Just In
Don't Miss!
- Movies
KSRTC ಬಸ್ಸಿನಲ್ಲಿ ನಿರ್ಮಾಣವಾದ ವಿಶೇಷ ಸ್ತ್ರೀ ಶೌಚಾಲಯ ಪರಿಶೀಲಿಸಿದ ನಟಿ ಶ್ರುತಿ
- News
ಕಬ್ಬನ್ ಉದ್ಯಾನ ವ್ಯಾಪ್ತಿಯಲ್ಲಿ ನಿಯಮಬಾಹಿರ ಕಟ್ಟಡ ನಿರ್ಮಾಣ: ನೋಟಿಸ್
- Lifestyle
ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಈ ಆಹಾರಗಳನ್ನು ಸೇವಿಸುವುದನ್ನು ಮರೆಯಬೇಡಿ..
- Sports
ಹೊಸ ಪರೀಕ್ಷೆಗೆ ಒಳಗಾಗಬೇಕು ಕ್ರಿಕೆಟ್ ತಾರೆಯರು: 8.30 ನಿಮಿಷದಲ್ಲಿ 2 ಕಿ.ಮೀ ಗುರಿ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದ ಅತಿ ವೇಗದ ರಾಯಲ್ ಎನ್ಫೀಲ್ಡ್ ಬೈಕಿದು
ರಾಯಲ್ ಎನ್ಫೀಲ್ಡ್ ಬೈಕ್ಗಳು ಭಾರತದಲ್ಲಿರುವ ಜನಪ್ರಿಯ ಬೈಕ್ಗಳಲ್ಲಿ ಒಂದಾಗಿವೆ. ರೆಟ್ರೋ ಶೈಲಿಯ ವಿನ್ಯಾಸದಿಂದಾಗಿ ಈ ಬೈಕ್ಗಳು ಹೆಚ್ಚು ಜನಪ್ರಿಯವಾಗಿವೆ. ರೆಟ್ರೋ ಶೈಲಿಯನ್ನು ಹೊಂದಿದ್ದರೂ ಈ ಬೈಕ್ಗಳು ಆಧುನಿಕವಾಗಿವೆ.

ರಾಯಲ್ ಎನ್ಫೀಲ್ಡ್ ಕಂಪನಿಯು ಕೆಲ ವರ್ಷಗಳ ಹಿಂದೆ ಇಂಟರ್ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಎಂಬ ಟ್ವಿನ್ ಸಿಲಿಂಡರ್ ಬೈಕ್ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಟ್ವಿನ್ ಬೈಕ್ಗಳು ಅತಿ ಕಡಿಮೆ ಅವಧಿಯಲ್ಲಿಯೇ ಸಾಕಷ್ಟು ಜನಪ್ರಿಯತೆಯನ್ನು ಪಡೆದಿವೆ.

ಈ ಬೈಕ್ಗಳು ರಾಯಲ್ ಎನ್ಫೀಲ್ಡ್ ಕಂಪನಿಯು ಇದುವರೆಗೂ ಉತ್ಪಾದಿಸಿರುವ ಪವರ್ಫುಲ್ ಬೈಕ್ಗಳೆಂಬ ಹೆಗ್ಗಳಿಕೆಯನ್ನು ಪಡೆದಿವೆ. ಭಾರತದಲ್ಲಿ ಈ ಟ್ವಿನ್ ಬೈಕ್ಗಳನ್ನು ಹಲವೆಡೆ ಮಾಡಿಫೈಗೊಳಿಸಲಾಗಿದೆ.

ಇದೇ ರೀತಿಯಾಗಿ ಮಾಡಿಫೈಗೊಂಡಿರುವ ಭಾರತದ ವೇಗದ ಇಂಟರ್ಸೆಪ್ಟರ್ 650 ಬೈಕ್ ಎಂದು ಹೇಳಲಾಗಿರುವ ಬೈಕಿನ ವಿವರವನ್ನು ಈ ಲೇಖನದಲ್ಲಿ ನೋಡೋಣ. ಮಾಡಿಫೈಗೊಂಡಿರುವ ಈ ಬೈಕಿನ ವೀಡಿಯೊವನ್ನು ಅಭಿನವ್ ಭಟ್ರವರು ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಬೈಕಿಗೆ ಮಾಡಲಾಗಿರುವ ಮಾಡಿಫಿಕೇಶನ್ ವಿವರಣೆಯೊಂದಿಗೆ ಈ ವೀಡಿಯೊ ಆರಂಭವಾಗುತ್ತದೆ. ಮೊದಲಿಗೆ ಈ ಬೈಕಿನ ಫ್ರಂಟ್ ಫೋರ್ಕ್ನಲ್ಲಿ ಮಾಡಿಫೈ ಮಾಡಲಾಗಿದೆ. ಈ ಬೈಕಿನಲ್ಲಿ ಹೆಚ್ಚು ವೇಗದಲ್ಲಿ ಚಲಿಸಲು ಅನುಕೂಲವಾಗಲೆಂದು ಬಜಾಜ್ ಡೊಮಿನಾರ್ ಬೈಕಿನಲ್ಲಿರುವ ಅಪ್ಸೈಡ್ ಡೌನ್ ಫೋರ್ಕ್ ಅಳವಡಿಸಲಾಗಿದೆ.

