ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಪ್ರೀಮಿಯಂ ಸ್ಕೂಟರ್ ಮಾದರಿಯಾದ ಎನ್‌ಟಾರ್ಕ್ 125 ಆವೃತ್ತಿಯ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಹೊಸ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಗರಿಷ್ಠ ಪ್ರಮಾಣದ ಕೊಡುಗೆಗಳನ್ನು ಪಡೆದುಕೊಳ್ಳಬಹುದು.

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಎನ್‌ಟಾರ್ಕ್ 125 ಸ್ಕೂಟರ್ ಖರೀದಿಯ ಮೇಲೆ ಟಿವಿಎಸ್ ಕಂಪನಿಯು ಅತಿ ಕಡಿಮೆ ಪ್ರಮಾಣದ ಡೌನ್‌ಪೇಮೆಂಟ್, ಕನಿಷ್ಠ ಇಎಂಐ ಮತ್ತು ಕ್ಯಾಶ್‌ಬ್ಯಾಕ್ ಆಫರ್ ಲಭ್ಯವಿದ್ದು, ದಸರಾ ಮತ್ತು ದೀಪಾವಳಿ ವಿಶೇಷತೆ ಹಿನ್ನಲೆಯಲ್ಲಿ ಈ ಆಫರ್‌ಗಳನ್ನು ನೀಡಲಾಗುತ್ತಿದೆ. ಹೊಸ ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು ಸದ್ಯ ಬಿಎಸ್-6 ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಎಂಜಿನ್ ನಂತರ ವಿವಿಧ ಮಾದರಿಗಳಲ್ಲಿ ಮಾರಾಟಗೊಳ್ಳುತ್ತಿದೆ.

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಮಹಾಹಿತಿಗಳ ಪ್ರಕಾರ, ಟಿವಿಎಸ್ ಕಂಪನಿಯು ಎನ್‌ಟಾರ್ಕ್ 125 ಸ್ಕೂಟರ್ ಖರೀದಿಗಾಗಿ ರೂ. 10,999 ಡೌನ್‌ಪೇಮೆಂಟ್ ನಿಗದಿ ಮಾಡಿದ್ದಲ್ಲಿ ಸ್ಕೂಟರ್ ಖರೀದಿಗಾಗಿ ಪಡೆಯುವ ಸಾಲಮರುಪಾವತಿಗಾಗಿ ಗರಿಷ್ಠ ಕಾಲಾವಕಾಶದೊಂದಿಗೆ ರೂ. 2,100 ಇಎಂಐ ನಿಗದಿ ಪಡಿಸಿದೆ.

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ಪಡೆಯುವ ಗ್ರಾಹಕರು ಕಡ್ಡಾಯವಾಗಿ ಐಸಿಐಸಿಐ ಅಥವಾ ಬ್ಯಾಂಕ್ ಬರೋಡಾದ ಕ್ರೆಡಿಕ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಕೆ ಮಾಡಬೇಕಿದ್ದು, ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಉಳಿತಾಯ ಮಾಡಬಹುದಾಗಿದೆ.

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು ಸದ್ಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್, ರೇಸ್ ಎಡಿಷನ್ ಮತ್ತು ಸೂಪರ್ ಸ್ಕ್ವಾಡ್ ಎಡಿಷನ್ ಎನ್ನುವ ನಾಲ್ಕು ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಬಿಎಸ್-6 ಸ್ಕೂಟರ್‌ನಲ್ಲಿ ಎಕ್ಸಾಸ್ಟ್ ಸಿಸ್ಟಂ ಬದಲಾವಣೆ ಮಾಡಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಹೊಸ ಸ್ಕೂಟರ್‌ನಲ್ಲಿ ಈ ಬಾರಿ ಕಾರ್ಬ್ಯುಟರ್ ಎಂಜಿನ್ ಬದಲಾಗಿ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ನೀಡಲಾಗಿದ್ದು, ಇದರಿಂದ ಹೊಸ ಸ್ಕೂಟರ್‌ನಲ್ಲಿ ಪರ್ಫಾಮೆನ್ಸ್ ಹೆಚ್ಚಳವಾಗಿರುವುದಲ್ಲದೇ ಮಾಲಿನ್ಯ ಉತ್ಪತ್ತಿ ಪ್ರಮಾಣದಲ್ಲೂ ಕೂಡಾ ಸುಧಾರಣೆಯಾಗಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಇದರೊಂದಿಗೆ ಹೊಸ ಸ್ಕೂಟರ್‌ನಲ್ಲಿ ಈ ಬಾರಿ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗುತ್ತಿದ್ದು, ರೇಸ್ ಎಡಿಷನ್‌ ಎಡಿಷನ್‌ನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ ಸೇರಿದಂತೆ ಎಕ್ಸಾಸ್ಟ್ ಸಿಸ್ಟಂ ಬದಲಾವಣೆ ಮಾಡಿರುವುದು ಈ ಬಾರಿ ಪ್ರಮುಖ ಆಕರ್ಷಣೆಯಾಗಲಿದೆ. ಇನ್ನುಳಿದಂತೆ ತಾಂತ್ರಿಕ ಅಂಶಗಳು ಬಿಎಸ್-4 ಮಾದರಿಯಲ್ಲಿರುವಂತೆಯೇ ಮುಂದುವರಿಸಲಾಗಿದ್ದು, ಬಿಎಸ್-6 ಎಂಜಿನ್ ಜೊತೆ ಉನ್ನತೀಕರಣಗೊಂಡಿರುವ 125ಸಿಸಿ ಪ್ರತಿಸ್ಪರ್ಧಿ ಸ್ಕೂಟರ್‌ಗಳಿಗೆ ಇದು ಪ್ರಬಲ ಪೈಪೋಟಿ ನೀಡುತ್ತಿದೆ.

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಹೊಸ ಎನ್‌ಟಾರ್ಕ್ 125 ಸ್ಕೂಟರ್‌ನಲ್ಲಿ ಡ್ರಮ್ ಬ್ರೇಕ್ ಮಾದರಿಯು ಆರಂಭಿಕ ಮಾದರಿಯಾಗಿದ್ದರೆ ಸೂಪರ್ ಸ್ಕ್ವಾಡ್ ಹೈ ಎಂಡ್ ಮಾದರಿಯಾಗಿದ್ದು, 125 ಸಿಸಿ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಹೊಂದಿರುವ ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು 9.25-ಬಿಎಚ್‌ಪಿ ಮತ್ತು 10.5-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಬಿಎಸ್-4 ಮಾದರಿಗಿಂತ ಬಿಎಸ್-6 ಸ್ಕೂಟರ್ ಬೆಲೆಗಳು ಸಾಕಷ್ಟು ದುಬಾರಿಯಾಗಿದ್ದು, ಬಿಎಸ್-6 ಜಾರಿ ನಂತರವು ವಿವಿಧ ಸ್ಕೂಟರ್ ಕನಿಷ್ಠ ಎರಡು ಬಾರಿ ಬೆಲೆ ಹೆಚ್ಚಳ ಪಡೆದುಕೊಂಡಿವೆ. ಬೆಲೆ ಹೆಚ್ಚಳ ನಂತರ ಎನ್‌ಟಾರ್ಕ್ 125 ಸ್ಕೂಟರ್ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 68,885 ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯು ರೂ. 77,865 ಬೆಲೆ ನಿಗದಿ ಮಾಡಲಾಗಿದೆ.

Most Read Articles

Kannada
English summary
TVS Announces Festive Season Offers For NTorq 125. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X