ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಟಿವಿಎಸ್ ಅಪಾಚೆ ಆರ್‌ಆರ್ 310

ಟಿವಿಎಸ್ ಮೋಟಾರ್ ಸಂಸ್ಥೆಯು ಈಗಾಗಲೇ ಬಿಎಸ್-6 ಅಪಾಚೆ ಸರಣಿ ಬೈಕ್‌ಗಳ ಬಿಡುಗಡೆಗೆ ಚಾಲನೆ ನೀಡಿದ್ದು, ಇದೀಗ ಅಪಾಚೆ ಆರ್‌ಆರ್ 310 ಆವೃತ್ತಿಯನ್ನು ಸಹ ಬಿಡುಗಡೆಗೊಳಿಸಿದೆ. ಹೊಸ ಬೈಕ್ ಮಾದರಿಯು ಬಿಎಸ್-4 ಆವೃತ್ತಿಗಿಂತ ರೂ.12 ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪರಿಚಯಿಸಲಾಗಿದೆ.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಟಿವಿಎಸ್ ಅಪಾಚೆ ಆರ್‌ಆರ್ 310

ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮದಿಂದಾಗಿ ಹೊಸ ವಾಹನ ಎಂಜಿನ್ ಆಯ್ಕೆಯಲ್ಲಿ ಸಾಕಷ್ಟು ಹೊಸ ಬದಲಾವಣೆಗಳನ್ನು ಪರಿಚಯಿಸಲಾಗುತ್ತಿದ್ದು, ಇದೀಗ ಟಿವಿಎಸ್ ಮೋಟಾರ್ ಕೂಡಾ ತನ್ನ ಜನಪ್ರಿಯ ಬೈಕ್ ಆವೃತ್ತಿಗಳನ್ನು ಹೊಸ ಎಮಿಷನ್ ನಿಯಮ ಅನುಸಾರ ಉನ್ನತೀಕರಿಸಿ ಬಿಡುಗಡೆ ಮಾಡುತ್ತಿದೆ. ಈ ಮೂಲಕ ಮೋಟಾರ್‌ಸೈಕಲ್ ಮಾರಾಟದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿರುವ ಟಿವಿಎಸ್ ಸಂಸ್ಥೆಯು ಹೊಸ ಬೈಕ್ ಖರೀದಿದಾರರಿಗೆ ಹಲವಾರು ಆಫರ್‌ಗಳನ್ನು ಘೋಷಿಸಿದೆ.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಟಿವಿಎಸ್ ಅಪಾಚೆ ಆರ್‌ಆರ್ 310

ಹೊಸ ಅಪಾಚೆ ಬೈಕ್ ಮಾದರಿಯು ಈ ಬಾರಿ ನಾಲ್ಕು ರೈಡಿಂಗ್ ಮೋಡ್, ಬ್ಲೂಟೂಥ್ ಕನೆಕ್ಟಿವಿಟಿ ಹೊಂದಿರುವ 5-ಇಂಚಿನ ಟಿಎಫ್‌ಟಿ ಸ್ಕ್ರೀನ್ ಮತ್ತು ಗರಿಷ್ಠ 5 ವರ್ಷಗಳ ವಾರಂಟಿ ಘೋಷಣೆ ಮಾಡಿದೆ.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಟಿವಿಎಸ್ ಅಪಾಚೆ ಆರ್‌ಆರ್ 310

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಬಿಎಸ್-6 ಅಪಾಚೆ ಆರ್‌ಆರ್ 310 ಬೈಕ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ, ರೂ.2.40 ಲಕ್ಷ ಬೆಲೆ ಹೊಂದಿದ್ದು, ಇದು ಬಿಎಸ್-4 ಆವೃತ್ತಿಗಿಂತಲೂ ರೂ.12 ಸಾವಿರ ದುಬಾರಿಯಾಗಿದ್ದರೂ ಹೊಸ ಬೈಕಿನಲ್ಲಿ ಬೆಲೆಗೆ ತಕ್ಕಂತೆ ಹಲವು ಹೊಸ ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದೆ.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಟಿವಿಎಸ್ ಅಪಾಚೆ ಆರ್‌ಆರ್ 310

ಜೊತೆಗೆ ಹೊಸ ಬೈಕಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ನೀಡುವುದಕ್ಕಾಗಿ ನಾಲ್ಕು ಹೊಸ ಬಣ್ಣಗಳ ಆಯ್ಕೆಯ ಜೊತೆಗೆ ಗ್ರಾಫಿಕ್ ಡಿಸೈನ್ ಬದಲಾವಣೆಗೊಳಿಸಿದ್ದು, ಕೆಲವು ತಾಂತ್ರಿಕ ಬದಲಾವಣೆಗಳಿಂದಾಗಿ ಬೈಕಿನ ತೂಕವು ಈ ಹಿಂದಿನ ಆವೃತ್ತಿಗಿಂತ 5 ಕೆ.ಜಿ ಹೆಚ್ಚುವರಿ ತೂಕ ಪಡೆದಿದೆ. ಸದ್ಯ 174 ಕೆ.ಜಿ ತೂಕ ಹೊಂದಿರುವ ಅಪಾಚೆ ಆರ್‌ಆರ್ 310 ಬೈಕ್ ಮಾದರಿಯು 312.2 ಸಿಸಿ ರಿವರ್ಸ್ ಇನ್‌ಕೈನ್ಡ್, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ಪಡೆದಿದೆ.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಟಿವಿಎಸ್ ಅಪಾಚೆ ಆರ್‌ಆರ್ 310