ಇದರ ಜೊತೆಗೆ ಕಸ್ಟಮ್ ಮ್ಯಾಪ್ ಹೊಂದಿರುವ ಪವರ್ಟ್ರಾನಿಕ್ ಪಿಗ್ಗಿಬ್ಯಾಕ್ ಇಸಿಯು, ಎಸ್ಎಸ್ ಮೊಟೊ ಸ್ಟೈನ್ಲೆಸ್ ಸ್ಟೀಲ್ ಎಕ್ಸಾಸ್ಟ್, ಸ್ಟೇಜ್ 2 ಪ್ಲೇಟ್ ಹೊಂದಿರುವ ಡಿಎನ್ಎ ಏರ್ಲಿಫ್ಟರ್ಗಳನ್ನು ಬದಲಿಸಲಾಗಿದೆ.

ಈ ಬೈಕಿನಲ್ಲಿರುವ ವ್ಹೀಲ್ಗಳನ್ನು ಸಹ ಬದಲಿಸಲಾಗಿದೆ. ಇದರ ಜೊತೆಗೆ ತೈವಾನ್ನಿಂದ ಆಮದು ಮಾಡಿಕೊಂಡಿರುವ ಅಲ್ಯುಮಿನಿಯಂ ರಿಮ್ಗಳನ್ನು ಅಳವಡಿಸಲಾಗಿದೆ. ಗೇರ್ ಬದಲಾವಣೆಗೆ ಅನುಕೂಲವಾಗುವಂತೆ ಸ್ಪ್ರಾಕೆಟ್ಗಳನ್ನು ಬದಲಿಸಲಾಗಿದೆ.

ಈ ಬೈಕ್ ಅನ್ನು ಆಕರ್ಷಕವಾಗಿಸಲು ಗ್ರೇ ಹಾಗೂ ಬ್ಲಾಕ್ ಬಣ್ಣವನ್ನು ನೀಡಲಾಗಿದೆ. ಮಾಡಿಫೈ ಮಾಡಲಾಗಿರುವ ಈ ಬೈಕ್ ಮಾರುಕಟ್ಟೆಯಲ್ಲಿರುವ ಬೈಕಿಗಿಂತ 20 ಕೆ.ಜಿ ಕಡಿಮೆ ತೂಕವನ್ನು ಹೊಂದಿದೆ. ಮಾಡಿಫೈಗೊಂಡಿರುವ ಕಾರಣಕ್ಕೆ ಹೆಚ್ಚು ಪವರ್ ಉತ್ಪಾದಿಸುತ್ತದೆ.

ಮಾರುಕಟ್ಟೆಯಲ್ಲಿರುವ ಬೈಕ್ 36 ಬಿಹೆಚ್ಪಿ ಪವರ್ ಉತ್ಪಾದಿಸಿದರೆ, ಮಾಡಿಫೈಗೊಂಡಿರುವ ಈ ಬೈಕ್ 42.7 ಬಿಹೆಚ್ಪಿ ಪವರ್ ಉತ್ಪಾದಿಸುತ್ತದೆ. ಈ ಬೈಕ್ 0 -100 ಕಿ.ಮೀ ವೇಗವನ್ನು ಕೇವಲ 5 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ.
ವೀಡಿಯೊದಲ್ಲಿ ಕೇವಲ 6.8 ಸೆಕೆಂಡುಗಳಲ್ಲಿ ಈ ಬೈಕ್ 120 ಕಿ.ಮೀ ವೇಗವನ್ನು ಕ್ರಮಿಸಿದೆ. ಇದರ ಜೊತೆಗೆ 10.4 ಸೆಕೆಂಡುಗಳಲ್ಲಿ 140 ಕಿ.ಮೀ ವೇಗವನ್ನು ಹಾಗೂ 7,500 ಆರ್ಪಿಎಂನಲ್ಲಿ 29.3 ಸೆಕೆಂಡುಗಳಲ್ಲಿ 180 ಕಿ.ಮೀ ವೇಗವನ್ನು ಕ್ರಮಿಸಿದೆ.

ಇದರಿಂದಾಗಿ ಈ ಬೈಕ್ ಭಾರತದಲ್ಲಿರುವ ಅತಿ ವೇಗದ ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್ ಬೈಕ್ ಆಗಿ ಹೊರಹೊಮ್ಮಿದೆ. ಇದರ ಜೊತೆಗೆ ಇತ್ತೀಚಿಗಷ್ಟೇ ರಾಯಲ್ ಎನ್ಫೀಲ್ಡ್ ಕಂಪನಿಯು ಇಂಟರ್ಸೆಪ್ಟರ್ ಬೈಕ್ ಅನ್ನು ಬಿಎಸ್ 6 ಎಂಜಿನ್ನಲ್ಲಿ ಬಿಡುಗಡೆಗೊಳಿಸಿದೆ.