ರಾಕೆಟ್ 3ಆರ್ ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ಟ್ರಯಂಫ್ ಮೋಟಾರ್‌ಸೈಕಲ್‌ ಕಂಪನಿಯು ತನ್ನ ರಾಕೆಟ್ 3ಆರ್ ಬೈಕಿನ ವಿತರಣೆಯನ್ನು ಭಾರತದಲ್ಲಿ ಪ್ರಾರಂಭಿಸಿದೆ. ಇತ್ತೀಚೆಗೆ ಟ್ರಯಂಫ್ ಕಂಪನಿಯು ತನ್ನ ರಾಕೆಟ್ 3ಆರ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು.

ರಾಕೆಟ್ 3ಆರ್ ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ಟ್ರಯಂಫ್ ರಾಕೆಟ್ 3ಆರ್ ಬೈಕ್ ಭಾರತದಲ್ಲಿ ಬಿಡುಗಡೆಯಾದ ಸಮಯದಲ್ಲೇ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದರು. ಈಗ ಕಂಪನಿಯು ಹಂತ ಹಂತವಾಗಿ ವಿತರಣೆ ಮಾಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ. ಇದರ ಭಾಗವಾಗಿ ಮೊದಲ ಹಂತದಲ್ಲಿ ದೇಶದ ಎಂಟು ನಗರಗಳಲ್ಲಿ ವಿತರಣೆಯನ್ನು ಮಾಡಲಾಗುತ್ತದೆ. ಈ ಎಂಟು ನಗರಗಳು ಬೆಂಗಳೂರು, ಅಹಮದಾಬಾದ್, ಹೈದರಾಬಾದ್, ಕೊಚ್ಚಿ, ಚಂಡೀಗಡ, ಪುಣೆ, ದೆಹಲಿ ಮತ್ತು ಮುಂಬೈ ಆಗಿದೆ.

ರಾಕೆಟ್ 3ಆರ್ ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ಈ ಬೈಕಿನ ಬೆಲೆಯು ರೂ.18 ಲಕ್ಷಗಳಾಗಿದೆ. ಈ ಬೈಕ್‍ ಅನ್ನು ಹೊಸ ಫೀಚರ್ಸ್ ಮತ್ತು 2500 ಸಿಸಿ ಎಂಜಿನ್‍‍ನೊಂದಿಗೆ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಟ್ರಯಂಫ್ 3 ಬೈಕ್ ಅನ್ನು ಎರಡು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ.

ರಾಕೆಟ್ 3ಆರ್ ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ರಾಕೆಟ್ 3 ಆಗ್ರೇಸಿವ್ ರೈಡ್‍ಗೆ ಪ್ರಸಿದ್ದಿಯಾಗಿರುವ ರೋಡ್‍ಸ್ಟರ್ ಆಗಿದ್ದರೆ, ಇನ್ನೊಂದು ರಾಕೆಟ್ 3 ಜಿಟಿ ಆರಾಮದಾಯಕ ರೈಡ್‍ಗೆ ಪ್ರಸಿದ್ದಿಯಾಗಿದೆ. ರಾಕೆಟ್ 3ಆರ್ ಬೈಕ್ ಅನ್ನು ಬ್ರಿಟಿನ್ ಮೂಲದ ಟ್ರಯಂಫ್ ಕಂಪನಿಯ ಹೊಸ ಪ್ಲಾಟ್‍‍ಫಾರಂ ಆಧಾರದ ಮೇಲೆ ನಿರ್ಮಿಸಲಾಗಿದೆ.

ರಾಕೆಟ್ 3ಆರ್ ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ರಾಕೆಟ್ 3ಆರ್ ಬೈಕ್ ಕಡಿಮೆ ಎತ್ತರದ ಸೀಟ್, ಅಡ್ಜಸ್ಟಬಲ್ ಬ್ಯಾಕ್ ರೆಸ್ಟ್ ಮುಂದೆ ವಿಂಡ್‍‍ಸ್ಕ್ರೀನ್‍ನೊಂದಿಗೆ ಅರಾಮದಾಯಕ ಸವಾರಿ ಮಾಡಲು ಸೂಕ್ತವಾಗಿದೆ.

ರಾಕೆಟ್ 3ಆರ್ ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

2020ರ ಹೊಸ ಟ್ರಯಂಫ್ ರಾಕೆಟ್ 3ಆರ್ ಬೈಕ್ 2,500 ಸಿಸಿಯ ಇನ್ ಲೈನ್ 3 ಸಿಲಿಂಡರ್ ಲಿಕ್ವಿಡ್ ಕೂಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,000 ಆರ್‍‍ಪಿ‍ಎಂನಲ್ಲಿ 167 ಬಿ‍‍ಹೆಚ್‍‍ಪಿ ಪವರ್ ಮತ್ತು 4,000 ಆರ್‍‍ಪಿ‍ಎಂನಲ್ಲಿ 221 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ರಾಕೆಟ್ 3ಆರ್ ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ಈ ಎಂಜಿನ್ ಹೊಸದಾದ ಕ್ರಾಂಕ್‍‍ಕೇಸ್ ಅಸೆಂಬ್ಲಿ, ಬ್ಯಾಲೆನ್ಸರ್ ಶಾಫ್ಟ್ ಹಾಗೂ ಲ್ಯುಬ್ರಿಕೇಷನ್ ಸಿಸ್ಟಂಗಳನ್ನು ಹೊಂದಿದೆ. ಇದರಿಂದಾಗಿ ಈ ಎಂಜಿನ್‍‍ನ ತೂಕವು 18 ಕೆ.ಜಿಯಷ್ಟು ಕಡಿಮೆಯಾಗಿದೆ. ಟ್ರಯಂಫ್ ಕಂಪನಿಯು ಈ ಬೈಕಿನ ತೂಕವನ್ನು ಹಳೆಯ ತಲೆಮಾರಿನ ಬೈಕಿಗೆ ಹೋಲಿಸಿದರೆ ಸುಮಾರು 40 ಕೆ.ಜಿಯಷ್ಟು ಕಡಿಮೆಗೊಳಿಸಿದೆ.

