Just In
- 5 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 6 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 6 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 6 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೋಟೋ ಜಿಪಿ ಬಣ್ಣದ ಆಯ್ಕೆಯಲ್ಲಿ 2020ರ ಜಿಎಸ್ಎಕ್ಸ್-ಆರ್150 ಬೈಕನ್ನು ಬಿಡುಗಡೆಗೊಳಿಸಿದ ಸುಜುಕಿ
ಸುಜುಕಿ ಮೋಟಾರ್‌ಸೈಕಲ್ ಕಂಪನಿಯ 100ನೇ ವಾರ್ಷಿಕೋತ್ಸವ ಮತ್ತು ಇಂಡೋನೇಷ್ಯಾದ ಮಾರುಕಟ್ಟೆಗೆ ಪ್ರವೇಶಿಸಿ 50 ವರ್ಷ ಪೂರೈಸಿದ ಸಂಭ್ರಮದಲ್ಲಿ ಮೋಟೋ ಜಿಪಿ ಲಿವೆರಿ ಬಣ್ಣದ ಆಯ್ಕೆಯಲ್ಲಿ 150ಸಿಸಿಯ 2020ರ ಜಿಎಸ್ಎಕ್ಸ್-ಆರ್150 ಬೈಕನ್ನು ಬಿಡುಗಡೆಗೊಳಿಸಿದೆ.

ಈ ಮೋಟೊ ಜಿಪಿ ರೇಸಿಂಗ್‌ನಲ್ಲಿ ಸುಜುಕಿ ಎಕ್ಸ್ಟಾರ್ ತಂಡ ಇತ್ತೀಚಗೆ ಉತ್ತಮ ಪ್ರಗತಿಯನ್ನು ಸಾಧಿಸುತಿದೆ. ಜಿಎಸ್ಎಕ್ಸ್-ಆರ್ಆರ್ - ಸುಜುಕಿಯ ಮೋಟೋ ಜಿಪಿ ಮಾದರಿಗಳ ಯಾಂತ್ರಿಕತೆ ಮತ್ತು ಗ್ರಾಫಿಕ್ಸ್ ಜೊತೆಗೆ ಹೊಸ 2020ರ ಜಿಎಸ್ಎಕ್ಸ್-ಆರ್150 ಸ್ಫೊರ್ಟ್ ಬ್ಲ್ಯೂ ಬಣ್ಣವನ್ನು ಒಳಗೊಂಡಿದೆ. 1960ರ ಐಲ್ ಆಫ್ ಮ್ಯಾನ್ಸ್ ಟೂರಿಸ್ಟ್ ಟ್ರೋಫಿಯಲ್ಲಿ ರೇಸಿಂಗ್ ಬೈಕಿನ ಬಣ್ಣಗಳೊಂದಿಗೆ ಸುಜುಕಿ ಶ್ರೀಮಂತ ರೇಸಿಂಗ್ ಪರಂಪರೆಯನ್ನು ಮುಂದುವರೆಸಿದ್ದಾರೆ.

ಇನ್ನು ಗಮನಾರ್ಹವಾಗಿ, ಜಿಎಸ್ಎಕ್ಸ್-ಆರ್ ಸರಣಿಗೆ ಸೇರಿದ ಇತ್ತೀಚಿನ ಎಲ್ಲಾ ಬೈಕ್‌ಗಳಿಗೆ ಒಂದೇ ಬಣ್ಣದ ಆಯ್ಕೆ ಮತ್ತು ಡೆಕಲ್‌ಗಳನ್ನು ನೀಡಲಾಗಿದೆ. 2020ರ ಸುಜುಕಿ ಜಿಎಸ್ಎಕ್ಸ್-ಆರ್150 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಮೋಟೋ ಜಿಪಿ ಬಣ್ಣಗಳ ಆಯ್ಕೆಗಳನ್ನು ಹೊಂದಿರುವ 2020ರ ಸುಜುಕಿ ಜಿಎಸ್ಎಕ್ಸ್-ಆರ್ 150 ಬೈಕಿನಲ್ಲಿ 150 ಸಿಸಿ, ಫ್ಯೂಯಲ್ -ಇಂಜೆಕ್ಟ್, ಡಿಒಹೆಚ್‌ಸಿ (ಡ್ಯುಯಲ್ ಓವರ್ ಹೆಡ್ ಕ್ಯಾಮ್‌ಶಾಫ್ಟ್) ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 10,500 ಆರ್‌ಪಿಎಂನಲ್ಲಿ 18.6 ಬಿಹೆಚ್‌ಪಿ ಪವರ್ ಮತ್ತು 9,000 ಆರ್‌ಪಿಎಂನಲ್ಲಿ 14 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕಿನಲ್ಲಿ ಟ್ವಿನ್ -ಸ್ಪಾರ್ ಡೈಮಂಡ್ ಫ್ರೇಮ್ ನೊಂದಿಗೆ 17-ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಇನ್ನು 2020ರ ಸುಜುಕಿ ಜಿಎಸ್ಎಕ್ಸ್-ಆರ್ 150 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಮೊನೊಶಾಕ್ ಸೆಟಪ್ ಅನ್ನು ನೀಡಲಾಗಿದೆ.

2020ರ ಸುಜುಕಿ ಜಿಎಸ್ಎಕ್ಸ್-ಆರ್150 ಬೈಕಿನಲ್ಲಿ ಹಲವಾರು ಫೀಚರ್ ಗಳನ್ನು ಒಳಗೊಂಡಿದೆ. ಈ ಹೊಸ ಬೈಕಿನಲ್ಲಿ ಪೂರ್ಣ-ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್, ಡಿಜಿಟಲ್ ಕನ್ಸೋಲ್, ಕೀಲೆಸ್ ಇಗ್ನಿಷನ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಸುಜುಕಿ ಮೋಟಾರ್‌ಸೈಕಲ್ ಕಂಪನಿಯು 2020ರ ಜೂನ್ ತಿಂಗಳಲ್ಲಿ ಹೊಸ ಜಿಎಸ್‌ಎಕ್ಸ್-ಆರ್ 125 ಬೈಕ್ ಅನ್ನು ಜಪಾನ್‌ನಲ್ಲಿ ಬಿಡುಗಡೆಗೊಳಿಸಿತ್ತು, ಜಿಎಸ್‌ಎಕ್ಸ್-ಆರ್ 125 ಬೈಕನ್ನು ಟ್ರೈಟಾನ್ ಬ್ಲೂ ಮೆಟಾಲಿಕ್, ಬ್ರಿಲಿಯಂಟ್ ವೈಟ್, ಟೈಟಾನ್ ಬ್ಲ್ಯಾಕ್ ಮತ್ತು ಹೊಸ ಮೋಟೋ ಜಿಪಿ ಲಿವರಿ ಬಣ್ಣಗಳ ಆಯ್ಕೆಯನ್ನು ಒಳಗೊಂಡಿತ್ತು.

2020ರ ಜಿಎಸ್ಎಕ್ಸ್-ಆರ್ 150 ಬೈಕನ್ನು ಸುಜುಕಿ ಕಂಪನಿಯು ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ 50 ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಪರಿಚಯಿಸಲಾಗಿದೆ. ಮೋಟೋ ಜಿಪಿ ಬಣ್ಣಗಳ ಆಯ್ಕೆಗಳನ್ನು ಹೊಂದಿರುವ 2020ರ ಸುಜುಕಿ ಜಿಎಸ್ಎಕ್ಸ್-ಆರ್ 150 ಆಕರ್ಷಕ ಮತ್ಯು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.