Just In
- 11 min ago
ವಿನೂತನ ವೈಶಿಷ್ಟ್ಯತೆಯೊಂದಿಗೆ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾದ ರಾಯಲ್ ಎನ್ಫೀಲ್ಡ್ ಮಿಟಿಯೊರ್ 350
- 48 min ago
ಹೊಸ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಲಾಂಚ್ ಎಡಿಷನ್ ಬಿಡುಗಡೆ
- 1 hr ago
ಸ್ಪ್ಲೆಂಡರ್ ಬೈಕುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ ಹೀರೋ ಮೋಟೊಕಾರ್ಪ್
- 2 hrs ago
2021ರ ಸ್ವಿಫ್ಟ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ
Don't Miss!
- News
ಅಂತರರಾಷ್ಟ್ರೀಯ ವಿಮಾನ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಕೆ
- Movies
ನಿರ್ದೇಶಕನಿಗೆ ಅವಮಾನ: ಸ್ಟಾರ್ ನಟ ಆಗಿದ್ರೆ ಸುಮ್ಮನೆ ಬಿಡುತ್ತಿದ್ರಾ? ಚಂದ್ರಶೇಖರ್ ಅಸಮಾಧಾನ
- Finance
ಮುಂದಿನ 6 ತಿಂಗಳಿನಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಕಾರುಗಳು, ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಗಲಿವೆ!
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್-10 ಬೈಕುಗಳಿವು
ಭಾರತದಲ್ಲಿ ಹೆಚ್ಚಿನ ಗ್ರಾಹಕರು ಮೈಲೇಜ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಬೈಕ್ ಖರೀದಿಸುವ ಗ್ರಾಹಕರು ಮೊದಲು ನೋಡುವುದು ಆ ಬೈಕ್ ಎಷ್ಟು ಮೈಲೇಜ್ ನೀಡುತ್ತದೆ ಎಂದು. ಇದರಿಂದ ತಿಳಿಯುತ್ತದೆ ಮೈಲೇಜ್ ಬಗ್ಗೆ ವಾಹನ ಖರೀದಿದಾರರೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ.

ಕುತೂಹಲಕಾರಿ ಅಂಶವೆಂದರೆ ಭಾರತದಲ್ಲಿ ಪರ್ಫಾಮೆನ್ಸ್‌ಗಿಂತಲೂ ಹೆಚ್ಚು ಮೈಲೇಜ್ ನೀಡುವ ಬೈಕುಗಳಿಗೆ ಉತ್ತಮ ಬೇಡಿಕೆಯಿದೆ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಬೈಕ್ ಖರೀದಿಸುವ ಗ್ರಾಹಕರು ಹೆಚ್ಚು ಮೈಲೇಜ್ ನೀಡುವ ಬೈಕಿನ ಕಡೆ ಹೆಚ್ಚು ಒಲವನ್ನು ಹೊಂದಿರುತ್ತಾರೆ.

ಅಧಿಕ ಮೈಲೇಜ್ ನೀಡುವ ಬೈಕ್ ಮಾದರಿಗಳಿಗೆ ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಮಾರುಕಟ್ಟೆಯಿದ್ದು, ಬಜೆಟ್ ಬೆಲೆಯಲ್ಲಿ ಖರೀದಿ ಮಾಡಬಹುದಾದ ಟಾಪ್-10 ಬಿಎಸ್-6 ಬೈಕುಗಳ ಮಾಹಿತಿ ಇಲ್ಲಿವೆ.

