Just In
- 40 min ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 1 hr ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 2 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
- 13 hrs ago
ಮಧ್ಯಮ ಗಾತ್ರದ ಕಾರುಗಳಿಗೆ ಹೊಸ ಡೀಸೆಲ್ ಎಂಜಿನ್ ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
Don't Miss!
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- News
''ಹಿಂಸಾಚಾರವನ್ನು ಎಂದಿಗೂ ಸಹಿಸುವುದಿಲ್ಲ'': ಮೆಲಾನಿಯಾ ಟ್ರಂಪ್ ವಿದಾಯದ ಭಾಷಣ
- Finance
ಕಾರು ಖರೀದಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಬ್ಯಾಂಕ್ ಗಳಿವು
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಗಸ್ಟ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್ಸೈಕಲ್
ಸುಜುಕಿ ಮೋಟಾರ್ಸೈಕಲ್ ಇಂಡಿಯಾ ಕಂಪನಿಯು ತನ್ನ 2020ರ ಆಗಸ್ಟ್ ತಿಂಗಳ ಮಾರಾಟ ವರದಿಯನ್ನು ಪ್ರಕಟಿಸಿದೆ. ಈ ವರದಿಯ ಪ್ರಕಾರ, ಸುಜುಕಿ ಮೋಟಾರ್ಸೈಕಲ್ ಕಂಪನಿಯು ಕಳೆದ ತಿಂಗಳು ಒಟ್ಟು 57,909 ಯುನಿಟ್ಗಳನ್ನು ಮಾರಾಟ ಮಾಡಿವೆ.

ಸುಜುಕಿ ಮೋಟಾರ್ಸೈಕಲ್ ಕಂಪನಿಯು ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಒಟ್ಟು 71,631 ಯುನಿಟ್ಗಳನ್ನು ಮಾರಾಟ ಮಾಡಿದ್ದರು. ಕಳೆದ ವರ್ಷದ ಆಗಸ್ಟ್ ತಿಂಗಳ ಮಾರಾಟವನ್ನು ಈ ವರ್ಷದ ಆಗಸ್ಟ್ ಹೋಲಿಸಿದರೆ ಶೇ.19 ರಷ್ಟು ಕುಸಿತವನ್ನು ದಾಖಲಿಸಿದೆ. ಇನ್ನು ಈ 2020ರ ಆಗಸ್ಟ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 53,142 ಯುನಿಟ್ಗಳನ್ನು ಮಾರಾಟ ಮಾಡಿವೆ.

ಇನ್ನು ಸುಜುಕಿ ಮೋಟಾರ್ಸೈಕಲ್ ಕಂಪನಿಯು 2020ರ ಜುಲೈ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 31,421 ಯುನಿಟ್ಗಳನ್ನು ಮಾರಾಟ ಮಾಡಲಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ 2020ರ ಜುಲೈ ತಿಂಗಳ ಮಾರಾಟವನ್ನು ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಸುಜುಕಿ ಮೋಟಾರ್ಸೈಕಲ್ ಶೇ.46 ರಷ್ಟು ಬೆಳವಣಿಗೆಯನ್ನು ಕಂಡಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಸುಜುಕಿ ಮೋಟಾರ್ಸೈಕಲ್ ಮಾರಾಟದಲ್ಲಿ ನಿಧಾನವಾಗಿ ಚೇತರಿಕೆಯನ್ನು ಕಾಣುತ್ತಿದೆ. ಇನ್ನು ಹಬ್ಬದ ಸೀಸನ್ ನಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಬಹುದೆಂದು ಕಂಪನಿಯು ನಿರೀಕ್ಷಿಸುತ್ತಿದೆ.

ಸುಜುಕಿ ಮೋಟಾರ್ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಕೊಯಿಚಿರೊ ಹಿರಾವ್ ಅವರು ಆಗಸ್ಟ್ ತಿಂಗಳ ಮಾರಾಟದ ಬಗ್ಗೆ ಮಾತನಾಡಿ, ನಮ್ಮ ಡೀಲರುಗಳು ನಿರಂತರ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮದಿಂದ ಶೇ.46 ಕ್ಕಿಂತ ಹೆಚ್ಚಿನ ಬೆಳವಣಿಗೆಗೆ ಸಾಧ್ಯವಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್

ಕರೋನಾ ಸೋಂಕಿನ ಭೀತಿಯ ನಡುವೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳು ಮತ್ತು ಸಿಬ್ಬಂದಿಗಳು ಗ್ರಾಹಕರ ಸುರಕ್ಷತೆ ಹೆಚ್ಚು ಗಮನಹರಿಸಿದರು ಇದರಿಂದಾಗಿ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸಲು ಕಾರಣವಾಯಿತು ಎಂದು ಹೇಳಿದರು.

ಲಾಕ್ ಡೌನ್ ಸಡಿಲಿಕೆಯ ನಂತರ ಕಂಪನಿಯು ತನ್ನ ವಾಹನಗಳ ಉತ್ಪಾದನೆ, ಮಾರಾಟ ಹಾಗೂ ಸಪ್ಲೈ ಚೈನ್ ಗಳನ್ನು ಸುಧಾರಿಸಿಕೊಳ್ಳುತ್ತಿದೆ. ಕರೋನಾ ವೈರಸ್ ಹರಡದಂತೆ ತಡೆಯಲು ಕಂಪನಿಯು ಸರ್ಕಾರವು ಸೂಚಿಸಿರುವ ಎಲ್ಲಾ ನಿಯಮಗಳನ್ನು ಅನುಸರಿಸುತ್ತಿದೆ. ತನ್ನ ಉತ್ಪಾದನಾ ಘಟಕಗಳಲ್ಲಿ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಸುಜುಕಿ ಮೋಟಾರ್ಸೈಕಲ್ ಕಂಪನಿಯು ಇತ್ತೀಚೆಗೆ ಜಿಕ್ಸರ್ 150, ಜಿಕ್ಸರ್ 250, ಬರ್ಗ್ಮನ್ ಸ್ಟ್ರೀಟ್, ಆಕ್ಸೆಸ್ 125 ಹಾಗೂ ಇಂಟ್ರೂಡರ್ 150 ಬಿಎಸ್ 6 ಮಾದರಿಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಬಿಎಸ್ 6 ವಾಹನಗಳ ಉತ್ಪಾದನಾ ವೆಚ್ಚವು ಹೆಚ್ಚಾದ ಕಾರಣಕ್ಕೆ ಈ ವಾಹನಗಳ ಬೆಲೆಯನ್ನು ಹೆಚ್ಚಿಸಿತು.

ಸುಜುಕಿ ಮೋಟಾರ್ಸೈಕಲ್ ಇಂಡಿಯಾ ಕಂಪನಿಯು ಬೈಕುಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣುತ್ತಿದೆ. ಇನ್ನು ಹಬ್ಬದ ಸೀಸನ್ ನಲ್ಲಿ ಮಾರಾಟದಲ್ಲಿ ಮತ್ತಷ್ಟು ಬೆಳವಣಿಗೆಯನ್ನು ಸಾಧಿಸಬಹುದು ಎಂದು ನಿರೀಕ್ಷಿಸುತ್ತೇವೆ.