ಹೊಸ ಫೀಚರ್ ಪಡೆಯಲಿದೆ ಟ್ರಯಂಫ್ ಸೂಪರ್‌ಬೈಕ್‌ಗಳು

ಟ್ರಯಂಫ್ ಕಂಪನಿಯ ಹಿಂದಿನ ತಲೆಮಾರಿನ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಮತ್ತು ಟೈಗರ್ 800 ಬೈಕುಗಳು ಹೊಸ ಫೀಚರ್ ಅನ್ನು ಪಡೆಯಲಿದೆ. ಈ ಎರಡು ಜನಪ್ರಿಯ ಟ್ರಯಂಫ್ ಸೂಪರ್‌ಬೈಕ್‌ಗಳು ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಅನ್ನು ಪಡೆಯಲಾಗುತ್ತದೆ.

ಹೊಸ ಫೀಚರ್ ಪಡೆಯಲಿದೆ ಟ್ರಯಂಫ್ ಸೂಪರ್‌ಬೈಕ್‌ಗಳು

ಇನ್ನು ಮೈ ಟ್ರಯಂಫ್ ಅಪ್ಲಿಕೇಶನ್ ಐಒಎಸ್ ಮತ್ತು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಅದನ್ನು ಡೌನ್‌ಲೋಡ್ ಮಾಡಲು ಉಚಿತವಾಗಿದೆ. ಗೂಗಲ್‌ನೊಂದಿಗೆ ನಿರ್ಮಿಸಲಾಗಿರುವ ಟ್ರಯಂಫ್‌ನ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸಿಸ್ಟಂ ಅನ್ನು ಸಹ ಒಳಗೊಂಡಿದೆ. ಟ್ರಯಂಫ್ ಬೈಕುಗಳಲ್ಲಿ ಬ್ಲೂಟೂತ್ ಕನೆಕ್ಟಿವಿಟಿಯಲ್ಲಿ ನಿಮ್ಮ ಬೈಕುಗಳಲ್ಲಿನ ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ, ಇದರಲ್ಲಿ ಓಡೋಮೀಟರ್, ಸರಾಸರಿ ಇಂಧನ ಬಳಕೆ ಮತ್ತು ಸರ್ವಿಸ್ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ಹೊಸ ಫೀಚರ್ ಪಡೆಯಲಿದೆ ಟ್ರಯಂಫ್ ಸೂಪರ್‌ಬೈಕ್‌ಗಳು

ಟ್ರಯಂಫ್ ಕಂಪನಿಯ 2017-2019ರ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಮಾದರಿಗೆ ಮತ್ತು 2018-2019ರ ಟೈಗರ್ 800 ಮಾದರಿಯನ್ನು ಹೊಂದಿರುವ ಗ್ರಾಹಕರು ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಅನ್ನು ಪಡೆಯಬಹುದಾಗಿದೆ. ಆದರೆ ಹೊಸದಾಗಿ ಅಪ್ದೇಟ್ ಮಾಡಿ ಬಿಡುಗಡೆಗೊಳಿಸಿದ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಮಾದರಿಯು ಈ ಫೀಚರ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಫೀಚರ್ ಪಡೆಯಲಿದೆ ಟ್ರಯಂಫ್ ಸೂಪರ್‌ಬೈಕ್‌ಗಳು

ಇನ್ನು ಟ್ರಯಂಫ್ ಕಂಪನಿಯ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಮತ್ತು ಟೈಗರ್ 800 ಬೈಕುಗಳಲ್ಲಿ ನೀಡಿದ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಅನ್ನು ಅಳವಡಿಸುವ ಬೆಲೆಯನ್ನು ಬಹಿರಂಗಪಡಿಸಲಿಲ್ಲ. ಗ್ರಾಹಕರು ಟ್ರಯಂಫ್ ಕಂಪನಿಯ ಡೀಲರ್ ಅನ್ನು ಸಂಪರ್ಕಿಸಿ ಈ ಫೀಚರ್ ಅನ್ನು ಪದೆದುಕೊಳ್ಳಬಹುದಾಗಿದೆ.

ಹೊಸ ಫೀಚರ್ ಪಡೆಯಲಿದೆ ಟ್ರಯಂಫ್ ಸೂಪರ್‌ಬೈಕ್‌ಗಳು

ಇತ್ತೀಚೆಗೆ ಬಿಡುಗಡೆಗೊಂಡ ಹೊಸ ತಲೆಮಾರಿನ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್ ರಿವೈಸ್ ಮಾಡಲಾದ ಡಿಸೈನ್ ಆಕ್ಸೆಸರೀಸ್, ಆಫ್ ರ್‍ಯಾಕ್ ಟೆಕ್ನಾಲಜಿ ಹಾಗೂ ಮಿಡ್ ಸರಣಿಯ ಬಿ‍ಎಸ್ 6 ಎಂಜಿನ್‍ ಅನ್ನು ಹೊಂದಿದೆ. ಟ್ರಯಂಫ್ ಕಂಪನಿಯ ಐಷಾರಾಮಿ ಬೈಕುಗಳಲ್ಲಿ ಹೊಸ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಕೂಡ ಒಂದಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಫೀಚರ್ ಪಡೆಯಲಿದೆ ಟ್ರಯಂಫ್ ಸೂಪರ್‌ಬೈಕ್‌ಗಳು

ಮಾರುಕಟ್ಟೆಯಲ್ಲಿರುವ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕಿಗಿಂತ ಹೆಚ್ಚು ರಗಡ್ ಲುಕ್ ಅನ್ನು ಹೊಂದಿದೆ. 2020ರ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್, ಇಂಟಿಗ್ರೇಟೆಡ್ ಟ್ವಿನ್ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್ ಹಾಗೂ ಇಂಟಿಗ್ರೇಟೆಡ್ ಡಿ‍ಆರ್‍ಎಲ್‍‍ಗಳನ್ನು ಹೊಂದಿದೆ.

