ಲಾಕ್‌ಡೌನ್ ಸಡಿಲಿಕೆ ಹಿನ್ನಲೆ ಸರ್ವೀಸ್ ಸ್ಟೇಷನ್ ತೆರೆದ ಸುಜುಕಿ ಮೋಟಾರ್‌ಸೈಕಲ್

ಲಾಕ್‌ಡೌನ್ ವಿನಾಯ್ತಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ಹೊಸ ಸುರಕ್ಷಾ ಕ್ರಮದೊಂದಿಗೆ ಪುನಾರಂಭಗೊಂಡಿದ್ದು, ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಸಹ ಮಾರಾಟ ಮಳಿಗೆಗಳ ಜೊತೆಗೆ ಶೇ.50ರಷ್ಟು ಸರ್ವೀಸ್ ಸ್ಟೇಷನ್‌ಗಳಿಗೂ ಮರುಚಾಲನೆ ನೀಡಿದೆ.

ಲಾಕ್‌ಡೌನ್ ಸಡಿಲಿಕೆ ಹಿನ್ನಲೆ ಸರ್ವೀಸ್ ಸ್ಟೇಷನ್ ತೆರೆದ ಸುಜುಕಿ

ಮೇ 4ರಿಂದ ಗ್ರೀನ್ ಹಾಗೂ ಆರೇಂಜ್ ಝೋನ್‌ಗಳಲ್ಲಿರುವ ತನ್ನ ಮಾರಾಟ ಮಳಿಗೆಗಳನ್ನು ತೆರೆದಿದ್ದ ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಇದೀಗ ಸರ್ವೀಸ್ ಸೆಂಟರ್‌ಗಳನ್ನು ಸಹ ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಪುನಾರಂಭಗೊಳಿಸಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಲಾಕ್‌ಡೌನ್ ಸಡಿಲಿಕೆ ಹಿನ್ನಲೆ ಸರ್ವೀಸ್ ಸ್ಟೇಷನ್ ತೆರೆದ ಸುಜುಕಿ

ಹೊಸ ಸುರಕ್ಷಾ ಮಾರ್ಗಸೂಚಿತಂತೆ ಆಟೋ ಉದ್ಯಮವು ಮರು ಚಾಲನೆಗೊಂಡರು ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಪರದಾಡುತ್ತಿದ್ದು, ಹೊಸ ವಾಹನಗಳ ಮಾರಾಟವು ಭಾರೀ ಪ್ರಮಾಣದಲ್ಲಿ ಕುಸಿತ ಕಾಣುವ ಸಾಧ್ಯತೆಗಳಿವೆ.

ಲಾಕ್‌ಡೌನ್ ಸಡಿಲಿಕೆ ಹಿನ್ನಲೆ ಸರ್ವೀಸ್ ಸ್ಟೇಷನ್ ತೆರೆದ ಸುಜುಕಿ

ಸಂಕಷ್ಟದ ಪರಿಸ್ಥಿತಿಯಲ್ಲೂ ಕೇಂದ್ರ ಸರ್ಕಾರದ ಹೊಸ ಸುರಕ್ಷಾ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ವಾಹನ ಮಾರಾಟಕ್ಕೆ ಚಾಲನೆ ನೀಡಿರುವ ಆಟೋ ಕಂಪನಿಗಳು ವೈರಸ್ ಹರಡದಂತೆ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಂಡಿವೆ.