ಹೊಸ ಬೈಕಿನಲ್ಲಿ ಈ ಬಾರಿ ಸ್ಪೋರ್ಟ್, ಟ್ರ್ಯಾಕ್, ಅರ್ಬನ್ ಮತ್ತು ರೈನ್ ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, 34-ಬಿಎಚ್‌ಪಿ ಮತ್ತು 27.3-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ 160 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಟಿವಿಎಸ್ ಅಪಾಚೆ ಆರ್‌ಆರ್ 310

ಇನ್ನು ಹೊಸ ಬೈಕಿನಲ್ಲಿ ಈ ಹಿಂದಿನ ಎಲ್‌ಸಿಡಿ ಯುನಿಟ್ ತೆಗೆದುಹಾಕಿ ಸುಧಾರಿತ ತಂತ್ರಜ್ಞಾನ ಪ್ರೇರಿತ 5-ಇಂಚಿನ ಟಿಎಫ್‌ಟಿ ಸ್ಕ್ರೀನ್ ಜೋಡಿಸಲಾಗಿದ್ದು, ಸ್ಮಾರ್ಟ್‌ಫೋನ್ ಕನೆಕ್ವಿವಿಟಿ ಮೂಲಕ ಕಾಲ್ ಕಂಟ್ರೋಲ್ಸ್ ಜೊತೆಗೆ ಹಲವು ತಾಂತ್ರಿಕ ಸೌಲಭ್ಯಗಳನ್ನು ಒಂದೇ ಸೂರಿನಡಿ ನಿಯಂತ್ರಣ ಮಾಡಬಹುದಾಗಿದೆ.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಟಿವಿಎಸ್ ಅಪಾಚೆ ಆರ್‌ಆರ್ 310

ಹಾಗೆಯೇ ಸುರಕ್ಷಿತ ಬೈಕ್ ಸವಾರಿಗಾಗಿ ಈ ಬಾರಿ ಹೊಸ ಬೈಕಿನಲ್ಲಿ ರೈಡ್ ಬೈ ವೈರ್ ಟೆಕ್ನಾಲಜಿ ನೀಡಲಾಗಿದ್ದು, ಸ್ಪೋರ್ಟ್ ಮತ್ತು ಟ್ರ್ಯಾಕ್ ಪರ್ಫಾಮೆನ್ಸ್‌ ಪ್ರೀಯರಿಗಾಗಿ ಹೊಸ ಬೈಕ್ ಹೆಚ್ಚು ನವೀಕರಿಸಲಾಗಿದೆ.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಟಿವಿಎಸ್ ಅಪಾಚೆ ಆರ್‌ಆರ್ 310

ಈ ಹಿಂದೆ 2017ರಲ್ಲಿ ಬಿಡುಗಡೆಯಾಗಿದ್ದ ಅಪಾಚೆ ಆರ್‌ಆರ್ 310 ಬೈಕ್ ಮಾದರಿಯು ಇದುವರೆಗೆ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಕಳೆದ ನವೆಂಬರ್‌ನಲ್ಲಿ ಹೊಸ ಬೈಕ್ ಸ್ಪಿಪ್ಲರ್ ಕ್ಲಚ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿತ್ತು.

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಯಾದ ಬಿಎಸ್-6 ಟಿವಿಎಸ್ ಅಪಾಚೆ ಆರ್‌ಆರ್ 310

ಇದೀಗ ಹೊಸ ಎಂಜಿನ್ ಜೊತೆಗೆ ವಿವಿಧ ರೈಡಿಂಗ್ ಮೋಡ್‌ಗಳು ಮತ್ತು ಹೆಚ್ಚುವರಿ ಬಣ್ಣಗಳ ಮೂಲಕ ಪರ್ಫಾಮೆನ್ಸ್ ಪ್ರಿಯರನ್ನ ಸೆಳೆಯಲು ಯತ್ನಿಸಿರುವ ಟಿವಿಎಸ್ ಸಂಸ್ಥೆಯು ಮಧ್ಯಮ ಗಾತ್ರದ ಮೋಟಾರ್‌ಸೈಕಲ್ ವಿಭಾಗದಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

Most Read Articles

Kannada
English summary
TVS Apache RR310 BS6 Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X