Just In
Don't Miss!
- Movies
KSRTC ಬಸ್ಸಿನಲ್ಲಿ ನಿರ್ಮಾಣವಾದ ವಿಶೇಷ ಸ್ತ್ರೀ ಶೌಚಾಲಯ ಪರಿಶೀಲಿಸಿದ ನಟಿ ಶ್ರುತಿ
- News
ಕಬ್ಬನ್ ಉದ್ಯಾನ ವ್ಯಾಪ್ತಿಯಲ್ಲಿ ನಿಯಮಬಾಹಿರ ಕಟ್ಟಡ ನಿರ್ಮಾಣ: ನೋಟಿಸ್
- Lifestyle
ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಈ ಆಹಾರಗಳನ್ನು ಸೇವಿಸುವುದನ್ನು ಮರೆಯಬೇಡಿ..
- Sports
ಹೊಸ ಪರೀಕ್ಷೆಗೆ ಒಳಗಾಗಬೇಕು ಕ್ರಿಕೆಟ್ ತಾರೆಯರು: 8.30 ನಿಮಿಷದಲ್ಲಿ 2 ಕಿ.ಮೀ ಗುರಿ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಟ್ರಯಂಫ್ ಟ್ರೈಡೆಂಟ್ ಬೈಕ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟ್ರಯಂಫ್ ಇತ್ತೀಚೆಗೆ ಟ್ರೈಡೆಂಟ್ ಮಿಡಲ್ ವೇಟ್ ರೋಡ್ಸ್ಟರ್ ಬೈಕನ್ನು ಅನಾವರಣಗೊಳಿಸಿತ್ತು. ಈ ಹೊಸ ಟ್ರಯಂಫ್ ಟ್ರೈಡೆಂಟ್ ಬೈಕ್ ಅಂತಿಮ ಹಂತದ ಟೆಸ್ಟಿಂಗ್ ನಲ್ಲಿದೆ.

ಹೊಸ ಟ್ರಯಂಫ್ ಟ್ರೈಡೆಂಟ್ ಮಿಡಲ್ ವೇಟ್ ರೋಡ್ಸ್ಟರ್ ಆಗಿರುತ್ತದೆ. ಈ ಬೈಕ್ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಸರಣಿಯ ಕೆಳಗಿನ ಸ್ಥಾನದಲ್ಲಿರುತ್ತದೆ. ಟ್ರಯಂಫ್ ಟ್ರೈಡೆಂಟ್ ವಿನ್ಯಾಸ ಮೂಲಮಾದರಿಯನ್ನು ಲಂಡನ್ ಡಿಸೈನ್ ಮ್ಯೂಸಿಯಂನಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಹೊಸ ಟ್ರಯಂಫ್ ಟ್ರೈಡೆಂಟ್ ಬೈಕ್ ಮುಂದಿನ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಕಂಡುಬಂದಂತೆ, ಉತ್ಪಾದನಾ ಮಾದರಿಯು ಈ ಮೊದಲು ಪ್ರದರ್ಶಿಸಿದ ಬ್ರಿಟಿಷ್ ಬ್ರ್ಯಾಂಡ್ ವಿನ್ಯಾಸದ ಮೂಲಮಾದರಿಯೊಂದಿಗೆ ಸಾಮ್ಯತೆಯನ್ನು ಹೊಂದಿದೆ. 2021ರ ಟ್ರಯಂಫ್ ಟ್ರೈಡೆಂಟ್ ಅನ್ನು ರೊಡಾಲ್ಫೊ ಫ್ರಾಸ್ಕೋಲಿ ವಿನ್ಯಾಸಗೊಳಿಸಿದ್ದಾರೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್

ಅವರು ಟ್ರಯಂಫ್ ಟೈಗರ್ 900 ಬೈಕನ್ನು ಕೂಡ ವಿನ್ಯಾಸಗೊಳಿಸಿದ್ದಾರೆ, ಟ್ರೈಡೆಂಟ್ ವಿನ್ಯಾಸದ ಮೂಲಮಾದರಿಯು ಟ್ರಯಂಫ್ಗಾಗಿ ಒಂದು ಉತ್ತೇಜಕ ಅಧ್ಯಾಯದ ಆರಂಭವನ್ನು ನೀಡಬಹುದು.

