ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಹುನಿರೀಕ್ಷಿತ ಅಪಾಚೆ ಆರ್‍‍ಟಿಆರ್ 160 ಬೈಕ್

ಭಾರತದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿ‍ವಿಎಸ್ ಮೋಟಾರ್ ತನ್ನ ಜನಪ್ರಿಯ 2020ರ ಅಪಾಚೆ ಆರ್‍‍ಟಿಆರ್ 160 2ವಿ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಹೊಸ ಟಿ‍ವಿಎಸ್ ಅಪಾಚೆ ಆರ್‍‍ಟಿಆರ್ 160 ಬೈಕ್ ಬಿಎಸ್-6 ಎಂಜಿನ್ ಹೊಂದಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಹುನಿರೀಕ್ಷಿತ ಅಪಾಚೆ ಆರ್‍‍ಟಿಆರ್ 160 ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ಟಿ‍ವಿಎಸ್ ಕಂಪನಿಯ ಅಪಾಚೆ ಸರಣಿಯ ಬೈಕ್‍‍ಗಳಿಗೆ ಬಜಾಜ್ ಆಟೊ ಕಂಪನಿಯ ಪಲ್ಸರ್ ಸರಣಿಯ ಬೈಕ್‍‍ಗಳು ಪ್ರಬಲ ಪೈಪೋಟಿಯನ್ನು ನೀಡುತ್ತವೆ. ಬಜಾಜ್ ಪಲ್ಸರ್ 150 ಡಿಟಿಎಸ್‍-ಐ ಬೈಕಿಗೆ ಪೈಪೋಟಿಯನ್ನು ನೀಡಲು 2016ರಲ್ಲಿ ಮೊದಲ ಬಾರಿಗೆ ಟಿ‍ವಿಎಸ್ ಕಂಪನಿಯು ಅಪಾಚೆ ಆರ್‍‍ಟಿ‍ಆರ್ 160 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಇತ್ತೀಚೆಗೆ ಟಿ‍ವಿಎಸ್ ಕಂಪನಿಯು ಅಪಾಚೆ ಆರ್‍‍ಟಿಆರ್ 160 4ವಿ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಹುನಿರೀಕ್ಷಿತ ಅಪಾಚೆ ಆರ್‍‍ಟಿಆರ್ 160 ಬೈಕ್

ಹೊಸ ಟಿ‍ವಿಎಸ್ ಅಪಾಚೆ ಆ‍ರ್‍‍ಟಿಆರ್ 160 2ವಿ ಬೈಕ್ ಹೊಸ ಬಾಡಿ ಗ್ರಾಫಿಕ್ಸ್ ಮತ್ತು ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಟಿ‍‍ವಿಎಸ್ ರೇಸ್ ಟ್ಯೂನ್ಡ್- ಎಫ್‍ಐ ಅಥವಾ ಆರ್ಟಿ-ಫೈ ತಂತ್ರಜ್ಞಾನ ಅಳವಡಿಸಲಾಗಿದೆ. ಟಿ‍‍ವಿಎಸ್ ಅಪಾಚೆ ಆರ್‍‍ಟಿಆರ್ 160 ಎಂಟ್ರಿ ಲೆವೆಲ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.93,500 ಗಳಾದರೆ, ಟ್ವಿನ್ ಡಿಸ್ಕ್ ರೂಪಾಂತರದ ಬೆಲೆಯು ರೂ.96,500 ಗಳಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಹುನಿರೀಕ್ಷಿತ ಅಪಾಚೆ ಆರ್‍‍ಟಿಆರ್ 160 ಬೈಕ್

2020ರ ಅಪಾಚೆ ಸ್ಪೋರ್ಟ್ಸ್ ಕಮ್ಯೂಟರ್ ರೇಂಜ್ 4 ವಿ ಮಾದರಿಗಳಂತೆಯೇ, ಆರ್‍‍ಟಿಆರ್ 160 2ವಿ ಬೈಕ್ ಕೂಡ ಸೆಗ್‍‍ಮೆಂಟ್‍‍ನ ಮೊದಲ ಗ್ಲೈಡ್ ಥ್ರೂ ಟೆಕ್ನಾಲಜಿ (ಜಿಟಿಟಿ) ಯನ್ನು ಹೊಂದಿದೆ. ನಗರದಲ್ಲಿ ಆರಾಮದಾಯಕ ಸವಾರಿ ಮಾಡಲು ಇದು ಸಹಕಾರಿಯಾಗಿದೆ. ಟ್ರಾಫಿಕ್ ಜಾಮ್‍ಗಳು ಉಂಟಾದ ಸಂದರ್ಭದಲ್ಲಿ ಸಲೀಸಾಗಿ ಸಾಗಲು ಈ ಸಿಸ್ಟಂ ಸಹಕರಿಯಾಗಲಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಹುನಿರೀಕ್ಷಿತ ಅಪಾಚೆ ಆರ್‍‍ಟಿಆರ್ 160 ಬೈಕ್

ಹೊಸ ಟಿ‍ವಿಎಸ್ ಅಪಾಚೆ ಆ‍ರ್‍‍ಟಿಆರ್ 160 ಬೈಕಿನಲ್ಲಿ ಬಿಎಸ್-6 ಪ್ರೇರಿತ 159.7 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 15.3 ಬಿ‍ಹೆಚ್‍ಪಿ ಪವರ್ ಮತ್ತು 13.03 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಹುನಿರೀಕ್ಷಿತ ಅಪಾಚೆ ಆರ್‍‍ಟಿಆರ್ 160 ಬೈಕ್

