 ಮಾದರಿಗಿಂತ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಯು ರೂ. 10,800 ಹೆಚ್ಚಳವಾಗಿದೆ. ಹೆಚ್ಚಳ ಬೆಲೆಯು ಎಕ್ಸ್‌ಶೋರೂಂ ದರವಾಗಿದ್ದು, ಆನ್‌ರೋಡ್ ದರ ಲೆಕ್ಕಾಚಾರದಲ್ಲಿ ಇದು ಶೇ.25ರಷ್ಟು ಹೆಚ್ಚುವರಿಯಾಗುತ್ತದೆ.

Most Read Articles

Kannada
English summary
Suzuki Access 125 & Burgman Street BS6 Scooters Prices Hiked. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X