ಟ್ರಯಂಫ್ ಟ್ರೈಡೆಂಟ್ ಬೈಕ್ ವಿಶಾಲ ಹ್ಯಾಂಡಲ್ಬಾರ್ಗಳೊಂದಿಗೆ ಒಂದು ರೌಂಡ್ ಹೆಡ್ಲ್ಯಾಂಪ್ ಕ್ಲಸ್ಟರ್, ಇಂಡೆಂಟ್ಗಳನ್ನು ಹೊಂದಿರುವ ಕರ್ವಿ ಫ್ಯೂಯಲ್ ಟ್ಯಾಂಕ್, ಸ್ಟೆಪ್-ಅಪ್ ಸೀಟ್, ಮ್ಯಾಕನಿಕಲ್ ಬಿಟ್ಗಳು, ಕಾಂಪ್ಯಾಕ್ಟ್ ಎಕ್ಸಾಸ್ಟ್ ಮತ್ತು ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಟ್ರೈಡೆಂಟ್ ಬೈಕ್ ರೋಮಾಂಚಕಾರಿ ವಿನ್ಯಾಸವನ್ನು ಹೊಂದಿದೆ, ಈ ಹೊಸ ಟ್ರೈಡೆಂಟ್ ಬೈಕ್ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು. ಹೊಸ ಟ್ರಯಂಫ್ ಟ್ರೈಡೆಂಟ್ ಬೈಕಿನಲ್ಲಿ 650 ಸಿಸಿ ಎಂಜಿನ್ ಅನ್ನು ಅಳವಡಿಸಬಹುದು. ಟ್ರಯಂಫ್ ಟ್ರೈಡೆಂಟ್ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಮಾದರಿಗಳ ಅಲ್ಯೂಮಿನಿಯಂ ಫ್ರೇಮ್ ಅನ್ನು ಹೊಂದಿರಬಹುದು.

ಈ ಹೊಸ ಟ್ರಯಂಫ್ ಟ್ರೈಡೆಂಟ್ ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಬಿ650ಆರ್, ಕವಾಸಕಿ ಝಡ್650 ಮತ್ತು ಯಮಹಾ ಎಂಟಿ-07 ಬೈಕುಗಳಿಗೆ ಪೈಪೋಟಿಯನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್

ಹೊಸ ಟ್ರಯಂಫ್ ಟ್ರೈಡೆಂಟ್ ಬೈಕನ್ನು ಥೈಲ್ಯಾಂಡ್ನ ಟ್ರಯಂಫ್ನ ಉತ್ಪಾದನಾ ಕೇಂದ್ರದಲ್ಲಿ ತಯಾರಿಸಲಾಗುತ್ತದೆ. ಟ್ರೈಡೆಂಟ್ ಎಂಬ ಹೆಸರಿನ ಹಿಂದೆ ಒಂದು ರೋಚಕ ಇತಿಹಾಸವಿದೆ. 1968 ರಿಂದ 1975 ರವರೆಗೆ ಟ್ರೈಡೆಂಟ್ ಎಂಬ ಹಳೆಯ ಐಕಾನಿಕ್ ಬೈಕಿನ ಉತ್ಪಾದನೆಯಲ್ಲಿತ್ತು.

ಅದೇ ಐಕಾನಿಕ್ ಬೈಕಿನ ಹೆಸರಿನಲ್ಲಿ ಟ್ರಯಂಫ್ ಕಂಪನಿಯು ಹೊಸ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹಳೆಯ ಟ್ರೈಡೆಂಟ್ ಬೈಕಿನಲ್ಲಿ 740ಸಿಸಿ, ಏರ್-ಕೂಲ್ಡ್, ಓವರ್ಹೆಡ್ ವಾಲ್ವ್ ಸ್ಟ್ರೈಟ್-ಥ್ರೀ ಎಂಬ ಎಂಜಿನ್ ಅನ್ನು ಹೊಂದಿತ್ತು. ಈ ಎಂಜಿನ್ 7,500 ಆರ್ಪಿಎಂನಲ್ಲಿ 58 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುತ್ತಿತ್ತು.

ಈ ಹೊಸ ಟ್ರೈಡೆಂಟ್ ಬೈಕನ್ನು ಟ್ರಯಂಫ್ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಟ್ರಯಂಫ್ ಟ್ರೈಡೆಂಟ್ ಬೈಕ್ ಜಪಾನ್ ಮೂಲದ ರೋಡ್ಸ್ಟರ್ ಮಾದರಿಗಳಿಗೆ ಪೈಪೋಟಿ ನೀಡುತ್ತದೆ.