ಪರ್ಲ್ ಸುಜುಕಿ ಮೀಡಿಯಮ್ ಬ್ಲೂ ಸ್ಕೂಟರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ತನ್ನ ಬರ್ಗ್‌ಮನ್ ಸ್ಟ್ರೀಟ್ 125 ಸ್ಕೂಟರ್ ಅನ್ನು ಹೊಸ ಬಣ್ಣದಲ್ಲಿ ಬಿಡುಗಡೆಗೊಳಿಸಿದೆ. ಕಂಪನಿಯು ಈ ಸ್ಕೂಟರಿಗೆ ಪರ್ಲ್ ಸುಜುಕಿ ಮೀಡಿಯಮ್ ಬ್ಲೂ ಎಂಬ ಹೆಸರನ್ನಿಟ್ಟಿದೆ.

ಪರ್ಲ್ ಸುಜುಕಿ ಮೀಡಿಯಮ್ ಬ್ಲೂ ಸ್ಕೂಟರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್

ಬರ್ಗ್‌ಮನ್ ಸ್ಟ್ರೀಟ್ 125 ಬ್ಲೂ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.79,700ಗಳಾಗಿದೆ. ಸುಜುಕಿ ಬರ್ಗ್‌ಮನ್ ಸ್ಟ್ರೀಟ್ 125 ತನ್ನ ಸ್ಟೈಲಿಂಗ್‌ಗೆ ಹೆಸರುವಾಸಿಯಾಗಿದೆ. ಇದು ಈ ಸೆಗ್ ಮೆಂಟಿನಲ್ಲಿರುವ ಅತಿದೊಡ್ಡ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಈ ಸ್ಕೂಟರಿನ ಮುಂಭಾಗದಲ್ಲಿ ವಿಂಡ್‌ಸ್ಕ್ರೀನ್ ಜೊತೆಗೆ ಸ್ಪೋರ್ಟಿ ವಿನ್ಯಾಸವನ್ನು ನೀಡಲಾಗಿದ್ದರೆ, ಹಿಂಭಾಗದ ವಿನ್ಯಾಸವು ಉದ್ದವಾಗಿದೆ.

ಪರ್ಲ್ ಸುಜುಕಿ ಮೀಡಿಯಮ್ ಬ್ಲೂ ಸ್ಕೂಟರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಬರ್ಗ್‌ಮನ್ ಸ್ಟ್ರೀಟ್‌ ಸ್ಕೂಟರಿನಲ್ಲಿ ಕಂಪನಿಯು 124 ಸಿಸಿ ಸಾಮರ್ಥ್ಯದ ಎಂಜಿನ್ ಅಳವಡಿಸಿದೆ. ಈ ಎಂಜಿನ್ 8.6 ಬಿಹೆಚ್‌ಪಿ ಪವರ್ ಹಾಗೂ 10.2 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಸ್ಕೂಟರ್ ಅನ್ನು ಈ ವರ್ಷದ ಫೆಬ್ರವರಿಯಲ್ಲಿ ಬಿಎಸ್ 6 ಎಂಜಿನ್ ನೊಂದಿಗೆ ಬಿಡುಗಡೆಗೊಳಿಸಲಾಗಿತ್ತು.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಪರ್ಲ್ ಸುಜುಕಿ ಮೀಡಿಯಮ್ ಬ್ಲೂ ಸ್ಕೂಟರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್

ಈ ಎಂಜಿನ್‌ನಲ್ಲಿ ಸುಜುಕಿ ಇಕೋ ಪರ್ಫಾರ್ಮೆನ್ಸ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಬಿಎಸ್ 6 ಅಪ್‌ಡೇಟ್‌ನಿಂದಾಗಿ ಈ ಸ್ಕೂಟರಿನ ತೂಕವು 2 ಕೆ.ಜಿಗಳಷ್ಟು ಹೆಚ್ಚಾಗಿದ್ದು, ಒಟ್ಟಾರೆ ತೂಕ 110 ಕೆ.ಜಿಗಳಾಗಿದೆ. ಸ್ಕೂಟರ್‌ನ ಮುಂಭಾಗ ಹಾಗೂ ಹಿಂಭಾಗದಲ್ಲಿ ಕ್ರೋಮ್ ಫಿನಿಶಿಂಗ್ ನೀಡಲಾಗಿದೆ. ಬರ್ಗ್‌ಮನ್ ಸ್ಟ್ರೀಟ್ ಬಿಎಸ್ 6 ಸ್ಕೂಟರ್, ಹೊಸ ಎಲ್‌ಇಡಿ ಹೆಡ್‌ಲೈಟ್, ಟೇಲ್ ಲ್ಯಾಂಪ್‌ ಹಾಗೂ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿದೆ.