ದ್ವಿಚಕ್ರ ವಾಹನಗಳ ಮೈಲೇಜ್ ವಿಷಯಕ್ಕೆ ಬಂದಾಗ, ಇದರಲ್ಲಿ ಅಗ್ರಗಣ್ಯನಾಗಿರುವುದು ಬಜಾಜ್ ಸಿಟಿ 110 ಬೈಕ್. ಬಜಾಜ್ ಸಿಟಿ 110 ಬೈಕ್ ಪ್ರತಿ ಲೀಟರ್‌ಗೆ ಸುಮಾರು 104 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಅತ್ಯುತ್ತಮ ಮೈಲೇಜ್ ಹೊಂದಿರುವ ಬೈಕ್‌ಗಳು
ಸಂಖ್ಯೆ | ಬೈಕ್ ಮಾದರಿಯ | ಇಂಧನ ದಕ್ಷತೆ (ಎಆರ್‌ಎಐ ಪ್ರಮಾಣಿಕೃತ) | ಬೆಲೆ |
1 | ಬಜಾಜ್ ಸಿಟಿ100 | 104ಕಿ.ಮೀ/ಪ್ರತಿ ಲೀಟರ್ | ರೂ. 48,704 |
2 | ಟಿವಿಎಸ್ ಸ್ಟಾರ್ ಸಿಟಿ | 85ಕಿ.ಮೀ/ಪ್ರತಿ ಲೀಟರ್ | ರೂ. 62,784 |
3 | ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ | 84ಕಿ.ಮೀ/ಪ್ರತಿ ಲೀಟರ್ | ರೂ. 62,899 |
4 | ಹೀರೋ ಸೂಪರ್ಸ್ಪ್ಲೆಂಡರ್ | 83ಕಿ.ಮೀ/ಪ್ರತಿ ಲೀಟರ್ | ರೂ. 71,650 |
5 | ಹೀರೋ ಸ್ಪ್ಲೆಂಡರ್ ಪ್ಲಸ್ | 80ಕಿ.ಮೀ/ಪ್ರತಿ ಲೀಟರ್ | ರೂ. 60,310 |
6 | ಹೋಂಡಾ ಸಿಡಿ110 ಡ್ರೀಮ್ | 74ಕಿ.ಮೀ/ಪ್ರತಿ ಲೀಟರ್ | ರೂ. 65,505 |
7 | ಟಿವಿಎಸ್ ರೆಡಿಯಾನ್ | 69ಕಿ.ಮೀ/ಪ್ರತಿ ಲೀಟರ್ | ರೂ. 59,742 |
8 | ಹೋಂಡಾ ಶೈನ್ | 65ಕಿ.ಮೀ/ಪ್ರತಿ ಲೀಟರ್ | ರೂ. 68,812 |
9 | ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ | 61ಕಿ.ಮೀ/ಪ್ರತಿ ಲೀಟರ್ | ರೂ. 65,672 |
10 | ಹೀರೋ ಪ್ಯಾಷನ್ ಪ್ರೊ 100 | 60 ಕಿ.ಮೀ/ಪ್ರತಿ ಲೀಟರ್ | ರೂ. 65,750 |

ಬಜೆಟ್ ಬೈಕ್‌ಗಳ ಮೈಲೇಜ್ ವಿಷಯದಲ್ಲಿ ಬಜಾಜ್ ಸಿಟಿ 110 ಬೈಕ್ ಬೈಕ್ ಮಾದರಿಗೆ ಸರಿಸಾಟಿ ಯಾರೂ ಇಲ್ಲ ಎಂದು ಹೇಳಬಹುದು. ಇದರ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 48,704 ಗಳಾಗಿದೆ.

ಜನಪ್ರಿಯ ಬಜಾಜ್ ಸಿಟಿ 110 ಬೈಕ್ ಮಾದರಿಯು ಅಗ್ಗದ ಬೆಲೆ ಮತ್ತು ಹೆಚ್ಚಿನ ಮೈಲೇಜ್ ಬೈಕನ್ನು ಖರೀದಿಸಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದದ್ದು, ಹೆಚ್ಚು ಮಾರಾಟವಾಗುವ ಬೈಕ್‌ಗಳ ಪಟ್ಟಿಯಲ್ಲೂ ಇದು ಮುಂಚೂಣಿಯಲ್ಲಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಬಜಾಜ್ ಸಿಟಿ 110 ಬೈಕಿನ ಬಳಿಕ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಎರಡನೇ ಸ್ಥಾನವನ್ನು ಪಡೆಸಿದೆ. ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಪ್ರತಿ ಲೀಟರ್‌ಗೆ 85 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.62,784 ಗಳಾಗಿದೆ.

