ಹೊಸ ಬಣ್ಣದೊಂದಿಗೆ ಬಿಡುಗಡೆಯಾಗಲಿದೆ ಸುಜುಕಿ ಕಟಾನಾ ಬೈಕ್

ಸುಜುಕಿ ಮೋಟಾರ್‍‍ಸೈಕಲ್ ಕಂಪನಿಯು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಹೊಸ ಕಟಾನಾ ಬೈಕ್ ಅನ್ನು ಅನಾವರಣಗೊಳಿಸಿತ್ತು. ಈ ಬೈಕ್ ಜಪಾನ್ ತಯಾರಕ ಕಂಪನಿಯ ಜನಪ್ರಿಯ ಸ್ಪೋರ್ಟ್‍ಬೈ‍‍ಕ್‍ಗಳಲ್ಲಿ ಒಂದಾಗಿದೆ.

ಹೊಸ ಬಣ್ಣದೊಂದಿಗೆ ಬಿಡುಗಡೆಯಾಗಲಿದೆ ಸುಜುಕಿ ಕಟಾನಾ ಬೈಕ್

ಸುಜುಕಿ ಕಟಾನಾ ಬೈಕ್ ಭಾರತದಲ್ಲಿ ಈ ವರ್ಷ ಬಿಡುಗಡೆಯಾಗಲಿದೆ ಎಂಬ ವದಂತಿಗಳಿತ್ತು. ಆದರೆ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕೊಯಿಚಿರೋ ಹಿರಾವ್ ಮತ್ತು ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದ ಉಪಾಧ್ಯಕ್ಷ ದೇವಶಿಶ್ ಹಂಡಾ ಅವರು ಸಂದರ್ಶನದಲ್ಲಿ, 2020ರಲ್ಲಿ ಸುಜುಕಿ ಕಟಾನಾ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದಿಲ್ಲ. ಯುರೋ 5 (ಬಿಎಸ್ 6) ಮಾನದಂಡಗಳಿಗೆ ಅನುಗುಣವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುತ್ತಿರುವ ಕಟಾನಾವನ್ನು ನವೀಕರಿಸಲಾಗಿಲ್ಲ.

ಹೊಸ ಬಣ್ಣದೊಂದಿಗೆ ಬಿಡುಗಡೆಯಾಗಲಿದೆ ಸುಜುಕಿ ಕಟಾನಾ ಬೈಕ್

ನವೀಕರಿಸಿದ ನಂತರ ಈ ಬೈಕಿನ ಬಗ್ಗೆ ಗ್ರಾಹಕರ ಆಸಕ್ತಿಯನ್ನು ಗಮನಿಸಿ ಈ ಬೈಕ್ ಅನ್ನು ಬಿಡುಗಡೆಗೊಳಿಸುತ್ತೇವೆ ಎಂದು ಅವರು ಹೇಳಿದ್ದಾರೆ. 2021ರಲ್ಲಿ ಈ ಬೈಕ್ ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಬಣ್ಣದೊಂದಿಗೆ ಬಿಡುಗಡೆಯಾಗಲಿದೆ ಸುಜುಕಿ ಕಟಾನಾ ಬೈಕ್

ಕಟಾನಾ ಬೈಕಿಗೆ ತನ್ನದೆ ಆದ ದೊಡ್ಡ ಇತಿಹಾಸವಿದೆ. ಈ ಬೈಕ್ ಅನ್ನು 1981ರಲ್ಲಿ ಸುಜುಕಿ ಕಂಪನಿಯು ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ಆಗ ಈ ಬೈಕ್ ವಿಶ್ವದ ಅತಿ ವೇಗದ ಉತ್ಪಾದನಾ ಬೈಕ್ ಆಗಿತ್ತು. ಹಲವು ವರ್ಷಗಳ ನಂತರ, ಸುಜುಕಿ ಮೋಟಾರ್‍‍ಸೈಕಲ್ ಕಂಪನಿಯು ಈ ಬೈಕ್ ಅನ್ನು ಮರುವಿನ್ಯಾಸಗೊಳಿಸಿ, ಹೊಸ ಕಟಾನಾ ಬೈಕ್ ಬಿಡುಗಡೆಗೊಳಿಸಿತು.

ಹೊಸ ಬಣ್ಣದೊಂದಿಗೆ ಬಿಡುಗಡೆಯಾಗಲಿದೆ ಸುಜುಕಿ ಕಟಾನಾ ಬೈಕ್

ಸುಜುಕಿ ಮೋಟಾರ್‍‍ಸೈಕಲ್ ಕಂಪನಿಯು ಹೊಸ ಬಣ್ಣದೊಂದಿಗೆ ಸುಜುಕಿ ಕಟಾನಾ ಬೈಕನ್ನು ಪ್ರದರ್ಶಿಸಿದ್ದಾರೆ. ಸುಜುಕಿ ಕಟಾನಾ ಬ್ಲ್ಯಾಕ್ ಮತ್ತು ರೆಡ್ ಎಂಬ ಎರಡು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ.

