ಜನಪ್ರಿಯ ಬಿಎಸ್-6 ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಟ್ರಯಂಫ್ ಕಂಪನಿಯು ತನ್ನ ಬೊನೆವೆಲ್ಲಿ ಸರಣಿಯಲ್ಲಿರುವ ಎಲ್ಲಾ ಬೈಕುಗಳ ಮೇಲೆ ವಿಶೇಷ ಆಫರ್‌ಗಳನ್ನು ಘೋಷಿಸಿದೆ. ಟ್ರಯಂಫ್ ಬೊನೆವೆಲ್ಲಿ ಸರಣಿಯ ಸ್ಟ್ರೀಟ್ ಟ್ವಿನ್, ಬೊನೆವೆಲ್ಲಿ ಟಿ100, ಬೊನೆವಿಲ್ಲೆ ಟಿ120 ಮತ್ತು ಸ್ಪೀಡ್‌ಮಾಸ್ಟರ್‌ ಬೈಕುಗಳ ಮೇಲೆ ಅಕ್ಸೆಸರೀಸ್‌ಗಳ ಆಫರ್ ಅನ್ನು ನೀಡಿದೆ.

ಜನಪ್ರಿಯ ಬಿಎಸ್-6 ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಟ್ರಯಂಫ್ ಕಂಪನಿಯು ಬೊನೆವೆಲ್ಲಿ ಸರಣಿಯ ಈ ಎಲ್ಲಾ ಹೊಸ ಬೈಕುಗಳಿಗೆ ರೂ.61,000 ಮೌಲ್ಯದ ಅಕ್ಸೆಸರೀಸ್‌ಗಳನ್ನು ಉಚಿತವಾಗಿ ನೀಡುತ್ತಿದೆ. ಬೊನೆವೆಲ್ಲಿ ಬ್ರ್ಯಾಂಡ್‌ನ 61 ವರ್ಷಗಳ ಸಂಭ್ರಮದ ಭಾಗವಾಗಿ ಈ ವಿಶೇಷವಾದ ಅಫರ್ ಅನ್ನು ಘೋಷಿಸಿದೆ. ಈ ತಿಂಗಳ ಅಂತ್ಯದವರೆಗೂ ಈ ಭರ್ಜರಿ ಆಫರ್‌ಗಳು ಲಭ್ಯವಿರುತ್ತದೆ. ಹಬ್ಬದ ಸೀಸನ್ ನಲ್ಲಿ ಬೈಕಿನ ಮಾರಾಟವನ್ನು ಹೆಚ್ಚಿಸಲು ಈ ಆಫರ್‌ಗಳು ಸಹಕಾರವಾಗುತ್ತದೆ.

ಜನಪ್ರಿಯ ಬಿಎಸ್-6 ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಟ್ರಯಂಫ್ ಬೊನೆವೆಲ್ಲಿ ಸರಣಿಯ ಎಲ್ಲಾ ಹೊಸ ಬೈಕುಗಳಿಗೆ ಕಾಸ್ಮೆಟಿಕ್ ಮತ್ತು ಪರ್ಫಾಮೆನ್ಸ್ ಅಪ್‌ಗ್ರೇಡ್‌ ಅಕ್ಸೆಸರೀಸ್‌ಗಳನ್ನು ನಿಡಲಾಗುತ್ತದೆ. ಟ್ರಯಂಫ್ ಬೊನೆವೆಲ್ಲಿ ಟಿ100 ಮತ್ತು ಬೊನೆವಿಲ್ಲೆ ಟಿ120 ಬೈಕುಗಳ ಬೆಲೆಯು ಕ್ರಮವಾಗಿ ಭಾರತೀಯ ಎಕ್ಸ್ ಶೋರೂಂ ಪ್ರಕಾರ ರೂ. 8.87 ಲಕ್ಷ ಮತ್ತು ರೂ.9.97 ಲಕ್ಷಗಳಾಗಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಜನಪ್ರಿಯ ಬಿಎಸ್-6 ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಅಕ್ಸೆಸರೀಸ್‌ಗಳಲ್ಲಿ ರೇರ್ ಗ್ರ್ಯಾಬ್ ರೈಲ್, ರೇರ್ ಲಗೇಜ್ ರ‍್ಯಾಕ್, ಪನೀರ್ ಲಗೇಜ್ ಬಾಕ್ಸ್, ರೈಡರ್ ಮತ್ತು ಪಿಲಿಯನ್ ಬ್ಯಾಕ್‌ರೆಸ್ಟ್, ಎಂಜಿನ್ ಬ್ಯಾಷ್ ಪ್ಲೇಟ್ ಮತ್ತು ಚೈನ್ ಗಾರ್ಡ್ ಗಳನ್ನು ಒಳಗೊಂಡಿರುತ್ತದೆ.