ಪರ್ಲ್ ಸುಜುಕಿ ಮೀಡಿಯಮ್ ಬ್ಲೂ ಸ್ಕೂಟರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್

ಸುರಕ್ಷತೆಗಾಗಿ ಈ ಸ್ಕೂಟರಿನಲ್ಲಿ ಸಿಬಿಎಸ್ ಬ್ರೇಕಿಂಗ್ ನೀಡಲಾಗಿದೆ. ಸುಜುಕಿ ಬರ್ಗ್‌ಮನ್ ಸ್ಟ್ರೀಟ್ 125 ಸ್ಕೂಟರ್ ಎಂಜಿನ್ ಸ್ಟಾರ್ಟ್ ಸ್ಟಾಪ್ ಸ್ವಿಚ್ ಹಾಗೂ ಈಸಿ ಸ್ಟಾರ್ಟ್ ಸಿಸ್ಟಂಗಳನ್ನು ಹೊಂದಿದೆ. ಲಾಂಗ್ ರೈಡ್ ಗಾಗಿ ಈ ಸ್ಕೂಟರ್‌ನಲ್ಲಿ ಉದ್ದ ಹಾಗೂ ಅಗಲವಾಗಿರುವ ಸೀಟ್ ಅನ್ನು ನೀಡಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಪರ್ಲ್ ಸುಜುಕಿ ಮೀಡಿಯಮ್ ಬ್ಲೂ ಸ್ಕೂಟರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಬರ್ಗ್‌ಮನ್ ಸ್ಟ್ರೀಟ್ 125ಸ್ಕೂಟರಿನ ಮುಂಭಾಗದಲ್ಲಿ 12 ಇಂಚಿನ ವ್ಹೀಲ್ ಹಾಗೂ ಹಿಂಭಾಗದಲ್ಲಿ 10 ಇಂಚಿನ ವ್ಹೀಲ್ ಗಳಿದ್ದರೆ, ಸಸ್ಪೆಂಷನ್ ಗಳಿಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಗಳನ್ನು ನೀಡಲಾಗಿದೆ. ಬ್ರೇಕಿಂಗ್ ಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನು ನೀಡಲಾಗಿದೆ.

ಪರ್ಲ್ ಸುಜುಕಿ ಮೀಡಿಯಮ್ ಬ್ಲೂ ಸ್ಕೂಟರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಬರ್ಗ್‌ಮನ್ ಸ್ಟ್ರೀಟ್ ಅನ್ನು ಸ್ಟೈಲಿಶ್ ಸ್ಕೂಟರ್ ಎಂದು ಗುರುತಿಸಲಾಗಿದೆ. ಇದು ಭಾರತದಲ್ಲಿರುವ ಬೇರೆ ಸ್ಕೂಟರ್‌ಗಳಿಗಿಂತ ವಿಭಿನ್ನವಾಗಿದೆ. ಈ ಕಾರಣಕ್ಕೆ ಕಂಪನಿಯು ಹೊಸ ಬಣ್ಣದಲ್ಲಿ ಈ ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಪರ್ಲ್ ಸುಜುಕಿ ಮೀಡಿಯಮ್ ಬ್ಲೂ ಸ್ಕೂಟರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಆಗಸ್ಟ್ ತಿಂಗಳ ಮಾರಾಟದಲ್ಲಿ ಪ್ರಗತಿಯನ್ನು ಸಾಧಿಸಿದೆ. ಕಂಪನಿಯು ಆಗಸ್ಟ್ ತಿಂಗಳಿನಲ್ಲಿ ಒಟ್ಟು 57,909 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಜಪಾನ್ ಮೂಲದ ದ್ವಿಚಕ್ರ ವಾಹನ ಕಂಪನಿಯಾದ ಸುಜುಕಿ ಮೋಟರ್ ಸೈಕಲ್ ಆಗಸ್ಟ್‌ ತಿಂಗಳಿನಲ್ಲಿ ಜುಲೈ ತಿಂಗಳಿಗಿಂತ 46%ನಷ್ಟು ಹೆಚ್ಚು ಮಾರಾಟವನ್ನು ದಾಖಲಿಸಿದೆ.

Most Read Articles

Kannada
English summary
Suzuki motorcycle launches Burgman street 125 blue variant. Read in Kannada.
Story first published: Wednesday, September 2, 2020, 19:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X