ಹೊಸ ಬದಲಾವಣೆಗಳೊಂದಿಗೆ ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಸುಜುಕಿ ಬರ್ಗಮನ್ ಸ್ಟ್ರೀಟ್ 125

ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ಬಿಎಸ್-6 ವೈಶಿಷ್ಟ್ಯತೆ ದ್ವಿಚಕ್ರ ವಾಹನಗಳ ಮಾರಾಟಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಇದೀಗ ತನ್ನ ಜನಪ್ರಿಯ ಪ್ರೀಮಿಯಂ ಸ್ಕೂಟರ್ ಆವೃತ್ತಿಯಾದ ಬರ್ಗಮನ್ ಸ್ಟ್ರೀಟ್ 125 ಮಾದರಿಯ ಉನ್ನತೀಕರಿಸಿದ ಮಾದರಿಯನ್ನು ಬಿಡುಗಡೆ ಮಾಡಿದೆ.

ಹೊಸ ಬದಲಾವಣೆಗಳೊಂದಿಗೆ ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಸುಜುಕಿ ಬರ್ಗಮನ್ ಸ್ಟ್ರೀಟ್ 125

ಹೊಸ ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್ ಮಾದರಿಯು ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಹೊಸ ಸ್ಕೂಟರ್ ಬೆಲೆ ಕೂಡಾ ದುಬಾರಿಯಾಗಿರಲಿದೆ. ಬಿಎಸ್-6 ಎಂಜಿನ್ ಹೊಂದಿರುವ ಹೊಸ ಸ್ಕೂಟರ್ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 77,900 ಬೆಲೆ ಪಡೆದುಕೊಂಡಿದ್ದು, ಹೊಸ ಸ್ಕೂಟರ್ ಬೆಲೆಯು ಬಿಎಸ್-4 ಮಾದರಿಗಿಂತಲೂ ಎಕ್ಸ್‌ಶೋರೂಂ ಪ್ರಕಾರ ರೂ.9 ಸಾವಿರ ಹೆಚ್ಚಳವಾಗಿದೆ.

ಹೊಸ ಬದಲಾವಣೆಗಳೊಂದಿಗೆ ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಸುಜುಕಿ ಬರ್ಗಮನ್ ಸ್ಟ್ರೀಟ್ 125

ಬೆಲೆ ಹೆಚ್ಚಳಕ್ಕೆ ತಕ್ಕಂತೆ ಹೊಸ ಸ್ಕೂಟರ್ ಹಲವಾರು ಬದಲಾವಣೆಗಳನ್ನು ತರಲಾಗಿದ್ದು, ಹೊಸ ಬಣ್ಣಗಳ ಆಯ್ಕೆಗಳ ಜೊತೆಗೆ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಜೋಡಣೆ ಮಾಡಿರುವುದು ಹೊಸ ಸ್ಕೂಟರ್ ಪ್ರಮುಖ ಆಕರ್ಷಣೆಯಾಗಲಿದೆ.

ಹೊಸ ಬದಲಾವಣೆಗಳೊಂದಿಗೆ ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಸುಜುಕಿ ಬರ್ಗಮನ್ ಸ್ಟ್ರೀಟ್ 125

ಜೊತೆಗೆ ಹೊಸ ಸ್ಕೂಟರ್‌ನಲ್ಲಿ ಈ ಬಾರಿ ಎಲ್‌ಇಡಿ ಹೆಡ್‌ಲ್ಯಾಂಪ್ ಬಳಕೆ ಮಾಡಲಾಗಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-4 ಮಾದರಿಗಿಂತಲೂ ಹೆಚ್ಚು ಪ್ರಖರವಾದ ಬೆಳಕನ್ನು ಹೊರಚೆಲ್ಲುತ್ತದೆ.

ಹೊಸ ಬದಲಾವಣೆಗಳೊಂದಿಗೆ ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಸುಜುಕಿ ಬರ್ಗಮನ್ ಸ್ಟ್ರೀಟ್ 125

ಇನ್ನುಳಿದಂತೆ ಹೊಸ ಸ್ಕೂಟರ್‌ ಆಕರ್ಷಣೆಗಾಗಿ ಬಾಡಿ ಕ್ರೋಮ್ ಬಳಸಲಾಗಿದ್ದು, ಬಾಡಿ ಮೌಂಟೆಡ್ ವಿಂಡ್ ಸ್ಕ್ರೀನ್, ಹೊಸದಾಗಿ ವಿನ್ಯಾಸಗೊಳಿಸಲಾದ ಎಕ್ಸಾಸ್ಟ್, ಹೊಸದಾಗಿ ನೀಡಲಾಗಿರುವ ಗ್ಲೋ ಬಾಕ್ಸ್, ಸ್ಮಾರ್ಟ್‌ಫೋನ್ ಚಾರ್ಜಿಂಗ್ ಮಾಡಿಕೊಳ್ಳಲು ಡಿಸಿ ಎಲೆಕ್ಟ್ರಿಕ್ ಸಾಕೆಟ್ ಹೊಂದಿದೆ. ಹಾಗೆಯೇ ಹೊಸ ಸ್ಕೂಟರ್ ಬ್ರೇಕಿಂಗ್ ಸಿಸ್ಟಂ ನವೀಕರಣಗೊಳಿಸಲಾಗಿದ್ದು, ಅಲ್ಯುಮಿನಿಯಂನಿಂದ ಸಿದ್ದಗೊಂಡಿರುವ ಹೊಸ ಬಿಎಸ್-6 ಎಂಜಿನ್ ಸ್ಕೂಟರ್ ಆಯ್ಕೆಯ ಮೌಲ್ಯವನ್ನು ಹೆಚ್ಚಿಸಿದೆ.