ಹೊಸ ಬಣ್ಣದೊಂದಿಗೆ ಬಿಡುಗಡೆಯಾಗಲಿದೆ ಸುಜುಕಿ ಕಟಾನಾ ಬೈಕ್

ಕಟಾನಾ ಬೈಕಿನಲ್ಲಿ ಜಿಎಸ್ಎಕ್ಸ್-ಎಸ್ 1000 ಬೈಕಿನಲ್ಲಿರುವಂತಹ ಸುಜುಕಿಯ ಕೆ5 ಎಂಜಿನ್ ಅಳವಡಿಸಲಾಗಿದೆ. 999 ಸಿಸಿಯ ಇನ್ ಲೈನ್ ನಾಲ್ಕು ಸಿಲಿಂಡರ್‍‍ನ ಈ ಎಂಜಿನ್, 150 ಬಿ‍‍ಹೆಚ್‍‍ಪಿ ಪವರ್ ಮತ್ತು 108 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಟ್ರಾನ್ಸ್ಮಿಷನ್ ಜೊತೆಗೆ ಸ್ಲಿಪ್ಪರ್ ಕ್ಲಚ್ ಅನ್ನು ಜೋಡಿಸಲಾಗಿದೆ.

ಹೊಸ ಬಣ್ಣದೊಂದಿಗೆ ಬಿಡುಗಡೆಯಾಗಲಿದೆ ಸುಜುಕಿ ಕಟಾನಾ ಬೈಕ್

ಈ ಬೈಕ್ ಮೂರು ಹಂತದ ಟ್ರಾಕ್ಷನ್ ಕಂಟ್ರೋಲ್ ಹಾಗೂ ಎಬಿಎಸ್ ಅನ್ನು ಹೊಂದಿದೆ. ಬೈಕ್ ಬಗೆಗಿನ ಮಾಹಿತಿಯನ್ನು ಟಿಎಫ್‌ಟಿ ಕಲರ್ ಸ್ಕ್ರೀನ್‍‍ನಲ್ಲಿ ಪಡೆಯಬಹುದು. ಈ ಬೈಕಿನಲ್ಲಿ ಸ್ವಿಂಗಾರ್ಮ್ ಜಿಎಸ್ಎಕ್ಸ್-ಆರ್ ನ ಅಪ್‍‍ಸೈಡ್ ಡೌನ್ ಫೋರ್ಕ್, ರೇಡಿಯಲ್ ಆಗಿ ಮೌಂಟ್ ಮಾಡಲಾದ ಫ್ರಂಟ್ ಕ್ಯಾಲಿಪರ್‍‍ಗಳಿವೆ.

ಹೊಸ ಬಣ್ಣದೊಂದಿಗೆ ಬಿಡುಗಡೆಯಾಗಲಿದೆ ಸುಜುಕಿ ಕಟಾನಾ ಬೈಕ್

ಹೊಸ ಕಟನಾ ಬೈಕಿನ ವಿನ್ಯಾಸವನ್ನು ಒರಿಜಿನಲ್ ಬೈಕಿನಿಂದ ಪಡೆಯಲಾಗಿದೆ. ಇದರಿಂದಾಗಿ ಹೊಸ ಕಟನಾ ಬೈಕ್ ಜಿಎಸ್ಎಕ್ಸ್-ಎಸ್ 1000 ಬೈಕಿಗಿಂತ 6 ಕೆ.ಜಿ ಹೆಚ್ಚು ತೂಕವನ್ನು ಹೊಂದಲಿದೆ. ಈಗ ಬೈಕಿನ ತೂಕವು 215 ಕೆ.ಜಿ.ಗಳಾಗಿದೆ.

ಹೊಸ ಬಣ್ಣದೊಂದಿಗೆ ಬಿಡುಗಡೆಯಾಗಲಿದೆ ಸುಜುಕಿ ಕಟಾನಾ ಬೈಕ್

ಈ ಬೈಕಿನ ಮುಂಭಾಗ ಆಕರ್ಷಕ ಎಲ್‍ಇಡಿ ಹೆಡ್‍‍ಲೈಟ್ ಅನ್ನು ಹೊಂದಿದೆ. ಈ ಬೈಕ್ ಫ್ಯೂಯಲ್ ಟ್ಯಾಂಕ್ ಕೇವಲ 12 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ಜಪಾನಿನ ತಯಾರಕರು ಈ ವರ್ಷ ಬೈಕನ್ನು ಸಿಕೆಡಿಯಾಗಿ ಭಾರತಕ್ಕೆ ಬರಬಹುದೆಂದು ಸುಳಿವು ನೀಡಿದ್ದಾರೆ. ಈ ಬೈಕ್ ಬಿಡುಗಡೆಯಾದ ಬಳಿಕ ಹೋಂಡಾ ಸಿಬಿ 1000 ಆರ್, ಯಮಹಾ ಎಂಟಿ -10, ಕವಾಸಕಿ ಝಡ್‍1000, ಮತ್ತು ಬಿಎಂಡಬ್ಲ್ಯು ಎಸ್ 1000ಆರ್ ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Suzuki Katana showcased with two new colour schemes. Read in Kannada.
Story first published: Wednesday, April 1, 2020, 16:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X