ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಸುದ್ದಿಯಾದ ಬೈಕುಗಳಿವು

ಲಾಕ್‌ಡೌನ್‌ ಅವಧಿಯಲ್ಲಿ ವಾಹನ ಮಾರಾಟವು ನೆಲ ಕಚ್ಚಿತ್ತು. ಕರೋನಾ ವೈರಸ್ ನಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಾಹನ ಮಾರಾಟವು ಮತ್ತಷ್ಟು ಕುಸಿಯಬಹುದೆಂಬ ನಿರೀಕ್ಷೆಗಳಿದ್ದವು.

ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಸುದ್ದಿಯಾದ ಬೈಕುಗಳಿವು

ಆದರೆ ಕರೋನಾ ವೈರಸ್ ಹರಡ ಬಹುದೆಂಬ ಭಯದಿಂದ ಜನರು ಸಾರ್ವಜನಿಕ ಸಾರಿಗೆಗಳಲ್ಲಿ ಸಂಚರಿಸುವುದಕ್ಕೆ ಹಿಂದೇಟು ಹಾಕುತ್ತಿದ್ದು ಸ್ವಂತ ವಾಹನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಾಹನ ಉದ್ಯಮವು ಚೇತರಿಕೆಯನ್ನು ಕಾಣುತ್ತಿದೆ. ಈ ತಿಂಗಳು ಅನೇಕ ಹೊಸ ವಾಹನಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ತಿಂಗಳು ದ್ವಿಚಕ್ರ ವಾಹನಕ್ಕೆ ಸಂಬಂಧಿಸಿದಂತೆ ಹೆಚ್ಚು ಸುದ್ದಿಯಾದ ಸಂಗತಿಗಳನ್ನು ಈ ಲೇಖನದಲ್ಲಿ ನೋಡೋಣ.

ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಸುದ್ದಿಯಾದ ಬೈಕುಗಳಿವು

1. ಹಾರ್ಲೆ-ಡೇವಿಡ್ಸನ್ ವಿದಾಯ

ಅಮೆರಿಕದ ಖ್ಯಾತ ಬೈಕ್ ತಯಾರಕ ಕಂಪನಿಯಾದ ಹಾರ್ಲೆ-ಡೇವಿಡ್ಸನ್ ಭಾರತವನ್ನು ತೊರೆಯುತ್ತಿದೆ ಎಂಬುದೇ ಈ ತಿಂಗಳ ದೊಡ್ಡ ಸುದ್ದಿ. ಭಾರತದಲ್ಲಿ ತನ್ನ ಬೈಕ್ ಗಳ ಮಾರಾಟ ಕಡಿಮೆಯಾಗಿರುವುದರಿಂದ ಕಂಪನಿಯು ಭಾರಿ ನಷ್ಟವನ್ನು ಅನುಭವಿಸುತ್ತಿದೆ ಎಂದು ಹೇಳಲಾಗಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಸುದ್ದಿಯಾದ ಬೈಕುಗಳಿವು

ಈ ಕಾರಣಕ್ಕೆ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲಿನ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಹಾರ್ಲೆ-ಡೇವಿಡ್ಸನ್ ಬೈಕುಗಳು ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಾಗೂ ಜಾವಾ ಕಂಪನಿಯ ಬೈಕುಗಳಿಗೆ ಪೈಪೋಟಿ ನೀಡುತ್ತವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಸುದ್ದಿಯಾದ ಬೈಕುಗಳಿವು

2. ಡುಕಾಟಿ ಸ್ಕ್ರ್ಯಾಂಬ್ಲರ್ -1100 ಬಿಡುಗಡೆ

ಡುಕಾಟಿ ಕಂಪನಿಯು ತನ್ನ ಸ್ಕ್ರ್ಯಾಂಬ್ಲರ್ 1100 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕಿನ ಬೆಲೆ ಭಾರತದ ಎಕ್ಸ್‌ಶೋರೂಂ ದರದಂತೆ ರೂ.11.95 ಲಕ್ಷಗಳಾಗಿದೆ. ಈ ಬೈಕ್ ಭಾರತದಲ್ಲಿ ಮಾರಾಟವಾಗುವ ಅತ್ಯಂತ ಶಕ್ತಿಶಾಲಿ ಸ್ಕ್ರ್ಯಾಂಬ್ಲರ್ ಬೈಕ್ ಆಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಸುದ್ದಿಯಾದ ಬೈಕುಗಳಿವು

3. ಟಿವಿಎಸ್ ಅಪಾಚೆ ಆರ್‌ಟಿಆರ್ 200 4 ವಿ ಎಬಿಎಸ್ ಬಿಡುಗಡೆ

ಟಿವಿಎಸ್ ಕಂಪನಿಯು ತನ್ನ ಅಪಾಚೆ ಆರ್‌ಟಿಆರ್ 200 4 ವಿ ಬೈಕ್ ಅನ್ನು ಎಬಿಎಸ್‌ನೊಂದಿಗೆ ಬಿಡುಗಡೆಗೊಳಿಸಿದೆ. ಈ ಬೈಕ್ ಅನ್ನು ಸಿಂಗಲ್ ಚಾನೆಲ್ ಎಬಿಎಸ್‌ನಲ್ಲಿ ಬಿಡುಗಡೆಗೊಳಿಸಲಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಸುದ್ದಿಯಾದ ಬೈಕುಗಳಿವು

ಇದಕ್ಕೂ ಮುನ್ನ ಈ ಬೈಕ್ ಅನ್ನು ಡ್ಯುಯಲ್ ಚಾನೆಲ್ ಎಬಿಎಸ್ ನೊಂದಿಗೆ ಬಿಡುಗಡೆಗೊಳಿಸಲಾಗಿತ್ತು. ಈಗ ಈ ಬೈಕ್ ಅನ್ನು ಸಿಂಗಲ್ ಚಾನೆಲ್ ಎಬಿಎಸ್‌ನಲ್ಲಿ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಸುದ್ದಿಯಾದ ಬೈಕುಗಳಿವು

4. ಹೋಂಡಾ ಕ್ರೂಸರ್ ಬೈಕ್ ಅನಾವರಣ

ಹೋಂಡಾ ಮೋಟಾರ್ ಸೈಕಲ್ ಕಂಪನಿಯು ತನ್ನ ಕ್ರೂಸರ್ ಬೈಕ್ ಅನ್ನು ಅನಾವರಣಗೊಳಿಸಿದೆ. ಕಂಪನಿಯು ಸೆಪ್ಟೆಂಬರ್ 30ರಂದು ಈ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಸುದ್ದಿಯಾದ ಬೈಕುಗಳಿವು

ಈ ಬೈಕಿನ ಹೆಸರು ರೆಬೆಲ್, ಹೈನೆಸ್ ಅಥವಾ ಹೆಚ್-ನೆಸ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕ್ರೂಸರ್ ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಸುದ್ದಿಯಾದ ಬೈಕುಗಳಿವು

5. ಸುಜುಕಿ ಇಂಟ್ರೂಡರ್ 250 ಟೀಸರ್ ಬಿಡುಗಡೆ

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಇತ್ತೀಚೆಗೆ ತನ್ನ ಇಂಟ್ರೂಡರ್ 250 ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಈ ಬೈಕ್‌ ಅನ್ನು ಅಕ್ಟೋಬರ್ 7ರಂದು ಅನಾವರಣಗೊಳಿಸಲಿದೆ.

Most Read Articles

Kannada
English summary
Top five bike related news of September 2020. Read in Kannada.
Story first published: Monday, September 28, 2020, 12:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X