Just In
Don't Miss!
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನವೆಂಬರ್ ತಿಂಗಳಿನಲ್ಲಿ 64,224 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಸುಜುಕಿ ಮೋಟಾರ್ಸೈಕಲ್
ಸುಜುಕಿ ಮೋಟಾರ್ಸೈಕಲ್ ಇಂಡಿಯಾ ಕಂಪನಿಯು ತನ್ನ 2020ರ ನವೆಂಬರ್ ತಿಂಗಳ ಮಾರಾಟ ವರದಿಯನ್ನು ಪ್ರಕಟಿಸಿದೆ. ಈ ವರದಿಯ ಪ್ರಕಾರ, ಸುಜುಕಿ ಮೋಟಾರ್ಸೈಕಲ್ ಕಂಪನಿಯು ಕಳೆದ ತಿಂಗಳು ಒಟ್ಟು 64,224 ಯುನಿಟ್ಗಳನ್ನು ಮಾರಾಟ ಮಾಡಿವೆ.

ಜಪಾನ್ನ ಸುಜುಕಿ ಮೋಟಾರ್ ಕಾರ್ಪೊರೇಶನ್ನ ದ್ವಿಚಕ್ರ ವಾಹನ ಅಂಗಸಂಸ್ಥೆ 2020ರ ನವೆಂಬರ್ನಲ್ಲಿ 64,224 ಯುನಿಟ್ ಮಾರಾಟವನ್ನು ದಾಖಲಿಸಿದೆ. ಒಟ್ಟು ಮಾರಾಟಗಳಲ್ಲಿ ಬ್ರ್ಯಾಂಡ್ ದೇಶೀಯ ಮಾರುಕಟ್ಟೆಯಲ್ಲಿ 57,429 ಯುನಿಟ್ಗಳನ್ನು ಮಾರಾಟ ಮಾಡಿದೆ ಮತ್ತು ಹಿಂದಿನ ತಿಂಗಳಲ್ಲಿ 6,795 ಯುನಿಟ್ಗಳನ್ನು ರಫ್ತು ಮಾಡಿದೆ. ಸುಜುಕಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ನಿಧಾನಗತಿಯ ಚೇತರಿಕೆಯನ್ನು ಕಾಣುತ್ತಿದೆ.

2020ರ ಆಕ್ಟೋಬರ್ ತಿಂಗಳ ಮಾರಟಕ್ಕೆ ಹೋಲಿಸಿದರೆ ಸುಜುಕಿ ಶೇ. 16.5 ಕುಸಿತವನ್ನು ಕಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ 2020ರ ನವೆಂಬರ್ನಲ್ಲಿ ದೇಶೀಯ ಮಾರುಕಟ್ಟೆಯ ಮಾರಾಟದಲ್ಲಿ ಮತ್ತು ರಫ್ತಿನಲ್ಲಿ ಕ್ರಮವಾಗಿ ಶೇ 14.5 ಮತ್ತು 29.5 ರಷ್ಟು ಕುಸಿತ ಕಂಡಿದೆ.
MOST READ: ಅಕ್ಟೋಬರ್ ತಿಂಗಳಿನಲ್ಲಿ 8 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಸುಜುಕಿ ಮೋಟಾರ್ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಕೊಯಿಚಿರೊ ಹಿರಾವ್ ಮಾತನಾಡಿ, ಬೇಡಿಕೆಯನ್ನು ಸ್ಥಿರವಾಗಿ ಸುಧಾರಿಸುವ ಹಿನ್ನೆಲೆಯಲ್ಲಿ ನಾವು 2020ರ ನವೆಂಬರ್ನಲ್ಲಿ 64,224 ಯುನಿಟ್ಗಳನ್ನು ಮಾರಾಟ ಮಾಡಿದ್ದೇವೆ.

ನಮ್ಮ ನೆಟ್ವರ್ಕ್ನಿಂದ ಚಿಲ್ಲರೆ ಮಾರಾಟವು ಸುಜುಕಿ ಬ್ರ್ಯಾಂಡ್ ದ್ವಿಚಕ್ರ ವಾಹನಗಳ ಬೇಡಿಕೆಯ ನಿರಂತರ ಬೆಳವಣಿಗೆಯನ್ನು ತೋರಿಸುತ್ತಿದೆ. ಕರೋನಾ ಸೋಂಕಿನ ಪರಿಣಾಮದಿಂದ ಹೊರಬರುತ್ತೀದ್ದೇವೆ ಎಂದು ಹೇಳಿದರು.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್ಟಾರ್ಕ್ 125 ಸ್ಕೂಟರ್

ಕರೋನಾ ಸೋಂಕಿನ ಪರಿಣಾಮ ಸುಜುಕಿ ಕಂಪನಿಯು ಡೋರ್ಸ್ಟೆಪ್ನಲ್ಲಿ ಸುಜುಕಿ ಎಂಬ ಹೊಸ ಸೇವೆಯನ್ನು ಆರಂಭಿಸಿದೆ. ಖರೀದಿದಾರರು ತಮ್ಮ ಮನೆಗಳ ಸುರಕ್ಷತೆಯಿಂದಲೇ ಹೊಸ ಸುಜುಕಿ ಬೈಕು ಅಥವಾ ಸ್ಕೂಟರ್ ಖರೀದಿಸಲು ಈ ಸೇವೆ ಸಹಾಯ ಮಾಡುತ್ತದೆ.

ಸುಜುಕಿ ಮೋಟಾರ್ಸೈಕಲ್ ಕಂಪನಿಯು ತನ್ನ ಬಿಎಸ್-6 ವಿ-ಸ್ಟ್ರೋಮ್ 650 ಎಕ್ಸ್ಟಿ ಅಡ್ವೆಂಚರ್-ಟೂರಿಂಗ್ ಬೈಕನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಬಿಎಸ್-6 ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್ಟಿ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.8.84 ಲಕ್ಷಗಳಾಗಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್

ಹೊಸ ಬಿಎಸ್ -6 ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್ಟಿ ಬೈಕಿಗಾಗಿ ದೇಶಾದ್ಯಂತ ಸುಜುಕಿ ಅಧಿಕೃತ ಡೀಲರುಗಳು ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್ಟಿ ಬೈಕಿನ ಪೀಚರ್ ಗಳನ್ನು ನವೀಕರಿಸಲಾಗಿಲ್ಲ, ಎಂಜಿನ್ ಅನ್ನು ಮಾತ್ರ ನವೀಕರಿಸಲಾಗಿದೆ. ಬಿಎಸ್ 4 ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್ಟಿ ಮಾದರಿಯ ಬೆಲೆಯನ್ನು ಬಿಎಸ್-6 ಮಾದರಿಗೆ ಹೋಲಿಸಿದರೆ ರೂ.1.4 ಲಕ್ಷ ಹೆಚ್ಚಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಪರಿಚಯಿಸಲಾದ ಮಾದರಿಗಳಿಗೆ ಸುಜುಕಿ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದೆ. ತಮ್ಮ ಜನಪ್ರಿಯ ಮಾದರಿಗಳ ಹೊಸ ನವೀಕರಣಗಳು ಮುಂಬರುವ ತಿಂಗಳುಗಳಲ್ಲಿಯೂ ಮಾರಾಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಕಂಪನಿಯು ನಂಬಿಕೊಂಡಿದೆ.