ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ 2020ರ ಜುಲೈ ತಿಂಗಳ ಮಾರಾಟ ವರದಿಯನ್ನು ಪ್ರಕಟಿಸಿದೆ. ಈ ವರದಿಯ ಪ್ರಕಾರ, ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಕಳೆದ ತಿಂಗಳು ಶೇ.37 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಕಳೆದ ತಿಂಗಳಿನಲ್ಲಿ ಒಟ್ಟು 34,412 ಯುನಿಟ್‌ಗಳನ್ನು ಮಾರಟವನ್ನು ಮಾಡಿದೆ. ಈ ಒಟ್ಟು 34,412 ಯುನಿಟ್ ಮಾರಾಟಗಳಲ್ಲಿ, ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು 31,421 ಯುನಿಟ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ. ಉಳಿದ 2991 ಯುನಿಟ್‌ಗಳು ರಫ್ತು ಮಾಡಲಾಗಿದೆ. ಈ ವರದಿಯನ್ನು 2020ರ ತಿಂಗಳಿಗೆ ಹೋಲಿಸಿದರೆ ಶೇ.37 ಕ್ಕಿಂತ ಬೆಳವಣೆಗೆಯನ್ನು ಸಾಧಿಸಿದೆ.

ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ತನ್ನ ಎಲ್ಲಾ ಉತ್ಪಾದನಾ ಘಟಕವನ್ನು 2020ರ ಮೇ 18 ರಂದು ಪುನರಾರಂಭಿಸಿದೆ ಎಂದು ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಹೇಳಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಸರಣಿಯಲ್ಲಿರುವ ಬೈಕುಗಳಿಗೆ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಕಂಪನಿಯು ಈ ತಿಂಗಳಲ್ಲಿ ತನ್ನ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಕಂಪನಿಯು ಕಂಪನಿಯು ಸರ್ಕಾರದ ಎಲ್ಲಾ ಮಾರ್ಗಸೂಚಿಗಳು ಮತ್ತು ಸುರಕ್ಷತಾ ನಿಯಮಗಳನ್ನು ಅನುಸರಿಸರಿಸಿ ಉತ್ಪಾದನೆಯನ್ನು ಹೆಚ್ಚಿಸಲಿದೆ.

ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯ ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆಯು ಕಡ್ಡಾಯವಾಗಿರಲಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಇನ್ನು ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು, ಸಿಎಸ್ಆರ್ ಯೋಜನೆಯ ಭಾಗವಾಗಿ ತನ್ನ ಸರಣಿಯಲ್ಲಿರುವ ಜಿಕ್ಸರ್ 250 ಎಸ್‍ಎಫ್ ಬೈ‍ಕ್‍‍ಗಳನ್ನು ಮುಂಬೈ ಪೊಲೀಸರಿಗೆ ಇತ್ತೀಚೆಗೆ ನೀಡಿದೆ. ವಿಶೇಷವಾಗಿ ಮಾಡಿಫೈ ಮಾಡಲಾದ 10 ಜಿಕ್ಸರ್ 250 ಎಸ್ಎಫ್ ಬೈಕ್‍‍ಗಳನ್ನು ಪೊಲೀಸರಿಗೆ ಸುಜುಕಿ ಕಂಪನಿಯು ಹಸ್ತಾಂತರಿಸಿದೆ.

ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಈ ಹಿಂದೆ ಸುಜುಕಿ ಕಂಪನಿಯು ಮಾಡಿಫೈ ಮಾಡಲಾದ ಜಿಕ್ಸರ್ 250 ಎಸ್ಎಫ್ ಬೈಕ್‍‍ಗಳನ್ನು ಗುರಗಾಂವ್ ಮತ್ತು ಸೂರತ್‌ ಪೊಲೀಸರಿಗೆ ನೀಡಿದ್ದರು. ಪೊಲೀಸರಿಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಆತ್ಯಾಧುನಿಕ ವಾಹನಗಳ ಅಗತ್ಯವಿರುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಸೂಪರ್ ಪಾಸ್ಟ್ ಬೈಕ್‍‍ಗಳನ್ನು ಹೊಂದಿದಾಗ ಪೊಲೀಸರು ಘಟನಾ ಸ್ಥಳಕ್ಕೆ ವೇಗವಾಗಿ ತಲುಪಬಹುದು. ಇದನ್ನು ಪೊಲೀಸರಿಗಾಗಿ ವಿಶೇಷವಾಗಿ ಮಾಡಿಫೈ ಮಾಡಲಾಗಿದೆ. ಆದರೆ ಎಂಜಿನ್‍‍ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಪೊಲೀಸರಿಗೆ ನೀಡಿದ ಬೈಕಿನ ಮುಂಭಾಗದಲ್ಲಿ ಕೆಂಪು ಮತ್ತು ನೀಲಿ ಬೀಕನ್‍ಗಳನ್ನು ಒಳಗೊಂಡಿದೆ.

ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಬೈಕುಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ. ಸುಜುಕಿ ಕಂಪನಿಯು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್-6 ಜಿಕ್ಸರ್ 250 ಮತ್ತು 250 ಎಸ್‌ಎಫ್ ಮಾದರಿಗಳನ್ನು ಬಿಡುಗಡೆಗೊಳಿಸಿತು.

Most Read Articles

Kannada
English summary
Bike Sales Report For July 2020 In India: Suzuki Motorcycles Register 37% Growth In Monthly Sales. Read In Kannada.
Story first published: Saturday, August 1, 2020, 18:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X