ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌ಗಳಿವು!

ಹೊಸ ವಾಹನಗಳನ್ನು ಖರೀದಿಸುವ ಗ್ರಾಹಕರು ಪ್ರಮುಖವಾಗಿ ಯೋಚಿಸುವ ತಾಂತ್ರಿಕ ಅಂಶಗಳಲ್ಲಿ ವಾಹನಗಳ ಇಂಧನ ದಕ್ಷತೆ ಮೊದಲು ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ಹೆಚ್ಚುತ್ತಿರುವ ಇಂಧನ ಬೆಲೆಗಳ ನಡುವೆ ಉತ್ತಮ ಮೈಲೇಜ್ ಹೊಂದಿರುವ ವಾಹನಗಳ ಖರೀದಿಗೆ ಆದ್ಯತೆ ನೀಡಲಾಗುತ್ತಿದ್ದು, ಸ್ಕೂಟರ್ ಖರೀದಿದಾರರಿಗೆ ಉತ್ತಮ ಮೈಲೇಜ್ ನೀಡಬಹುದಾದ ಮಾದರಿಗಳ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌

ಭಾರತದಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಸ್ಕೂಟರ್ ಮಾದರಿಗಳು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದು, ಬಿಎಸ್-6 ಎಂಜಿನ್ ಅಪ್‌ಗ್ರೆಡ್ ನಂತರ ಸ್ಕೂಟರ್ ಮಾರಾಟವು ಮತ್ತಷ್ಟು ಹೆಚ್ಚಳವಾಗಿದೆ. ಎಂಜಿನ್ ಅಪ್‌ಗ್ರೆಡ್ ನಂತರ ವಿವಿಧ ಸ್ಕೂಟರ್ ಮಾದರಿಗಳ ಮೈಲೇಜ್ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆಗೊಂಡಿದ್ದು, ಉತ್ತಮ ಮೈಲೇಜ್ ನೀಡುವ ಪ್ರಮುಖ 125 ಸಿಸಿ ಸಾಮರ್ಥ್ಯದ ಸ್ಕೂಟರ್‌ಗಳ ಮಾಹಿತಿ ಇಲ್ಲಿದೆ.

ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌

01. ಯಮಹಾ ರೇ ಜೆಡ್ಆರ್125 ಎಫ್ಐ

125 ಸಿಸಿ ಸ್ಕೂಟರ್ ವಿಭಾಗದಲ್ಲಿ ಅತಿ ಮೈಲೇಜ್ ಹಿಂದಿರುಗಿಸುವ ಸ್ಕೂಟರ್ ಮಾದರಿಯಲ್ಲಿ ಯಮಹಾ ಇಂಡಿಯಾ ನಿರ್ಮಾಣದ ರೇ ಜೆಡ್ಆರ್125 ಎಫ್ಐ ಮಾದರಿಯು ಅಗ್ರಸ್ಥಾನದಲ್ಲಿದ್ದು, ಬಿಎಸ್-6 ಎಂಜಿನ್ ಜೋಡಣೆ ನಂತರ ಹೊಸ ರೇ ಜೆಡ್ಆರ್ ಸ್ಕೂಟರ್ ಮೈಲೇಜ್ ಪ್ರಮಾಣದಲ್ಲಿ ಶೇ. 16ರಷ್ಟು ಹೆಚ್ಚಳವಾಗಿದೆ.

ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌

ಬಿಎಸ್-4 ಮಾದರಿಯಲ್ಲಿ 113ಸಿಸಿ ಎಂಜಿನ್ ಆಯ್ಕೆ ಹೊಂದಿದ್ದ ರೇ ಜೆಡ್ಆರ್ ಸ್ಕೂಟರ್ ಮಾದರಿಯು ಬಿಎಸ್-6 ಅಪ್‌ಗ್ರೆಡ್ ನಂತರ 125 ಸಿಸಿ ಫ್ಯೂಲ್ ಇಂಜೆಕ್ಷೆಡ್(ಎಫ್ಐ) ಎಂಜಿನ್ ಪಡೆದುಕೊಂಡಿದ್ದು, 8.2-ಬಿಎಚ್‌ಪಿ, 9.7-ಎನ್ಎಂ ಟಾರ್ಕ್‌ ಉತ್ಪಾದನೆಯೊಂದಿಗೆ ಪ್ರತಿ ಲೀಟರ್‌ಗೆ ಗರಿಷ್ಠ 66.23 ರಷ್ಟು ಮೈಲೇಜ್ ಹಿಂದಿರುಗಿಸಬಲ್ಲದು.

ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌

ರೇ ಜೆಡ್ಆರ್ 125 ಎಫ್ಐ ಸ್ಕೂಟರ್ ಮಾದರಿಯು ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಅಪ್ ಸ್ವಿಚ್, ಎಲ್ಇಡಿ ಹೆಡ್‌ಲ್ಯಾಂಪ್, ಯುಎಸ್‌ಬಿ ಚಾರ್ಜರ್, ಫ್ರಂಟ್ ಡಿಸ್ಕ್ ಬ್ರೇಕ್, ಕಂಫರ್ಟ್ ಸೀಟ್ ಸೌಲಭ್ಯದೊಂದಿಗೆ ಸ್ಪೋರ್ಟಿ ಲುಕ್ ಹೊಂದಿದೆ. ಹೊಸ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 70,330 ರಿಂದ ಟಾಪ್ ಎಂಡ್ ಮಾದರಿಯು ರೂ.73,330 ಬೆಲೆ ಹೊಂದಿದೆ.

ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌

02. ಸುಜುಕಿ ಬರ್ಗ್‌ಮನ್ ಸ್ಟ್ರೀಟ್

ಸುಜುಕಿ ಬರ್ಗ್‌ಮನ್ ಸ್ಟ್ರೀಟ್ 125ಸಿಸಿ ಸಾಮರ್ಥ್ಯದ ಮ್ಯಾಕ್ಸಿ ಸ್ಕೂಟರ್ ಆವೃತ್ತಿಯಾಗಿದ್ದು, ಸ್ಪೋರ್ಟಿ ಲುಕ್‌ನೊಂದಿಗೆ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. 125 ಸಿಸಿ ಸ್ಕೂಟರ್ ಮಾದರಿಯಲ್ಲೇ ಪ್ರೀಮಿಯಂ ಮಾದರಿಯಾಗಿರುವ ಈ ಸ್ಕೂಟರ್ ಫ್ಯೂಲ್ ಇಂಜೆಕ್ಷೆಡ್ ತಂತ್ರಜ್ಞಾನ ಹೊಂದಿದೆ.

ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌

ಬಿಎಸ್-6 ವೈಶಿಷ್ಟ್ಯತೆಯ 124 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿರುವ ಬರ್ಗ್‌ಮನ್ ಸ್ಟ್ರೀಟ್ ಸ್ಕೂಟರ್ ಮಾದರಿಯು 8.6-ಬಿಹೆಚ್‌ಪಿ, 10.2-ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಪ್ರತಿ ಲೀಟರ್‌ಗೆ 55.88 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌

ಸುಜುಕಿ ಬರ್ಗ್‌ಮನ್ ಸ್ಟ್ರೀಟ್ ಅನ್ನು ಸ್ಟೈಲಿಶ್ ಸ್ಕೂಟರ್ ಎಂದು ಗುರುತಿಸಲಾಗಿದ್ದು, ಇದು ಭಾರತದಲ್ಲಿ ಮಾರಾಟವಾಗುತ್ತಿರುವ ಇತರೆ ಸ್ಕೂಟರ್‌ಗಳಿಗಿಂತ ವಿಭಿನ್ನವಾಗಿದೆ. ಬರ್ಗ್‌ಮನ್ ಸ್ಟ್ರೀಟ್ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 81,100 ಬೆಲೆ ಹೊಂದಿದ್ದು, ಬ್ಲೂಟೂಥ್ ಕನೆಕ್ಟಿಂಗ್ ಮೂಲಕ ವಿವಿಧ ಫೀಚರ್ಸ್‌ಗಳನ್ನು ನಿಯಂತ್ರಣ ಮಾಡಬಹುದಾಗಿದೆ.

ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌

03. ಸುಜುಕಿ ಆಕ್ಸೆಸ್ 125

ಸ್ಕೂಟರ್ ಮಾದರಿಯಲ್ಲಿ ಸದ್ಯ ಅತಿ ಹೆಚ್ಚು ಮಾರಾಟಗೊಳ್ಳುವ ಮಾದರಿಯಾಗಿರುವ ಸುಜುಕಿ ಆಕ್ಸೆಸ್ 125 ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಡ್ರಮ್ ಸಿಬಿಎಸ್, ಡ್ರಮ್ ಅಲಾಯ್ ಸಿಬಿಎಸ್, ಡಿಸ್ಕ್ ಸಿಬಿಎಸ್, ಡ್ರಮ್ ಸ್ಪೆಷಲ್ ಎಡಿಷನ್ ಮತ್ತು ಡಿಸ್ಕ್ ಸ್ಪೆಷಲ್ ಎಡಿಷನ್ ಹೊಂದಿದೆ.

ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌

ಆಕ್ಸೆಸ್ 125 ಸ್ಕೂಟರ್‌ ಆರಂಭಿಕವಾಗಿ ಡ್ರಮ್ ಸಿಬಿಎಸ್ ಮತ್ತು ಹೈ ಎಂಡ್ ಮಾದರಿಯಾಗಿ ಡಿಸ್ಕ್ ಸ್ಪೆಷಲ್ ಎಡಿಷನ್ ಮಾರಾಟವಾಗುತ್ತಿದ್ದು, 124 ಸಿಸಿ ಎಂಜಿನ್‌ನೊಂದಿಗೆ 8.7-ಬಿಎಚ್‌ಪಿ, 10 ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಪ್ರತಿ ಲೀಟರ್‌ಗೆ 52.45 ಕಿ.ಮೀ ಮೈಲೇಜ್ ನೀಡುತ್ತದೆ.

ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌

ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಆಕ್ಸೆಸ್ 125 ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 70,500 ರಿಂದ ಸ್ಪೆಷಲ್ ಎಡಿಷನ್ ಮಾದರಿಯು ರೂ.74,800 ಬೆಲೆ ಹೊಂದಿದೆ.

ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌

04. ಟಿವಿಎಸ್ ಎನ್‌ಟಾರ್ಕ್ 125

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು ಸದ್ಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್, ರೇಸ್ ಎಡಿಷನ್ ಮತ್ತು ಸೂಪರ್ ಸ್ಕ್ವಾಡ್ ಎಡಿಷನ್ ಎನ್ನುವ ನಾಲ್ಕು ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಬಿಎಸ್-6 ಸ್ಕೂಟರ್‌ನಲ್ಲಿ ಎಕ್ಸಾಸ್ಟ್ ಸಿಸ್ಟಂ ಬದಲಾವಣೆ ಮಾಡಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌

125 ಸಿಸಿ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಹೊಂದಿರುವ ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು 9.1-ಬಿಎಚ್‌ಪಿ, 10.5-ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಪ್ರತಿ ಲೀಟರ್‌ಗೆ 51.54ಕಿ.ಮೀ ಮೈಲೇಜ್ ನೀಡಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 68,885 ಮತ್ತು ಟಾಪ್ ಎಂಡ್ ಮಾದರಿಯು ರೂ. 77,865 ಬೆಲೆ ಹೊಂದಿದೆ.

ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌

05. ಎಪ್ರಿಲಿಯಾ ಸ್ಟ್ರೋಮ್ 125

ಪಿಯಾಜಿಯು ಕಂಪನಿಯು ತನ್ನ ಬಿಎಸ್-6 ಎಪ್ರಿಲಿಯಾ ಸ್ಟ್ರೋಮ್ 125 ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಸ್ಟ್ರೋಮ್ 125 ಸ್ಕೂಟರ್‌ನಲ್ಲಿ ಫ್ರಂಟ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಹೊಸ ಫೀಚರ್ಸ್‌ಗೊಂದಿಗೆ ಬಿಡುಗಡೆಗೊಳಿಸಲಾಗಿದೆ.

ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌

124.45 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಹೊಂದಿರುವ ಈ ಸ್ಕೂಟರ್ 9.7-ಬಿಹೆಚ್‍ಪಿ ಮತ್ತು 9.60-ಎನ್ಎಂ ಟಾರ್ಕ್ ಅನ್ನು ಉತ್ಪಾದನೆಯೊಂದಿಗೆ ಪ್ರತಿ ಲೀಟರ್‌ಗೆ 50.08 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಹೊಸ ಸ್ಕೂಟರ್ ಮಾದರಿಯು ಪುಣೆ ಎಕ್ಸ್‌ಶೋರೂಂ ಪ್ರಕಾರ ರೂ. 91,321 ಬೆಲೆ ಹೊಂದಿದೆ.

ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌

ವೆಸ್ಪಾ ರೇಸಿಂಗ್ 125

ವೆಸ್ಪಾ ಬ್ರಾಂಡ್‌ ತನ್ನ ರೇಸಿಂಗ್ ಸಿಕ್ಸ್ಟಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ್ದು, ಎರಡು ಪ್ರಮುಖ ವೆರಿಯೆಂಟ್‌ಗಳಲ್ಲಿ ಅಭಿವೃದ್ದಿಗೊಂಡಿರುವ ಹೊಸ ಸ್ಕೂಟರ್ ಮಾದರಿಯು ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಿರಲಿದೆ.

ಅತಿಹೆಚ್ಚು ಮೈಲೇಜ್ ನೀಡುವ 125ಸಿಸಿ ಸಾಮರ್ಥ್ಯದ ಬಿಎಸ್-6 ಸ್ಕೂಟರ್‌

ರೇಸಿಂಗ್ ಸಿಕ್ಸ್ಟಿ ಸ್ಪೆಷಲ್ ಎಡಿಷನ್‌ನಲ್ಲಿ 125 ಮಾದರಿಯು 124 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಮೂಲಕ 9.8-ಬಿಎಚ್‌ಪಿ, 9.6-ಎನ್ಎಂ ಟಾರ್ಕ್ ಉತ್ಪಾದಿಸುವ ಮೂಲಕ ಪ್ರತಿ ಲೀಟರ್‌ಗೆ 47.75 ಕಿ.ಮೀ ಮೈಲೇಜ್ ನೀಡಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.20 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Top mileage 125cc scooters in india. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X