ಟಿ‍ವಿಎಸ್ ಮೋಟಾರ್ ಕಂಪನಿ ನವೀಕರಿಸಿದ ಆರ್‍‍ಟಿಆರ್ 160 ಲೈನ್ ತನ್ನ ಇತರ ಮಾದರಿಗಂತೆಯೇ ಅದೇ ರೇಸಿಂಗ್ ನಿರ್ದಿಷ್ಟೆತೆಯನ್ನು ತೋರಿಸುತ್ತದೆ ಎಂದು ಕಂಪನಿ ಭರವಸೆ ನೀಡಿದೆ. ಜನಪ್ರಿಯ ಡಕಾರ್ ರ‍್ಯಾಲಿ ಸೇರಿದಂತೆ ಭಾರತೀಯ ಮೋಟಾರು ಸ್ಪೋಟ್ಸ್ ಮತ್ತು ವಿಶೇಷ ಮೇಳಗಳಲ್ಲಿ ಕಂಪನಿಯು ಸ್ಪರ್ಧಿಸಿದ ದೀರ್ಘ ಇತಿಹಾಸವಿದೆ. 2020ರ ಟಿ‍ವಿಎಸ್ ಅಪಾಚೆ ಆರ್‍‍ಟಿಆರ್ 160 2ವಿ ಬೈಕ್ ಪರ್ಲ್ ವೈಟ್, ಮ್ಯಾಟ್ ಬ್ಲೂ, ಮ್ಯಾಟ್ ರೆಡ್, ಗ್ಲೋಸ್ ಬ್ಲ್ಯಾಕ್, ಗ್ಲೋಸ್ ರೆಡ್ ಮತ್ತು ಟಿ ಗ್ರೇ ಸೇರಿದಂತೆ ಆರು ಬಣ್ಣಗಳಲ್ಲಿ ಲಭ್ಯವಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಹುನಿರೀಕ್ಷಿತ ಅಪಾಚೆ ಆರ್‍‍ಟಿಆರ್ 160 ಬೈಕ್

ಮೊದಲೇ ಹೇಳಿದಂತೆ ಹೊಸ ಅಪಾಚೆ ಆರ್‍‍ಟಿಆರ್ 160 ಬೈಕ್, ಬಜಾಜ್ ಪಲ್ಸರ್ 150 ಡಿಟಿಎಸ್‍-ಐ ಬೈಕಿಗೆ ನೇರ ಪೈಪೋಟಿಯನ್ನು ನೀಡುತ್ತದೆ. ಸುಮಾರು 15 ವರ್ಷಗಳ ಕೆಳಗೆ 150-160 ಸಿಸಿ ಬೈಕ್‍‍ಗಳ ಸೆಗ್‍‍ಮೆಂಟ್‍ನಲ್ಲಿ ಅಷ್ಟು ಪೈಪೋಟಿ ಇರಲಿಲ್ಲ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಹುನಿರೀಕ್ಷಿತ ಅಪಾಚೆ ಆರ್‍‍ಟಿಆರ್ 160 ಬೈಕ್

ಆದರೆ ವರ್ಷಗಳು ಕಳದಂತೆ ಹಲವಾರು ಜನಪ್ರಿಯ ದ್ವಿ ಚಕ್ರ ಕಂಪನಿಗಳು ಈ ಸೆಗ್‍ಮೆಂಟ್‍ನಲ್ಲಿ ಹೊಸ ಬೈಕ್‍ಗಳನ್ನು ಬಿಡುಗಡೆಗೊಳಿಸಿದವು. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ 150-160 ಸಿಸಿ ಸೆಗ್‍‍ಮೆಂಟ್‍ನಲ್ಲಿ ಪ್ರಬಲ ಪೈಪೋಟಿ ಇದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಹುನಿರೀಕ್ಷಿತ ಅಪಾಚೆ ಆರ್‍‍ಟಿಆರ್ 160 ಬೈಕ್

ಹೊಸ ಟಿ‍ವಿಎಸ್ ಅಪಾಚೆ ಆರ್‍‍ಟಿಆರ್ 160 2ವಿ ಬೈಕಿಗೆ ದೇಶಿಯ ಮಾರುಕಟ್ಟೆಯಲ್ಲಿ ಯಮಹಾ ಎಫ್‌ಜೆಡ್ 15 ವಿ 3.0, ಸುಜುಕಿ ಜಿಕ್ಸರ್ 150, ಹೋಂಡಾ ಸಿಬಿ ಹಾರ್ನೆಟ್ 160 ಆರ್ ಮತ್ತು ಹೊಸ ಜನರೇಷನ್ ಪಲ್ಸರ್ 150 ಬೈಕ್‍‍ಗಳು ಪೈಪೋಟಿಯನ್ನು ನೀಡುತ್ತವೆ. ಅಪಾಚೆ ಸರಣಿಯಲ್ಲಿ ಆರ್‍‍ಟಿಆರ್ 160 ಬೈಕ್ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ.

Most Read Articles

Kannada
English summary
TVS Apache 160 BS6 launch price Rs 93.5k – Bookings open. Read in Kannada
Story first published: Thursday, January 23, 2020, 12:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X