ಬಜಾಜ್ ಪ್ಲಾಟಿನಾ ಎಚ್-ಗೇರ್ ಬೈಕ್ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್-10 ಬೈಕುಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದು, ಇದು ಬಜಾಜ್ ಬೈಕ್ ಮಾರಾಟ ಪಟ್ಟಿಯಲ್ಲಿ ಉತ್ತಮ ಸ್ಥಾನ ಕಾಯ್ದುಕೊಂಡಿದೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಎಸ್ಐ ಸರ್ಟಿಫೈಡ್ ಟ್ರೆಡ್ ಹೆಲ್ಮೆಟ್ ಬಿಡುಗಡೆ

ಬಜಾಜ್ ಪ್ಲಾಟಿನಾ ಎಚ್-ಗೇರ್ ಬೈಕ್ ಪ್ರತಿ ಲೀಟರ್‌ಗೆ ಗರಿಷ್ಠ 84 ಕಿ.ಮೀ ಮೈಲೇಜ್ ಅನ್ನು ನೀಡಲಿದ್ದು, ಪ್ಲಾಟಿನಾ ಎಚ್-ಗೇರ್ ಬೈಕಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಇದರ ನಂತರದ ಸ್ಥಾನಗಳನ್ನು ಕ್ರಮವಾಗಿ ದೇಶಿಯ ಬ್ರ್ಯಾಂಡ್‌ನ ಅತಿ ಹೆಚ್ಚು ಮಾರಾಟವಾಗುವ ಸೂಪರ್ ಸ್ಪ್ಲೆಂಡರ್ ಮತ್ತು ಸ್ಪ್ಲೆಂಡರ್ ಪ್ಲಸ್ ಬೈಕುಗಳು ಪಡೆದುಕೊಂಡಿದೆ. ಇವು ಪ್ರತಿ ಲೀಟರ್‌ಗೆ 74 ರಿಂದ 80 ಮೈಲೇಜ್ ಹಿಂದಿರುಗಿಸಲಿವೆ.
MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಇನ್ನು ಹೋಂಡಾ ಸಿಡಿ 110 ಡ್ರೀಮ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೈಕುಗಳಲ್ಲಿ ಒಂದಾಗಿದೆ. ಇದು ತನ್ನ 110ಸಿಸಿ ಎಂಜಿನ್‌ನಿಂದ ಪ್ರತಿ ಲೀಟರ್‌ಗೆ 74 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಇದರ ನಂತರ ಸ್ಥಾನವನ್ನು ಟಿವಿಎಸ್ ರೆಡಿಯಾನ್ 110 ಸಿಸಿ ಬೈಕ್ ಪಡೆದುಕೊಂಡಿದ್ದು, ಇದು ಕೂಡಾ ಬಜೆಟ್ ಬೆಲೆಯೊಂದಿಗೆ ಉತ್ತಮ ಬೆಲೆ ಪಡೆದುಕೊಂಡಿದೆ

ಇನ್ನು ಹೋಂಡಾ ಶೈನ್ ಬೈಕ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಇದು ಭಾರತದ ಅತ್ಯಂತ ಸುಗಮ ಮತ್ತು 125 ಸಿಸಿ ಎಂಜಿನ್ ಹೊಂದಿರುವ ಬೈಕ್ ಆಗಿದೆ. ಹೋಂಡಾ ಶೈನ್ ಬೈಕ್ ಪ್ರತಿ ಲೀಟರ್‌ಗೆ 65 ಕಿಮೀ ಮೈಲೇಜ್ ಅನ್ನು ನೀಡುತ್ತದೆ.

ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್ ನಗರ ಪ್ರದೇಶಗಳಲ್ಲಿ ಸುಗಮ ಸಂಚಾರಕ್ಕೆ ಹೆಚ್ಚು ಪ್ರಸಿದ್ದವಾಗಿದೆ. ಈ ಬೈಕಿನ ಮೈಲೇಜ್ ಅನ್ನು ಸುಧಾರಿಸಲು 3ಎಸ್ (ಐಡಲ್ ಸ್ಟಾಪ್-ಸ್ಟಾರ್ಟ್) ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಇನ್ನು ಈ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಹೀರೋ ಪ್ಯಾಶನ್ ಪ್ರೊ 110 ಬೈಕ್ ಪಡೆದುಕೊಂಡಿದ್ದು, ಪ್ರತಿ ಲೀಟರ್‌ಗೆ ಸರಾಸರಿಯಾಗಿ 60 ಕಿ.ಮೀ ಮೈಲೇಜ್ ನೀಡುವ ಮೂಲಕ ಬೆಲೆಯಲ್ಲೂ ಗ್ರಾಹಕರನ್ನು ಸೆಳೆಯಲಿದೆ.