ಹೊಸ ಫೀಚರ್ ಪಡೆಯಲಿದೆ ಟ್ರಯಂಫ್ ಸೂಪರ್‌ಬೈಕ್‌ಗಳು

ಟ್ರಯಂಫ್ ಕಂಪನಿಯು ಈ ಬೈಕಿನ ಬಾಡಿ ಪ್ಯಾನೆಲ್, ರೇರ್ ಸೀಟ್‍‍ಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳಿಂದ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಫೀಚರ್ ಪಡೆಯಲಿದೆ ಟ್ರಯಂಫ್ ಸೂಪರ್‌ಬೈಕ್‌ಗಳು

ಟ್ರಯಂಫ್ ಕಂಪನಿಯು ಈ ಬೈಕಿನ ಟಿ‍ಎಫ್‍‍ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ನಲ್ಲಿ ಹೊಸ ಗ್ರಾಫಿಕ್ಸ್ ಗಳನ್ನು ಅಳವಡಿಸಿದೆ. ಗ್ರಾಫಿಕ್ಸ್ ನಿಂದಾಗಿ ಈ ಬೈಕು ನೋಡಲು ಆಕರ್ಷಕವಾಗಿದೆ.

ಹೊಸ ಫೀಚರ್ ಪಡೆಯಲಿದೆ ಟ್ರಯಂಫ್ ಸೂಪರ್‌ಬೈಕ್‌ಗಳು

ಈ ಹೊಸ ಬೈಕಿನಲ್ಲಿ ಬ್ಲೂಟೂತ್ ಸೇರಿದಂತೆ ಹಲವಾರು ಫೀಚರ್‍‍ಗಳಿವೆ. ಇನ್ನು ಹೊಸ ತಲೆಮಾರಿನ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕಿನಲ್ಲಿ 765 ಸಿಸಿಯ ಇನ್‍‍ಲೈನ್ ಎಂಜಿನ್ ಅಳವಡಿಸಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಫೀಚರ್ ಪಡೆಯಲಿದೆ ಟ್ರಯಂಫ್ ಸೂಪರ್‌ಬೈಕ್‌ಗಳು

ಈ ಎಂಜಿನ್ 121 ಬಿ‍ಹೆಚ್‍‍ಪಿ ಪವರ್ ಹಾಗೂ 79 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಟ್ರಯಂಫ್ ಎಂಜಿನಿಯರ್‍‍ಗಳು ಈ ಬೈಕಿನಲ್ಲಿರುವ ರಿಸೆಷನ್ ಸೈಕಲ್ ಅನ್ನು 7%ನಷ್ಟು ಕಡಿಮೆಗೊಳಿಸಿದ್ದಾರೆ.

ಹೊಸ ಫೀಚರ್ ಪಡೆಯಲಿದೆ ಟ್ರಯಂಫ್ ಸೂಪರ್‌ಬೈಕ್‌ಗಳು

ಈ ಎಂಜಿನ್ ಅನ್ನು ಟ್ರಯಂಫ್ ಕಂಪನಿಯ ಮೋಟೊ 2 ಎಂಜಿನ್ ಅಪ್‍‍ಗ್ರೇಡ್ ಮಾಡುತ್ತಿರುವ ತಂಡವು ತಯಾರಿಸಿದೆ. ಈ ಬೈಕ್ ಹೊಸದಾದ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದೆ. ಮಾರುಕಟ್ಟೆಯಲ್ಲಿರುವ ಬಿಎಸ್ 4 ಬೈಕಿನಲ್ಲಿ ಅಪ್‍‍ಶಿಫ್ಟ್ ಇದ್ದರೆ, ಹೊಸ ಬೈಕಿನಲ್ಲಿ ಅಪ್ ಅಂಡ್ ಡೌನ್ ಕ್ವಿಕ್ ಶಿಫ್ಟರ್ ಅನ್ನು ಅಳವಡಿಸಲಾಗಿದೆ.

ಹೊಸ ಫೀಚರ್ ಪಡೆಯಲಿದೆ ಟ್ರಯಂಫ್ ಸೂಪರ್‌ಬೈಕ್‌ಗಳು

ಇನ್ನು ಟ್ರಯಂಫ್ ಕಂಪನಿಯು ಮುಂದಿನ ವರ್ಷ ಭಾರತದಲ್ಲಿ ಆಕ್ರಮಣಕಾರಿ ಮಾರುಕಟ್ಟೆ ತಂತ್ರಗಳನ್ನು ಅನುಸರಿಸಲು ಮುಂದಾಗಲಿದೆ. ಮುಂದಿನ ಆರು ತಿಂಗಳಲ್ಲಿ ಒಂಬತ್ತು ಹೊಸ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಕಂಪನಿಯು ಯೋಜಿಸುತ್ತಿವೆ.

Most Read Articles

Kannada
English summary
Triumph Street Triple RS and Tiger 800 get Bluetooth-Connectivity Option. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X