ರಾಕೆಟ್ 3ಆರ್ ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

2020ರ ರಾಕೆಟ್ 3ಆರ್ ಬೈಕಿನಲ್ಲಿ ಹೀಟೆಡ್ ಗ್ರಿಪ್, ಟಾರ್ಕ್ ಅಸಿಸ್ಟೆಡ್ ಕ್ಲಚ್, ಎಲ್ಇಡಿ ಹೆಡ್‌ಲ್ಯಾಂಪ್‌, ಟೇಲ್‌ಲೈಟ್‌, ಎಕ್ಸ್ ಟೆಂಡೆಡ್ ಫ್ಲೈ ಸ್ಕ್ರೀನ್, ಅಡ್ಜಸ್ಟಬಲ್ ಫುಟ್‌ಪೆಗ್‌, ಸ್ಪೊರ್ಟಿ 20 ಸ್ಪೋಕ್ ಅಲ್ಯೂಮಿನಿಯಂ ವ್ಹೀಲ್ ಸೇರಿದಂತೆ ಹಲವು ಸ್ಟಾಂಡರ್ಡ್ ಫೀಚರ್‍‍ಗಳಿವೆ.

ರಾಕೆಟ್ 3ಆರ್ ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ಟ್ರಯಂಫ್ ರಾಕೆಟ್ 3ಆರ್ ಬೈಕ್ ಹೊಸ ಅಲ್ಯುಮಿನಿಯಂ ಚಾಸೀಸ್ ಅನ್ನು ಸಹ ಹೊಂದಿದೆ. ರಾಕೆಟ್ 3 ಬೈಕಿನಲ್ಲಿ ಸಸ್ಪೆಂಷನ್‍‍ಗಳಿಗಾಗಿ ಮುಂಭಾಗದಲ್ಲಿ 47 ಎಂಎಂ ಯುಎಸ್‍‍ಡಿ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್‍‍ಗಳಿವೆ.

ರಾಕೆಟ್ 3ಆರ್ ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ಟ್ರಯಂಫ್ ರಾಕೆಟ್ 3ಆರ್ ಬೈಕಿನಲ್ಲಿ ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 320 ಎಂಎಂ ಟ್ವಿನ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಸಿಂಗಲ್ 300 ಎಂಎಂ ಡಿಸ್ಕ್ ಗಳಿವೆ. 2020ರ ರಾಕೆಟ್ 3 ಬೈಕಿನಲ್ಲಿ ಫೂಚರಿಸ್ಟಕ್ ವೈರ್ಡ್ ಹ್ಯಾಂಡಲ್‍‍ಬಾರ್‍, ಟಾರ್ಕ್ ಅಸಿಸ್ಟ್ ಹೈಡ್ರಾಲಿಕ್ ಕ್ಲಚ್, ಫುಲ್ ಅಡ್ಜಸ್ಟಬಲ್ ಶೋವಾ ಮೊನೊಶಾಕ್ ಆರ್‍ಎಸ್‍ಯು, ಶೋವಾ ಯುಎಸ್‍ಡಿ ಫ್ರಂಟ್ ಪೋರ್ಕ್, ಬ್ರೆಂಬೊ ಬ್ರೇಕ್ ಮತ್ತು ಟ್ರಿಪಲ್ ಎಕ್ಸಾಸ್ಟ್ ಸಿಸ್ಟಂ ಅಳವಡಿಸಲಾಗಿದೆ.

ರಾಕೆಟ್ 3ಆರ್ ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ಹೊಸ ರಾಕೆಟ್ 3ಆರ್ ಬೈಕಿನಲ್ಲಿ ಕಾರ್ನರಿಂಗ್ ಎಬಿಎಸ್, ಕ್ರೂಸ್ ಕಂಟ್ರೋಲ್, ಟಿಎಫ್‍‍ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಕೀಲೆಸ್ ಇಗ್ನಿಷನ್ ಮತ್ತು ಸ್ಟೀರಿಂಗ್ ಲಾಕ್‍ಗಳನ್ನು ಅಳವಡಿಸಲಾಗಿದೆ. ಹೊಸ ರಾಕೆಟ್ 3 ಬೈಕ್ ರೋಡ್, ರೈನ್, ಸ್ಪೋರ್ಟ್ ಎಂಬ ಮೋಡ್‍‍ಗಳನ್ನು ಹೊಂದಿದೆ.

Most Read Articles

Kannada
English summary
Triumph Rocket 3R Motorcycles Deliveries Begin In India: Currently Available In Eight Cities Only. Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X