Just In
- 51 min ago
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- 1 hr ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 2 hrs ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 3 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
Don't Miss!
- News
ಕೊವ್ಯಾಕ್ಸಿನ್ ಬಗ್ಗೆ ಎಚ್ಚರ: ಲಸಿಕೆಯು ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ?
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಟೈಗರ್ 850 ಸ್ಪೋರ್ಟ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಟ್ರಯಂಫ್
ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್ಸೈಕಲ್ ತನ್ನ ಹೊಸ ಟೈಗರ್ 850 ಸ್ಪೋರ್ಟ್ ಬೈಕನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಈ ಹೊಸ ಬಹುನಿರೀಕ್ಷಿತ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಶೀಘ್ರದಲ್ಲೇ ಅನಾವರಣವಾಗಲಿದೆ.

ಇದೀಗ ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕಿನ ಟೀಸರ್ ಚಿತ್ರಗಳನ್ನು ಬಿಡುಗಡೆಗೊಳಿಸಿವೆ. ಈ ಹೊಸ ಬೈಕನ್ನು ಇದೇ ತಿಂಗಳ 17ರಂದು ಅನಾವರಣಗೊಳಿಸಲಾಗುವುದು. ಅಮೆರಿಕದಲ್ಲಿನ ಪರಿಸರ ಸಂರಕ್ಷಣಾ ಏಜೆನ್ಸಿಯ ಪೇಟೆಂಟ್ ಅರ್ಜಿ ಸಲ್ಲಿಸುವಿಕೆಯ ಪ್ರಕಾರ, ಹೊಸ ಟೈಗರ್ 850 ಸ್ಪೋರ್ಟ್ ಬೈಕಿನಲ್ಲಿ ತನ್ನ ಹಿರಿಯ ಸಹೋದರ ಟೈಗರ್ 900 ಮಾದರಿಯಲ್ಲಿರುವ ಅದೇ ಎಂಜಿನ್ ಅನ್ನು ಹೊಂದಿರಲಿದೆ.

ಹೊಸ ಟೈಗರ್ 850 ಸ್ಪೋರ್ಟ್ ಬೈಕಿನಲ್ಲಿ ಅದೇ 888 ಸಿಸಿ ಇನ್ಲೈನ್ 3 ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 94 ಬಿಹೆಚ್ಪಿ ಪವರ್ ಮತ್ತು 87 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್ ಯುರೋ 5 ಮತ್ತು ಬಿಎಸ್-6 ಮಾಲಿನ್ಯ ನಿಯಮದ ಅನುಸಾರವಾಗಿರುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್

ಟೀಸರ್ ಚಿತ್ರಗಳನ್ನು ನೋಡುವುದಾದರೆ, ಹೆಚ್ಚು ಅಡ್ವೆಂಚರ್ ಕೇಂದ್ರೀಕೃತ ಟೈಗರ್ 900 ಬೈಕಿನ ನಡುವೆ ಕೆಲವು ವ್ಯತ್ಯಾಸವನ್ನು ಹೊಂದಿರಲಿದೆ ಎಂದು ತೋರುತ್ತದೆ. ನಡುವೆ ವ್ಯತ್ಯಾಸವನ್ನು ಬೈಕ್ ಟ್ರಯಂಫ್ ಟೈಗರ್ 1050 ನಂತಹ ಸ್ಪೋರ್ಟ್ ಟೂರಿಂಗ್ ಬೈಕ್ ಅನುಗುಣವಾಗಿ ವಿನ್ಯಾಸವನ್ನು ಹೆಚ್ಚು ಹೊಂದಿರುತ್ತದೆ.

ಟೈಗರ್ 850 ಸ್ಪೋರ್ಟ್ ರೋಡ್-ಆಧಾರಿತ ಟೂರಿಂಗ್ ಬೈಕ್ ಆಗಿದೆ. ಇದರಿಂದ ಇದು ಗ್ರಿಪ್ಪಿಯರ್ ಟಾರ್ಮ್ಯಾಕ್-ಸ್ನೇಹಿ ಟೈರ್ಗಳು, ವಿಂಡ್ಶೀಲ್ಡ್ ಮತ್ತು ಇತರ ಅಂಶಗಳನ್ನು ಒಳಗೊಂಡಿದೆ. ಈ ಬೈಕ್ ಹೆಚ್ಚು ಸ್ಪೋರ್ಟಿ ವಿನ್ಯಾಸದಿಂದ ಕೂಡಿರುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಟೈಗರ್ 900 ಮಾದರಿಗಿಂತ ಕೆಳಗಿನ ಸ್ಥಾನದಲ್ಲಿ ಇರಿಸುವ ಸಾಧ್ಯತೆಗಳಿದೆ. ಇದರಿಂದ ಟೈಗರ್ 900 ಬೈಕ್ ಗಿಂತ ಹೊಸ ಬೈಕ್ ತುಸು ಕೈಗೆಟುಕುವ ದರದಲ್ಲಿ ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕಿನಲ್ಲಿ ಹಲವಾರು ಎಲೆಕ್ಟ್ರಿಕ್ ಪ್ಯಾಕೇಜು ಗಳನ್ನು ಒಳಗೊಂಡಿರುತ್ತದೆ. ಇದು 850 ಸ್ಪೋರ್ಟ್ ಟೂರಿಂಗ್ ಗಿಜ್ಮೋಸ್ ಅನ್ನು ಒಳಗೊಂಡಿರುತ್ತದೆ ಇನ್ನು ಈ ಹೊಸ ಬೈಕಿನಲ್ಲಿ ಮೈಟ್ರಿಯಮ್ಫ್ ಕನೆಕ್ಟಿವಿಟಿ ಸಿಸ್ಟಂ ಮತ್ತು ಹ್ಯಾಂಡಲ್ಬಾರ್ನಿಂದ ಅಂತರ್ನಿರ್ಮಿತ ಗೋಪ್ರೊ ಕಂಟ್ರೋಲ್ ಗಳನ್ನು ಹೊಂದಿರುತ್ತದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್

ಈ ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಮತ್ತು ಯಮಹಾ ಟ್ರೇಸರ್ 900 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಟ್ರಯಂಫ್ ಕಂಪನಿಯು ತನ್ನ ಬಹುನಿರೀಕ್ಷಿತ ಟೈಗರ್ 850 ಸ್ಪೋರ್ಟ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ.