Just In
- 1 hr ago Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
- 1 hr ago Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 3 hrs ago 150KM ರೇಂಜ್, ಸುರಕ್ಷತೆಯ ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ: ಹೆಚ್ಚು ಲಾಭ
- 4 hrs ago ಸಾಮಾನ್ಯನ ಸ್ಟೋರಿ: ಬಹುಕಾಲದ ಕನಸನ್ನು ನನಸು ಮಾಡಿಕೊಂಡ ವಿಘ್ನೇಶ..! ನೆಚ್ಚಿನ ವ್ಯಾಗನ್ಆರ್ ಕಾರು ಖರೀದಿ
Don't Miss!
- News 50 ಸಾವಿರ ಸೈನಿಕರನ್ನು ಕಳೆದುಕೊಂಡ ರಷ್ಯಾ?
- Movies ಅನಿಮಲ್ ಚಿತ್ರ ಮತ್ತು ನೈತಿಕ ಪೊಲೀಸ್ಗಿರಿ ; ರಣ್ಬೀರ್ ಚಿತ್ರದ ಬಗ್ಗೆ ಹೇಳಿದ್ದೇನು ಮೇಘನಾ ರಾಜ್..?
- Sports GT vs DC: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ
- Lifestyle ಸರ್ಕಸ್ನಿಂದ ತಪ್ಪಿಸಿಕೊಂಡು ಓಡಿದ ಆನೆ..! ಆಮೇಲೆ ಆಗಿದ್ದೇನು..?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜುಲೈ ತಿಂಗಳಿನಲ್ಲಿ ಏರಿಕೆಯಾದ ಸುಜುಕಿ ಮೋಟಾರ್ಸೈಕಲ್ ಮಾರಾಟ
ಸುಜುಕಿ ಮೋಟಾರ್ಸೈಕಲ್ ಕಂಪನಿಯು 2020ರ ಜುಲೈ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಜುಲೈ ತಿಂಗಳಿನಲ್ಲಿ ಮಾರಾಟ ಪ್ರಮಾಣವು 37%ನಷ್ಟು ಹೆಚ್ಚಳವಾಗಿದೆ ಎಂದು ಕಂಪನಿ ಹೇಳಿದೆ. ಕಂಪನಿಯು ಜುಲೈ ತಿಂಗಳಿನಲ್ಲಿ 34,412 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.
ದೇಶೀಯ ಮಾರುಕಟ್ಟೆಯಲ್ಲಿ 31,421 ವಾಹನಗಳನ್ನು ಮಾರಾಟ ಮಾಡಲಾಗಿದ್ದು, 2,991 ವಾಹನಗಳನ್ನು ರಫ್ತು ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಮಾರಾಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಜುಕಿ ಮೋಟಾರ್ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಕೊಯಿಚಿರೋ ಹೀರಾ, ಅನ್ಲಾಕ್ ನಂತರ ವ್ಯವಹಾರವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ವಾಹನಗಳ ಉತ್ಪಾದನೆ, ಮಾರಾಟ ಅಥವಾ ಪೂರೈಕೆ ಸರಪಳಿಯನ್ನು ಸುಧಾರಿಸುವಲ್ಲಿ ಕಂಪನಿಯು ಯಶಸ್ವಿಯಾಗಿದೆ. ಕರೋನಾ ವೈರಸ್ ಹರಡದಂತೆ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ. ಜೊತೆಗೆ ಕಂಪನಿಯ ಉತ್ಪಾದನಾ ಘಟಕಗಳಲ್ಲಿಯೂ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತಿದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ
ಗುರುಗ್ರಾಮ ಘಟಕದಲ್ಲಿ ಇತ್ತೀಚಿಗಷ್ಟೇ ಕಂಪನಿಯ 50 ಲಕ್ಷ ಯುನಿಟ್ ಅನ್ನು ಉತ್ಪಾದಿಸಲಾಯಿತು. ಬಿಎಸ್ 6 ನಿಯಮಗಳು ಜಾರಿಯಾದ ನಂತರ ಕಂಪನಿಯು ತನ್ನ ಎಲ್ಲಾ ಬಿಎಸ್ 6 ಬೈಕ್ ಹಾಗೂ ಸ್ಕೂಟರ್ಗಳ ಬೆಲೆಯನ್ನು ರೂ.4 ಸಾವಿರದಿಂದ ರೂ. 10 ಸಾವಿರಗಳವರೆಗೆ ಹೆಚ್ಚಿಸಿದೆ.
ಜಿಕ್ಸರ್ 150, ಜಿಕ್ಸರ್ 250, ಬರ್ಗ್ಮನ್ ಸ್ಟ್ರೀಟ್, ಆಕ್ಸೆಸ್ 125 ಹಾಗೂ ಇಂಟ್ರೂಡರ್ 150 ಬಿಎಸ್ 6 ಮಾದರಿಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಬಿಎಸ್ 6 ಎಂಜಿನ್ ನೊಂದಿಗೆ ಅಪ್ ಗ್ರೇಡ್ ಮಾಡಲಾದ ಕಾರಣಕ್ಕೆ ಈ ವಾಹನಗಳ ಬೆಲೆಯನ್ನು ಹೆಚ್ಚಿಸಲಾಗಿದೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್
ಇತ್ತೀಚೆಗಷ್ಟೇ ಕಂಪನಿಯು ಇಂಟ್ರೂಡರ್ 250 ಸಿಸಿ ಮಾದರಿ ಬೈಕಿಗಾಗಿ ಪೇಟೆಂಟ್ ಅರ್ಜಿ ಸಲ್ಲಿಸಿದೆ. ಈ ಬೈಕ್ನ ಪೇಟೆಂಟ್ ಫೋಟೋಗಳನ್ನು ಇಂಟರ್ನೆಟ್ನಲ್ಲಿ ಬಿಡುಗಡೆಗೊಳಿಸಲಾಗಿದೆ. ಇಂಟ್ರೂಡರ್ 250 ಬೈಕಿನ ಉತ್ಪಾದನೆ ಹಾಗೂ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಬೈಕ್ ಭಾರತದಲ್ಲಿ ತಯಾರಾಗಲಿದ್ದು, ವಿದೇಶಗಳಿಗೂ ರಫ್ತು ಮಾಡಲಾಗುವುದು ಎಂದು ಹೇಳಲಾಗಿದೆ. ಸುಜುಕಿ ಮೋಟಾರ್ಸೈಕಲ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ಗಾಗಿಯೂ ಪೇಟೆಂಟ್ ಪಡೆದಿದೆ. ಈ ಸ್ಕೂಟರ್ ಅನ್ನು 2021ರಲ್ಲಿ ಬಿಡುಗಡೆಗೊಳಿಸಲಾಗುವುದೆಂದು ವರದಿಯಾಗಿದೆ.