ಲಾಕ್‌ಡೌನ್ ಸಡಿಲಿಕೆ ಹಿನ್ನಲೆ ಸರ್ವೀಸ್ ಸ್ಟೇಷನ್ ತೆರೆದ ಸುಜುಕಿ

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಇದೀಗ ದೇಶದ ವಿವಿಧಡೆ ಹರಡಿಕೊಂಡಿರುವ ಸಾವಿರಾರು ವಾಹನ ಮಾರಾಟ ಕೇಂದ್ರಗಳನ್ನು ಪುನಾರಂಭಿಸಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಗರಿಷ್ಟ ಪ್ರಮಾಣದ ಪ್ರೊಟೋಕಾಲ್ ನಿಯಮಗಳನ್ನು ಜಾರಿಗೊಳಿಸಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಲಾಕ್‌ಡೌನ್ ಸಡಿಲಿಕೆ ಹಿನ್ನಲೆ ಸರ್ವೀಸ್ ಸ್ಟೇಷನ್ ತೆರೆದ ಸುಜುಕಿ

ಹೊಸ ಸುರಕ್ಷಾ ಮಾರ್ಗಸೂಚಿಗಳಿಂದಾಗಿ ಪ್ರತಿ ಹಂತದಲ್ಲೂ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಥರ್ಮಾ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಜರ್, ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್ ಬಳಕೆಯೂ ಕಡ್ಡಾಯವಾಗಿದೆ.

ಲಾಕ್‌ಡೌನ್ ಸಡಿಲಿಕೆ ಹಿನ್ನಲೆ ಸರ್ವೀಸ್ ಸ್ಟೇಷನ್ ತೆರೆದ ಸುಜುಕಿ

ಜೊತೆಗೆ ಮಾರಾಟ ಮಳಿಗೆಗಳಿಗೆ ಗ್ರಾಹಕರ ಆಗಮನವನ್ನ ತಡೆಯುವುದಕ್ಕಾಗಿ ಕಂಪನಿಯೇ ಆನ್‌ಲೈನ್ ಮೂಲಕವೇ ಪತ್ರ ವ್ಯವಹಾರ ಮುಗಿಸಿ ಅಂತಿಮವಾಗಿ ಬೈಕ್ ಉತ್ಪನ್ನಗಳನ್ನು ಗ್ರಾಹಕರ ಬಾಗಿಲುಗಳಿಗೆ ತಲುಪಿಸುತ್ತಿದ್ದು, ವಾಹನಗಳ ವಿತರಣೆ ಸಂದರ್ಭದಲ್ಲೂ ನಂಜು ನಿರೋಧಕ ರಸಾಯನಿಕಗಳಿಂದ ಸ್ವಚ್ಚಗೊಳಿಸಿದ ನಂತರವೇ ಗ್ರಾಹಕರಿಗೆ ಹಸ್ತಾಂತರಿಸಲಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಲಾಕ್‌ಡೌನ್ ಸಡಿಲಿಕೆ ಹಿನ್ನಲೆ ಸರ್ವೀಸ್ ಸ್ಟೇಷನ್ ತೆರೆದ ಸುಜುಕಿ

ಇನ್ನು ಕರೋನಾ ವೈರಸ್‌ ವಿರುದ್ಧ ಹೋರಾಟದಲ್ಲೂ ಸರ್ಕಾರದ ಬೆನ್ನಿಗೆ ನಿಂತಿರುವ ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಲಾಕ್‌ಡೌನ್ ಸಂದರ್ಭದಲ್ಲಿ ಸುಮಾರು 1.30 ಲಕ್ಷ ಜನರಿಗೆ ಆಹಾರದ ಪೊಟ್ಟಣಗಳು ಮತ್ತು ದಿನನಿತ್ಯ ಬಳಕೆ ಆಹಾರ ಸಾಮಾಗ್ರಿ ವಿತರಣೆ ಮಾಡಿದ್ದು, 2 ಮಿನಿಯನ್(20 ಲಕ್ಷ) ಎನ್95 ಫೇಸ್‌ಮಾಸ್ಕ್‌ಗಳನ್ನು ಹರಿಯಾಣ ಸರ್ಕಾರಕ್ಕೆ ಹಸ್ತಾಂತರ ಮಾಡಿದೆ.

Most Read Articles

Kannada
English summary
Suzuki Motorcycles Resume Sales Service Operations Reopen 50 Percent Dealerships In India. Read in Kannada.
Story first published: Friday, May 22, 2020, 18:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X