ಹೊಸ ಬದಲಾವಣೆಗಳೊಂದಿಗೆ ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಸುಜುಕಿ ಬರ್ಗಮನ್ ಸ್ಟ್ರೀಟ್ 125

ಎಂಜಿನ್ ಸಾಮರ್ಥ್ಯ

124 ಸಿಸಿ ಫೋರ್ ಸ್ಟ್ರೋಕ್ ಎಂಜಿನ್ ಹೊಂದಿರುವ ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್ ಮಾದರಿಯು ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಜೋಡಣೆಯೊಂದಿಗೆ ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಹೊಸ ಸ್ಕೂಟರ್ ಪ್ರತಿ ಲೀಟರ್‌ಗೆ 54 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಹೊಸ ಬದಲಾವಣೆಗಳೊಂದಿಗೆ ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಸುಜುಕಿ ಬರ್ಗಮನ್ ಸ್ಟ್ರೀಟ್ 125

ಖರೀದಿಗೆ ಲಭ್ಯವಿರುವ ಬಣ್ಣಗಳು

ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ನಲ್ಲಿ ಹೊಸದಾಗಿ ಮೆಟಾಲಿಕ್ ಮ್ಯಾಟೆ ಬೊರ್‌ಡೆಕ್ಸ್ ರೆಡ್ ಬಣ್ಣದ ಆಯ್ಕೆ ನೀಡಲಾಗಿದ್ದು, ಈ ಹಿಂದಿನ ಪರ್ಲ್ ಮಿರಾಜ್ ವೈಟ್, ಮ್ಯಾಟೆ ಫಿಬ್ರೊಯಿನ್ ಗ್ರೇ, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಮ್ಯಾಟೆ ಬ್ಲ್ಯಾಕ್ ಬಣ್ಣಗಳನ್ನು ಸಹ ಆಯ್ಕೆ ಮಾಡಬಹುದಾಗಿದೆ.

ಹೊಸ ಬದಲಾವಣೆಗಳೊಂದಿಗೆ ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಸುಜುಕಿ ಬರ್ಗಮನ್ ಸ್ಟ್ರೀಟ್ 125

ಇದರೊಂದಿಗೆ ಮತ್ತಷ್ಟು ಪ್ರೀಮಿಯಂ ಸ್ಕೂಟರ್ ಖರೀದಿದಾರರನ್ನು ಸೆಳೆಯಲಿರುವ ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್ ಮಾದರಿಯು ಎಪ್ರಿಲಿಯಾ ಸ್ಟ್ರೋಮ್ 125 ಮಾದರಿಗೆ ನೇರ ಪೈಪೋಟಿಯಾಗಲಿದ್ದು, 125 ಸಿಸಿ ಸ್ಕೂಟರ್ ಮಾದರಿಗಳಲ್ಲೇ ಇದು ಬೆಸ್ಟ್ ಸ್ಟೈಲಿಷ್ ಸ್ಕೂಟರ್ ಮಾದರಿಯಾಗಿದೆ.

ಹೊಸ ಬದಲಾವಣೆಗಳೊಂದಿಗೆ ದುಬಾರಿ ಬೆಲೆ ಪಡೆದುಕೊಂಡ ಬಿಎಸ್-6 ಸುಜುಕಿ ಬರ್ಗಮನ್ ಸ್ಟ್ರೀಟ್ 125

ಇನ್ನು ಸುಜುಕಿ ಸಂಸ್ಥೆಯು ಈಗಾಗಲೇ 125 ಸಿಸಿ ಎಂಜಿನ್ ಪ್ರೇರಣೆ ಮತ್ತೊಂದು ಜನಪ್ರಿಯ ಸ್ಕೂಟರ್ ಮಾದರಿಯಾದ ಆಕ್ಸೆಸ್ 125 ಬಿಎಸ್-6 ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.64,800 ಬೆಲೆ ಹೊಂದಿದ್ದು, ಬರ್ಗಮನ್ ಸ್ಟ್ರೀಟ್ 125 ಆವೃತ್ತಿಗಿಂತಲೂ ಕೆಳದರ್ಜೆಯ ಆವೃತ್ತಿಯಾಗಿದ್ದರೂ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

Most Read Articles

Kannada
English summary
Suzuki Burgman Street 125 BS6 Model Launched In India. Read in Kannada.
Story first published: Monday, February 17, 2020, 16:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X