ಜನಪ್ರಿಯ ಬಿಎಸ್-6 ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಕಾಸ್ಮೆಟಿಕ್ ಅಕ್ಸೆಸರೀಸ್‌ಗಳಲ್ಲಿ ವಾಲ್ವ್ ಕ್ಯಾಪ್ಸ್, ಕ್ಲಚ್ ಕವರ್, ಬಾರ್-ಎಂಡ್ ಮಿರರ್‌ಗಳು, ಬ್ಲ್ಯಾಕ್-ಫಿನಿಷ್ಡ್ ವ್ಹಿಲ್ ಗಳು, ಬಣ್ಣದ ಫ್ಲೈ ಸ್ಕ್ರೀನ್ ಮತ್ತು ಇತರ ಅಕ್ಸೆಸರೀಸ್ ಸೇರಿವೆ.

MOST READ: ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಜನಪ್ರಿಯ ಬಿಎಸ್-6 ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಇನ್ನು ಪರ್ಫಾಮೆನ್ಸ್ ಮತ್ತು ಎಲೆಕ್ಟ್ರಿಕ್ ಅಪ್‌ಗ್ರೇಡ್‌ ಅಕ್ಸೆಸರೀಸ್ ಗಳಲ್ಲಿ ಕಸ್ಟಮ್ ಹೆಡ್ ರಿಂಗ್ಸ್, ಎಲ್ಇಡಿ ಇಂಡಿಕೇಟರ್, ಕ್ರೂಸ್ ಕಂಟ್ರೋಲ್ ಕಿಟ್, ಹಿಟೆಡ್ ಗ್ರಿಪ್ಸ್, ಹೊಂದಾಣಿಕೆ ಮಾಡಬಹುದಾದ ಕ್ಲಚ್ ಮತ್ತು ಬ್ರೇಕ್ ಲಿವರುಗಳು ಮತ್ತು ಸ್ಮಾರ್ಟ್ ಫೋನ್ ಹೋಲ್ಡರ್ ಕಿಟ್ ಅನ್ನು ಒಳಗೊಂಡಿರುತ್ತದೆ.

ಜನಪ್ರಿಯ ಬಿಎಸ್-6 ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಟ್ರಯಂಫ್ ಕಂಪನಿಯು ಹೊಸ ಸ್ಟ್ರೀಟ್ ಟ್ವಿನ್ ಮತ್ತು ಸ್ಪೀಡ್‍‍‍ಮಾಸ್ಟರ್‍ ಬೈಕುಗಳನ್ನು ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಇದರಲ್ಲಿ ಬಿಎಸ್-6 ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕಿನ ಆರಂಭಿಕ ಬೆಲೆಯು ರೂ.7.45 ಲಕ್ಷಗಳಾಗಿದೆ. ಬಿಎಸ್ 6 ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕಿನಲ್ಲಿ 900 ಸಿಸಿ ಟ್ವಿನ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಜನಪ್ರಿಯ ಬಿಎಸ್-6 ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಇನ್ನು ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.11.33 ಲಕ್ಷ ಗಳಾಗಿದೆ. ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕಿನಲ್ಲಿ 1,200 ಸಿಸಿ ಲಿಕ್ವಿಡ್-ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,250 ಆರ್‌ಪಿಎಂನಲ್ಲಿ 78 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 107 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಜನಪ್ರಿಯ ಬಿಎಸ್-6 ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಟ್ರಯಂಫ್ ಕಂಪನಿಯು ತನ್ನ ಬೊನೆವೆಲ್ಲಿ ಸರಣಿಯ ಎಲ್ಲಾ ಬೈಕುಗಳ ಮೇಲೆ ರೂ.61,000 ಮೌಲ್ಯದ ಅಕ್ಸೆಸರೀಸ್‌ಗಳ ಆಫರ್ ಅನ್ನು ನೀಡುತ್ತಿದೆ. ಈ ಮಾರ್ಡನ್ ಕ್ಲಾಸಿಕ್ ಬೈಕುಗಳ ಮೇಲಿನ ಈ ಆಫರ್‌ಗಳು ಇದೇ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ.

Most Read Articles

Kannada
English summary
Triumph Bonneville Range Gets Free Accessories Worth Rs 61,000. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X